For Quick Alerts
ALLOW NOTIFICATIONS  
For Daily Alerts

ಸ್ತನ ಕ್ಯಾನ್ಸರ್ ಬಗ್ಗೆ ಗರ್ಭಿಣಿಯರಿಗೆ ಒಂದಿಷ್ಟು ಕಿವಿಮಾತು

By Arshad
|

ಸ್ತನ ಕ್ಯಾನ್ಸರ್ ಬಗ್ಗೆ ಇಂದು ಹೆಚ್ಚಿನ ಕಾಳಜಿ ಮತ್ತು ಕಳಕಳಿ ವ್ಯಕ್ತವಾಗುತ್ತಿದೆ. ಇದನ್ನು ಪತ್ತೆಹಚ್ಚಲು ನೂತನ ವಿಧಾನ ಮತ್ತು ನೂತನ ಉಪಕರಣಗಳು ಇಂದು ಲಭ್ಯವಿವೆ. ಕ್ಯಾನ್ಸರ್ ಪ್ರಾರಂಭಿಕ ಹಂತದಲ್ಲಿದ್ದಾಗ ಹೊರನೋಟಕ್ಕೆ ಯಾವುದೇ ಸೂಚನೆ ನೀಡದಿರುವುದೇ ಇದು ಗಮನಕ್ಕೆ ಬಾರದಿರಲು ಕಾರಣ. ಹೆಚ್ಚಿನ ಸಂದರ್ಭದಲ್ಲಿ ಕ್ಯಾನ್ಸರ್ ಒಂದು ಹಂತಕ್ಕೆ ಬಂದ ಬಳಿಕವೇ ಮಹಿಳೆಯರು ವೈದ್ಯರ ಬಳಿ ಆಗಮಿಸುವ ಕಾರಣ ಚಿಕಿತ್ಸೆಯನ್ನೂ ತಡವಾಗಿಯೇ ಆರಂಭಿಸಬೇಕಾಗುತ್ತದೆ. ಆದರೆ ಈ ಸೂಚನೆಗಳು ಗರ್ಭಾವಸ್ಥೆಯ ಸಮಯದಲ್ಲಿ ಇತರ ಸಮಯಕ್ಕಿಂತ ಹೆಚ್ಚು ಸ್ಪಷ್ಟವಾಗಿ ಗೋಚರವಾಗುತ್ತವೆ.

ಏಕೆಂದರೆ ಗರ್ಭಾವಸ್ಥೆಯಲ್ಲಿ ತಾಯಿಯಗುತ್ತಿರುವವಳ ದೇಹದಲ್ಲಿ ಹಲವು ಬದಲಾವಣೆಗಳಾಗುತ್ತವೆ. ಪ್ರೊಜೆಸ್ಟರಾನ್ ಮತ್ತು ಈಸ್ಟ್ರೋಜೆನ್ ಮೊದಲಾದ ಹಾರ್ಮೋನುಗಳು ಹೆಚ್ಚು ಸ್ರವಿಸುವ ಮೂಲಕ ದೇಹದಲ್ಲಿ ಹಲವು ಮಾರ್ಪಾಡುಗಳನ್ನು ತರುತ್ತವೆ. ಹುಟ್ಟುವ ಮಗುವಿಗಾಗಿ ಹಾಲನ್ನು ಉತ್ಪಾದಿಸಲು ಸ್ತನಗಳಲ್ಲಿ ಅಂಗಾಂಶಗಳು ತುಂಬಿಕೊಳ್ಳತೊಡಗುತ್ತವೆ. ಒಂದು ವೇಳೆ ಸ್ತನ ಕ್ಯಾನ್ಸರ್ ಪ್ರಾರಂಭಿಕ ಹಂತದಲ್ಲಿದ್ದರೆ ಈ ಅಂಗಾಂಶಗಳು ಬಾಧಿತ ಜೀವಕೋಶಗಳ ಮೇಲೆ ಒತ್ತಡ ಹೇರುತ್ತವೆ.

