Latest Updates
-
ರಕ್ತದಾನದ ನಂತರ ಜಿಮ್ಗೆ ಹೋಗುವ ಮುನ್ನ ಎಚ್ಚರ! ಈ ತಪ್ಪುಗಳನ್ನು ಮಾಡಬೇಡಿ -
ವೀಕೆಂಡ್ ಪ್ಲಾನ್ ಮಾಡಿದ್ದೀರಾ? ಹವಾಮಾನ ವೈಪರೀತ್ಯದ ಎಚ್ಚರಿಕೆ: ನಿಮ್ಮ ಸುರಕ್ಷತೆಗಾಗಿ ಈ ಬದಲಾವಣೆ ಮಾಡಿಕೊಳ್ಳಿ! -
ಮುಂಬೈ ಬಿಸಿಲು ಮತ್ತು ಆರ್ದ್ರತೆ: 15 ನಿಮಿಷದಲ್ಲಿ ನಿಮ್ಮ ಮನೆಯನ್ನು ತಂಪಾಗಿರಿಸುವ ಸರಳ ಉಪಾಯಗಳು! -
ನಿಮ್ಮ ಆಹಾರದ ಪ್ಯಾಕೆಟ್ನಲ್ಲಿ ಸ್ಟೇಪ್ಲರ್ ಪಿನ್ ಇದೆಯೇ? ಎಚ್ಚರ, FSSAI ಕಠಿಣ ಆದೇಶ! -
ಧರ್ಮಶಾಲಾದಲ್ಲಿ ಭಾರತ-ಅಫ್ಘಾನಿಸ್ತಾನ ಹೈ-ವೋಲ್ಟೇಜ್ ಕದನ: ಮಳೆ ಆತಂಕದ ನಡುವೆ ಗೆಲ್ಲೋರು ಯಾರು? -
ದೆಹಲಿ-ಎನ್ಸಿಆರ್ ಬಿರುಗಾಳಿ: ಫಿಟ್ನೆಸ್ ಪ್ರಿಯರೇ ಎಚ್ಚರ, ಇಂದಿನ ವರ್ಕೌಟ್ ಮನೆಯಲ್ಲೇ ಮಾಡುವುದು ಏಕೆ ಸುರಕ್ಷಿತ? -
ದೆಹಲಿಯಲ್ಲಿ ಇಂದು ಮಳೆ ಎಚ್ಚರಿಕೆ: ನಿಮ್ಮ ಡಿನ್ನರ್ ಪ್ಲಾನ್ ಸುರಕ್ಷಿತವಾಗಿರಲು ಈ ಟಿಪ್ಸ್ ಫಾಲೋ ಮಾಡಿ -
ಬೆಂಗಳೂರಿನಲ್ಲಿ ಭರ್ಜರಿ ಮಳೆ: ನಿಮ್ಮ ಮನೆ ಮತ್ತು ಬಾಲ್ಕನಿ ಸುರಕ್ಷಿತವಾಗಿಡಲು ಈ 5 ಸರಳ ಟಿಪ್ಸ್ ಮಿಸ್ ಮಾಡ್ಬೇಡಿ! -
ಪತ್ರಿಕೆಯಲ್ಲಿ ಆಹಾರ ಸುತ್ತಿ ತಿನ್ನುತ್ತಿದ್ದೀರಾ? ಇದು ನಿಮ್ಮ ಆರೋಗ್ಯಕ್ಕೆ 'ನಿಧಾನಗತಿಯ ವಿಷ' ಎಚ್ಚರ! -
ಬೆಂಗಳೂರಿನಲ್ಲಿ ಮತ್ತೆ ಮಳೆ: ಟ್ರಾಫಿಕ್ ಜಾಮ್ ತಪ್ಪಿಸಿ ಸುರಕ್ಷಿತವಾಗಿ ಮನೆ ಸೇರಲು ಇಲ್ಲಿವೆ ಸ್ಮಾರ್ಟ್ ಟಿಪ್ಸ್!
ಚಳಿಗಾಲದ ಆಹಾರ ಶೈಲಿ, ಸ್ವಲ್ಪ ವೆರೈಟಿಯಾಗಿರಲಿ
ಚಳಿಗಾಲದಲ್ಲಿ ಬೆಚ್ಚಗೆ ಹೊದ್ದುಕೊಂಡು ಬೆಂಕಿಯ ಶಾಖವನ್ನು ಆಸ್ವಾದಿಸುತ್ತಾ ಬಿಸಿಬಿಸಿಯಾದ ಮಸಾಲಾ ಟೀ ಹೀರುತ್ತಿದ್ದರೆ ಆಹಾ, ಸ್ವರ್ಗವೇ ಧರೆಗಿಳಿದಂತಹ ಅನುಭವ. ವರ್ಷವಿಡೀ ಬಿಸಿಯ ಧಗೆಯಲ್ಲಿಯೇ ಇರುವ ನಗರಗಳ ಜನರು ವರ್ಷಕ್ಕೊಂದು ಬಾರಿಯಾದರೂ ಎತ್ತರದ ಪರ್ವತತಾಣಗಳಲ್ಲಿ ಕೆಲಕಾಲ ಕಳೆದು ಚಳಿಯ ಅನುಭವ ಅನುಭವಿಸದಿದ್ದರೆ ಏನನ್ನೋ ಕಳೆದುಕೊಂಡ ಭಾವನೆ.
ಕೆಲವೊಮ್ಮೆ ಬೆಚ್ಚಗಿನ ದಿರಿಸು ಧರಿಸಿಯೂ, ಬೆಂಕಿಯ ಶಾಖವನ್ನು ಸಾಕಷ್ಟು ಪಡೆದರೂ ದೇಹ ಶೀತ ನೆಗಡಿಯಿಂದ ಬಳಲಿ ಸುಸ್ತು, ತಲೆಸುತ್ತುವುದು ಮೊದಲಾದ ತೊಂದರೆಗಳನ್ನು ಎದುರಿಸಿದರೆ ಅದು ಚಳಿಯ ತಪ್ಪಲ್ಲ, ಬದಲಿಗೆ ನಮ್ಮ ದೇಹದೊಳಗಿನ ಬಿಸಿ ಸಾಕಷ್ಟಿಲ್ಲದಿರುವುದೇ ಕಾರಣ. ಏಕೆಂದರೆ ಬಿಸಿರಕ್ತಪ್ರಾಣಿಗಳಾದ ನಮ್ಮ ಶರೀರ ಪ್ರತಿಕ್ಷಣ ಒಳಗಿನಿಂದ ಬೆಚ್ಚಗಿರುವುದು ಅವಶ್ಯಕ. ಹಾಗಾಗಿ ಚಳಿಗಾಲದಲ್ಲಿ ದೇಹ ಬೆಚ್ಚಗಿರಲು ನಮಗೆ ವಿಶೇಷ ಆಹಾರಗಳ ಅಗತ್ಯವಿದೆ. ಈ ಆಹಾರಗಳ ಮೂಲಕ ನಮ್ಮ ಕರುಳುಗಳು ಕ್ಯಾಲೋರಿಗಳನ್ನು ಒಮ್ಮೆಲೇ ನೀಡದೇ ನಿಧಾನವಾಗಿ ಬಿಡುಗಡೆ ಮಾಡುತ್ತವೆ. ಒಂದು ಮೇಣದಬತ್ತಿ ಬೆಂಕಿಗೆ ನಿಧಾನವಾಗಿ ಕರಗಿದ ಹಾಗೆ. ತನ್ಮೂಲಕ ದೇಹ ಹೆಚ್ಚು ಹೊತ್ತು ಬೆಚ್ಚರಿಗಲು ಹಾಗೂ ಆರೋಗ್ಯದಿಂದಿರಲು ಸಾಧ್ಯವಾಗುತ್ತದೆ. ವೈದ್ಯಕೀಯ ಭಾಷೆಯಲ್ಲಿ ಇದಕ್ಕೆ ಆಹಾರದ specific dynamic action ಎಂದು ಕರೆಯುತ್ತಾರೆ.
ಸಾಮಾನ್ಯವಾಗಿ ದೇಹದ ಉಷ್ಣತೆಯು ನಮ್ಮ ದೇಹದ ಜೀರ್ಣ ಶಕ್ತಿಯನ್ನು ಆಧರಿಸಿ ನಿರ್ಧಾರವಾಗುತ್ತದೆ, ಹಾಗಾಗಿ ದೇಹದ ಉಷ್ಣಾಂಶವನ್ನು ಅಧಿಕ ಮಾಡಿಕೊಳ್ಳಿ ಮತ್ತು ಋತುಮಾನಕ್ಕೆ ತಕ್ಕಂತೆ ಉಡುಗೆಗಳನ್ನು ಧರಿಸುವುದನ್ನು ಮರೆಯಬೇಡಿ, ಇದರಿಂದ ಚಳಿಯ ಆಘಾತಕ್ಕೆ ಸಿಲುಕುವ ಭಯ ನಿಮಗೆ ಇರುವುದಿಲ್ಲ. ಬನ್ನಿ ಇನ್ನು ಆ ಆಹಾರ ಪದಾರ್ಥಗಳು ಯಾವುವು ಎಂಬ ಕುತೂಹಲವನ್ನು ನಿವಾರಿಸಿಕೊಳ್ಳಲು ಮುಂದೆ ಓದಿ...

