For Quick Alerts
ALLOW NOTIFICATIONS  
For Daily Alerts

ಮೊಟ್ಟೆಯ ಹಿಂದಿರುವ ಸತ್ಯಾಸತ್ಯತೆ- ಎಲ್ಲವೂ ಹಣ ಮಾಡುವ ಕುತಂತ್ರ!

By Arshad
|

ಅತ್ಯಂತ ಸುಲಭವಾಗಿ ತಯಾರಿಸಬಹುದಾದ, ಸುಲಭವಾಗಿ ಲಭ್ಯವಾಗುವ, ಅಗ್ಗವಾದ ಸಸ್ಯಾಹಾರಿ ಎಂದೇ ಪರಿಗಣಿಸಲ್ಪಟ್ಟಿರುವ ಆಹಾರವೆಂದರೆ ಮೊಟ್ಟೆ. ಇದರಲ್ಲಿ ಅತಿ ಹೆಚ್ಚು ಅಂದರೆ ಸುಮಾರು ಆರು ಗ್ರಾಂ ನಷ್ಟು ಪ್ರೋಟೀನುಗಳಿವೆ ಹಾಗೂ ಸಕ್ಕರೆ ಅಥವಾ ಕಾರ್ಬೋಹೈಡ್ರೇಟುಗಳು ಇಲ್ಲವೇ ಇಲ್ಲದ ಕಾರಣ ತೂಕ ಇಳಿಸುವವರಿಗೂ ಉತ್ತಮವಾದ ಆಯ್ಕೆಯಾಗಿದೆ. ಬೆಳಗ್ಗಿನ ಉಪಾಹಾರಕ್ಕೆ ಮೊಟ್ಟೆ ಅತ್ಯಂತ ಕ್ಷಿಪ್ರ ಸಮಯದಲ್ಲಿ ತಯಾರಿಸಬಹುದಾದ ಹಾಗೂ ಇಡಿಯ ದಿನದ ಚಟುವಟಿಕೆಗೆ ಅಗತ್ಯವಾದ ಶಕ್ತಿ ನೀಡುವ ಕಾರಣ ಹೆಚ್ಚಿನವರ ನೆಚ್ಚಿನ ಮತ್ತು ಅನಿವಾರ್ಯ ಆಯ್ಕೆಯೂ ಆಗಿದೆ.

ಮೊಟ್ಟೆಯ ಬಿಳಿಭಾಗದಲ್ಲಿರುವ ಕೊಲೈನ್ ಎಂಬ ಪೋಷಕಾಂಶ ಜೀವಕೋಶಗಳ ಸಾಮಾನ್ಯ ಚಟುವಟಿಕೆಯನ್ನು ಉತ್ತಮಗೊಳಿಸುತ್ತದೆ, ಯಕೃತ್‌ನ ಕ್ಷಮತೆ ಹೆಚ್ಚಿಸುತ್ತದೆ ಹಾಗೂ ದೇಹದಲ್ಲಿ ಪೋಷಕಾಂಶಗಳನ್ನು ಸಾಗಿಸಲು ನೆರವಾಗುತ್ತದೆ. ಇದರಲ್ಲಿ ಸಕ್ಕರೆ ಅಥವಾ ಕಾರ್ಬೋಹೈಡ್ರೇಟುಗಳು ಇಲ್ಲದೇ ಇರುವ ಕಾರಣ ತೂಕ ಅಥವಾ ಕೊಬ್ಬು ಹೆಚ್ಚಬಹುದು ಎಂಬ ದುಗುಡವಿಲ್ಲದೇ ಸೇವಿಸಬಹುದು. ಮೊಟ್ಟೆ ಅಂದರೆ ಮಾರುಕಟ್ಟೆಯಲ್ಲಿ ಅತಿಹೆಚ್ಚು ಲಭ್ಯವಾಗುವುದೇ ಕೋಳಿಮೊಟ್ಟೆ.
ಇದನ್ನೂ ಓದಿ- ಕೋಳಿ ಮೊಟ್ಟೆಯ ನಗ್ನಸತ್ಯ!, ಹಣಕ್ಕಾಗಿ ನಡೆಯುತ್ತಿದೆ ಕುತಂತ್ರ!