ಆದ್ದರಿಂದ ಪ್ರತಿ ಗರ್ಭಿಣಿಯೂ ತನ್ನ ಕುಟುಂಬ ವೈದ್ಯರು ಅಥವಾ ಸೂಕ್ತ ವ್ಯವಸ್ಥೆ ಇರುವ ಆಸ್ಪತ್ರೆ ಅಥವಾ ವೈದ್ಯಕೀಯ ಕೇಂದ್ರದಲ್ಲಿ ತಪಾಸಣೆಗೆ ಒಳಗಾಗುವುದು ಅಗತ್ಯ. ಏಕೆಂದರೆ ಒಂದು ವೇಳೆ ಕ್ಯಾನ್ಸರ್ ಪ್ರಾರಂಭಿಕ ಹಂತದಲ್ಲಿದ್ದರೆ ಗರ್ಭಾವಸ್ಥೆಯ ಹಾರ್ಮೋನುಗಳು ಈ ಕ್ಯಾನ್ಸರ್ ಭಾಗವನ್ನೂ ಇನ್ನೂ ಬೇಗನೆ ಬೆಳೆಯುವಂತೆ ಮಾಡಬಹುದು. ಒಳಗಡೆ ಬೆಳೆಯುತ್ತಿರುವ ಗಡ್ಡೆ ಒಂದು ವೇಳೆ ದೊಡ್ಡದಾಗಿದ್ದರೆ ಹೊರಗಿನಿಂದ ಒತ್ತುವ ಮೂಲಕ ಸ್ಥೂಲವಾಗಿ ಪತ್ತೆ ಹಚ್ಚಬಹುದು.

Detecting Breast Cancer During PregnancyDetecting Breast Cancer During Pregnancy

ಇದರ ನಿಖರತೆಯನ್ನು ವೈದ್ಯರೇ ಪತ್ತಹಚ್ಚಬಹುದೇ ವಿನಃ ಇದರ ಅನುಭವವಾದರೂ ಹೆಚ್ಚಿನ ಗರ್ಭಿಣಿಯರು ಇದೂ ಸಹಾ ಗರ್ಭಾವಸ್ಥೆಯ ಯಾವುದೋ ಪರಿಣಾಮ ಎಂದು ಸುಮ್ಮನಾಗುತ್ತಾರೆ. ಯಾವುದೇ ಗಡ್ಡೆ ಪ್ರಾರಂಭಿಕ ಹಂತದಲ್ಲಿ ಪತ್ತೆಯಾದರೆ ಇದನ್ನು ತಕ್ಷಣವೇ ಸೂಕ್ತ ಚಿಕಿತ್ಸೆಯಿಂದ ಗುಣಪಡಿಸಬಹುದು. ಈ ಬಗ್ಗೆ ಅರಿವು ಮೂಡಿಸಲು ಈ ಕೆಳಗೆ ಹಲವು ಪ್ರಮುಖ ಮಾಹಿತಿಗಳನ್ನು ನೀಡಲಾಗಿದೆ, ಮುಂದೆ ಓದಿ... ಸ್ತನ ಕ್ಯಾನ್ಸರ್ ಎಂಬ ಮಹಾಮಾರಿ ತಡೆಗಟ್ಟಲು ಟಿಪ್ಸ್