ಮೆಣಸಿನಕಾಯಿ
ಮೆಣಸಿನ ಕಾಯಿ ನಿಮ್ಮ ನಾಲಿಗೆಗೆ ಖಾರವಾಗಲು ಕಾರಣವೇನು? ಅದರಲ್ಲಿರುವ ಕ್ಯಾಪ್ಸಾಸಿನ್ ಎಂಬ ರಾಸಾಯನಿಕವೇ ಇದಕ್ಕೆ ಕಾರಣ. ಇದು ನಿಮ್ಮ ನಾಲಿಗೆಗೆ ಉರಿಯುವ ಅನುಭವವನ್ನು ತರುತ್ತದೆ. ಆ ಮೂಲಕ ದೇಹದ ಉಷ್ಣತೆಯನ್ನು ಹೆಚ್ಚಿಸಿ, ನಿಮ್ಮನ್ನು ಚಳಿಗಾಲದಲ್ಲಿ ಬೆಚ್ಚಗಿಡುತ್ತದೆ. ಮಲೆನಾಡಿನಲ್ಲಿ ಗದ್ದೆ ಕೆಲಸ ಮಾಡುವ ಹೆಂಗಸರು, ತಮ್ಮ ನಾಲಿಗೆಯ ಕೆಳಗೆ ಒಂದು ಬಗೆಯ ಮೆಣಸಿನ ಕಾಯಿಯ ತುಂಡನ್ನು ಇರಿಸಿಕೊಂಡು ಕೆಲಸ ಮಾಡುತ್ತಾರಂತೆ...! ಇದು ಅವರಿಗೆ ಅಲ್ಲಿನ ಚಳಿಯಿಂದ ರಕ್ಷಣೆ ನೀಡುತ್ತದೆಯಂತೆ.

