For Quick Alerts
ALLOW NOTIFICATIONS  
For Daily Alerts

  ಹಳ್ಳಿ ಮದ್ದಿನ ತಾಕತ್ತಿನ ಎದುರು, ವೈದ್ಯಲೋಕವೇ ಕಂಗಾಲು!

  By Manu
  |

  ನಿದ್ದೆ ಬರುತ್ತಿಲ್ಲವೇ? ಮಲಗುವ ಮುನ್ನ ಕೆಲವು ಹನಿ ಜೇನನ್ನು ಸೇವಿಸಿದ ಬಳಿಕ ಪ್ರಯತ್ನಿಸಿ ನೋಡಿ. ಸುಖವಾದ ನಿದ್ದೆ ಆವರಿಸುತ್ತದೆ. ನಿದ್ದೆ ಮಾತ್ರೆ ಸೇವಿಸಿ ಬಲವಂತವಾದ ನಿದ್ದೆ ಬರಿಸಿಕೊಳ್ಳುವುದಕ್ಕಿಂತ ಇದು ಉತ್ತಮ ಅಲ್ಲವೇ? ಇದೇ ತರಹದ ಹಲವಾರು ಸುಲಭ ಮತ್ತು ಸಮರ್ಥವಾದ ಮನೆಮದ್ದುಗಳಿದ್ದು ಯಾವುದೇ ಔಷಧಿ ಅಥವಾ ಮಾತ್ರೆಗಳಿಗಿಂತಲೂ ಉತ್ತಮವಾದ ಮತ್ತು ಯಾವುದೇ ಅಡ್ಡಪರಿಣಾಮವಿಲ್ಲದ ಫಲಿತಾಂಶವನ್ನು ನೀಡುತ್ತವೆ.   ಅಜ್ಜಿ ಕಾಲದ ಮನೆಮದ್ದು- ಅಂದಿಗೂ ಹಿಟ್, ಎಂದೆಂದಿಗೂ ಹಿಟ್

  ಒಂದು ವೇಳೆ ನಿಮಗೆ ತಲೆನೋವಿದ್ದರೆ ತಕ್ಷಣ ಮೀನಿನಿಂದ ತಯಾರಿಸಿದ ಖಾದ್ಯವನ್ನು ಸೇವಿಸಿ ಬಳಿಕ ಶುಂಠಿಯ ಟೀ ಕುಡಿಯಿರಿ. ಇದನ್ನು ತಲೆನೋವು ಉಲ್ಬಣಗೊಳ್ಳುವ ಮುನ್ನ ಸೇವಿಸಿದರೆ ತಲೆನೋವು ತಕ್ಷಣ ಕಡಿಮೆಯಾಗುತ್ತದೆ. ಒಂದು ವೇಳೆ ಉಲ್ಬಣಗೊಂಡರೆ ಮಾತ್ರ ವೈದ್ಯರ ಸಲಹೆ ಅಗತ್ಯವಾಗಿದೆ.   ವೈದ್ಯಲೋಕಕ್ಕೇ ಸವಾಲೆಸೆಯುವ ಹಳ್ಳಿಗಾಡಿನ ಮನೆಮದ್ದು

  ಕೆಲವೊಮ್ಮೆ ಒತ್ತಡದಿಂದ ಮನಸ್ಸು ತಲ್ಲಣಗೊಂಡಿದ್ದರೆ ತಕ್ಷಣ ಒಂದು ಬಾಳೆ ಹಣ್ಣು ಮತ್ತು ಒಂದು ಸ್ಟ್ರಾಬೆರಿ ತಿಂದರೆ ಸಾಕಾಗುತ್ತದೆ. ಮಲಬದ್ಧತೆಯ ತೊಂದರೆ ಇರುವವರಿಗೆ ಕೋಸು, ಸೇಬು ಮತ್ತು ಕ್ಯಾರೆಟ್ ಸೇವನೆ ಪರಿಹಾರ ಒದಗಿಸುತ್ತದೆ. ಇದೇ ರೀತಿಯ ಇನ್ನೂ ಹಲವಾರು ಸುಲಭ ಮನೆಮದ್ದುಗಳಿದ್ದು ಮಾತ್ರೆಗಳತ್ತ ಒಲವು ತೋರುವ ಮುನ್ನ ಇವುಗಳನ್ನು ಪ್ರಯೋಗಿಸಿ ನೋಡುವ ಮೂಲಕ ಪರಿಹಾರ ಕಂಡುಕೊಳ್ಳಬಹುದು.... 

