For Quick Alerts
ALLOW NOTIFICATIONS  
For Daily Alerts

  ಹಾಲಿಗೆ ಅರಿಶಿನ ಹಾಕಿ ಕುಡಿದರೆ-ಹೊಟ್ಟೆಯ ಕೊಬ್ಬು ಕರಗುತ್ತದೆ...

  By Arshad
  |

  ಭಾರತೀಯರು ಹೆಚ್ಚಾಗಿ ತಮ್ಮ ಅಡುಗೆಗಳಲ್ಲಿ ಅರಿಶಿನವನ್ನು ಹಿಂದಿನಿಂದಲೂ ಬಳಸುತ್ತಾ ಬಂದಿದ್ದಾರೆ. ಆರೋಗ್ಯವನ್ನು ದೃಷ್ಟಿಯಲ್ಲಿರಿಸಿಕೊಂಡೇ ಅರಿಶಿನವನ್ನು ಅಡುಗೆಯಲ್ಲಿ ಬಳಸಲಾಗುತ್ತಿದೆ. ಈ ಮಸಾಲೆಯಲ್ಲಿ ಔಷಧೀಯ ಗುಣವಿದೆ ಎಂದು ನೂರಾರು ವರ್ಷಗಳ ಹಿಂದೆಯೇ ನಮ್ಮ ಪೂರ್ವಜರು ಗಮನಿಸಿದ್ದರು. ಇಂದಿನ ಸಂಶೋಧನೆಗಳು ಈ ಔಷಧೀಯ ಗುಣಗಳನ್ನು ದೃಢೀಕರಿಸಿದ್ದು ಈಗ ಪಾಶ್ಚಾತ್ಯ ದೇಶಗಳಲ್ಲಿಯೂ ಅರಿಶಿನ ಹಲವು ಔಷಧಿಗಳಲ್ಲಿ ಬಳಸಲ್ಪಡುತ್ತಿದೆ.

  ಅರಿಶಿನ ಶುಂಠಿಯಂತೆಯೇ ನೆಲದಡಿಯಲ್ಲಿ ಬೆಳೆಯುವ ಗಡ್ಡೆಯಾಗಿದ್ದು ಒಣಗಿಸಿ ಮಾಡಿದ ಪುಡಿಯನ್ನು ಅಡುಗೆಗೆ ರುಚಿ ತರಲೆಂದು ಬಳಸಲಾಗುತ್ತದೆ. ಅಲ್ಲದೇ ಇದನ್ನು ನೀರಿನಲ್ಲಿ ಅಥವಾ ಹಾಲಿನಲ್ಲಿ ಬೆರೆಸಿ ಕುಡಿಯುವ ಮೂಲಕ ಔಷಧಿಯಂತೆಯೂ ಬಳಕೆಯಾಗುತ್ತದೆ. ಭಾರತದ ಸಾಂಬಾರ ಪದಾರ್ಥಗಳಲ್ಲಿ ಅರಿಶಿನವನ್ನು ಸಾಂಬಾರ ಪದಾರ್ಥಗಳ ರಾಣಿ ಎಂದು ಕರೆಯಲಾಗುತ್ತದೆ. ಇದರ ಉರಿಯೂತ ನಿವಾರಕ ಗುಣ, ಆಂಟಿ ಆಕ್ಸಿಡೆಂಟು ಗುಣಗಳೇ ಇದರ ಔಷಧೀಯ ಬಳಕೆಗೆ ಕಾರಣವಾಗಿದೆ. ಅಷ್ಟೇ ಅಲ್ಲ, ಇದರಲ್ಲಿ ಸಾಕಷ್ಟು ಪ್ರಮಾಣದಲ್ಲಿ ಕರಗುವ ನಾರು, ಪ್ರೋಟೀನುಗಳು, ಪೊಟ್ಯಾಶಿಯಂ, ಕ್ಯಾಲ್ಸಿಯಂ, ಕಬ್ಬಿಣ, ವಿಟಮಿನ್ ಸಿ, ಇ, ಕೆ ಹಾಗೂ ಇನ್ನೂ ಕೆಲವಾರು ಪೋಷಕಾಂಶಗಳಿವೆ.

