Latest Updates
-
ಅಪಾರ್ಟ್ಮೆಂಟ್ನಲ್ಲಿ ಪರಿಸರ ಸ್ನೇಹಿ ಗಣೇಶ ಹಬ್ಬ: ದಂಡ ತಪ್ಪಿಸಿ, ಸುಲಭವಾಗಿ ವಿಸರ್ಜನೆ ಮಾಡುವುದು ಹೇಗೆ? -
ಓಣಂ ಸದ್ಯದ ಸಂಭ್ರಮ: ಬೆಲೆ ಏರಿಕೆ ಮತ್ತು ಆರೋಗ್ಯದ ಚಿಂತೆಯಿಲ್ಲದೆ ಹಬ್ಬ ಆಚರಿಸುವುದು ಹೇಗೆ? -
ಆಗಸ್ಟ್ 2026 ಏಕಾದಶಿ: ಸ್ಮಾರ್ತ vs ವೈಷ್ಣವ ವ್ರತದ ದಿನಾಂಕಗಳ ಗೊಂದಲವೇ? ಮಧುಮೇಹಿಗಳಿಗೆ ಇಲ್ಲಿದೆ ಉಪವಾಸದ ಸೂತ್ರ! -
ರಾಷ್ಟ್ರೀಯ ಬಾಹ್ಯಾಕಾಶ ದಿನ 2026: ನಿಮ್ಮ ಮಕ್ಕಳೊಂದಿಗೆ ಚಂದ್ರನ ರಹಸ್ಯಗಳನ್ನು ಅನ್ವೇಷಿಸಲು ಇಲ್ಲಿದೆ ಬೆಸ್ಟ್ ಪ್ಲಾನ್! -
ಓಣಂ ಹಬ್ಬದ ಸಂಭ್ರಮ: ಮಳೆಯಲ್ಲೂ ಸ್ಟೈಲಿಶ್ ಆಗಿ ಕಾಣಲು ₹1,200 ರೊಳಗೆ ಬೆಸ್ಟ್ ಫ್ಯಾಷನ್ ಟಿಪ್ಸ್! -
ಮಳೆಗಾಲದಲ್ಲಿ ಹಿರಿಯರು ಜಾರಿ ಬೀಳುವ ಆತಂಕವೇ? ಸುರಕ್ಷಿತವಾಗಿರಲು ಈ 12 ನಿಮಿಷಗಳ ಚೇರ್-ಯೋಗ ಟ್ರೈ ಮಾಡಿ! -
ಹಿರಿಯರ ಆರೋಗ್ಯಕ್ಕೆ ದಿನಕ್ಕೆ 12 ನಿಮಿಷದ 'ಚೇರ್ ಯೋಗ': ಚೈತನ್ಯ ಮತ್ತು ಸಮತೋಲನಕ್ಕೆ ಇದುವೇ ಮಂತ್ರ! -
ಫ್ಯಾಮಿಲಿ ವಾಟ್ಸಾಪ್ ಗ್ರೂಪ್ನಲ್ಲಿ ರಾಜಕೀಯ ಜಗಳವೇ? ಈ ಟಿಪ್ಸ್ ಪಾಲಿಸಿ, ಸಂಬಂಧ ಉಳಿಸಿಕೊಳ್ಳಿ! -
ಓಣಂ ಹಬ್ಬದ ಸಂಭ್ರಮ: ಹೂವಿನ ಬೆಲೆ ಏರಿಕೆ ನಡುವೆ ಕಡಿಮೆ ದರದಲ್ಲಿ ಖರೀದಿಸಲು ಇಲ್ಲಿವೆ ಟಿಪ್ಸ್! -
ಸಸ್ಯಜನ್ಯ ಹಾಲು: ತೂಕ ಇಳಿಕೆ ಮತ್ತು ಮಧುಮೇಹ ನಿಯಂತ್ರಣಕ್ಕೆ ಇದುವೇ ಬೆಸ್ಟ್ ಪರ್ಯಾಯ!
ಮದ್ಯಪಾನದಿಂದ ಸ್ತನ ಕ್ಯಾನ್ಸರ್ ಬರುವುದು ನಿಶ್ಚಿತ...