  ಕಡಿಮೆ ರಕ್ತದ ಒತ್ತಡ ಇದ್ದರೆ

  ಕಡಿಮೆ ರಕ್ತದ ಒತ್ತಡ ಇದ್ದರೆ

  ಹೆಚ್ಚಿನ ರಕ್ತದೊತ್ತಡಕ್ಕಿಂತಲೂ ಕಡಿಮೆ ರಕ್ತದೊತ್ತಡ ಜೀವಕ್ಕೆ ಅಪಾಯಕಾರಿಯಾಗಿದೆ. ಚೆನ್ನಾಗಿ ಕಳಿತ ದಾಳಿಂಬೆ ಹಣ್ಣಿನ ಬೀಜಗಳನ್ನು ಬೇರ್ಪಡಿಸಿ ಹಿಂಡಿ ತೆಗೆದ ರಸವನ್ನು ಹಾಗೇ ಪ್ರತಿದಿನ ಕುಡಿಯುವುದರಿಂದ ಕಡಿಮೆಯಾಗಿದ್ದ ರಕ್ತದೊತ್ತಡ ಸಾಮಾನ್ಯಸ್ಥಿತಿಗೆ ಬರುತ್ತದೆ. ಕಡಿಮೆ ರಕ್ತದೊತ್ತಡಕ್ಕೆ ಉಪ್ಪು ಸೇವಿಸಲು ಕೆಲವರು ಸಲಹೆ ನೀಡುತ್ತಾರೆ. ಆದರೆ ಉಪ್ಪಿನ ಸೇವನೆಯಿಂದ ತಾತ್ಕಾಲಿಕವಾದ ಉಪಶಮನ ಮಾತ್ರ ದೊರಕುತ್ತದೆ. ಆದರೆ ದಾಳಿಂಬೆರಸದ ದಿನನಿತ್ಯದ ಸೇವನೆ ಶಾಶ್ವತ ಪರಿಣಾಮ ನೀಡುತ್ತದೆ ಹಾಗೂ ಹೃದಯದ ಆರೋಗ್ಯವನ್ನೂ ಹೆಚ್ಚಿಸುತ್ತದೆ.

  ಅತಿ ಹೆಚ್ಚಿನ ಕೆಮ್ಮಿಗೆ

  ಅತಿ ಹೆಚ್ಚಿನ ಕೆಮ್ಮಿಗೆ

  ಕೆಲವು ತುಳಸಿ ಎಲೆಗಳು, ಒಂದು ಚಮಚ ಬೆಳ್ಳುಳ್ಳಿ ರಸ ಮತ್ತು ಒಂದು ಚಮಚ ಜೇನುತುಪ್ಪ ಸೇರಿಸಿ ಮಿಶ್ರಣವನ್ನು ತಯಾರಿಸಿ. ಪ್ರತಿ ಮೂರು ಗಂಟೆಗೊಂದು ಚಮಚದಷ್ಟು ಕುಡಿಯುವುದರಿಂದ ಶೀಘ್ರ ಉಪಶಮನ ದೊರಕುತ್ತದೆ.ಇದು ಕೆಮ್ಮಿನ ಔಷಧ- ಒಂದೇ ದಿನದಲ್ಲಿ ಕೆಮ್ಮು ಮಂಗಮಾಯ!

  ಹೊಟ್ಟೆ ಕೆಟ್ಟಿದ್ದರೆ

  ಹೊಟ್ಟೆ ಕೆಟ್ಟಿದ್ದರೆ

  ಹೊಟ್ಟೆ ಕೆಟ್ಟಿದ್ದಾಗ ಬಾಳೆಹಣ್ಣು ಮತ್ತು ಶುಂಠಿ ನೆರವಿಗೆ ಬರುತ್ತವೆ. ಹೊಟ್ಟೆ ತುಂಬಿಕೊಂಡಿದ್ದರೆ ಬಾಳೆಹಣ್ಣು ಮತ್ತು ಇದರೊಂದಿಗೆ ವಾಕರಿಕೆಯೂ ಆವರಿಸಿದ್ದರೆ ಶುಂಠಿಯ ಸೇವನೆಯಿಂದ ತಕ್ಷಣ ಆರಾಮ ದೊರಕುತ್ತದೆ.