ಇವು ರುಚಿಕರವಾಗಿಯೂ, ಪೌಷ್ಟಿಕವೂ ಆಗಿದ್ದು ಸ್ನಾಯುಗಳ ಬಲ ಹೆಚ್ಚಿಸಲು, ತೂಕವನ್ನು ನಿಯಂತ್ರಣದಲ್ಲಿರಿಸಲು, ಮೆದುಳಿನ ಕ್ಷಮತೆ ಹೆಚ್ಚಿಸಲು, ಕಣ್ಣಿನ ಆರೋಗ್ಯ ವೃದ್ಧಿಸಲು ಹಾಗೂ ವಿಶೇಷವಾಗಿ ಗರ್ಭಿಣಿಯರಿಗೆ ಹೆಚ್ಚಿನ ಪೋಷಕಾಂಶ ನೀಡಲು ನೆರವಾಗುತ್ತದೆ. ಆದರೆ ಇವೆಲ್ಲವೂ ನೈಸರ್ಗಿಕವಾಗಿ ಉತ್ಪತ್ತಿಯಾದ ಮೊಟ್ಟೆಗಳಿಂದ ಮಾತ್ರ ಲಭ್ಯ. ಇಂದು ಮಾರುಕಟ್ಟೆಯಲ್ಲಿ ಲಭ್ಯವಿರುವ ಮೊಟ್ಟೆಗಳೆಲ್ಲಾ ಕೃತಕ ರೂಪದಲ್ಲಿ ಸೃಷ್ಟಿಸಲಾಗಿದ್ದು ಇವುಗಳ ಬಗ್ಗೆ ಕೆಲವು ಮಾಹಿತಿಗಳನ್ನು ಮೊಟ್ಟೆ ಸೇವಿಸುವ ಪ್ರತಿಯೊಬ್ಬರೂ ಅರಿತಿರಬೇಕಾಗಿರುವುದು ಅಗತ್ಯ.....

ಕಂದು ಮೊಟ್ಟೆ ಬಿಳಿ ಮೊಟ್ಟೆಗಿಂತ ಹೆಚ್ಚು ಪೌಷ್ಟಿಕವೇನೂ ಅಲ್ಲ

ಕಂದು ಮೊಟ್ಟೆ ಬಿಳಿ ಮೊಟ್ಟೆಗಿಂತ ಹೆಚ್ಚು ಪೌಷ್ಟಿಕವೇನೂ ಅಲ್ಲ

ಕಂದು ಮತ್ತು ಬಿಳಿ ಮೊಟ್ಟೆ ಪೌಷ್ಟಿಕಾಂಶದ ಲೆಕ್ಕಾಚಾರದಲ್ಲಿ ಸರಿಸಮನಾಗಿವೆ. ಆದರೆ ಕಂದು ಮೊಟ್ಟೆಗಳನ್ನಿಡುವ ಕೋಳಿಗಳಿಗೆ ಕೊಂಚ ಹೆಚ್ಚಿನ ಸ್ಥಳಾವಕಾಶ ಬೇಕಾದುದರಿಂದ ಇತರ ಕೋಳಿಗಳಿಗಿಂತ ಕೊಂಚ ಹೆಚ್ಚಿನ ಆಹಾರದ ಅಗತ್ಯವಿದೆ. ಇದೇ ಕಾರಣಕ್ಕೆ ಕಂದು ಮೊಟ್ಟೆ ಕೊಂಚ ದುಬಾರಿಯಾಗಿರುತ್ತದೆ.

ಪಂಜರದೊಳಗಿನದ್ದಲ್ಲದ (ಕೇಜ್ ಫ್ರೀ) ಮೊಟ್ಟೆ ಇಡುವ ಕೋಳಿ ಬಯಲಿನಲ್ಲೇನೂ ಇರುವುದಿಲ್ಲ

ಪಂಜರದೊಳಗಿನದ್ದಲ್ಲದ (ಕೇಜ್ ಫ್ರೀ) ಮೊಟ್ಟೆ ಇಡುವ ಕೋಳಿ ಬಯಲಿನಲ್ಲೇನೂ ಇರುವುದಿಲ್ಲ

ಕೇಜ್ ಫ್ರೀ ಎನ್ನುವುದು ಕೇವಲ ಮಾರುಕಟ್ಟೆಯ ತಂತ್ರವೇ ಹೊರತು ಈ ಕೋಳಿಗಳು ಪಂಜರದಲ್ಲಿ ಬೆಳೆದಿಲ್ಲ ಎಂದರ್ಥವಲ್ಲ.

ಹಾರ್ಮೋನ್ ಫ್ರೀ ಎಂಬುದು ಸಹಾ ಮಿಥ್ಯೆ

ಹಾರ್ಮೋನ್ ಫ್ರೀ ಎಂಬುದು ಸಹಾ ಮಿಥ್ಯೆ

ಹಾರ್ಮೋನುಗಳು ರಕ್ತದಲ್ಲಿರುತ್ತದೆಯೇ ವಿನಃ ಮಾಂಸದಲ್ಲಿ ಅಥವಾ ಮೊಟ್ಟೆಯಲ್ಲಿ ಇರುವುದಿಲ್ಲ. ಹೀಗೆ "free of hormones" ಎಂದು ಹೇಳುವುದು ಮಾರುಕಟ್ಟೆಯ ತಂತ್ರವೇ ಹೊರತು ವಿಶೇಷವೇನಿಲ್ಲ.

