ಎಚ್ಚರ: ತಂಪು ಪಾನೀಯದಿಂದ 'ಸ್ತನ ಕ್ಯಾನ್ಸರ್‌ನ' ಅಪಾಯ ಹೆಚ್ಚು!!

By: Hemanth
Subscribe to Boldsky

ವಾರಾಂತ್ಯಗಳಲ್ಲಿ ಹೊರಗಡೆ ಸುತ್ತಾಡಲು ಹೋಗುತ್ತೇವೆ. ಅಲ್ಲಿ ಏನಾದರೂ ತಿನ್ನಬೇಕೆಂದು ಹೋಟೆಲ್ ಗೆ ಹೋಗುತ್ತೇವೆ. ತಿಂಡಿ ತಿಂದು ಅಥವಾ ಊಟ ಮಾಡಿದ ಬಳಿಕ ಏನಾದರೂ ಕುಡಿಯಲು ಬೇಕೇ ಎಂದು ವೈಟರ್ ಕೇಳುವುದು ಸಹಜ. ನಾವು ಕೂಡ ತಂಪು ಪಾನೀಯಕ್ಕೆ ಅರ್ಡರ್ ಮಾಡಿ ಕುಡಿಯುತ್ತೇವೆ. ಆದರೆ ಇದರಿಂದ ನಮ್ಮ ಆರೋಗ್ಯದ ಮೇಲೆ ತೀವ್ರ ಪರಿಣಾಮ ಬೀರುತ್ತದೆ ಎಂದು ಅಧ್ಯಯನಗಳು ಹೇಳುತ್ತಿವೆ.  

Breast Cancer
 

ತಂಪು ಪಾನೀಯಗಳಿಂದ ಸ್ತನದ ಕ್ಯಾನ್ಸರ್ ಬರುವ ಸಾಧ್ಯತೆಗಳು ತುಂಬಾ ಹೆಚ್ಚಿದೆ ಎಂದು ಅಧ್ಯಯನಗಳು ಹೇಳಿವೆ. ಅದರಲ್ಲೂ ಯಾವಾಗಲೂ ತಂಪು ಪಾನೀಯವನ್ನು ಕುಡಿಯುವ ಮಹಿಳೆಯರಿಗೆ ಸ್ತನದ ಕ್ಯಾನ್ಸರ್ ಬರುವ ಅಪಾಯವು ಹೆಚ್ಚಿದೆ. ಹದಿಹರೆಯದಲ್ಲಿ ಹೆಚ್ಚಾಗಿ ಆಹಾರ ಪಥ್ಯವನ್ನು ಸರಿಯಾಗಿ ಮಾಡದೆ ತಂಪು ಪಾನೀಯವನ್ನು ಅತಿಯಾಗಿ ಸೇವಿಸುವಂತಹ ಮಹಿಳೆಯರು ಕ್ಯಾನ್ಸರ್‌ಗೆ ತುತ್ತಾಗುವ ಸಮಸ್ಯೆ ಹೆಚ್ಚಿದೆ ಎಂದು ಜರ್ನಲ್ ಕಾನ್ಸರ್ ಎಪಿಡೊಮಿಯೊಲಾಜಿ ಬಯೋಮಾರ್ಕಸ್ ಆ್ಯಂಡ್ ಪ್ರಿವೆಂಟೇಶನ್ ನಲ್ಲಿ ಪ್ರಕಟಗೊಂಡಿರುವ ಅಧ್ಯಯನವೊಂದು ಹೇಳಿದೆ.  ಸ್ತನ ಕ್ಯಾನ್ಸರ್ ಬಗ್ಗೆ ಗರ್ಭಿಣಿಯರಿಗೆ ಒಂದಿಷ್ಟು ಕಿವಿಮಾತು

ಹವ್ಯಾಸದಿಂದ ಇಂತಹ ಆಹಾರ ಕ್ರಮವನ್ನು ಹದಿಹರೆಯ ಅಥವಾ ಇದರ ಬಳಿಕ ಅನುಸರಿಸಿಕೊಂಡು ಹೋಗುವ ಮಹಿಳೆಯರಲ್ಲಿ ಸ್ತನ ಕ್ಯಾನ್ಸರ್ ಬರುವ ಅಪಾಯ ಹೆಚ್ಚಿದೆ ಎಂದು ಯೂನಿವರ್ಸಿಟಿ ಆಫ್ ಕ್ಯಾಲಿಫೋರ್ನಿಯಾ ಲಾಸ್ ಏಂಜಲೀಸ್ ಫೀಲ್ಡಿಂಗ್ ಸ್ಕೂಲ್ ಆಫ್ ಪಬ್ಲಿಕ್ ಹೆಲ್ತ್ ನ ಪ್ರಾಧ್ಯಾಪಕ ಕರಿನ್ ಮೈಕಲ್ಸ್ ತಿಳಿಸಿದ್ದಾರೆ. 