ಸ್ವಪರೀಕ್ಷೆ ಮಾಡಿಕೊಳ್ಳಿ
ಗರ್ಭಾವಸ್ಥೆಯ ಹೊರತಾಗಿಯೂ ಪ್ರತಿ ಮಹಿಳೆಯೂ ಆಗಾಗ ಸ್ವಪರೀಕ್ಷೆಯನ್ನು ಮಾಡಿಕೊಳ್ಳುತ್ತಿರಬೇಕು. ಗರ್ಭಾವಸ್ಥೆಯಲ್ಲಿ ಮೇಲ್ನೋಟಕ್ಕೆ ಸ್ತನದ ಯಾವುದೇ ಭಾಗದಲ್ಲಿ ಕೊಂಚ ಉಬ್ಬಿದಂತೆ ಕಂಡುಬಂದಿದ್ದರೆ (ಒಳಭಾಗದಲ್ಲಿ ಗಂಟೊಂದು ಹೊರನೂಕುವಂತಿದ್ದರೆ), ಆಕಾರ ಮತ್ತು ಗಾತ್ರದಲ್ಲಿ ಕೊಂಚ ಬದಲಾವಣೆ ಇದೆ ಎಂದು ಅನ್ನಿಸಿದರೆ, ಎಂಟನೆಯ ತಿಂಗಳಿಗೂ ಮುನ್ನವೇ ಮೊಲೆತೊಟ್ಟುಗಳಿಂದ ಯಾವುದಾದರೂ ದ್ರವ ಹೊರಸೂಸುತ್ತಿದ್ದರೆ, ಒಂದು ವೇಳೆ ಇದು ರಕ್ತಮಿಶ್ರಿತವಾಗಿದ್ದರೆ, ತಕ್ಷಣ ನಿಮ್ಮ ಕುಟುಂಬ ವೈದ್ಯರೊಡನೆ ಸಮಾಲೋಚಿಸಿ. ಹೆಬ್ಬೆರಳು ಮತ್ತು ತೋರು ಬೆರಳುಗಳಿಂದ ವಿವಿಧ ಸ್ಥಳಗಳಲ್ಲಿ ಒತ್ತಿ ಒಳಗೆ ಗಂಟು ಇರುವಂತೆ ಅನ್ನಿಸುತ್ತದೆಯೋ ಅಥವಾ ನೋವಾಗುತ್ತಿದೆಯೋ ಎಂದು ಪರೀಕ್ಷಿಸಿಕೊಳ್ಳಿ. ಕೊಂಚ ಅನುಮಾನ ಬಂದರೂ ವೈದ್ಯರೊಂದಿಗೆ ಸಮಾಲೋಚಿಸಿ. ಕೈ ಮೇಲಕ್ಕೆತ್ತಿ ಕಂಕುಳ ಬಳಿ ದುಗ್ಧಗ್ರಂಥಿ ಕೆಂಪಗಾಗಿದೆಯೋ ಗಮನಿಸಿ. ಸ್ತನ ಕ್ಯಾನ್ಸರ್ ಗೆ ಸ್ವಯಂ ತಪಾಸಣೆ ಹೇಗೆ?

ಮ್ಯಾಮ್ಮೋಗ್ರಫಿ ಪರೀಕ್ಷೆಗೆ ಒಳಗಾಗಿ
ಅಲ್ಪ ಪ್ರಮಾಣದ ಎಕ್ಸ್ ರೇ ಕಿರಣಗಳನ್ನು ಬಳಸುವ ಮ್ಯಾಮ್ಮೋಗ್ರಫಿ (Mammography) ಉಪಕರಣದ ಮೂಲಕ ಸ್ತನಗಳ ಒಳಭಾಗದ ಅಂಗಾಶದಲ್ಲಿ ಯಾವುದೇ ಅಸಹಜ ಬೆಳವಣಿಗೆಯನ್ನು ಗುರುತಿಸಬಹುದು. ಗರ್ಭಾವಸ್ಥೆಯಲ್ಲಿದ್ದಾಗ ಈ ಪರೀಕ್ಷೆ ಖಂಡಿತಾ ಒಂದು ಬಾರಿ ಮಾಡಿಸಿಕೊಳ್ಳಬೇಕು. ಆದರೆ ಈ ಹೊತ್ತಿನಲ್ಲಿ ಹೊಟ್ಟೆಯ ಭಾಗವನ್ನು ಎಕ್ಸ್ ರೇ ಕಿರಣಗಳು ಬಾಧಿಸದಂತೆ ಸುರಕ್ಷಾ ಬಟ್ಟೆಯಿಂದ ಆವರಿಸಿಕೊಳ್ಳಲು ಸಿಬ್ಬಂದಿಗೆ ಮನವಿಮಾಡಿ. ಗರ್ಭಾವಸ್ಥೆಯಲ್ಲಿ ಪ್ರಾರಂಭದಲ್ಲಿರುವ ಕ್ಯಾನ್ಸರ್‌ನ ಸೂಚನೆಗಳು ಅತಿ ಸ್ಪಷ್ಟವಾಗಿ ಕಂಡುಬರುತ್ತವೆ. ಇದು ಸೂಕ್ತ ಚಿಕಿತ್ಸೆಗೆ ಮತ್ತು ಪೂರ್ಣವಾಗಿ ಗುಣವಾಗುವ ಸಂಭವವನ್ನು ಹೆಚ್ಚಿಸುತ್ತದೆ.