  ಹಾಲು-ಅರಿಶಿನದ ಜೋಡಿ ಮಾಡಲಿದೆ ಕಮಾಲಿನ ಮೋಡಿ!

  ಆದರೆ ಇದಕ್ಕೆ ಹಳದಿ ಬಣ್ಣ ಬರಲು ಪ್ರಮುಖವಾದ ಪರಿಕರವೆಂದರೆ ಕುರ್ಕುಮಿನ್ ಎಂಬ ಪೋಷಕಾಂಶ. ಕುರ್ಕುಮಿನ್ ಅನ್ನು ಹೊಂದಿರುವ ಔಷಧಿಗಳು ಈಗ ಲಭ್ಯವಿದ್ದು ಅರಿಶಿನದ ರುಚಿ ಇಷ್ಟವಾಗದವರು ಇದನ್ನು ಸೇವಿಸಬಹುದು. ಆದರೆ ಅಗ್ಗವಾಗಿ ದೊರಕುವ ಅರಿಶಿನಕ್ಕೆ ಇದು ಸಾಟಿಯಾಗಲಾರದು. ಅರಿಶಿನವನ್ನು ಟೀ ಯೊಡನೆ ಬೆರೆಸಿ ಕುಡಿಯಲೂ ಚೆನ್ನಾಗಿರುತ್ತದೆ ಹಾಗೂ ಭಾರತೀಯ ಖಾರವಿರುವ ಯಾವುದೇ ಅಡುಗೆಯಲ್ಲಿ ಅರಿಶಿನವಿಲ್ಲದೇ ಇರುವುದಿಲ್ಲ. ಅರಿಶಿನವನ್ನು ಯಾವುದೇ ಅಡುಗೆಗೆ ಬಳಸಿ ಅಥವಾ ಹೇಗಾದರೂ ಸೇವಿಸಿ, ಇದರ ಗುಣಗಳಂತೂ ಹಲವು ರೂಪಗಳಲ್ಲಿ ದಕ್ಕಿಯೇ ದಕ್ಕುತ್ತವೆ. ಬನ್ನಿ, ಅರಿಶಿನದ ಸೇವನೆಯಿಂದ ಲಭ್ಯವಾಗುವ ಕೆಲವು ಪ್ರಯೋಜನಗಳ ಬಗ್ಗೆ ತಿಳಿದುಕೊಳ್ಳೋಣ.....

  ಉರಿಯೂತ ನಿವಾರಕ ಗುಣ

  ಉರಿಯೂತ ನಿವಾರಕ ಗುಣ

  ಅರಿಶಿನದ ಮಹತ್ವ ಇದರ ಉರಿಯೂತ ನಿವಾರಕ ಗುಣದಲ್ಲಿದ್ದು ಹಲವಾರು ಕಾಯಿಲೆಗಳನ್ನು ಗುಣಪಡಿಸಲು ನೆರವಾಗುತ್ತದೆ. ಈ ಗುಣವೇ ಅರಿಶಿನವನ್ನು ಬೆರೆಸಿದ ಔಷಧಿಗಳ ಪ್ರಾಬಲ್ಯತೆ ಹೆಚ್ಚಲು ಕಾರಣವಾಗಿದ್ದು ವಿಶೇಷವಾಗಿ ಸಂಧಿವಾತ, ಗಂಟು ನೋವುಗಳನ್ನು ಕಡಿಮೆ ಮಾಡಲು ನೆರವಾಗುತ್ತದೆ. ಮೂಳೆಗಳಲ್ಲಿ ಗಾಳಿಗುಳ್ಳೆಗಳು ತುಂಬಿಕೊಂಡು ಶಿಥಿಲವಾಗುವ osteoporosis ಎಂಬ ಸ್ಥಿತಿಗೂ ಅರಿಶಿನ ಸೂಕ್ತ ಪರಿಹಾರ ಒದಗಿಸುತ್ತದೆ.

