For Quick Alerts
ALLOW NOTIFICATIONS  
For Daily Alerts

ಅಜ್ಜಿ ಕಾಲದ ಮನೆಮದ್ದು- ಅಂದಿಗೂ ಹಿಟ್, ಎಂದೆಂದಿಗೂ ಹಿಟ್

ಸಾಮಾನ್ಯ ಕಾಯಿಲೆಗಳಾದ ಶೀತ, ಜ್ವರ, ಸುಸ್ತು, ಹೊಟ್ಟೆನೋವು, ಮೈಕೈ ನೋವು ಇತ್ಯಾದಿಗಳಿಗೆಲ್ಲಾ ಹಿಂದೆ ಈ ಮದ್ದುಗಳೇ ಬಳಕೆಯಾಗುತ್ತಿದ್ದವು.ಇಂದಿಗೂ ಈ ಪದ್ಧತಿ ಜೀವಂತವಾಗಿದ್ದರೂ ಈ ಚಿಕಿತ್ಸೆಯನ್ನು ನೀಡುತ್ತಿದ್ದ ಅಜ್ಜಿಯರುಮಾತ್ರ ಕಡಿಮೆಯಾಗಿದ್ದಾರೆ

By Arshad
|

ಹಿಂದಿನ ದಿನಗಳಲ್ಲಿ ಚಿಕ್ಕ ಪುಟ್ಟ ಕಾಯಿಲೆಗಳಿಗೆಲ್ಲಾ ವೈದ್ಯರ ಬಳಿ ಹೋಗುತ್ತಲೇ ಇರಲಿಲ್ಲ. ಮನೆಯಲ್ಲಿಯೇ ಲಭ್ಯವಿರುವ ಸಾಮಾಗ್ರಿಗಳನ್ನು ಬಳಸಿ ಮದ್ದು ನೀಡಲಾಗುತ್ತಿತ್ತು. ಅನುಭವದ ಮೂಲಕ ಯಾವ ಕಾಯಿಲೆಗೆ ಯಾವ ಮದ್ದು ಎಂದು ತಿಳಿದುಕೊಂಡಿರುವ ಹಿರಿಯರೇ ಈ ಚಿಕಿತ್ಸೆಯನ್ನು ನಡೆಸುತ್ತಿದ್ದುದರಿಂದ ಈ ಪದ್ಧತಿಗೆ ಅಜ್ಜಿ ಲೇಹ್ಯ ಎಂದು ಕನ್ನಡದಲ್ಲಿಯೂ ದಾದೀಮಾ ಕೇ ನುಸ್ಖೇ ಎಂದು ಹಿಂದಿಯಲ್ಲಿಯೂ ಜನಜನಿತವಾಗಿದೆ. ವೈದ್ಯಲೋಕಕ್ಕೇ ಸವಾಲೆಸೆಯುವ ಹಳ್ಳಿಗಾಡಿನ ಮನೆಮದ್ದು

ಕೆಲವು ಕೊಂಚ ವಿಚಿತ್ರ ಎಂದು ಕಂಡುಬಂದರೂ ಇವು ನಿಜಕ್ಕೂ ಪರಿಣಾಮಕಾರಿಯಾಗಿವೆ. ಸಾಮಾನ್ಯ ಕಾಯಿಲೆಗಳಾದ ಶೀತ, ಜ್ವರ, ಸುಸ್ತು, ಹೊಟ್ಟೆನೋವು, ಮೈಕೈ ನೋವು ಇತ್ಯಾದಿಗಳಿಗೆಲ್ಲಾ ಹಿಂದೆ ಈ ಮದ್ದುಗಳೇ ಬಳಕೆಯಾಗುತ್ತಿದ್ದವು. ಇಂದಿಗೂ ಈ ಪದ್ಧತಿ ಜೀವಂತವಾಗಿದ್ದರೂ ಈ ಚಿಕಿತ್ಸೆಯನ್ನು ನೀಡುತ್ತಿದ್ದ ಅಜ್ಜಿಯರು ಮಾತ್ರ ಕಡಿಮೆಯಾಗಿದ್ದಾರೆ. ಒಣಕೆಮ್ಮು ಸಮಸ್ಯೆ: ಅಜ್ಜ-ಅಜ್ಜಿಯ ಕಾಲದ ಪವರ್‌ಫುಲ್ ಮನೆಮದ್ದು

