For Quick Alerts
ALLOW NOTIFICATIONS  
For Daily Alerts

ಋತುಚಕ್ರ ಸರಿಯಾದ ಸಮಯಕ್ಕೆ ಆಗಿಲ್ಲವೆಂದರೆ ಇದೂ ಕಾರಣವಿರಬಹುದು!

By Hemanth
|

ಮಹಿಳೆಯರ ಋತುಚಕ್ರವು ಅವರ ಆರೋಗ್ಯವನ್ನು ತೋರಿಸುತ್ತದೆ ಎನ್ನುವುದು ಹೆಚ್ಚಿನವರಿಗೆ ತಿಳಿದಿಲ್ಲ. ಹದಿಯಹರೆಯದಲ್ಲಿ ಕಾಣಿಸಿಕೊಳ್ಳುವ ಋತುಚಕ್ರವು ವಯಸ್ಸಾಗುತ್ತಾ ಬರುವಂತೆ ನಿಂತು ಬಿಡುತ್ತದೆ. ಈ ನಡುವೆ ಪ್ರತೀ ತಿಂಗಳು ಋತುಚಕ್ರವಾಗುತ್ತಾ ಇರುತ್ತದೆ. ಋತುಸ್ರಾವ ವಿಳಂಬವಾದರೆ ಅದನ್ನು ಗರ್ಭಧಾರಣೆಯ ಲಕ್ಷಣವೆನ್ನಲಾಗುತ್ತದೆ. ಋತುಸ್ರಾವವಾಗದೆ ಇರುವುದು ಕೂಡ ಗರ್ಭಧಾರಣೆಯಾಗುವ ಸುಳಿವು. ಆದರೆ ಕೆಲವೊಂದು ಸಲ ಋತುಸ್ರಾವ ಆಗದೆ ಇರಲು ಬೇರೆಯೇ ಕಾರಣವಿರಬಹುದು.


ಆ ದಿನಗಳಲ್ಲಿ ಕಾಡುವ ಅತೀವ ರಕ್ತಸ್ರಾವ! ಕಾರಣವೇನು?

Here Are The Reasons For Delayed Periods | Boldsky Kannada

ಅನಿಯಮಿತವಾಗಿ ಋತುಸ್ರಾವವಾಗುವುದು ಎರಡು ಸಂದರ್ಭಗಳಲ್ಲಿ ಮಾತ್ರ. ಒಂದು ಋತುಚಕ್ರದ ಆರಂಭದ ಸಮಯ, ಇನ್ನೊಂದು ಋತುಚಕ್ರವು ನಿಲ್ಲುವ ವೇಳೆ. ಮಹಿಳೆಯ ದೇಹವು ಹಲವಾರು ಬದಾವಣೆಗೆ ಒಗ್ಗಿಕೊಳ್ಳುವ ಕಾರಣದಿಂದಾಗಿ ಋತುಚಕ್ರದಲ್ಲಿ ಬದಲಾವಣೆಗಳು ಆಗುತ್ತಾ ಇರಬಹುದು. ಪ್ರತೀ ತಿಂಗಳು ಮಹಿಳೆಯರು 28 ದಿನಕ್ಕೊಮ್ಮೆ ಋತುಸ್ರಾವವಾಗಬೇಕು.

ಯಮಯಾತನೆ ನೀಡುವ ಮುಟ್ಟಿನ ನೋವಿಗೆ ಪರಿಹಾರವೇನು?

21ರಿಂದ 35 ದಿನಗಳ ಮಧ್ಯೆ ನಡೆಯುವ ಋತುಸ್ರಾವವು ಆರೋಗ್ಯಕಾರಿ. ಈ ಅಂತರದಲ್ಲಿ ಋತುಚಕ್ರವಿರದೇ ಇದ್ರೆ ಅದನ್ನು ಅನಿಯಮಿತವಾದ ಋತುಚಕ್ರವೆನ್ನಲಾಗುತ್ತದೆ. ಆಗ ದೇಹದಲ್ಲಿ ಏನೋ ಸಮಸ್ಯೆಯಿದೆ ಎಂದು ಭಾವಿಸಬೇಕಾಗುತ್ತದೆ. ಋತುಚಕ್ರ ವಿಳಂಬಗೊಳಿಸುವ ಕೆಲವೊಂದು ಪ್ರಮುಖ ಕಾರಣವನ್ನು ಬೋಲ್ಡ್ ಸ್ಕೈ ನಿಮ್ಮ ಮುಂದಿಡಲಿದೆ....

