ಸಾಮಾನ್ಯ ನೆಗಡಿಯೇ ಗಂಭೀರ ಕಾಯಿಲೆಗೆ ಎಡೆಮಾಡಿ ಕೊಡಬಹುದು!

By: Divya
Subscribe to Boldsky

ವಾತಾವರಣದಲ್ಲಾಗುವ ಸೂಕ್ಷ್ಮ ಬದಲಾವಣೆ ಹಾಗೂ ಕುಡಿಯುವ ನೀರು ಸೇರಿದಂತೆ ಇನ್ನಿತರ ಬದಲಾವಣೆಯಿಂದ ನೆಗಡಿ ಉಂಟಾಗುವುದು ಸಹಜ. ಆಗಾಗ ಇದರ ತೊಂದರೆ ಸಾಮಾನ್ಯವಾಗಿ ಬಿಟ್ಟರೆ, ನಾವು ಹೆಚ್ಚು ತಲೆಕೆಡಿಸಿಕೊಳ್ಳುವುದಿಲ್ಲ. ಒಮ್ಮೆ ನೆಗಡಿ ಶೀತ ಬಂದರೆ ಸುಮಾರು 3 ರಿಂದ 4 ದಿನಗಳಿರುತ್ತದೆ ಎನ್ನುವ ಭಾವದಲ್ಲಿರುತ್ತೇವೆ.  ನೆಗಡಿ-ತಲೆನೋವಿಗೆಲ್ಲಾ ವೈದ್ಯರ ಹಂಗೇಕೆ?

ಅಪರೂಪಕ್ಕೆ ಅಥವಾ ಪದೇ ಪದೇ ಬರುವ ನೆಗಡಿ/ಶೀತವಾದರೂ ಅದಕ್ಕೆ ಸೂಕ್ತ ಆರೈಕೆ ಹಾಗೂ ಕಾಳಜಿವಹಿಸಲೇಬೇಕು. ಇಲ್ಲವಾದರೆ ಅಲರ್ಜಿ, ಅಸ್ತಮಾ, ಮಧುಮೇಹ, ಮೂತ್ರಪಿಂಡದ ಕಾಯಿಲೆ ಸೇರಿದಂತೆ ಅನೇಕ ದೀರ್ಘಾವಧಿಯ ಕಾಯಿಲೆಯಾಗಿ ಪರಿವರ್ತನೆಗೊಳ್ಳುತ್ತವೆ.  ಕಿರಿಕಿರಿ ಶೀತಕ್ಕೆ ತಲೆಬಿಸಿ ಮಾಡಬೇಡಿ! ಆಹಾರ ಪಥ್ಯ ಹೀಗಿರಲಿ...

ಸಾಮಾನ್ಯವಾಗಿ ಕಾಣಿಸಿಕೊಳ್ಳುವ ನೆಗಡಿ/ಶೀತ ಗಂಭೀರ ರೋಗಗಳಾಗಿ ಪರಿವರ್ತನೆ ಹೊಂದುವಾಗ ಕೆಲವು ದೈಹಿಕ ಸಮಸ್ಯೆಗಳು ಕಾಣಿಸಿಕೊಳ್ಳುತ್ತವೆ. ಅವು ಯಾವವು? ಹೇಗೆ ಗುರುತಿಸುವುದು? ಎನ್ನುವ ಮಾಹಿತಿಯನ್ನು ಈ ಲೇಖನವನ್ನು ಓದಿ ತಿಳಿಯಿರಿ....  

ನೆಗಡಿ ನಾಲ್ಕು ದಿನಕ್ಕೂ ಹೆಚ್ಚು ಕಾಲ ಮುಂದುವರಿದಿದ್ದರೆ

ನೆಗಡಿ ನಾಲ್ಕು ದಿನಕ್ಕೂ ಹೆಚ್ಚು ಕಾಲ ಮುಂದುವರಿದಿದ್ದರೆ

ಸಾಮಾನ್ಯವಾಗಿ ನೆಗಡಿ 3-4 ದಿನಗಳ ಕಾಲ ಇರುತ್ತದೆ. ಈ ಮೂರು ದಿನದಲ್ಲಿ ಗಂಟಲು ತುರಿಕೆ, ಮೂಗು ಸೋರುವುದು, ಮೂಗು ಕಟ್ಟಿಕೊಳ್ಳುವುದು ಸಹಜ. ಅದೇ ಈ ನೆಗಡಿ ನಾಲ್ಕು ದಿನಕ್ಕೂ ಹೆಚ್ಚು ಕಾಲ ಮುಂದುವರಿದು, ಜ್ವರ ಕಾಣಿಸಿಕೊಂಡರೆ ವೈದ್ಯರಲ್ಲಿ ತೋರಿಸಿಕೊಳ್ಳಬೇಕು.