  ಪ್ರತಿಜೀವಕ ಗುಣ

  ಪ್ರತಿಜೀವಕ ಗುಣ

  ನಮ್ಮ ದೇಹದಲ್ಲಿ ಯಾವುದಾದರೂ ಗಾಯವಾದರೆ ಇದನ್ನು ಗುಣಪಡಿಸಿ ಹೊಸಚರ್ಮ ಬೆಳೆಯಲು ಪ್ರತಿಜೀವಕ ಗುಣ ಅಗತ್ಯವಾಗಿದೆ. ಇದರಿಂದ ಗಾಯಗಳು ಶೀಘ್ರವಾಗಿ ಗುಣವಾಗುತ್ತದೆ. ಭಾರತದಲ್ಲಿ ಆಲ್ಝೀಮರ್ಸ್ ಕಾಯಿಲೆ ಎಂಬ ನರಸಂಬಂಧಿ ಕಾಯಿಲೆ ಅತಿ ಕಡಿಮೆ ಪ್ರಮಾಣದಲ್ಲಿರುವ ಭಾರತೀಯರು ತಮ್ಮ ಆಹಾರದಲ್ಲಿ ಸಾಕಷ್ಟು ಅರಿಶಿನವನ್ನು ಸೇವಿಸುವುದೇ ಕಾರಣ ಎಂದು ಕೆಲವು ವಿಜ್ಞಾನಿಗಳು ತಿಳಿಸುತ್ತಾರೆ. ಪ್ರಸ್ತುತ ಭಾರತದಲ್ಲಿ ಈ ಕಾಯಿಲೆ ಅಮೇರಿಕಾದಲ್ಲಿರುವುದಕ್ಕಿಂತಲೂ ಮುಕ್ಕಾಲು ಪಟ್ಟು ಕಡಿಮೆ ಇದೆ.

  Most Read:'ತೊಂಡೆಕಾಯಿ ಎಲೆಗಳು': ಮಧುಮೇಹ, ಕಾಮಾಲೆ ರೋಗ ಸಹಿತ ಹಲವಾರು ರೋಗಗಳನ್ನು ನಿಯಂತ್ರಿಸುತ್ತದೆ

  ರೋಗ ನಿರೋಧಕ ಶಕ್ತಿ ವೃದ್ಧಿಸ್ತುತದೆ

  ರೋಗ ನಿರೋಧಕ ಶಕ್ತಿ ವೃದ್ಧಿಸ್ತುತದೆ

  ಇಲಿಗಳ ಮೇಲೆ ನಡೆಸಿದ ಸಂಶೋಧನೆಗಳಲ್ಲಿ ಕಂಡುಕೊಂಡಂತೆ ಅರಿಶಿನದ ಸೇವನೆಯಿಂದ ಹಲವಾರು ಬಗೆಯ ಕ್ಯಾನ್ಸರ್ ಆವರಿಸುವ ಸಾಧ್ಯತೆ ಕಡಿಮೆಯಾಗುತ್ತದೆ. ಇದರಲ್ಲಿ ಪ್ರಮುಖವಾಗಿ ಮೆಲನೋಮಾ ಎಂಬ ಭೀಕರ ಚರ್ಮವ್ಯಾಧಿ ಹಾಗೂ ಸ್ತನ ಕ್ಯಾನ್ಸರ್ ಆಗಿವೆ. ಒಂದು ವೇಳೆ ಕ್ಯಾನ್ಸರ್ ಆವರಿಸಿದ್ದರೆ ಇದಕ್ಕೆ ನೀಡಲಾಗುವ ಖೀಮೋಥೆರಪಿ ಹಾಗೂ ವಿಕಿರಣ ಚಿಕಿತ್ಸೆ ಹೆಚ್ಚು ಫಲಕಾರಿಯಾಗಲು ನೆರವಾಗುತ್ತದೆ.