ಮೊಟ್ಟೆಯ ಕವಚ ದೃಢವಾಗಿದ್ದಷ್ಟೂ ಎಳೆಯ ಕೋಳಿ ಎಂದರ್ಥ

ಮೊಟ್ಟೆಯ ಕವಚ ದೃಢವಾಗಿದ್ದಷ್ಟೂ ಎಳೆಯ ಕೋಳಿ ಎಂದರ್ಥ

ಕಂದು ಮೊಟ್ಟೆಯ ಕವಚ ಹೆಚ್ಚು ದಪ್ಪ ಎಂದು ಹೆಚ್ಚಿನವರು ಭಾವಿಸಿದ್ದಾರೆ. ವಾಸ್ತವವಾಗಿ ಕೋಳಿ ಮೊಟ್ಟೆ ಇಡುವ ಪ್ರಾರಂಭದಲ್ಲಿ ಕವಚ ಹೆಚ್ಚು ದಪ್ಪ ಮತ್ತು ಗಡಸಾಗಿದ್ದು ವಯಸ್ಸಾದಂತೆ ಇದು ತೆಳು ಮತ್ತು ಕಡಿಮೆ ಗಡಸುತನ ಹೊಂದುತ್ತಾ ಹೋಗುತ್ತದೆ.

ಬಿಳಿ ಅಥವಾ ಕಂದು ಮೊಟ್ಟೆ-ಪೋಷಕಾಂಶಗಳಲ್ಲಿ ವ್ಯತ್ಯಾಸವಿಲ್ಲ

ಬಿಳಿ ಅಥವಾ ಕಂದು ಮೊಟ್ಟೆ-ಪೋಷಕಾಂಶಗಳಲ್ಲಿ ವ್ಯತ್ಯಾಸವಿಲ್ಲ

ಮೊಟ್ಟೆ ಬಿಳಿ, ಕಂದು ಬಣ್ಣದಲ್ಲಿದ್ದರೂ ಪೋಷಕಾಂಶಗಳ ಗಣನೆಯಲ್ಲಿ ವ್ಯತ್ಯಾಸವಿರುವುದಿಲ್ಲ. ಎಲ್ಲವೂ ಒಂದೇ. ಕೋಳಿಯ ವಂಶವಾಹಿನಿಗೆ ತಕ್ಕಂತೆ ಇದರ ಕವಚದ ಬಣ್ಣ ಮಾತ್ರ ಬದಲಾಗಿರುತ್ತದೆ.

ಮೊಟ್ಟೆಯ ಬಣ್ಣವೇ ಪೋಷಕಾಂಶಗಳ ವ್ಯತ್ಯಾಸವನ್ನು ಪ್ರಕಟಿಸುತ್ತದೆ

ಮೊಟ್ಟೆಯ ಬಣ್ಣವೇ ಪೋಷಕಾಂಶಗಳ ವ್ಯತ್ಯಾಸವನ್ನು ಪ್ರಕಟಿಸುತ್ತದೆ

ಕೋಳಿಯ ಆರೋಗ್ಯ, ಆಹಾರಗಳು ಮೊಟ್ಟೆಯ ಪೋಷಕಾಂಶಗಳನ್ನು ಹಾಗೂ ತನ್ಮೂಲಕ ಬಣ್ಣವನ್ನು ಪ್ರಕಟಿಸುತ್ತದೆ. ಇದು ತೆಳು ಹಳದಿಯಿಂದ ಗಾಢ ಕೇಸರಿ ಅಥವಾ ಪ್ರಖರ ಕೆಂಪು ಬಣ್ಣದವರೆಗೂ ಇರಬಹುದು.

ಕೋಳಿಯ ಕಿವಿರೆಪ್ಪಯ ಬಣ್ಣ ಮೊಟ್ಟೆಯ ಕವಚದ ಬಣ್ಣವನ್ನು ತಿಳಿಸುತ್ತದೆ

ಕೋಳಿಯ ಕಿವಿರೆಪ್ಪಯ ಬಣ್ಣ ಮೊಟ್ಟೆಯ ಕವಚದ ಬಣ್ಣವನ್ನು ತಿಳಿಸುತ್ತದೆ

ಕೋಳಿಯ ಕಿವಿರೆಪ್ಪಯ ಬಣ್ಣವನ್ನು ಕೊಂಚ ಸೂಕ್ಷ್ಮವಾಗಿ ಗಮನಿಸಿದರೆ ಇದು ಇಡುವ ಮೊಟ್ಟೆಯ ಕವಚದ ಬಣ್ಣವನ್ನು ಅರಿಯಬಹುದು. ಬಿಳಿ ಕಿವಿರೆಪ್ಪೆ ಇದ್ದರೆ ಬಿಳಿ ಮೊಟ್ಟೆ, ಕೆಂಪು ಅಥವಾ ಕಂದು ರೆಪ್ಪೆ ಇದ್ದರೆ ಕಂದು ಮೊಟ್ಟೆಗಳನ್ನಿಡುತ್ತವೆ.