ಪದೇ ಪದೇ ಮರುಕಳಿಸುವುದು

ಪದೇ ಪದೇ ಮರುಕಳಿಸುವುದು

ಒಮ್ಮೆ ಬಂದ ನೆಗಡಿ ಗುಣಮುಖವಾಯಿತು ಎಂದು ಎನಿಸುವಷ್ಟರಲ್ಲೇ ಮತ್ತೆ-ಮತ್ತೆ ಕಾಣಿಸಿಕೊಂಡರೆ ಅದು ಗಂಭೀರ ಸಮಸ್ಯೆ ಎನ್ನುವುದನ್ನು ಪರಿಗಣಿಸಬೇಕು. ಹೀಗೆ ಆದರೆ ಅದು ಸೋಂಕಿನ ಪರಿಣಾಮ ಎಂದು ಹೇಳಲಾಗುತ್ತದೆ.

ಪ್ರವಾಸದ ಬಳಿಕೆ

ಪ್ರವಾಸದ ಬಳಿಕೆ

ಬಿಡುವಿನ ಸಮಯದಲ್ಲಿ ದೀರ್ಘಾವಧಿಯ ಪ್ರವಾಸಕ್ಕೆ ಹೋಗುವುದು ಸಹಜ. ಇಂತಹ ಪ್ರವಾಸದಿಂದ ಮರಳಿ ಮನೆಗೆ ಬಂದಾಗ ಉಂಟಾಗುವ ನೆಗಡಿ ಗಂಭೀರ ಸಮಸ್ಯೆಯನ್ನು ಒಡ್ಡಬಹುದು. ಸೋಂಕಿನಿಂದ ಉಂಟಾಗುವ ಸಾಧ್ಯತೆಯೇ ಹೆಚ್ಚಿರುತ್ತದೆ. ಹಾಗಾಗಿ ವೈದ್ಯರಲ್ಲಿ ಪರೀಕ್ಷಿಸಿಕೊಳ್ಳಬೇಕು.

ಹೆಚ್ಚಿನ ಜ್ವರವಿದ್ದರೆ

ಹೆಚ್ಚಿನ ಜ್ವರವಿದ್ದರೆ

ನೆಗಡಿಯೊಂದಿಗೆ ಜ್ವರ ಇರುವುದು ಸಾಮಾನ್ಯವಲ್ಲ. ಜ್ವರ ಬಂದಿದ್ದರೆ ಗಂಟಲಿನ ಸ್ಟ್ರೆಪ್ ಸೋಂಕಿನ ಲಕ್ಷಣ. ಹಾಗಾಗಿ ನೆಗಡಿ ಜ್ವರ ಬಂದಿದ್ದರೆ ಗಂಭೀರ ಸಮಸ್ಯೆ ಎಂಬುದನ್ನು ಅರಿಯಬೇಕು.

ಕಡಿಮೆ ಜ್ವರ

ಕಡಿಮೆ ಜ್ವರ

ನೆಗಡಿಯೊಂದಿಗೆ ಸಾಮಾನ್ಯವಾಗಿ ಕಡಿಮೆ ಜ್ವರ ಹೊಂದಿದ್ದೀರಿ ಎಂದಾದರೂ ಅದನ್ನು ನಿರ್ಲಕ್ಷಿಸುವಂತಿಲ್ಲ. ಅದೂ ಸಹ ತೀವ್ರತರಹದ ಸಮಸ್ಯೆಗೆ ಎಡೆಮಾಡಬಹುದು. ಹಾಗಾಗಿ ವೈದ್ಯರಲ್ಲಿ ಸೂಕ್ತ ಚಿಕಿತ್ಸೆ ಪಡೆದುಕೊಳ್ಳಬೇಕು.

