Related Articles
-
ಸಾಕ್ಷ್ಯಾಧಾರ ಇಲ್ಲದೆ ಪಾಕಿಸ್ತಾನವನ್ನು ದೂಷಿಸಬೇಡಿ ಎಂದ ಚೀನಾ
-
7 ಸೀಟರ್ ವೈಶಿಷ್ಟ್ಯತೆಗಳೊಂದಿಗೆ ಬಿಡುಗಡೆಯಾಗಲಿದೆ ಕಿಯಾ ಕಾರ್ನಿವಾಲ್
-
ಯಾವುದೇ ಆಪ್ಗಳ ಕ್ಯಾಶೆ ಕ್ಲಿಯರ್ ಮಾಡುತ್ತಿರಬೇಕು ಏಕೆ ಮತ್ತು ಹೇಗೆ?
-
'ಬೆಲ್ ಬಾಟಮ್' ಪಾಸು, 'ಕೆಮಿಸ್ಟ್ರಿ ಆಫ್ ಕರಿಯಪ್ಪ'ನ ಫಾರ್ಮೂಲಾ ವರ್ಕೌಟ್
-
ಭಾರತ ಪಾಕ್ ನಡುವೆ ಯುದ್ದ ನಡೆದರೆ ಉಂಟಾಗುವ ಆರ್ಥಿಕ ದುಷ್ಪರಿಣಾಮಗಳೇನು?
-
ಮುಖಮೈಥುನ ನಡೆಸುವ ಪುರುಷರಿಗೆ 'ಬಾಯಿ-ಗಂಟಲ ಕ್ಯಾನ್ಸರ್' ಬರಬಹುದು!
-
ಅಭಿಮಾನಿಗಳಿಂದ ಕೊಹ್ಲಿ-ಎಬಿಡಿ ಪೋಸ್ಟರ್ಗೆ ಹಾಲಭಿಷೇಕ: ವಿಡಿಯೋ
-
ಐಟಿಐ ಲಿಮಿಟೆಡ್ ನಲ್ಲಿ ಕಾನೂನು ಪದವಿ ಅಭ್ಯರ್ಥಿಗೆ ಉದ್ಯೋಗಾವಕಾಶ
ವೈದ್ಯಲೋಕಕ್ಕೇ ಸವಾಲೆಸೆಯುವ ಹಳ್ಳಿಗಾಡಿನ ಮನೆಮದ್ದು
ಆರೋಗ್ಯವೇ ಭಾಗ್ಯ ಎಂಬ ಗಾದೆಮಾತು ಎಷ್ಟು ಸತ್ಯವೋ ಆರೋಗ್ಯವನ್ನು ಕಾಪಾಡಿಕೊಳ್ಳುವುದೂ ಅಷ್ಟೇ ಅಗತ್ಯವಾಗಿದೆ. ಉತ್ತಮ ಆರೋಗ್ಯ ಕಾಪಾಡಿಕೊಳ್ಳಲು ಉತ್ತಮವಾದ ಆಹಾರವೂ ಅಗತ್ಯ. ಅಂತೆಯೇ ಆಹಾರವಸ್ತುಗಳನ್ನು ಕೊಳ್ಳುವವರು ಇದ್ದುದರಲ್ಲಿ ಅತ್ಯುತ್ತಮವಾದುದನ್ನೇ ಆರಿಸಿಕೊಳ್ಳುವುದನ್ನು ಗಮನಿಸಬಹುದು. ಕೆಟ್ಟುಹೋದ, ಬಲಿತ, ಚುಕ್ಕೆ ಬಿದ್ದಿರುವ, ಹುಳ ಕೊರೆದಿರುವ ತರಕಾರಿಗಳನ್ನು ನಾವು ಅಗ್ಗವಾದರೂ ಕೊಳ್ಳುವುದಿಲ್ಲ. ಆಹಾರಕ್ಕೆ ಇಷ್ಟೊಂದು ಪ್ರಾಮುಖ್ಯತೆ ನೀಡುವ ನಾವು ಆರೋಗ್ಯಕ್ಕೂ ಪ್ರಾಮುಖ್ಯತೆ ನೀಡಲೇಬೇಕಾಗುತ್ತದೆ.
