ಚಳಿಗಾಲದಲ್ಲಿ ಇಂತಹ ಆಹಾರಗಳನ್ನು ಸೇವಿಸಿ, ಆರೋಗ್ಯವಾಗಿರಿ

By: Deepu
Subscribe to Boldsky

ಪ್ರತಿಯೊಂದು ಹವಾಮಾನವನ್ನು ಸಹಿಸಿಕೊಳ್ಳುವಂತಹ ಶಕ್ತಿಯನ್ನು ದೇಹಕ್ಕೆ ದೇವರು ನೀಡಿದ್ದಾನೆ. ಇದರಿಂದಾಗಿ ಮಳೆಗಾಲ, ಚಳಿಗಾಲ ಮತ್ತು ಬೇಸಿಗೆಗೆ ದೇಹವು ಹೊಂದಿಕೊಳ್ಳುತ್ತದೆ. ಆದರೆ ನಮ್ಮ ದೇಹವನ್ನು ಆರೋಗ್ಯವಾಗಿಡುವುದು ತುಂಬಾ ಮುಖ್ಯ. ಚಳಿಗಾಲದಲ್ಲಿ ಉಷ್ಣತೆಯು ತುಂಬಾ ಕುಸಿಯುವ ಕಾರಣದಿಂದ ದೇಹವು ಅದಕ್ಕೆ ಹೊಂದಿಕೊಳ್ಳಬೇಕು. ಚಳಿಗಾಲದ ಆಹಾರ ಶೈಲಿ, ಸ್ವಲ್ಪ ವೆರೈಟಿಯಾಗಿರಲಿ

ಇದಕ್ಕಾಗಿ ನಾವು ತಿನ್ನುವ ಆಹಾರದಲ್ಲಿ ಕೂಡ ಬದಲಾವಣೆಗಳನ್ನು ಮಾಡಿಕೊಳ್ಳಬೇಕಾಗುತ್ತದೆ. ಚಳಿಗಾಲದಲ್ಲಿ ಹೆಚ್ಚಿನ ಶಕ್ತಿಯು ದೇಹಕ್ಕೆ ಬೇಕಾಗುತ್ತದೆ. ಇದರಿಂದಾಗಿ ಸರಿಯಾದ ಪೋಷಕಾಂಶಗಳು ದೇಹಕ್ಕೆ ಲಭ್ಯವಾಗುವುದು ಅತ್ಯಗತ್ಯ. ಈ ಲೇಖನದಲ್ಲಿ ಚಳಿಗಾಲದಲ್ಲಿ ದೇಹಕ್ಕೆ ಪೋಷಕಾಂಶಗಳನ್ನು ಒದಗಿಸುವಂತಹ ಆಹಾರಗಳ ಬಗ್ಗೆ ತಿಳಿಸಿಕೊಡಲಿದ್ದೇವೆ. ಇದು ಸೋಂಕನ್ನು ನಿವಾರಣೆ ಮಾಡಿ ದೇಹಕ್ಕೆ ಪ್ರತಿರೋಧಕ ಶಕ್ತಿಯನ್ನು ಒದಗಿಸುವುದು....  

ಕಿತ್ತಳೆ ಹಣ್ಣು

ಕಿತ್ತಳೆ ಹಣ್ಣು

ವಿಟಮಿನ್ ಸಿ ಇರುವಂತಹ ಮತ್ತೊಂದು ಹಣ್ಣೆಂದರೆ ಅದು ಕಿತ್ತಳೆ. ಇದರಲ್ಲಿ ಇರುವಂತಹ ಕ್ಯಾಲ್ಸಿಯಂ, ಮೆಗ್ನಿಶಿಯಂ, ಫ್ರೋಸ್ಪರಸ್ ಮತ್ತು ಪೊಟಾಶಿಯಂ ಮೂಳೆಗಳನ್ನು ಬಲಿಷ್ಠಗೊಳಿಸುವುದು ಮಾತ್ರವಲ್ಲದೆ ಸ್ನಾಯುಗಳ ಕಾರ್ಯವನ್ನು ಸುಗಮವಾಗಿಸುವುದು. ಇದು ದೇಹದ ಪ್ರತಿರೋಧಕ ಶಕ್ತಿಯನ್ನು ಬಲಗೊಳಿಸುವುದು. ಚಳಿಗಾಲದ ಸಂಜೀವಿನಿ-ಹುಳಿ ಸಿಹಿ ರುಚಿಯ 'ಕಿತ್ತಳೆ ಹಣ್ಣು'

ಮೀನುಗಳು

ಮೀನುಗಳು

ಸಾಲ್ಮನ್, ಮ್ಯಾಕೆರಲ್ ಮತ್ತು ಟ್ಯೂನಾ ಇತ್ಯಾದಿ ಮೀನುಗಳು ಒಮೆಗಾ-3 ಕೊಬ್ಬಿನಾಮ್ಲದಿಂದ ಸಮೃದ್ಧವಾಗಿದೆ. ಇದು ಖಿನ್ನತೆಯನ್ನು ನಿವಾರಿಸಲು ಪರಿಣಾಮಕಾರಿ ಎಂದು ಹಲವಾರು ಅಧ್ಯಯನಗಳು ಹೇಳಿವೆ. ಚಳಿಗಾಲದಲ್ಲಿ ಸೂರ್ಯನ ಬೆಳಕು ಕಡಿಮೆ ಇರುವ ಕಾರಣದಿಂದ ಕೆಲವರು ಖಿನ್ನತೆಗೆ ಒಳಗಾಗುತ್ತಾರೆ. ಇಂತವರು ಮೀನು ಸೇವಿಸಬೇಕು.