Breast Cancer
 

ತರಕಾರಿಗಳು ಕಡಿಮೆ ಇರುವಂತಹ ಆಹಾರ ಕ್ರಮ, ಸಕ್ಕರೆ ಹಾಗೂ ತಂಪುಪಾನೀಯಗಳು ಹೆಚ್ಚಾಗಿ ಸೇವನೆ,  ಸಂಸ್ಕರಿತ ಸಕ್ಕರೆ ಮತ್ತು ಕಾರ್ಬೋಹೈಡ್ರೆಟ್ಸ್, ಕೆಂಪು ಹಾಗೂ ಸಂಸ್ಕರಿತ ಮಾಂಸವು ರಕ್ತದಲ್ಲಿ ಉರಿಯೂತದ ಮಟ್ಟವನ್ನು ಹೆಚ್ಚಿಸುತ್ತದೆ ಎಂದು ಮೈಕಲ್ಸ್ ಹೇಳಿದ್ದಾರೆ.

ಸ್ತನ ಕ್ಯಾನ್ಸರ್ ಬೆಳೆಯಲು ಹಲವಾರು ವರ್ಷಗಳೇ ಬೇಕಾಗುತ್ತದೆ. ಹದಿಹರೆಯದಲ್ಲಿ ಮಹಿಳೆಯರ ಇಂತಹ ಆಹಾರ ಕ್ರಮದಿಂದ ಸ್ತನ ಕ್ಯಾನ್ಸರ್ ನ ಅಪಾಯ ಇದೆಯಾ ಎನ್ನುವ ಬಗ್ಗೆ ನಮಗೆ ತುಂಬಾ ಕುತೂಹಲವಾಗುತ್ತದೆ ಎನ್ನುತ್ತಾರೆ.

ಈ ಅಧ್ಯಯನಕ್ಕಾಗಿ ಸುಮಾರು 45,204 ಮಹಿಳೆಯರನ್ನು ನರ್ಸಿ ಹೆಲ್ತ್ ಸ್ಟಡಿ 2ರ ಅನುಗುಣವಾಗಿ ಪರೀಕ್ಷೆಗೆ ಒಳಪಡಿಸಲಾಗಿದೆ. ಇವರನ್ನು 1998ರಲ್ಲಿ ಆಹಾರ ಕ್ರಮದ ಬಗ್ಗೆ ಪರೀಕ್ಷೆಗೆ ಒಳಪಡಿಸಲಾಯಿತು. 33-52ರ ಹರೆಯದಲ್ಲಿದ್ದ ಈ ಮಹಿಳೆಯರು ತಮ್ಮ ಶಾಲಾ ದಿನಗಳಲ್ಲಿ ಅನುಸರಿಸುತ್ತಿದ್ದಂತಹ ಆಹಾರ ಕ್ರಮದ ಬಗ್ಗೆ ತಿಳಿಸುತ್ತಾ ಇದ್ದರು. ಮದ್ಯಪಾನದಿಂದ ಸ್ತನ ಕ್ಯಾನ್ಸರ್ ಬರುವುದು ನಿಶ್ಚಿತ...

1991ರಲ್ಲಿ ಈ ಮಹಿಳೆಯರನ್ನು ಆಹಾರ ಕ್ರಮದ ಬಗ್ಗೆ ಪ್ರಶ್ನಿಸಲಾಯಿತು. ಈ ವೇಳೆ ಮಹಿಳೆಯರು 27-44ರ ಹರೆಯದವರಾಗಿದ್ದರು. ಇದರ ಬಳಿಕ ಪ್ರತೀ ನಾಲ್ಕು ವರ್ಷಕ್ಕೊಮ್ಮೆ ಇವರನ್ನು ಪರೀಕ್ಷಿಸಲಾಗಿದೆ. ಪ್ರತಿಯೊಬ್ಬ ಮಹಿಳೆಯ ರಕ್ತ ಪರೀಕ್ಷೆಯನ್ನು ನಡೆಸಿ ಅದರಲ್ಲಿರುವ ಉರಿಯೂತದ ಪ್ರಮಾಣವನ್ನು ಗಮನಿಸಲಾಗುತ್ತಾ ಇತ್ತು.  

Breast Cancer
 

22 ವರ್ಷಗಳ ಕಾಲ ಅಧ್ಯಯನದ ವೇಳೆ ಈ ಮಹಿಳೆಯರನ್ನು ಗಮನಿಸಲಾಗುತ್ತಾ ಇತ್ತು. ಇದರಲ್ಲಿ ಸುಮಾರು 870 ಮಹಿಳೆಯರಲ್ಲಿ ಋತುಬಂಧವಾಗುವ ಮೊದಲೇ ಸ್ತನದ ಕ್ಯಾನ್ಸರ್ ಕಂಡುಬಂದಿದೆ. 490 ಮಹಿಳೆಯರಲ್ಲಿ ಋತುಬಂಧವಾದ ಬಳಿಕ ಸ್ತನದ ಕ್ಯಾನ್ಸರ್ ಕಾಣಿಸಿಕೊಂಡಿದೆ...

English summary

Soft Drinks Can Increase Breast Cancer Risk - Finds Study

Teenagers who consume a diet low in vegetables and high in sugar-sweetened and diet soft drinks may be at increased risk for premenopausal breast cancer, warns a study. Women who consumed a diet as adolescents or young adults associated with chronic inflammation had a higher risk for premenopausal breast cancer compared with those whose adolescent and early adulthood diet was not associated with chronic inflammation...
Story first published: Thursday, March 2, 2017, 23:31 [IST]
Please Wait while comments are loading...
Subscribe Newsletter