   ಕೊಲೆಸ್ಟ್ರಾಲ್ ಕಡಿಮೆ ಮಾಡುತ್ತದೆ

  ಕೊಲೆಸ್ಟ್ರಾಲ್ ಕಡಿಮೆ ಮಾಡುತ್ತದೆ

  ರಕ್ತನಾಳಗಳಲ್ಲಿ ಅಂಟಿಕೊಳ್ಳುವ ಕೆಟ್ಟ ಕೊಲೆಸ್ಟ್ರಾಲ್ ಈ ಮೂಲಕ ಹೃದಯದ ಮೇಲಿನ ಒತ್ತಡವನ್ನು ಹೆಚ್ಚಿಸಿ ಹೃದಯ ಸಂಬಂಧಿ ಕಾಯಿಲೆಗಳ ಸಾಧ್ಯತೆಯನ್ನು ಹೆಚ್ಚಿಸುತ್ತದೆ. ಅರಿಶಿನದ ಸೇವನೆಯಿಂದ ಈ ಜಿಡ್ದು ಸಡಿಲಗೊಂಡು ನಿವಾರಣೆಯಾಗಲು ನೆರವಾಗುವ ಮೂಲಕ ಕೊಲೆಸ್ಟ್ರಾಲ್ ಕಡಿಮೆಯಾಗುತ್ತದೆ. ಅಲ್ಲದೇ ಯಕೃತ್ ಅನ್ನು ನೈಸರ್ಗಿಕವಾಗಿ ಸ್ವಚ್ಛಗೊಳಿಸಲೂ ಅರಿಸಿನ ನೆರವಾಗುತ್ತದೆ. ಚೀನಾದಲ್ಲಿ ಖಿನ್ನತೆಗೆ ಚಿಕಿತ್ಸೆಯಾಗಿ ಅರಿಶಿನವನ್ನು ಸಾವಿರಾರು ವರ್ಷಗಳಿಂದ ಬಳಸಲ್ಪಡುತ್ತಾ ಬರಲಾಗಿದೆ.

   ತೂಕ ಕಡಿಮೆ ಮಾಡಲು ನೆರವಾಗುತ್ತದೆ

  ತೂಕ ಕಡಿಮೆ ಮಾಡಲು ನೆರವಾಗುತ್ತದೆ

  ತೂಕ ಕಡಿಮೆ ಮಾಡಿಕೊಳ್ಳುವವರಿಗೆ ಅರಿಶಿನ ನೆರವಾಗುತ್ತದೆ. ಆದರೆ ಇದನ್ನು ಸರಿಯಾಗಿ ಬಳಸುವ ರೀತಿಯನ್ನು ತಿಳಿದಿರಬೇಕು. ಅರಿಶಿನದ ಸೇವನೆಯಿಂದ ಹಲವಾರು ಆರೋಗ್ಯಕರ ಪ್ರಯೋಜನಗಳನ್ನು ಪಡೆಯಬಹುದು ಮಾತ್ರವಲ್ಲ, ಕೊಬ್ಬನ್ನು ಕರಗಿಸಿಕೊಳ್ಳಲೂಬಹುದು. ಸಂಶೋಧನೆಗಳಲ್ಲಿ ಕಂಡುಕೊಂಡಂತೆ ಅರಿಶಿನದ ಸೇವನೆಯಿಂದ ಪಿತ್ತರಸದ ಉತ್ಪಾದನೆ ಹೆಚ್ಚುತ್ತದೆ ಹಾಗೂ ಈ ಹೆಚ್ಚಿನ ಪಿತ್ತರಸ ಕೊಬ್ಬನ್ನು ಹೆಚ್ಚು ಹೆಚ್ಚಾಗಿ ಬಳಸಿಕೊಳ್ಳುತ್ತದೆ. ದಿನದ ಪ್ರತಿ ಊಟಕ್ಕೂ ಮುನ್ನ ಕೇವಲ ಒಂದು ಚಿಕ್ಕಚಮಚದಷ್ಟು ಅರಿಶಿನವನ್ನು ಸೇವಿಸುವ ಮೂಲಕ ಜೀರ್ಣಕ್ರಿಯೆ ಉತ್ತಮಗೊಳ್ಳುತ್ತದೆ ಹಾಗೂ ಕೊಬ್ಬನ್ನು ಅತಿಯಾಗಿ ಬಳಸಿಕೊಳ್ಳುವ ಮೂಲಕ ತೂಕ ಇಳಿಯಲು ನೆರವಾಗುತ್ತದೆ. ಇಲಿಗಳ ಮೇಲೆ ನಡೆಸಿದ ಪ್ರಯೋಗಗಳಲ್ಲಿ ಕಂಡುಬಂದಂತೆ ಅರಿಶಿನ ಕೊಬ್ಬನ್ನು ತಿಂದುಹಾಕುತ್ತದೆ. ಅರಿಶಿನ ಸಹಿತ ಆಹಾರ ಸೇವಿಸಿದ ಇಲಿಗಳು ಅಷ್ಟೇ ಪ್ರಮಾಣದ ಅರಿಶಿನ ರಹಿತ ಆಹಾರವನ್ನು ಸೇವಿಸಿದ ಇಲಿಗಳಿಗಿಂತ ಕಡಿಮೆ ಕೊಬ್ಬನ್ನು ಹೊಂದಿದ್ದವು.