ತಮ್ಮ ವಿದ್ಯೆಯನ್ನು ಯಾರಾದರೂ ಮುಂದುವರೆಸಿಕೊಂಡು ಹೋಗಲಪ್ಪಾ ಎಂದು ಇವರು ಹಂಬಲಿಸುತ್ತಿರುತ್ತಾರೆ. ಬನ್ನಿ, ಈ ಚಿಕಿತ್ಸೆಗಳಲ್ಲಿ ಕೆಲವನ್ನಾದರೂ ಕಲಿತು ಅವರ ಹಂಬಲವನ್ನು ಕೊಂಚವನ್ನಾದರೂ ಪೂರೈಸೋಣ....

ಮೂತ್ರನಾಳದಲ್ಲಿ ಉರಿ

ಮೂತ್ರನಾಳದಲ್ಲಿ ಉರಿ

ಒಂದು ಚಿಟಿಕೆ ಅಡುಗೆ ಸೋಡಾವನ್ನು ಒಂದು ಲೋಟ ಉಗುರುಬೆಚ್ಚನೆಯ ನೀರಿನಲ್ಲಿ ಬೆರೆಸಿ ಕುಡಿಯುತ್ತಿರಿ. ಪ್ರತಿ ಗಂಟೆಗೊಮ್ಮೆ ಅರ್ಧ ಲೋಟ ನೀರು ಕುಡಿಯುತ್ತಿರುವ ಮೂಲಕ ಉರಿಮೂತ್ರ ಶೀಘ್ರವಾಗಿ ಕಡಿಮೆಯಾಗುತ್ತದೆ.ಸರಿಯಾಗಿ ಮೂತ್ರ ಬರುವುದಿಲ್ಲವೇ? ಇಲ್ಲಿದೆ ಫಲಪ್ರದ ಮನೆಮದ್ದು

ಮೂತ್ರನಾಳದಲ್ಲಿ ಉರಿ

ಮೂತ್ರನಾಳದಲ್ಲಿ ಉರಿ

ಅಡುಗೆಸೋಡಾ ಕ್ಷಾರೀಯವಾದುದರಿಂದ ಮೂತ್ರದಲ್ಲಿನ ಆಮ್ಲೀಯತೆಯನ್ನು ನಿಷ್ಫಲಗೊಳಿಸಿ ತನ್ಮೂಲದ ಎದುರಾಗಿದ್ದ ಮೂತ್ರಕೋಶದ ಉರಿಯನ್ನು ಕಡಿಮೆಮಾಡುತ್ತದೆ. ಅಷ್ಟೇ ಅಲ್ಲ, ಮೂತ್ರಪಿಂಡ, ಮೂತ್ರನಾಳಗಳಲ್ಲಿ ಆಶ್ರಯ ಪಡೆದಿದ್ದ ಬ್ಯಾಕ್ಟೀರಿಯಾಗಳನ್ನೂ ನಿವಾರಿಸಿ ಸೋಂಕಿನಿಂದ ರಕ್ಷಿಸುತ್ತದೆ.ಮೂತ್ರದಲ್ಲಿ ಕಂಡುಬರುವ ಅಸಹ್ಯಕರ ದುರ್ವಾಸನೆಗೆ ಕಾರಣವೇನು?