ಒಮ್ಮೆ ಯೋಚಿಸಿ. ನಿಮ್ಮ ಬಂಗಾರವಾದ ಬದುಕಿನಲ್ಲಿ ಬಿರುಗಾಳಿ ಎದ್ದರೆ ಅದರಿಂದ ನಿಮ್ಮ ಬದುಕಿನಲ್ಲಿ ಸಂಭವಿಸಬಹುದಾದ ಅತ್ಯಂತ ಘೋರವಾದ ಆಘಾತ. ಇದರಿಂದ ನೀವು ಅನುಭವಿಸಬೇಕಾದ ಯಾತನೆ. ನಿಮ್ಮನ್ನೇ ನಂಬಿರುವ ಕುಟುಂಬ ಸದಸ್ಯರ ರೋಧನೆ ನಿಜಕ್ಕೂ ಹೇಳತೀರದು. ಹೌದು, ನಾವು ಇಂದು ನಿಮಗಾಗಿ ಸ್ತನ ಕ್ಯಾನ್ಸರ್ ಸಂಭವಿಸುವಿಕೆಯ ಕೆಲವು ಕಾರಣದ ಸಂಗತಿಯನ್ನು ನಿಮ್ಮೊಂದಿಗೆ ಹಂಚಿಕೊಳ್ಳುತ್ತಿದ್ದೇವೆ. ಮದ್ಯಪಾನದಿಂದ ಸಿಗುವ ಕ್ಷಣಿಕ ಸುಖಕ್ಕೆ ನಿಮ್ಮ ಇಡೀ ಬದುಕನ್ನು ದು:ಖಕ್ಕೆ ತಳ್ಳಿದಂತಾಗುತ್ತದೆ ಎಂದು ಸಾಮಾನ್ಯ ಅರಿವು ಹೆಚ್ಚಿನವರಿಗೆ ಇರುವುದಿಲ್ಲ. ಕೆಲವರಿಗೆ ಈ ಸಂಬಂಧ ತಿಳಿದಿದ್ದರೂ
ಸಹ ಮದ್ಯದ ಚಟದಿಂದ ದೂರವಾಗದೇ ಅನೇಕ ದೈಹಿಕ ಮತ್ತು ಮಾನಸಿಕ ತೊಂದರೆಗಳನ್ನು ಅನುಭವಿಸುತ್ತಿರುವುದು ಇತ್ತೀಚಿನ ದಿನಗಳಲ್ಲಿ ಸಾಮಾನ್ಯವಾಗಿ ಕಂಡು ಬರುತ್ತಿದೆ. ಮನುಷ್ಯ ಜೀವನ ದೇವರು ಕೊಟ್ಟಿರುವ ವರ. ಈ ಸುಂದರ ಜೀವನವನ್ನು ಮಧ್ಯದ ಕೈಯಿಗೆ ನೀಡದೆ ಜಾಗೃತಿಗೊಂಡು ನಿಮ್ಮ ಬದುಕನ್ನು ಹಸನಾಗಿರಿಸಿ ಆನಂದದಿಂದ ಸಹಬಾಳ್ವೆ ಮಾಡಿ. ಪುರುಷರೇ ವಯಸ್ಸು ಮೂವತ್ತಾಯಿತೇ?, ಮದ್ಯಪಾನ ಬಿಟ್ಟು ಬಿಡಿ!

ಹೌದು, ಇತ್ತೀಚಿನ ಅಧ್ಯಯನವೊಂದು ಮದ್ಯಪಾನ ಹಾಗೂ ಸ್ತನ ಕ್ಯಾನ್ಸರ್ ಬಗ್ಗೆ ಬೆಳಕು ಚೆಲ್ಲಿದೆ. ವಾಸ್ತವವಾಗಿ ಈ ನಿಟ್ಟಿನಲ್ಲಿ ಮಹಿಳೆಯರು ಹೆಚ್ಚು ಜಾಗೃತಿಗೊಳ್ಳಬೇಕು. ಕ್ರಮವಾದ ಮದ್ಯದ ಸೇವನೆಯಿಂದ ಮಾರಣಾಂತಿಕ ಕಾಯಿಲೆಯಾದ ಸ್ತನ ಕ್ಯಾನ್ಸರ್ ಗೆ ತುತ್ತಾಗಬೇಕಾಗುತ್ತದೆ ಹಾಗೂ ಬೊಜ್ಜು ಸಹ ಹೆಚ್ಚಾಗಿ ಅಪಾಯಕ್ಕೆ ಎಡೆಮಾಡಿಕೊಡುತ್ತದೆ ಎಂದು ಹೆಚ್ಚಿನ ಮಹಿಳೆಯರಿಗೆ ಅರಿವಿರುವುದಿಲ್ಲ.