  ಇನ್ಸುಲಿನ್ ಪ್ರತಿರೋಧದ ವಿರುದ್ದ ಹೋರಾಡುತ್ತದೆ

  ಇನ್ಸುಲಿನ್ ಪ್ರತಿರೋಧದ ವಿರುದ್ದ ಹೋರಾಡುತ್ತದೆ

  ಅರಿಶಿನದ ಇನ್ನೊಂದು ಪ್ರಮುಖ ಪ್ರಯೋಜನವೆಂದರೆ ಇದರ ಇನ್ಸುಲಿನ್ ಪ್ರತಿರೋಧದ ವಿರುದ್ಧ ಹೋರಾಡುವ ಮೂಲಕ ರಕ್ತದಲ್ಲಿ ಸಕ್ಕರೆಯ ಪ್ರಮಾಣವನ್ನು ಸಂತುಲಿತ ಪ್ರಮಾಣದಲ್ಲಿರಿಸುವುದು. ಇದು ನಿಮ್ಮ ದೇಹದಲ್ಲಿ ಹೆಚ್ಚಿನ ಕೊಬ್ಬು ಸಂಗ್ರಹವಾಗದಂತೆ ತಡೆಯುವುದು ಮಾತ್ರವಲ್ಲ, ಮಧುಮೇಹ ಆವರಿಸುವ ಸಾಧ್ಯತೆಯನ್ನೂ ಕಡಿಮೆಗೊಳಿಸುತ್ತದೆ. ಒಂದು ವೇಳೆ ನಿಮಗೀಗಾಗಲೇ ಮಧುಮೇಹ ಆವರಿಸಿದ್ದರೆ ಅರಿಶಿನದ ಸೇವನೆಯಿಂದ ನಿಮ್ಮ ಗ್ಲುಕೋಸ್ ಮಟ್ಟ ಸಂತುಲಿತ ಮಟ್ಟದಲ್ಲಿರಲು ನೆರವಾಗುತ್ತದೆ.

  Most Read:ರಾತ್ರಿ ಮಲಗುವ ಮೊದಲು ಹಾಲು ಕುಡಿಯುವುದು ಆರೋಗ್ಯಕ್ಕೆ ಒಳ್ಳೆಯದೇ?

  ಹಲವಾರು ರೀತಿಯ ಪ್ರಯೋಜನಗಳನ್ನು ನೀಡುತ್ತದೆ

  ಹಲವಾರು ರೀತಿಯ ಪ್ರಯೋಜನಗಳನ್ನು ನೀಡುತ್ತದೆ

  ನಿತ್ಯವೂ ಅರಿಶಿನವನ್ನು ಆಹಾರದ ಮೂಲಕ ಸೇವಿಸುತ್ತಾ ಬಂದರೆ ಹಲವಾರು ಆರೋಗ್ಯಕರ ಪ್ರಯೋಜನಗಳಿವೆ. ಇಂದು ವೇಳೆ ಇದಕ್ಕೂ ಮುನ್ನ ಅರಿಶಿನವನ್ನು ಸೇವಿಸದೇ ಇದ್ದವರು ಈಗಲಾದರೂ ಕೊಂಚ ಪ್ರಯತ್ನಿಸುವ ಮೂಲಕ ಕೆಲವೇ ದಿನಗಳಲ್ಲಿ ದೇಹ ಉತ್ತಮ ಆರೋಗ್ಯವನ್ನು ಪಡೆದಿರುವುದನ್ನು ಗಮನಿಸಬಹುದು. ಇದರೊಂದಿಗೆ ತೂಕ ಇಳಿಯುವ ಬೋನಸ್ ಪ್ರತ್ಯೇಕ ಕೊಡುಗೆಯಾಗಿ ಲಭಿಸುತ್ತದೆ.