ಜೇಡ ಕಚ್ಚಿದ್ದರೆ

ಜೇಡ ಕಚ್ಚಿದ್ದರೆ

ಹಸಿ ಆಲೂಗಡ್ಡೆಯಲ್ಲಿ ಉರಿಶಮನಕಾರಿ ಮತ್ತು ಉರಿಯೂತ ನಿವಾರಕ ಗುಣಗಳಿವೆ. ಒಂದು ಆಲುಗಡ್ಡೆಯ ಬಿಲ್ಲೆಯನ್ನು ತೆಳುವಾಗಿ ಕತ್ತರಿಸಿ ಈ ಬಿಲ್ಲೆಯನ್ನು ಜೇಡ ಕಚ್ಚಿದ ಭಾಗದಲ್ಲಿರಿಸಿ ಬಟ್ಟೆಯ ಪಟ್ಟಿಯೊಂದನ್ನು ಸಡಿಲವಾಗಿ ಕಟ್ಟಿ ಸುಮಾರು ಐದು ನಿಮಿಷಗಳ ಕಾಲ ಪಟ್ಟಿಯ ಮೇಲಿನಿಂದ ನಯವಾಗಿ ಉಜ್ಜುತ್ತಿರಬೇಕು. ಇದರಿಂದ ಜೇಡ ಕಚ್ಚಿದ ಭಾಗದಲ್ಲಿ ಉರಿ ಕಡಿಮೆಯಾಗುವುದು ಮಾತ್ರವಲ್ಲ, ಶೀಘ್ರವಾಗಿ ಸೋಂಕಿಲ್ಲದೇ ಗುಣವೂ ಆಗುತ್ತದೆ.

ಕೂದಲು ಉದುರುವಿಕೆಗೆ

ಕೂದಲು ಉದುರುವಿಕೆಗೆ

ತುರಿಕೆ ಬಳ್ಳಿ (Nettle leaves) ಯ ಎಲೆಗಳನ್ನು ಮುಟ್ಟಿದರೆ ಭಾರೀ ತುರಿಕೆ ಎದುರಾದರೂ ಇದೇ ಗುಣ ಕೂದಲನ್ನು ಉದುರುವುದರಿಂದ ತಡೆಗಟ್ಟುತ್ತದೆ. ಇದರಲ್ಲಿ ವಿಶೇಷವಾಗಿ ಕ್ಯಾಲ್ಸಿಯಂ, ಪ್ರೋಟೀನ್, ಬೀಟಾ ಕ್ಯಾರೋಟಿನ್, ಗಂಧಕ, ವಿಟಮಿನ್ ಎ,ಸಿ,ಡಿ. ಬಿಕಾಂಪ್ಲೆಕ್ಸ್ ಮೊದಲಾದ ಪೋಷಕಾಂಶಗಳಿವೆ. ಈ ಎಲೆಗಳನ್ನು ಕೊಂಚ ಜಜ್ಜಿ ನೀರಿನಲ್ಲಿ ಕುದಿಸಿ ಸೋಸಿ ಟೀ ರೂಪದಲ್ಲಿ ಸೇವಿಸಿದರೆ ಕೂದಲು ಉದುರುವುದುದನ್ನು ತಡೆಗಟ್ಟಬಹುದು.

ಋತುಚಕ್ರದ ಸಮಸ್ಯೆಗೆ

ಋತುಚಕ್ರದ ಸಮಸ್ಯೆಗೆ

ಸುವರ್ಣಗಡ್ಡೆಯಲ್ಲಿ ವಿಟಮಿನ್ ಎ ಮತ್ತು ಸಿ ಹೇರಳವಾಗಿದ್ದು ದೇಹದಲ್ಲಿನ ಹಾರ್ಮೋನುಗಳನ್ನು ನಿಯಂತ್ರಣದಲ್ಲಿರಿಸಲು ನೆರವಾಗುತ್ತವೆ. ಅಲ್ಲದೇ ಕೊಲೆಸ್ಟ್ರಾಲ್ ಮಟ್ಟವನ್ನು ಕಡಿಮೆಗೊಳಿಸಲೂ ನೆರವಾಗುತ್ತವೆ. ಋತುಚಕ್ರದ ಸಮಯದಲ್ಲಿ ದೈಹಿಕವಾಗಿ ಮತ್ತು ಮಾನಸಿಕವಾಗಿ ಎದುರಾಗುವ ತಲ್ಲಣಗಳನ್ನು ಸಮರ್ಥವಾಗಿ ನಿವಾರಿಸಲು ಈ ಸಮಯದಲ್ಲಿ ಸುವರ್ಣಗಡ್ಡೆಯ ಖಾದ್ಯಗಳನ್ನು ಹೆಚ್ಚು ಹೆಚ್ಚಾಗಿ ತಿನ್ನುವಂತೆ ಅಜ್ಜಿಯರು ಹೇಳುತ್ತಾ ಬಂದಿದ್ದಾರೆ.