ಈರುಳ್ಳಿಗಳು
ಈರುಳ್ಳಿಗಳು ನಿಮ್ಮ ದೇಹದಲ್ಲಿ ಬೆವರನ್ನು ಉತ್ಪಾದಿಸಲು ಪ್ರಮುಖ ಪಾತ್ರವನ್ನು ನಿರ್ವಹಿಸುತ್ತವೆ. ಅಲ್ಲದೆ ಇವು ನಿಮಗೆ ಚಳಿಗಾಲದಲ್ಲಿ ಬರುವ ಕಾಯಿಲೆಗಳಿಂದ ರಕ್ಷಣೆಯನ್ನು ನೀಡುತ್ತದೆ. ಜೊತೆಗೆ ಇದು ನಿಮ್ಮನ್ನು ಬೆಚ್ಚಗೆ ಸಹ ಇಡುತ್ತದೆ. ಈರುಳ್ಳಿ ಬಜ್ಜಿ, ಪಕೋಡಾಗಳು ಏಕೆ ಈ ಕಾಲದಲ್ಲಿ ಹೆಚ್ಚು ಬಿಕರಿಯಾಗುತ್ತವೆ ಎಂದು ತಿಳಿಯಿತಲ್ಲವೇ?

ಶುಂಠಿ ಟೀ
ನಿಮ್ಮನ್ನು ನೀವು ಚಳಿಗಾಲದಲ್ಲಿ ಬೆಚ್ಚಗೆ ಇರಿಸಿಕೊಳ್ಳಲು ಇರುವ ಅತ್ಯಂತ ಅಗ್ಗದ ಮಾರ್ಗ ಇದಾಗಿದೆ. ಚಳಿಯಾದರೆ ಒಂದು ಕಪ್ ಶುಂಠಿ ಟೀಯನ್ನು ಸೇವಿಸಿ, ಮೈ ಬೆಚ್ಚಗೆ ಆಗಿ, ನೀವು ಆಹ್ಲಾದಕರವಾಗಿ ಇರಬಹುದು.