  ಕುರ್ಕುಮಿನ್ ಸೇವನೆ ಹಾಗೂ ತೂಕ ಇಳಿಕೆಯ ಸಂಶೋಧನೆ

  ಕುರ್ಕುಮಿನ್ ಸೇವನೆ ಹಾಗೂ ತೂಕ ಇಳಿಕೆಯ ಸಂಶೋಧನೆ

  ಇಲಿಗಳ ಮೇಲೆ ನಡೆಸಿದ ಹಲವಾರು ಸಂಶೋಧನೆಗಳಲ್ಲಿ ಅರಿಶಿನ ಹಾಗೂ ಕೊಬ್ಬಿನ ಇಳಿಕೆಯ ಪ್ರಮಾಣದ ಮಾಹಿತಿಯನ್ನು ವಿಶ್ಲೇಷಿಸಿ ನೋಡಿದಾಗ ತೂಕ ಹಾಗೂ ಕೊಬ್ಬಿನ ಇಳಿಕೆಯಾಗಿರುವುದು ಸ್ಪಷ್ಟವಾಗಿದೆ. ಆದರೆ ಈ ವಿವರಗಳು ಮನುಷ್ಯರ ವಿಷಯದಲ್ಲಿ ಯಥಾವತ್ತಾಗಿ ಸರಿಯಾಗಿರಲಾರದು. European Review for Medical and Pharmacological Sciences ಎಂಬ ನಿಯತಕಾಲಿಕೆಯಲ್ಲಿ 2015ರಲ್ಲಿ ಪ್ರಕಟವಾದ ಒಂದು ವರದಿಯ ಪ್ರಕಾರ ದೇಹದ ಯಾವ ಭಾಗದಲ್ಲಿ ಹೆಚ್ಚು ಕೊಬ್ಬು ತುಂಬಿಕೊಂಡಿದೆಯೋ ಅದನ್ನು ನಿವಾರಿಸಿ ತೂಕವನ್ನು ಇಳಿಸಲು ಕುರ್ಕುಮಿನ್ ನೆರವಾಗುತ್ತದೆ ಎಂದು ತಿಳಿಸಲಾಗಿದೆ.

  ಕುರ್ಕುಮಿನ್ ಸೇವನೆ ಹಾಗೂ ತೂಕ ಇಳಿಕೆಯ ಸಂಶೋಧನೆ

  ಕುರ್ಕುಮಿನ್ ಸೇವನೆ ಹಾಗೂ ತೂಕ ಇಳಿಕೆಯ ಸಂಶೋಧನೆ

  ಈ ಸಂಶೋಧನೆಯಲ್ಲಿ ಸುಮಾರು 44 ಬಿಳಿಯ ಶ್ವೇತವರ್ಣದ ವ್ಯಕ್ತಿಗಳ ಮೇಲೆ ಕೆಲವು ಪ್ರಯೋಗಗಳನ್ನು ನಡೆಸಲಾಯಿತು. ಇವರೆಲ್ಲರೂ ಸ್ಥೂಲಕಾಯದವರಾಗಿದ್ದು ಹೃದಯದ ಕಾಯಿಲೆಗಳು ಮುಂದಿನ ದಿನಗಳಲ್ಲಿ ಹೆಚ್ಚುವಂತಹ ತೊಂದರೆಗಳು ಸಹಾ ಇದ್ದವು. ಎರಡು ತಿಂಗಳ ಕಾಲ ನಡೆದ ಚಿಕಿತ್ಸೆಯಲ್ಲಿ ಇವರೆಲ್ಲರೂ ತೂಕವನ್ನು ಕಳೆದುಕೊಂಡಿದ್ದು ಮಾತ್ರವಲ್ಲ, ಸೊಂಟ, ನಿತಂಬ ಹಾಗೂ ದೇಹದ ಸುತ್ತಳತೆಯಲ್ಲಿಯೂ ಕಡಿಮೆಯಾಗಿದ್ದುದು ಕಂಡುಬಂದಿತ್ತು.