ಅಲ್ಟ್ರಾ ಸೋನೋಗ್ರಫಿ (Ultrasonography)
ಅಲ್ಟ್ರಾಸೌಂಡ್ ಎಂಬ ಧ್ವನಿತರಂಗಗಳನ್ನು ಬಳಸಿ ಸ್ತನದ ಅಂಗಾಂಶ ಮತ್ತು ಗಂಟಾಗಿರುವ ಭಾಗದ ಬಗ್ಗೆ ಸ್ಪಷ್ಟವಾದ ವಿವರಗಳನ್ನು ಪಡೆಯಬಹುದು. ಒಂದು ವೇಳೆ ಕ್ಯಾನ್ಸರ್ ಪ್ರಾರಂಭ ಹಂತದಲ್ಲಿದ್ದು ಗಂಟು ಇನ್ನೂ ಚಿಕ್ಕದಾಗಿದ್ದರೂ ಅಲ್ಟ್ರಾಸೌಂಡ್ ಮೂಲಕವೂ ಪತ್ತೆ ಹಚ್ಚಬಹುದು. ಆದರೆ ವೈದ್ಯರು ಇದನ್ನು ಖಚಿತಪಡಿಸಿಕೊಳ್ಳಲು ಈ ಅಂಗಾಂಶದ ಕೆಲವು ಜೀವಕೋಶಗಳನ್ನು ಇಂಜೆಕ್ಷನ್ ಮೂಲಕ ಹೊರತೆಗೆದು ಪರೀಕ್ಷಿಸಿದ ಬಳಿಕ (biopsy) ಇದು ಯಾವ ಬಗೆಯ ಗಂಟು ಮತ್ತು ಇದಕ್ಕೆ ಚಿಕಿತ್ಸೆ ಹೇಗೆ ಎಂಬ ಮಾಹಿತಿಯನ್ನು ನೀಡಬಲ್ಲರು. ಈ ವಿಧಾನ ಗರ್ಭವತಿ ಮತ್ತು ಗರ್ಭಕ್ಕೆ ಅತಿ ಸುರಕ್ಷಿತವಾಗಿದ್ದು ಯಾವುದೇ ಆತಂಕಕ್ಕೆ ಕಾರಣವಿಲ್ಲ.

ಸ್ತನದ ಅಂಗಾಂಶ ಪರೀಕ್ಷೆ (Breast Biopsy)
ಒಂದು ವೇಳೆ ಸ್ತನದೊಳಗೆ ಗಂಟು ಅಥವಾ ವಿವರಣೆ ನೀಡಲಾಗದ ದ್ರವ ಕಂಡುಬಂದರೆ ಇದರ ಕೆಲವು ಜೀವಕೋಶಗಳನ್ನು ಹೊರತೆಗೆದು ಪರೀಕ್ಷಿಸುವುದು ಅತ್ಯುತ್ತಮವಾದ ಮಾರ್ಗ. ವಿವಿಧ ಪರೀಕ್ಷೆಗಳ ಬಳಿಕವೇ ಇದು ಕ್ಯಾನ್ಸರ್ ಹೌದೋ ಅಲ್ಲವೋ ಎಂದು ವೈದ್ಯರು ತಜ್ಞರೊಂದಿಗೆ ಸಮಾಲೋಚಿಸಿದ ಬಳಿಕವೇ ತೀರ್ಮಾನಿಸುತ್ತಾರೆ.

ಸ್ತನದ ಎಂ.ಆರ್ ಐ.(Breast MRI)
ಎಂ.ಆರ್ ಐ ಅಥವಾ Magnetic resonance imaging ಎಂಬ ವಿಧಾನ ಆಯಸ್ಕಾಂತ ಮತ್ತು ರೇಡಿಯೋ ಅಲೆಗಳ ಮೂಲಕ ಪರೀಕ್ಷಿಸುವ ವಿಧಾನವಾಗಿದೆ. ಇದರಿಂದ ಪರೀಕ್ಷೆಗೊಳಪಡುವ ಅಂಗವನ್ನು ಅಡ್ಡಲಾಗಿ ಮತ್ತು ಉದ್ದವಾಗಿ ಕತ್ತರಿಸಿದರೆ ಹೇಗಿರುತ್ತದೆ ಎಂಬ ಚಿತ್ರವನ್ನು ಪಡೆಯಬಹುದು. ಈ ಚಿತ್ರಗಳನ್ನು ಪರಿಶೀಲಿಸುವ ಮೂಲಕ ವೈದ್ಯರು ಸ್ತನದಲ್ಲಿ ಕ್ಯಾನ್ಸರ್ ಕಣಗಳು ಇವೆಯೋ ಇಲ್ಲವೋ ಎಂದು ಪತ್ತೆ ಹಚ್ಚಬಲ್ಲರು.