ಹಣ್ಣು ಮತ್ತು ತರಕಾರಿ ಜ್ಯೂಸ್

ಹಣ್ಣು ಮತ್ತು ತರಕಾರಿ ಜ್ಯೂಸ್

ಚಳಿಗಾಲದಲ್ಲಿ ನಮಗೆ ಬಾಯಾರಿಕೆಯಾಗುವುದು ಕಡಿಮೆ. ಇದರಿಂದಾಗಿ ನೀರು ಸೇವನೆ ಕಡಿಮೆಯಾಗಿರುತ್ತದೆ. ಇದರಿಂದ ನಿರ್ಜಲೀಕರಣ ಮತ್ತು ನಿಶ್ಯಕ್ತಿ ಉಂಟಾಗುತ್ತದೆ. ಚಳಿಗಾಲದಲ್ಲಿ ಸರಿಯಾಗಿ ನೀರು ಸೇವಿಸುವುದರಿಂದ ಹಣ್ಣು ಹಾಗೂ ತರಕಾರಿಗಳ ಜ್ಯೂಸ್ ಸೇವನೆ ಮಾಡಿ. ಸೋಡಾ ದೇಹವನ್ನು ನಿರ್ಜಲೀಕರಿಸುವುದರಿಂದ ಇದರಿಂದ ದೂರವಿರುವುದೇ ಉತ್ತಮ. ನೆನಪಿರಲಿ ತರಕಾರಿ-ಹಣ್ಣುಗಳನ್ನು ತೊಳೆಯುವುದಕ್ಕೂ ಟ್ರಿಕ್ಸ್ ಇದೆ!

ಹಸಿರು ಕಾಳು ಮತ್ತು ದಾಳಿಂಬೆ

ಹಸಿರು ಕಾಳು ಮತ್ತು ದಾಳಿಂಬೆ

ಆ್ಯಂಟಿ ಆಕ್ಸಿಡೆಂಟ್ ಮತ್ತು ಉರಿಯೂತ ಶಮನಕಾರಿ ಗುಣಗಳನ್ನು ಹೊಂದಿರುವಂತಹ ಹಸಿರು ಕಾಳು ಮತ್ತು ದಾಳಿಂಬೆ ಚಳಿಗಾಲದಲ್ಲಿ ಒಳ್ಳೆಯದು. ಇವು ಚಳಿಗಾಲದಲ್ಲಿ ಉಂಟಾಗುವ ಉರಿಯೂತವನ್ನು ಕಡಿಮೆ ಮಾಡುತ್ತದೆ ಮತ್ತು ದೇಹಕ್ಕೆ ಶಮನವನ್ನು ಒದಗಿಸುತ್ತದೆ.ದಾಳಿಂಬೆ ಹಣ್ಣಿನಲ್ಲಿರುವ 10 ಅದ್ಭುತ ಪ್ರಯೋಜನಗಳು

ಇಡೀ ಧಾನ್ಯಗಳು

ಇಡೀ ಧಾನ್ಯಗಳು

ಭಾರತೀಯರು ಹೆಚ್ಚಾಗಿ ಬಳಸುವಂತಹ ಅಕ್ಕಿ ಮತ್ತು ಗೋಧಿ ಚಳಿಗಾಲದಲ್ಲಿ ಒಳ್ಳೆಯದು. ಅನ್ನ ಮತ್ತು ಚಪಾತಿ ದೇಹಕ್ಕೆ ಉಷ್ಣತೆಯನ್ನು ಒದಗಿಸುವುದು. ಮನೆಯಲ್ಲೇ ಇದನ್ನು ತಯಾರಿಸಿಕೊಂಡು ಚಳಿಗಾಲದಲ್ಲಿ ದೇಹಕ್ಕೆ ಬೇಕಾಗುವ ಶಕ್ತಿಯನ್ನು ಪಡೆಯಿರಿ. ರಾಗಿ ಮತ್ತು ಜೋಳವನ್ನು ಕೂಡ ಬಳಸಬಹುದು.

 

English summary

These Foods Help To Keep Infection Away During Winter

When the temperatures drops as well as the day hours are shorter, levels of energy may take a large dip, right along with your mood and immunity. Changes in mood, energy, focus, desire and sleep are common. This makes it more important to focus on sufficient nourishment during this time of the year.
Story first published: Friday, January 27, 2017, 23:40 [IST]
Subscribe Newsletter