ಕಾಳಜಿಯನ್ನು ಇನ್ನೂ ಹೆಚ್ಚು ವಹಿಸುವವರು ನಿತ್ಯವೂ ವ್ಯಾಯಮ, ಯೋಗಾಸನಗಳನ್ನು ಅನುಸರಿಸುತ್ತಾರೆ. ಆರೋಗ್ಯದಲ್ಲಿ ಏರುಪೇರಾದರೆ ತಡಮಾಡದೇ ತಜ್ಞವೈದ್ಯರ ಬಳಿ ಧಾವಿಸಿ ಚಿಕಿತ್ಸೆ ಪಡೆದುಕೊಳ್ಳುತ್ತಾರೆ. ಆದರೆ ಸಾಮಾನ್ಯವಾದ ಚಿಕ್ಕಪುಟ್ಟ ತೊಂದರೆಗಳಿಗೆ ವೈದ್ಯರ ಬಳಿ ಹೋಗುವ ಅಗತ್ಯವೇ ಇಲ್ಲ. ಏಕೆಂದರೆ ಇದಕ್ಕಾಗಿ ಮನೆಯಲ್ಲಿರುವ ಸುಲಭಸಾಮಾಗ್ರಿಗಳಿಂದ ತಯಾರಿಸಬಹುದಾದ ಮನೆಮದ್ದುಗಳೇ ಸಾಕು, ಬನ್ನಿ ಅಂತಹ ಮನೆಮದ್ದುಗಳು ಯಾವುದು ಎಂಬುದನ್ನು ನೋಡೋಣ...
ಹಲ್ಲುನೋವಿಗೆ ಪೇರಳೆ ಎಲೆ
ಪೇರಳೆ ಎಲೆಗಳನ್ನು ಜಜ್ಜಿ ಕಡಿಮೆ ನೀರಿನಲ್ಲಿ ಬೇಯಿಸಿ ಸೋಸಿದ ನೀರಿನಿಂದ ಬೆಳಿಗ್ಗೆ ಮತ್ತು ಪ್ರತಿಬಾರಿ ಊಟದ ಬಳಿಕ ಮುಕ್ಕಳಿಸುವುದರಿಂದ ಬಾಯಿಯೊಳಗಣ ಬ್ಯಾಕ್ಟೀರಿಯಾಸಹಿತ ಇತರ ಕ್ರಿಮಿಗಳು ಹೊರದಬ್ಬಲ್ಪಡುತ್ತವೆ. ಇದೇ ಕಾರಣದಿಂದ ಹಲ್ಲುನೋವು, ಗಂಟಲು ನೋವು ಕಡಿಮೆಯಾಗುವುದು. ಒಸಡುಗಳ ನಡುವೆ ಮನೆಮಾಡಿಕೊಂಡು ಹಾಯಾಗಿದ್ದ ಕ್ರಿಮಿಗಳೆಲ್ಲಾ ನಾಶವಾಗಿರುವುದರಿಂದ ಒಸಡುಗಳು ಪುನಃಶ್ಚೇತನಗೊಳ್ಳುವುವು. ಇದೇ ಕಾರಣದಿಂದಾಗಿ ಹಲವು ಆಯುರ್ವೇದ ಹಲ್ಲು ಮಾರ್ಜಕಗಳಲ್ಲಿ ಪೇರಳೆ ಎಲೆಗಳನ್ನು ಬಳಸುತ್ತಾರೆ. ಪೇರಳೆ ಎಲೆಗಳನ್ನು ಜಜ್ಜಿ ಗಾಢವಾದ ಮಿಶ್ರಣಮಾಡಿಕೊಂಡು ಹಲ್ಲುಜ್ಜುವ ಬ್ರಶ್ ಮೂಲಕ ನೇರವಾಗಿ ಹಲ್ಲು ಮತ್ತು ಒಸಡುಗಳನ್ನು ಉಜ್ಜಲೂ ಬಳಸಬಹುದು.
ಏಲಕ್ಕಿಯ ಪವರ್
ಏಲಕ್ಕಿಯನ್ನು ಬಿಸಿನೀರಿನಲ್ಲಿ ಕುದಿಸಿ ಕುಡಿಯುವುದರಿಂದ ಗಂಟಲ ಬೇನೆ ಮತ್ತು ಕೆಮ್ಮು ಕಡಿಮೆಯಾಗುತ್ತದೆ ಇದರಿಂದ ಶ್ವಾಸವ್ಯವಸ್ಥೆಗೆ ಹೆಚ್ಚಿನ ರಕ್ತಸಂಚಾರ ಲಭ್ಯವಾಗಿ ಶೀತ, ಕೆಮ್ಮು ಮತ್ತು ಗಂಟಲಬೇನೆಗೆ ಕಾರಣವಾದ ಕ್ರಿಮಿಗಳನ್ನು ದೇಹ ಹೊರದೂಡಲು ನೆರವಾಗುತ್ತದೆ.
ಬಾಯಿ ದುರ್ವಾಸನೆಗೆ
ಬಾಯಿ ದುರ್ವಾಸನೆಗೆ ಒಂದು ಕಾರಣವೆಂದರೆ ಒಸಡಿನಲ್ಲಿ ಉಳಿದ ಆಹಾರದಲ್ಲಿ ಬ್ಯಾಕ್ಟೀರಿಯಾಗಳು ಬೆಳೆದು ಆಹಾರವನ್ನು ಕೊಳೆಸುವುದು, ಇದಕ್ಕಾಗಿ ಬೆಳಿಗ್ಗೆ ಹಲ್ಲುಗಳನ್ನು ಬ್ರಶ್ ಮಾಡಿದ ಬಳಿಕ ತುಳಸಿ ಎಲೆಯೊಂದನ್ನು ಬೆರಳುಗಳಲ್ಲಿಯೇ ಹಿಚುಕಿ ಒಸಡುಗಳಿಗೆ ರಸ ತಗಲುವಂತೆ ಹಚ್ಚಿಕೊಳ್ಳಿ. ಇಡಿಯ ದಿನ ಬಾಯಿಯಲ್ಲಿ ದುರ್ವಾಸನೆ ಬರದಿರಲು ಇದು ನೆರವಾಗುತ್ತದೆ.