ಒತ್ತಡ

ಒತ್ತಡ

ದೇಹವು ದೈಹಿಕ ಅಥವಾ ಮಾನಸಿಕ ಒತ್ತಡಕ್ಕೆ ಒಳಗಾದಾಗ ದೇಹದಲ್ಲಿ ಒತ್ತಡದ ಹಾರ್ಮೋನು ಬಿಡುಗಡೆಯಾಗುತ್ತದೆ. ಈ ಹಾರ್ಮೋನುಗಳು ಅತಿಯಾದರೆ ಅದರಿಂದ ಸಂತಾನೋತ್ಪತ್ತಿ ವ್ಯವಸ್ಥೆ ಮೇಲೆ ತೀವ್ರ ಪರಿಣಾಮ ಬೀರುತ್ತದೆ. ಸಂತಾನೋತ್ಪತ್ತಿ ವ್ಯವಸ್ಥೆ ಚಟುವಟಿಕೆಯು ತಾತ್ಕಾಲಿಕವಾಗಿ ನಿಂತು ಹೋಗಬಹುದು. ಇದರಿಂದ ಋತುಚಕ್ರವು ವಿಳಂಬವಾಗಬಹುದು.

ಔಷಧಿ

ಔಷಧಿ

ಗರ್ಭನಿರೋಧಕ ಮಾತ್ರೆಗಳಿಂದಾಗಿ ಋತುಚಕ್ರದಲ್ಲಿ ವಿಳಂಬವಾಗುವಂತಹ ಸಾಧ್ಯತೆಗಳು ಹೆಚ್ಚಿವೆ. ಗರ್ಭನಿರೋಧಕ ಮಾತ್ರೆಗಳು ದೇಹದಲ್ಲಿ ಅಂಡಾಣು ಬಿಡುಗಡೆ ನಿಲ್ಲಿಸುತ್ತದೆ. ಅಂಡಾಣು ಬಿಡುಗಡೆಯಾಗದೆ ಇದ್ದರೆ ಋತುಸ್ರಾವವಾಗುವುದಿಲ್ಲ. ತುರ್ತು ಗರ್ಭನಿರೋಧಕ ಮಾತ್ರೆಗಳಿಂದ ಋತುಸ್ರಾವ ವಿಳಂಬವಾಗಬಹುದು ಅಥವಾ ಮುಂದೂಡಲ್ಪಡಬಹುದು. ಖಿನ್ನತೆಗೆ ತೆಗೆದುಕೊಳ್ಳುವಂತಹ ಮಾತ್ರೆಗಳು ಕೂಡ ಋತುಚಕ್ರ ವಿಳಂಬ ಮಾಡಬಹುದು. ಆಂಟಿಸೈಕೋಟಿಕ್ಸ್, ಕಾರ್ಟಿಕೊಸ್ಟೆರಾಯ್ಡ್ಸ್ ಮತ್ತು ಕಿಮೊಥೆರಪಿಯಿಂದಲೂ ಹೀಗೆ ಆಗಬಹುದು.

ಥೈರಾಯ್ಡ್ ಸಮಸ್ಯೆ

ಥೈರಾಯ್ಡ್ ಸಮಸ್ಯೆ

ಕುತ್ತಿಗೆಯಲ್ಲಿ ಇರುವಂತಹ ಥೈರಾಯ್ಡ್ ನ ಗ್ರಂಥಿಗಳು ದೇಹದ ಚಯಾಪಚಾಯ ಕ್ರಿಯೆಯನ್ನು ನಿಯಂತ್ರಿಸುತ್ತದೆ. ದೇಹವು ಸರಿಯಾಗಿ ಕಾರ್ಯನಿರ್ವಹಿಸಲು ಇದು ದೇಹದ ಇತರ ವ್ಯವಸ್ಥೆಯೊಂದಿಗೆ ಸಂಪರ್ಕದಲ್ಲಿರುತ್ತದೆ. ಥೈರಾಯ್ಡ್ ನ ಅಸಮತೋಲನ, ಅಧಿಕ ಥೈರಾಯ್ಡ್ ನಿಂದ ಋತುಚಕ್ರದಲ್ಲಿ ಬದಲಾವಣೆಗಳು ಆಗಬಹುದು.

ಎದೆಹಾಲುಣಿಸುವುದು

ಎದೆಹಾಲುಣಿಸುವುದು

ನೀವು ಮಗುವಿಗೆ ಎದೆಹಾಲುಣಿಸುತ್ತಿದ್ದರೆ ಸ್ವಲ್ಪ ಸಮಯದ ತನಕ ನಿಮಗೆ ಋತುಚಕ್ರವಾಗದಿರಬಹುದು. ಎದೆಹಾಲಿನ ಉತ್ಪತ್ತಿಗೆ ಕಾರಣವಾಗುವಂತಹ ಹಾರ್ಮೋನು ಪ್ರೊಲಾಕ್ಟಿನ್ ಅಂಡಾಣು ಬಿಡುಗಡೆಯನ್ನು ನಿಲ್ಲಿಸುತ್ತದೆ. ಮಗುವಿಗೆ ಎದೆಹಾಲುಣಿಸುವಂತಹ ಹಲವಾರು ಮಹಿಳೆಯರಿಗೆ ಋತುಚಕ್ರವಾಗುವುದಿಲ್ಲ.