  ಕುರ್ಕುಮಿನ್ ಸೇವನೆ ಹಾಗೂ ತೂಕ ಇಳಿಕೆಯ ಸಂಶೋಧನೆ

  ಕುರ್ಕುಮಿನ್ ಸೇವನೆ ಹಾಗೂ ತೂಕ ಇಳಿಕೆಯ ಸಂಶೋಧನೆ

  ಈ ಚಿಕಿತ್ಸೆಯಲ್ಲಿ ಕೇವಲ ಅರಿಶಿನ ನುಂಗಿ ಸುಮ್ಮನಿರಬಾರದಿತ್ತು. ಬದಲಿಗೆ ಇವರು ತಮ್ಮ ವ್ಯಾಯಾಮವನ್ನು ಹೆಚ್ಚಿಸುವುದು, ಕ್ಯಾಲೋರಿಗಳ ಸೇವನೆ ಕಡಿಮೆ ಮಾಡುವುದು ಹಾಗೂ ಹಸಿ ತರಕಾರಿ, ಮೀನು, ಕಡಿಮೆ ಉಪ್ಪು, ಕಡಿಮೆ ಸಕ್ಕರೆಯನ್ನು ಸೇವಿಸುವಂತೆಯೂ ನೋಡಿಕೊಳ್ಳಲಾಯಿತು. ಈ ವ್ಯಕ್ತಿಗಳ ನಿತ್ಯದ ಅಭ್ಯಾಸಗಳಿಗೆ ಇವೆಲ್ಲವೂ ವಿರುದ್ದವಾಗಿಯೇ ಇದ್ದ ಕಾರಣ ಇವರು ಕೆಲವು ದಿನಗಳವರೆಗೆ ತೊಂದರೆಯನ್ನು ಎದುರಿಸಬೇಕಾಯಿತು ಆದರೆ ಕೆಲವೇ ದಿನಗಳಲ್ಲಿ ಕೊಬ್ಬನ್ನು ಇಳಿಸಲು ಕುರ್ಕುಮಿನ್ ಸಮರ್ಥವಾದ ಆಯುಧ ಎಂದು ಖಚಿತಪಡಿಸಲ್ಪಟ್ಟಿತು.

  ಅರಿಶಿನದ ಬಳಕೆ ಹೇಗೆ?

  ಅರಿಶಿನದ ಬಳಕೆ ಹೇಗೆ?

  ಯಾವುದೇ ಕಾಯಿಲೆಗೆ ಅರಿಶಿನ ಸಂಜೀವಿನಿ ಎಂಬ ನಿರ್ಧಾರಕ್ಕೆ ಬರುವ ಮೊದಲು ಅರಿಸಿನ ಮೊದಲಿಗೆ ಆಹಾರದ ರುಚಿಯನ್ನು ಹೆಚ್ಚಿಸುವ ಸಾಂಬಾರ ಪದಾರ್ಥವೇ ಆಗಿದೆ. ಇದರಲ್ಲಿರುವ ಅತಿ ಕಡಿಮೆ ಕ್ಯಾಲೋರಿಗಳಿಂದ ತೂಕ ಇಳಿಸಲು ನೆರವಾಗುತ್ತದೆ. ಅದರಲ್ಲೂ ಹುರಿಯುವ ಹಾಗೂ ಕರಿಯುವ ಪದಾರ್ಥಗಳಿಗೆ ಅರಿಶಿನ ಸೇರಿಸಿ ಸೇವಿಸುವುದರಿಂದ, ಕಂದು ಅಕ್ಕಿಯನ್ನು ಅರಿಶಿನ, ಆಲಿವ್ ಎಣ್ಣೆ ಬೆರೆಸಿದ ನೀರಿನಲ್ಲಿ ಬೇಯಿಸಿ ಸೇವಿಸುವುದರಿಂದ, ಖಾರವಾದ ಆಹಾರಗಳಿಗೆ ಅರಿಶಿನ ಹಾಗೂ ಕಾಳುಮೆಣಸಿನ ಪುಡಿ ಸೇರಿಸಿ ಸೇವಿಸುದರಿಂದ, ಆಮ್ಲೆಟ್ ಮೇಲೆ ಚಿಮುಕಿಸಿಕೊಂಡು, ಟೋಫು ಮೊದಲಾದ ಸಿದ್ಧ ಆಹಾರಗಳ ಮೇಲೆ ಚಿಮುಕಿಸಿಕೊಂಡು ಸೇವಿಸುವ ಮೂಲಕ ಆಹಾರ ರುಚಿಕರವಾಗುವುದರ ಜೊತೆಗೇ ಕೊಬ್ಬನ್ನೂ ಕರಗಿಸಬಹುದು. ಅಲ್ಲದೇ ಚಿಕನ್ ಅಥವಾ ತರಕಾರಿಯ ಸೂಪ್ ಗೆ ಅರಿಶಿನವನ್ನು ಬೆರೆಸಿ ಚಿನ್ನದ ಬಣ್ಣಕ್ಕೆ ತಿರುಗಿಸಿ ಇನ್ನಷ್ಟು ರುಚಿಕರ ಹಾಗೂ ಆರೋಗ್ಯಕರವಾಗಿಸಬಹುದು.