ಜೇನುತುಪ್ಪ, ಈರುಳ್ಳಿ ರಸ, ಹಾಗೂ ಬೆಳ್ಳುಳ್ಳಿ
ಬಟ್ಟಲೊ೦ದರಲ್ಲಿ ಸ್ವಲ್ಪ ಈರುಳ್ಳಿಯ ರಸವನ್ನು ತೆಗೆದುಕೊ೦ಡು ಬಿಸಿಮಾಡಿರಿ. ಉರಿಯನ್ನು ನ೦ದಿಸಿದ ಬಳಿಕ, ಬೆಳ್ಳುಳ್ಳಿಯ ಒ೦ದು ದಳವನ್ನು ಇದಕ್ಕೆ ಸೇರಿಸಿರಿ. ಈರುಳ್ಳಿಯ ರಸವು ಇನ್ನೂ ಬಿಸಿಯಾಗಿಯೇ ಇರುವ ವೇಳೆ, ಬೆಳ್ಳುಳ್ಳಿಯ ದಳವನ್ನು ಸ್ವಲ್ಪ ಹುರಿಯಿರಿ. ಈ ಮಿಶ್ರಣವನ್ನು ಒ೦ದು ಲೋಟದಷ್ಟು ಬಿಸಿನೀರಿಗೆ ಸೇರಿಸಿರಿ ಹಾಗೂ ಇದಕ್ಕೆ ಒ೦ದು ಚಮಚದಷ್ಟು ಜೇನುತುಪ್ಪವನ್ನು ಸೇರಿಸಿರಿ. ಈಗ ಈ ನೈಸರ್ಗಿಕವಾದ ಕೆಮ್ಮಿನ ಸಿರಪ್ ಅನ್ನು ಹನಿಹನಿಯಾಗಿ ಸೇವಿಸಿರಿ. ಕೆಮ್ಮು ಹೇಳಹೆಸರಿಲ್ಲದಂತೆ ಮಾಯವಾಗಿ ಬಿಡುತ್ತದೆ
ಕೂದಲು ಬೇಗನೇ ನೆರೆಯತೊಡಗಿದಾಗ
ಮೂವತ್ತು ದಾಟುತ್ತಿದ್ದಂತೆಯೇ ಕೂದಲುಗಳು ಅಲ್ಲಲ್ಲಿ ನೆರೆಯಲು ತೊಡಗಿದ್ದರೆ ಆತಂಕ ಎದುರಾಗುತ್ತದೆ. ಇದನ್ನು ನಿವಾರಿಸಲು ಕೆಲವು ಒಣ ನೆಲ್ಲಿಕಾಯಿಗಳನ್ನು ಕೊಬ್ಬರಿ ಎಣ್ಣೆಯಲ್ಲಿ ಹಾಕಿ ಕುದಿಸಿ. ಚೆನ್ನಾಗಿ ಕುದಿದ ಬಳಿಕ ತಣಿಸಿ ಈ ಎಣ್ಣೆಯನ್ನು ತಲೆಗೆ ಹಚ್ಚಿಕೊಳ್ಳಿ. ಸೊಂಪಾದ ಕೂದಲಿಗಾಗಿ ಬೆಟ್ಟದ ನೆಲ್ಲಿಕಾಯಿಯ ಜ್ಯೂಸ್!
ಗರ್ಭಿಣಿಯರ ಪಾಲಿನ ಕೊತ್ತಂಬರಿ ಸೊಪ್ಪು
ಗರ್ಭಿಣಿಯಾದ ಹೊಸತರಲ್ಲಿ ಹಲವಾರು ಹೆಂಗಸರಿಗೆ ವಾಂತಿ ಮತ್ತು ನಾಸಿಯಾದ ಸಮಸ್ಯೆ ಅಧಿಕವಾಗಿ ಕಾಡುತ್ತದೆ. ಅದಕ್ಕಾಗಿ ಒಂದು ಕಪ್ ಕೊತ್ತಂಬರಿ ಸೊಪ್ಪು, ಒಂದು ಕಪ್ ಸಕ್ಕರೆ ಹಾಗು ನೀರನ್ನು ಸೇರಿಸಿ ಚೆನ್ನಾಗಿ ಕುದಿಸಿ. ಇದು ಆರಿದ ನಂತರ ಅದನ್ನು ಸೇವಿಸಿ ವಾಂತಿಯಿಂದ ಉಪಶಮನ ಪಡೆಯಿರಿ.