ಪ್ರತಿ ಮೊಟ್ಟೆಯ ಗಾತ್ರವೂ ಬೇರೆಬೇರೆ

ಪ್ರತಿ ಮೊಟ್ಟೆಯ ಗಾತ್ರವೂ ಬೇರೆಬೇರೆ

ಒಂದೇ ಗಾತ್ರದ ಮೊಟ್ಟೆ ಇರುವಂತೆ ಟ್ರೇಗಳನ್ನು ಪ್ಯಾಕ್ ಮಾಡಲಾಗಿದ್ದರೂ ಪ್ರತಿ ಮೊಟ್ಟೆಯ ಗಾತ್ರದಲ್ಲಿ ಕೊಂಚ ವ್ಯತ್ಯಾಸವಿರುತ್ತದೆ. ಆದರೂ ಸ್ಥೂಲವಾಗಿ ಸರಾಸರಿ ತೂಕವನ್ನು ಪರಿಗಣಿಸಿ ಇವುಗಳನ್ನು ಚಿಕ್ಕ ಮಧ್ಯಮ ಮತ್ತು ದೊಡ್ಡ ಮೊಟ್ಟೆಗಳೆಂದು ವರ್ಗೀಕರಿಸಲಾಗುತ್ತದೆ.

ಎಲ್ಲಾ ಮೊಟ್ಟೆಗಳು ಪ್ರಾರಂಭದಲ್ಲಿ ಬಿಳಿಯೇ ಆಗಿರುತ್ತವೆ

ಎಲ್ಲಾ ಮೊಟ್ಟೆಗಳು ಪ್ರಾರಂಭದಲ್ಲಿ ಬಿಳಿಯೇ ಆಗಿರುತ್ತವೆ

ಕೋಳಿಯ ದೇಹದಲ್ಲಿ ಮೊಟ್ಟೆ ಪ್ರಾರಂಭದಲ್ಲಿ ಬಿಳಿಯೇ ಆಗಿರುತ್ತದೆ. ಕಡೆಯ ಹಂತದಲ್ಲಿ ಇದು ಕಂದು ಬಣ್ಣ ಪಡೆಯುತ್ತದೆ.

ಈ ಕೋಳಿಗಳೆಂದೂ ಪಂಜರದಿಂದ ಹೊರಹೋಗುವುದೇ ಇಲ್ಲ

ಈ ಕೋಳಿಗಳೆಂದೂ ಪಂಜರದಿಂದ ಹೊರಹೋಗುವುದೇ ಇಲ್ಲ

ಮೊಟ್ಟೆ ಇಡುವ ಕೋಳಿಗಳನ್ನು ಲೇಯರ್ಸ್ ಎಂದು ಕರೆಯಲಾಗುತ್ತದೆ. ಇವುಗಳನ್ನು ಸದಾ ಪಂಜರದಲ್ಲಿಯೇ ಇರುವಂತೆ ನೋಡಿಕೊಳ್ಳಲಾಗುತ್ತದೆ. ಗಂಡು ಕೋಳಿಯ ಸಂಪರ್ಕವೇ ಇಲ್ಲದೇ ಪ್ರತಿದಿನವೂ ಒಂದು ಮೊಟ್ಟೆ ಇಡುವ ಈ ಕೋಳಿಗಳನ್ನು ಪಂಜರದಿಂದ ಹೊರಬಿಟ್ಟರೂ ಎಲ್ಲೂ ಹೋಗದೇ ಅಲ್ಲೇ ಇರುವಷ್ಟು ಇವುಗಳ ಮೆದುಳು ಕ್ಷೀಣವಾಗಿರುತ್ತವೆ.

English summary

Shocking Facts About Eggs That You Need To Know

Chicken eggs are one of the most versatile foods on the planet. They are both delicious and nutritious. Eggs are known to help with weight management, muscle strength, healthy pregnancy, brain function, eye health and more.In this article, we have included some of the facts on eggs that you need to know of. So, continue reading this article to find out about the facts on egg.
X
Desktop Bottom Promotion