ಈ ಅಧ್ಯಯನವು ಮದ್ಯಪಾನದಿಂದ ದೂರವಿದ್ದರೆ ಸ್ತನ ಕ್ಯಾನ್ಸರ್ ಬರದಂತೆ ತಡೆಯುತ್ತದೆ ಹಾಗೂ ದೇಹದ ತೂಕವು ಸಹ ಸುಸ್ಥಿತಿಯಲ್ಲಿದ್ದು ಸ್ತನ ಕ್ಯಾನ್ಸರ್ ಬರಲು ಅವಕಾಶ ನೀಡದಂತೆ ತಡೆಯುತ್ತದೆ ಎಂದು ತಿಳಿಸಿದೆ. ಅಧ್ಯಯನದ ಒಂದು ಭಾಗವಾಗಿ, ವಿಜ್ಞಾನಿಗಳು ಈ ನಿಟ್ಟಿನಲ್ಲಿ 200 ಮಹಿಳೆಯರನ್ನು ಪ್ರಶ್ನಿಸಿದ್ದಾರೆ. ಅದರಲ್ಲಿ ಶೇಖಡಾ 50ರಷ್ಟು ಮಹಿಳೆಯರು ಸ್ತನ ಕ್ಯಾನ್ಸರ್ ನಿಂದ ಬಳಲುತ್ತಿರುವುದಾಗಿ ಕಂಡುಬಂದಿದೆ. ಸುಮಾರು ಶೇಖಡಾ 50ರಷ್ಟು ಭಾಗವಹಿಸಿದರಿಗೆ ಮದ್ಯಪಾನ ನಿಲ್ಲಿಸಿದರೆ ಸ್ತನ ಕ್ಯಾನ್ಸರ್ ನ ಸಂಭವ ಬರುವುದಿಲ್ಲವೆಂಬ ಅರಿವಿನ ಕೊರತೆಯಿದೆ.
ಇನ್ನೊಂದು ಪೂರಕವಾದ ಅಂಶವೆಂದರೆ ಮೂರನೆಯ ಒಂದು ಭಾಗದಷ್ಟು ಭಾಗವಹಿಸಿದ ಮಹಿಳೆಯರಿಗೆ ಬೊಜ್ಜು ಹೆಚ್ಚಾಗಿ ಸ್ತನ ಕ್ಯಾನ್ಸರ್ ಸಂಭವಿಸುತ್ತದೆ ಎಂದು ತಿಳಿದೇ ಇಲ್ಲ. ಮತ್ತೊಂದು ಅಚ್ಚರಿಯ ಸಂಗತಿಯೇನೆಂದರೆ, ಈ ಅಧ್ಯಯನದಲ್ಲಿ ಪಾಲ್ಗೊಂಡಿರುವ ಅನೇಕ ಮಹಿಳೆಯರಿಗೆ ಒಂದು ಗ್ಲಾಸಿನ ವೈನ್ ಅಥವಾ ಬಿಯರ್ ನಲ್ಲಿ ಇರಬಹುದಾದ ಮದ್ಯದ ಪ್ರಮಾಣದ ಬಗ್ಗೆ ಕಿಂಚಿತ್ತೂ ಅರಿವಿಲ್ಲ. ಆದರೆ ಅವರೆಲ್ಲರೂ ಆಗಾಗ್ಗೆ ಮದ್ಯ ಸೇವಿಸುವುದಾಗಿ ಒಪ್ಪಿಕೊಂಡಿರುತ್ತಾರೆ.