ಉಪಯುಕ್ತ ಮಾಹಿತಿ

*ಒಂದು ವೇಳೆ ಸ್ತನದೊಳಗೆ ಗಂಟುಗಳಿರುವಂತೆ ಅನ್ನಿಸಿದರೂ ಇದು ನಿರಪಾಯಕಾರಿ ಅಂಗಾಂಶವಾಗಿರಬಹುದು (benign cyst). ಆದ್ದರಿಂದ ನೀವೇ ಯಾವುದೇ ತೀರ್ಮಾನಕ್ಕೆ ಬರಬೇಡಿ. ಕಂಕುಳ ಭಾಗದಲ್ಲಿಯೂ ಗಂಟುಗಳಿವೆಯೇ ಪರೀಕ್ಷಿಸಿ.
* ಉಸಿರು ಪೂರ್ಣವಾಗಿ ಒಳಗೆಳೆದುಕೊಂಡು ಎರಡೂ ಕೈಗಳನ್ನು ಹಿಂದಕ್ಕೆಳೆದುಕೊಂಡಾಗ ಎಲ್ಲಿಯಾದರೂ ಗುಳಿ ಬೀಳುತ್ತದೆಯೋ ಗಮನಿಸಿ. ಒಂದು ವೇಳೆ ಹೌದಾದರೆ ಆ ಭಾಗದಲ್ಲಿ ಒತ್ತಿ ನೋಡಿ.
* ಮೊಲೆತೊಟ್ಟುಗಳು ಒಳಭಾಗಕ್ಕೆ ಎಳೆದುಕೊಂಡಂತೆ ಸಂಕುಚಿತಗೊಂಡಿವೆಯೇ ಗಮನಿಸಿ.
* ಸ್ತನದ ಚರ್ಮವನ್ನು ಹತ್ತಿರದಿಂದ ಪರೀಕ್ಷಿಸಿ ಇದು ಕಿತ್ತಳೆಯ ಸಿಪ್ಪೆಯ ಹೊರಭಾಗದಂತಾಗಿದೆಯೇ ಗಮನಿಸಿ. ಅಂತೆಯೇ ಬಣ್ಣದಲ್ಲಿ ಬದಲಾವಣೆ, ನೆರಿಗೆಗಳು, ಚರ್ಮ ಸಿಪ್ಪೆಯಂತೆ ಏಳುವುದು, ಚುಕ್ಕಿಗಳು, ಚಿಕ್ಕ ಚಿಕ್ಕ ಗುಳ್ಳೆಗಳು ಏನಾದರೂ ಇವೆಯೇ ಪರೀಕ್ಷಿಸಿ.
ಇವುಗಳಲ್ಲಿ ಯಾವುದಾದರೂ ಹಿಂದಿನ ಸ್ವ ಪರೀಕ್ಷೆಯಲ್ಲಿ ಗಮನಕ್ಕೆ ಬಾರದಿದ್ದರೆ ತಕ್ಷಣ ವೈದ್ಯರ ಬಳಿ ಸಮಾಲೋಚಿಸಿ.
* ನಲವತ್ತು ದಾಟಿದ ಮಹಿಳೆಯರು ವರ್ಷಕ್ಕೊಮ್ಮೆಯಾದರೂ ಮ್ಯಾಮ್ಮೋಗ್ರಫಿ ಪರೀಕ್ಷೆಗೆ ಒಳಗಾಗಬೇಕು.
* ನಿಮ್ಮ ಕುಟುಂಬದಲ್ಲಿ ಸ್ತನ ಕ್ಯಾನ್ಸರ್‌ನ ಇತಿಹಾಸವಿದ್ದರೆ ಮೂವತ್ತರ ಬಳಿಕ ಪರೀಕ್ಷೆಗೆ ಒಳಗಾಗುವುದು ಉತ್ತಮ.
English summary

Detecting Breast Cancer During Pregnancy

Being diagnosed with breast cancer during pregnancy is not something that is witnessed very often but since women now are choosing to give birth comparatively in the later stages than before, this could become a norm in the future. One of the biggest problems with breast cancer during pregnancy is that due to the hormonal
Story first published: Thursday, November 12, 2015, 19:09 [IST]
X
Desktop Bottom Promotion