ಅರಿಶಿನ
ನೀವು ತಯಾರಿಸುವ ಎಲ್ಲಾ ಆಹಾರ ಪದಾರ್ಥಗಳಿಗೆ ಅರಿಶಿನವನ್ನು ಹಾಕುತ್ತೀರಲ್ಲವೆ? ಒಂದು ವೇಳೆ ನಿಮಗೆ ಅರಿಶಿನ ಹಿಡಿಸದಿದ್ದರು ಸಹ ಈ ಕಾಲದಲ್ಲಿ ಒಂದು ಚಿಟಿಕೆ ಅರಿಶಿನವನ್ನು ಹಾಕಿ. ಇದು ನಿಮ್ಮನ್ನು ಬೆಚ್ಚಗೆ ಇರಿಸಲು ಸಹಾಯ ಮಾಡುತ್ತದೆ.

ಖಾರವಾದ ಸೂಪ್
ಚಳಿಗಾಲದಲ್ಲಿ ಸಂಜೆಯ ಹೊತ್ತು, ಒಂದು ಕಪ್ ಬಿಸಿ ಬಿಸಿ ಸೂಪನ್ನು ಆಸ್ವಾದಿಸಿ. ಸೂಪ್‌ಗಳು ನಿಮ್ಮ ದೇಹವನ್ನು ಬೆಚ್ಚಗೆ ಮಾಡುತ್ತವೆ. ಇವು ಪೋಷಕಾಂಶಭರಿತವು ಸಹ ಆಗಿರುತ್ತವೆ. ತರಕಾರಿಗಳ ಸೂಪ್ ಈ ಕಾಲದಲ್ಲಿ ಮತ್ತಷ್ಟು ಒಳ್ಳೆಯದು.

ಕೆಫಿನ್
ಕೆಫಿನ್ ನಿಮ್ಮ ದೇಹದಲ್ಲಿ ಜೀರ್ಣಕ್ರಿಯೆಯನ್ನು ತಾತ್ಕಾಲಿಕವಾಗಿ ಹೆಚ್ಚಿಸುತ್ತವೆ ಎಂದು ನಂಬಲಾಗಿದೆ. ಇದು ನಿಮ್ಮ ದೇಹವನ್ನು ಬೆಚ್ಚಗೆ ಸಹ ಮಾಡುತ್ತದೆ. ಆದ್ದರಿಂದ ಚಳಿಗಾಲದಲ್ಲಿ ಒಂದು ಕಪ್ ಕಾಫಿಯನ್ನು ಸೇವಿಸಲು ಹಿಂಜರಿಯಬೇಡಿ. ಆದರೆ ಬೆಚ್ಚಗೆ ಇರಬೇಕು ಎಂದು ಹೆಚ್ಚಿನ ಕಾಫಿಯನ್ನು ಸಹ ಸೇವಿಸಬೇಡಿ. ಅದು ನಿಮ್ಮ ದೇಹದ ಮೇಲೆ ಪ್ರತಿಕೂಲ ಪರಿಣಾಮವನ್ನು ಬೀರುತ್ತದೆ.

ಮಸಾಲೆಗಳು
ಮಸಾಲೆಗಳು ಸಹ ನಿಮ್ಮ ದೇಹವನ್ನು ಬೆಚ್ಚಗೆ ಇರಿಸುತ್ತವೆ. ಆದರೆ ಅಧಿಕವಾದ ಮಸಾಲೆ ಪದಾರ್ಥಗಳು ನಿಮ್ಮ ದೇಹಕ್ಕೆ ಒಳ್ಳೆಯದಲ್ಲ. ಮಸಾಲೆ ಪದಾರ್ಥಗಳನ್ನು ಸ್ವಲ್ಪ ನೀರಿಗೆ ಹಾಕಿ, ಅದನ್ನು ಕುದಿಸಿ. ಆಮೇಲೆ ಆ ನೀರನ್ನು ಸೇವಿಸಿ.

ಒಣ ಹಣ್ಣುಗಳು
ಖರ್ಜೂರ, ಅಪ್ರಿಕೋಟ್‌ಗಳು ಮತ್ತು ಇತರೆ ಒಣ ಹಣ್ಣುಗಳು ನಿಮ್ಮ ದೇಹವನ್ನು ಬೆಚ್ಚಗೆ ಇರಿಸಲು ಸಹಾಯ ಮಾಡುತ್ತವೆ. ಒಣ ಹಣ್ಣುಗಳನ್ನು ಸಾಧ್ಯವಾದಷ್ಟು ಈ ಕಾಲದಲ್ಲಿ ಸಮಯ ಸಿಕ್ಕಾಗ ಸೇವಿಸಿ.



Click it and Unblock the Notifications