ಅನಾರೋಗ್ಯ

ಅನಾರೋಗ್ಯ

ಅಂಡಾಣು ಉತ್ಪತ್ತಿಯಾಗುವಂತಹ ಸಮಯದಲ್ಲಿ ಶೀತ, ಕಫ ಅಥವಾ ಜ್ವರ ಕಾಣಿಸಿಕೊಂಡರೆ ದೇಹದ ಮೇಲೆ ಒತ್ತಡ ಬೀಳುತ್ತದೆ ಮತ್ತು ಅಂಡಾಣು ಉತ್ಪತ್ತಿ ವಿಳಂಬವಾಗುವುದು ಅಥವಾ ಮುಂದಕ್ಕೆ ಹೋಗಬಹುದು. ಇದರಿಂದ ಋತುಚಕ್ರವು ವಿಳಂಬವಾಗುವ ಸಾಧ್ಯತೆ ಹೆಚ್ಚಿದೆ.

ದೀರ್ಘಕಾಲದ ಅನಾರೋಗ್ಯ

ದೀರ್ಘಕಾಲದ ಅನಾರೋಗ್ಯ

ದೀರ್ಘಕಾಲದ ಅನಾರೋಗ್ಯಗಳಾದ ಮಧುಮೇಹ ಅಥವಾ ಉದರದ ಸಮಸ್ಯೆಯು ಋತುಚಕ್ರದ ಮೇಲೆ ಪರಿಣಾಮ ಬೀರುತ್ತದೆ. ರಕ್ತದಲ್ಲಿನ ಸಕ್ಕರೆ ಮಟ್ಟದಲ್ಲಿ ಬದಲಾವಣೆಗಳಾದಾಗ ಹಾರ್ಮೋನು ಬದಲಾವಣೆಯಾಗುತ್ತದೆ. ಇದು ತುಂಬಾ ಅಪರೂಪವಾಗಿರುತ್ತದೆ. ಆದರೆ ತುಂಬಾ ಕೆಟ್ಟದಾಗಿ ನಿಯಂತ್ರಿಸಲ್ಪಡುವ ಮಧುಮೇಹವು ಅನಿಯಮಿತ ಋತುಚಕ್ರಕ್ಕೆ ಕಾರಣವಾಗಬಹುದು.

ಬೊಜ್ಜು

ಬೊಜ್ಜು

ಬೊಜ್ಜು ದೇಹದಿಂದಾಗಿ ಹಾರ್ಮೋನುವಿನಲ್ಲಿ ಬದಲಾವಣೆಗಳಾಗಬಹುದು. ಇದರಿಂದ ಋತುಚಕ್ರದಲ್ಲಿ ವಿಳಂಬವಾಗುವ ಸಾಧ್ಯತೆ ಹೆಚ್ಚಿದೆ. ಇಂತಹ ಸಂದರ್ಭದಲ್ಲಿ ವೈದ್ಯರು ಸೂಚಿಸಿರುವ ಆಹಾರ ಕ್ರಮ ಮತ್ತು ವ್ಯಾಯಾಮವನ್ನು ಪಾಲಿಸಬೇಕು.

ತೂಕ ಕಡಿಮೆಯಿರುವುದು

ತೂಕ ಕಡಿಮೆಯಿರುವುದು

ಅಜೀರ್ಣ ಮತ್ತು ಇತರ ಕೆಲವೊಂದು ಸಮಸ್ಯೆ ಇರುವಂತಹ ಮಹಿಳೆಯರಲ್ಲಿ ದೇಹದ ತೂಕ ಕಡಿಮೆಯಿರುತ್ತದೆ. ಇಂತಹ ಸಂದರ್ಭದಲ್ಲಿ ಋತುಚಕ್ರ ವಿಳಂಬ ಅಥವಾ ಕಳೆದುಕೊಳ್ಳುವ ಸಾಧ್ಯತೆಯಿದೆ. ನಿಮ್ಮ ಎತ್ತರವನ್ನು ಪರಿಗಣಿಸಿ ಸಾಮಾನ್ಯ ಶ್ರೇಣಿಗಿಂತ ಶೇ.10ರಷ್ಟು ತೂಕ ಕಡಿಮೆಯಿದ್ದರೂ ದೇಹವು ಕಾರ್ಯನಿರ್ವಹಿಸುವ ರೀತಿಯು ಭಿನ್ನವಾಗುವುದು ಮತ್ತು ಅಂಡಾಣು ಬಿಡುಗಡೆಯಾಗದೆ ಇರಬಹುದು.

English summary

These Are The Reasons For Delay In Periods

Delay in periods is quite often assumed to be a symptom of pregnancy. While it is true that a missed period could be a sign of pregnancy, it is vital to know that there could be other reasons too for a missed period. There are two times in a woman's life when it is completely normal for her periods to be irregular. The first instance would be the start of her periods and the second would be the menopause stage.
X
Desktop Bottom Promotion