ವಿಷಾಧನೀಯ ಸಂಗತಿಯೇನೆಂದರೆ ಮದ್ಯದ ಸೇವನೆಯನ್ನೇ ತಮ್ಮ ಜೀವನದ ಭಾಗವಾಗಿಸಿಕೊಂಡಿರುವ ಮಹಿಳೆಯರ ಸಂಖ್ಯೆ ಕಳೆದೆ ಕೆಲವು ವರ್ಷಗಳಿಂದ ಕ್ರಮೇಣವಾಗಿ ಹೆಚ್ಚುತ್ತಿರುವುದು. ಸಂಶೋಧಕರು ಈ ನಿಟ್ಟಿನಲ್ಲಿ ಮದ್ಯದಿಂದ ಸ್ತನ ಕ್ಯಾನ್ಸರ್ ಸಂಭವ ಹೆಚ್ಚಿರುತ್ತದೆ ಎಂದು ಮಹಿಳೆಯರಲ್ಲಿ ಜಾಗೃತಿ ಮೂಡಿಸುವ ಕಾರ್ಯದಲ್ಲಿ ತೊಡಗಿದ್ದಾರೆ. ಇದು ಮಹಿಳೆಯರನ್ನು ಮಾತ್ರ ಕಾಡದೆ ಪುರುಷರನ್ನೂ ಸಹ ಖಂಡಿತವಾಗಿ ತೊಂದರೆಯನ್ನುಂಟು ಮಾಡುತ್ತದೆ. ಮದ್ಯದ ದಾಸರಾದರೆ ಆರೋಗ್ಯಕ್ಕೆ ನಿಶ್ಚಿತವಾಗಿ ಕುತ್ತು ಬರುತ್ತದೆ. ಸರ್ವ ಕೆಡುಕುಗಳ ಮೂಲ ಮದ್ಯಪಾನದಿಂದ ಮುಕ್ತಿ ಹೇಗೆ?
ಆದರೆ ಸಂಶೋಧಕರು ಮದ್ಯಕ್ಕೂ ಸ್ಥನ ಕ್ಯಾನ್ಸರ್‌ಗೂ ಇರುವ ಸಂಬಂಧವನ್ನು ಹುಡುಕಲು ಅನೇಕ ರೀತಿಯ ಅಧ್ಯಯನಗಳನ್ನು ಕೈಗೊಂಡಿದ್ದಾರೆ. ಸ್ತನ ಕ್ಯಾನ್ಸರ್ ಹೊಂದಿದ ಮಹಿಳೆಯರನ್ನು ಈ ಅಧ್ಯಯನಕ್ಕೆ ಬಳಸಲಾಗಿದೆ. ಅಚ್ಚರಿಯೆಂಬಂತೆ ಇದರ ಸೇವನೆಯಿಂದ ಉಂಟಾಗುವ ಅಡ್ಡಪರಿಣಾಮದಿಂದ ಸ್ತನ ಕ್ಯಾನ್ಸರ್ ಸಂಭವ ಹೆಚ್ಚಿರುತ್ತದೆ ಎಂದು ಅಭಿಪ್ರಾಯಕ್ಕೆ ಬಂದಿದ್ದಾರೆ.
Disclaimer: ಈ ಲೇಖನದಲ್ಲಿ ಒದಗಿಸಲಾದ ಮಾಹಿತಿಯು ಸಾಮಾನ್ಯ ಮಾಹಿತಿ ಮತ್ತು ಶೈಕ್ಷಣಿಕ ಉದ್ದೇಶಗಳಿಗಾಗಿ ಮಾತ್ರವಾಗಿದೆ. ವೃತ್ತಿಪರ ವೈದ್ಯಕೀಯ ಸಲಹೆ, ರೋಗನಿರ್ಣಯ ಅಥವಾ ಚಿಕಿತ್ಸೆಗೆ ಪರ್ಯಾಯವಾಗಿ ಇದನ್ನು ದೃಢೀಕರಿಸಿಲ್ಲ. ವೈದ್ಯಕೀಯ ಸ್ಥಿತಿಯ ಕುರಿತು ನೀವು ಹೊಂದಿರುವ ಯಾವುದೇ ಪ್ರಶ್ನೆಗಳಿಗೆ ಯಾವಾಗಲೂ ನಿಮ್ಮ ವೈದ್ಯರು ಅಥವಾ ಅರ್ಹ ಆರೋಗ್ಯ ಸಿಬ್ಬಂದಿಯ ಸಲಹೆಯನ್ನು ಪಡೆಯಿರಿ.



Click it and Unblock the Notifications