  ಸ್ಮರಣ ಶಕ್ತಿ ಹೆಚ್ಚಿಸಲು

  ಸ್ಮರಣ ಶಕ್ತಿ ಹೆಚ್ಚಿಸಲು

  ಸ್ಮರಣ ಶಕ್ತಿ ಹೆಚ್ಚಿಸಲು ನಮ್ಮ ಆಹಾರದಲ್ಲಿ ಸತುವಿನ ಅಂಶ ಹೆಚ್ಚಿರಬೇಕು. ಕುಂಬಳ ಬೀಜ, ಕೆಂಪು ಮಾಂಸ, ಒಣಫಲಗಳು ಮತ್ತು ಮೀನಿನಲ್ಲಿ ಸತುವಿನ ಅಂಶ ಹೆಚ್ಚಿರುತ್ತದೆ.ನೆನೆಪಿನ ಶಕ್ತಿ ಹೆಚ್ಚಿಸಬೇಕೆ? ಈ ರೀತಿ ಮಾಡಿ

  ಶೀತವಾಗಿದ್ದರೆ

  ಶೀತವಾಗಿದ್ದರೆ

  ಈ ಸಮಯದಲ್ಲಿ ಹಸಿ ಬೆಳ್ಳುಳ್ಳಿಯನ್ನು ಜಗಿದು ನುಂಗಿರಿ. ಇದರ ರುಚಿ ಇಷ್ಟವಾಗದಿದ್ದರೂ ಸರಿ, ಶೀತವಂತೂ ಕಡಿಮೆಯಾಗುತ್ತದೆ. ಅಲ್ಲದೇ ರಕ್ತದಲ್ಲಿ ಕೊಲೆಸ್ಟ್ರಾಲ್ ಮಟ್ಟವೂ ಕಡಿಮೆಯಾಗುವಂತೆ ನೋಡಿಕೊಳ್ಳುತ್ತದೆ. ಶೀತ ಇದ್ದಾಗ ಆದಷ್ಟು ಇಂತಹ ಆಹಾರಗಳಿಂದ ದೂರವಿರಿ

  ಸ್ತನ ಕ್ಯಾನ್ಸರ್

  ಸ್ತನ ಕ್ಯಾನ್ಸರ್

  ನಿಮ್ಮ ಆಹಾರದಲ್ಲಿ ಎಲೆಕೋಸು ಮತ್ತು ಗೋಧಿಯ ಬೂಸಾ ಸಾಕಷ್ಟು ಇರುವಂತೆ ನೋಡಿಕೊಳ್ಳಿ. ಇವೆರಡೂ ಆಹಾರಗಳು ಸ್ತನ ಕ್ಯಾನ್ಸರ್ ಗೆ ಕಾರಣವಾಗುವ ಕಣಗಳ ವಿರುದ್ಧ ಹೋರಾಡುವ ಶಕ್ತಿ ಹೊಂದಿದ್ದು ಕ್ಯಾನ್ಸರ್ ಆವರಿಸುವ ಸಾಧ್ಯತೆಯನ್ನು ಅಪಾರವಾಗಿ ಕಡಿಮೆ ಮಾಡುತ್ತವೆ. ಅಲ್ಲದೇ ಮಹಿಳೆಯರ ದೇಹದಲ್ಲಿ ಸರಿಯಾದ ಪ್ರಮಾಣದಲ್ಲಿ ಈಸ್ಟ್ರೋಜೆನ್ ರಸದೂತಗಳು ಸ್ರವಿಸುವಲ್ಲಿ ನೆರವಾಗುತ್ತವೆ.ಎಚ್ಚರ:ಈ 5 ಕಾರಣಗಳಿಂದಲೂ ಕ್ಯಾನ್ಸರ್ ಬರಬಹುದು!

  ರಕ್ತದಲ್ಲಿ ಸಕ್ಕರೆಯ ಪ್ರಮಾಣ ಹೆಚ್ಚಿದ್ದರೆ

  ರಕ್ತದಲ್ಲಿ ಸಕ್ಕರೆಯ ಪ್ರಮಾಣ ಹೆಚ್ಚಿದ್ದರೆ

  ಶೇಂಗಾಬೀಜ ಮತ್ತು ಬ್ರೋಕೋಲಿಯನ್ನು ಸೇವಿಸುವ ಮೂಲಕ ರಕ್ತದಲ್ಲಿ ಸಕ್ಕರೆಯ ಮಟ್ಟ ಸಮತೋಲನದಲ್ಲಿರುತ್ತದೆ. ಈ ವಿಧಾನಗಳನ್ನು ನಿಯಮಿತವಾಗಿ ಅನುಸರಿಸುವ ಮೂಲಕ ಉತ್ತಮ ಆರೋಗ್ಯವನ್ನು ಕಾಪಾಡಿಕೊಂಡು ಬರಬಹುದು ಹಾಗೂ ಹಲವಾರು ಕಾಯಿಲೆಗಳು ಬರದಂತೆ ಮುನ್ನೆಚ್ಚರಿಕೆ ವಹಿಸಬಹುದು.

   

  English summary

  Simple Remedies For 7 Health Issues

  If you are thinking that home remedies take long and over-the-counter pills are instant solutions, then you are mistaken. Here are the simplest home remedies for minor health issues.
  We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Boldsky sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Boldsky website. However, you can change your cookie settings at any time. Learn more