ಹೊಟ್ಟೆಯ ಸಮಸ್ಯೆ

ಹೊಟ್ಟೆಯ ಸಮಸ್ಯೆ

ನೆಗಡಿಯ ಜೊತೆಗೆ ವಾಕರಿಕೆ, ವಾಂತಿ, ಮತ್ತು ಅತಿಸಾರದ ಸಮಸ್ಯೆ ಇದ್ದರೆ ಅದು ಸಾಮಾನ್ಯ ನೆಗಡಿಯಲ್ಲ. ಹೊಟ್ಟೆಯಲ್ಲಾಗುವ ಈ ತೊಂದರೆಗಳು ಗಂಭೀರ ಸಮಸ್ಯೆ ಎನ್ನುವುದನ್ನು ಬಿಂಬಿಸುತ್ತದೆ.

ತಲೆನೋವು

ತಲೆನೋವು

ನೆಗಡಿಯಿಂದ ಜ್ವರ, ಗಂಟಲು ಬಿಗಿತ, ತೀವ್ರ ತಲೆನೋವು ಇದ್ದರೆ ಅದು ಮೆನಿಂಜೈಟಿಸ್ ಎನ್ನುವ ಸಮಸ್ಯೆಯ ಸಂಕೇತವಾಗಿರುತ್ತದೆ. ಕಣ್ಣು ಭಾರ, ಮೂಗು ಕಟ್ಟುವುದು, ಮತ್ತು ತಲೆನೋವು ಬರುವುದು ಸೈನಸ್ ಸೋಂಕಿನ ಸಂಕೇತ.

ಉಸಿರಾಟದ ತೊಂದರೆ

ಉಸಿರಾಟದ ತೊಂದರೆ

ನೆಗಡಿ ಆದಾಗ ಕೆಮ್ಮು ಮತ್ತು ಶೀತ ಉಂಟಾಗುವುದು ಸಾಮಾನ್ಯ ರೋಗದ ಲಕ್ಷಣ. ಆದರೆ ಉಸಿರಾಟದ ತೊಂದರೆ, ಉಬ್ಬಸ ಹಾಗೂ ಎದೆನೋವು ಬಂದರೆ ಇದು ಬ್ರಂಕೈಟಿಸ್ ಅಥವಾ ನ್ಯುಮೋನಿಯಾದ ಸಮಸ್ಯೆ ಎಂದು ಪರಿಗಣಿಸಲಾಗುವುದು.

ರೋಗ ಲಕ್ಷಣಗಳು

ರೋಗ ಲಕ್ಷಣಗಳು

ಪ್ರತಿಯೊಂದು ಅಸಹಜ ಲಕ್ಷಣವು ಒಂದೊಂದು ಗಂಭೀರ ಸಮಸ್ಯೆಯ ಸಂಖೇತವಾಗಿರುತ್ತವೆ. ಸ್ಟ್ರೆಪ್ ಸೋಂಕು ಗಂಟಲಿಗೆ ಹಾನಿ ಉಂಟುಮಾಡುತ್ತದೆ. ಸೈನಸ್ ಸೋಂಕು ತಲೆಗೆ ಹಾನಿಯುಂಟುಮಾಡುತ್ತದೆ. ಹೀಗೆ ಪ್ರತಿಯೊಂದು ಸೋಂಕು ಒಂದೊಂದು ಗಭೀರ ರೋಗ ಲಕ್ಷಣವಾಗಿದೆ. ಇವುಗಳ ಬಗ್ಗೆ ಹೆಚ್ಚು ಕಾಳಜಿ ವಹಿಸಬೇಕು.

ದೇಹದಲ್ಲಿ ನೋವು

ದೇಹದಲ್ಲಿ ನೋವು

ಸಾಮಾನ್ಯ ನೆಗಡಿಯಲ್ಲಿ ದೇಹದ ನೋವು ಉಂಟಾಗದು. ಪ್ಲೂವಿನಿಂದಾಗಿ ಸ್ನಾಯುಗಳಲ್ಲಿ ನೋವುಂಟಾಗುತ್ತದೆ. ನೆಗಡಿಯು ಗಂಭೀರ ಸಮಸ್ಯೆಯನ್ನು ಉಂಟುಮಾಡುತ್ತಿದೆ ಎನ್ನುವುದನ್ನು ಗುರುತಿಸಲು ಇದೂ ಒಂದು ಕಾರಣ.

English summary

Signs It's More Serious Than Common Cold

Symptoms of common cold that indicate something more serious than a cold are high fever, chest pain, etc. Read to know the signs that show your cold is more serious.
Story first published: Saturday, May 13, 2017, 10:02 [IST]
Subscribe Newsletter