ಅಜೀರ್ಣಕ್ಕಾಗಿ

ಅಜೀರ್ಣಕ್ಕಾಗಿ

ಎರಡು ಕಿತ್ತಳೆ ಹಣ್ಣುಗಳಿ೦ದ ರಸವನ್ನು ಹಿ೦ಡಿ ಪಡೆಯಿರಿ. ರಸವನ್ನು ಒ೦ದು ಲೋಟದಲ್ಲಿ ಸುರಿದುಕೊ೦ಡು ಅದಕ್ಕೆ ಸ್ವಲ್ಪ ಉಪ್ಪು ಹಾಗೂ ಕಾಳುಮೆಣಸಿನ ಪುಡಿಯನ್ನು ಬೆರೆಸಿರಿ. ಅಜೀರ್ಣದ ಕೆಟ್ಟ ಅನುಭವದಿ೦ದ ಪಾರಾಗುವುದಕ್ಕಾಗಿ ಇದನ್ನು ಕುಡಿಯಿರಿ.

ಹಸಿಶುಂಠಿ+ ಜೇನು

ಹಸಿಶುಂಠಿ+ ಜೇನು

ಹಸಿಶುಂಠಿಯನ್ನು ಜಜ್ಜಿ ಸಮಪ್ರಮಾಣದ ಜೇನಿನೊಂದಿಗೆ ಬೆರೆಸಿ ಅರ್ಧ ಲೋಟ ಬಿಸಿ ಹಾಲಿನೊಂದಿಗೆ ಸೇವಿಸುವ ಮೂಲಕ ಶೀತ ತಕ್ಷಣವೇ ಕಡಿಮೆಯಾಗುತ್ತದೆ. ಅಲ್ಲದೇ ಕಟ್ಟಿಕೊಂಡಿದ್ದ ಮೂಗನ್ನು ತೆರೆದು ಶ್ವಾಸ ಎಳೆದುಕೊಳ್ಳುವುದನ್ನು ಸುಲಭವಾಗಿಸುತ್ತದೆ ಹಾಗೂ ಕಫವನ್ನು ನಿವಾರಿಸಿ ಗಂಟಲ ಬೇನೆಯನ್ನು ಕಡಿಮೆಗೊಳಿಸುತ್ತದೆ.

ವೈರಲ್ ಜ್ವರ ಬಂದರೆ.....

ವೈರಲ್ ಜ್ವರ ಬಂದರೆ.....

ರಾತ್ರಿ ಅರ್ಧ ಕಪ್ ನೀರಿನಲ್ಲಿ ಒಂದು ಚಮಚ ಮೆಂತೆ ಕಾಳುಗಳನ್ನು ನೆನೆಯಲು ಹಾಕಿ. ಬೆಳಿಗ್ಗೆ ಈ ನೀರನ್ನು ಗಾಳಿಸಿಕೊಂಡು ಆಗಾಗ ಕುಡಿಯುತ್ತಾ ಇದ್ದರೆ ವೈರಲ್ ಜ್ವರ ದೂರ ಮಾಡಬಹುದು. ಮೆಂತೆ ಕಾಳುಗಳು, ಲಿಂಬೆರಸ ಮತ್ತು ಜೇನುತುಪ್ಪನ್ನು ಹಾಕಿಕೊಂಡು ಬೆಳಿಗ್ಗೆ ಕುಡಿದರೆ ಒಳ್ಳೆಯದು.

English summary

Home Remedies Used By Our Grandparents That Actually Work!

Whenever we feel weak, or are troubled by pain or suffering of any kind of a health condition, then the home remedies used by our grandma always come to the rescue first. So, continue reading to know about the best traditional home remedies used by our grandmothers!
X
Desktop Bottom Promotion