  ಅರಿಶಿನದ ಬಳಕೆ ಹೇಗೆ?

  ಅರಿಶಿನದ ಬಳಕೆ ಹೇಗೆ?

  ಬಿಸಿಯಾಗಿ ಕುಡಿಯಬಹುದಾದ ಪಾನೀಯಗಳಲ್ಲಿಯೂ ಅರಿಶಿನವನ್ನು ಬೆರೆಸಬಹುದು. ಈ ಪೇಯಗಳಲ್ಲಿ ಅತ್ಯುತ್ತಮವಾದುದೆಂದರೆ ಒಂದು ಲೋಟ ಅಪ್ಪಟ ಹಸುವಿನ ಹಾಲಿನಲ್ಲಿ ಒಂದು ಚಿಕ್ಕ ಚಮಚ ಅರಿಶಿನವನ್ನು ಬೆರೆಸಿ ಇದಕ್ಕೆ ಒಂದು ಚಿಕ್ಕಚಮಚ ಜೇನು ಬೆರೆಸಿ ಕುಡಿಯುವ ಮೂಲಕ ಆರೋಗ್ಯ ಪಡೆಯಬಹುದು.

  ಅರಿಶಿನದ ಬಳಕೆ ಹೇಗೆ?

  ಅರಿಶಿನದ ಬಳಕೆ ಹೇಗೆ?

  ಒಂದು ವೇಳೆ ಹಸಿ ಅರಿಶಿನದ ಕೊಂಬು ಇದ್ದರೆ ಒಂದು ಚಿಕ್ಕ ತುಂಡನ್ನು ಜಜ್ಜಿ ಒಂದು ಲೋಟ ನೀರಿನಲ್ಲಿ ಕೊಂಚ ಹೊತ್ತು ಚಿಕ್ಕ ಉರಿಯಲ್ಲಿ ಕುದಿಸಿ ಟೀ ಜೊತೆಗೆ ಅಥವಾ ಬಿಸಿ ಹಾಲಿನಲ್ಲಿ ಬೆರೆಸಿ ಕುಡಿಯುವ ಮೂಲಕ ಜೀರ್ಣಕ್ರಿಯೆಯಲ್ಲಿ ಇರುವ ತೊಂದರೆಗಳು ನಿವಾರಣೆಯಾಗುತ್ತವೆ.

  English summary

  Spiced Turmeric Milk For Cutting Belly Fat & More

  The main ingredient of turmeric is curcumin. There is also a supplement you can take that contains mainly curcumin if you prefer to ingest it that way. Turmeric can also be used to make tea and is used in Indian curries.No matter how you prefer to add turmeric to your diet, you'll reap the rewards of many positive effects.Here's a list of a few of turmeric's health benefits:
  We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Boldsky sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Boldsky website. However, you can change your cookie settings at any time. Learn more