For Quick Alerts
ALLOW NOTIFICATIONS  
For Daily Alerts

  ಕೋಳಿ ಮೊಟ್ಟೆಯ ನಗ್ನಸತ್ಯ!, ಹಣಕ್ಕಾಗಿ ನಡೆಯುತ್ತಿದೆ ಕುತಂತ್ರ!

  By Manu
  |
  ಕೋಳಿ ಮೊಟ್ಟೆಗಳ ಹಿಂದಿರುವ ಭಯಾನಕ ರಹಸ್ಯ ಬಟಾಬಯಲು | Oneindia Kannada

  'ದಿನಕ್ಕೊಂದು ಮೊಟ್ಟೆ, ತುಂಬುವುದು ಹೊಟ್ಟೆ' ಇದು ನಮ್ಮ ಸರ್ಕಾರದ ನ್ಯಾಷನಲ್ ಎಗ್ ಕಮಿಷನ್‌ನ ಧ್ಯೇಯವಾಕ್ಯ. ಈ ಜಗತ್ತಿನಲ್ಲಿ ಮೀನನ್ನು ಬಿಟ್ಟರೆ ಅತಿ ಹೆಚ್ಚಾಗಿ ಬಳಸಲಾಗುವ ಮಾಂಸಾಹಾರವೆಂದರೆ ಮೊಟ್ಟೆ (ಮೊಟ್ಟೆ ಸಸ್ಯಾಹಾರವೆನ್ನುವ ತರ್ಕವೂ ಇದ್ದು ಮೊಟ್ಟೆಯನ್ನೂ ಒದಗಿಸದ ಸಸ್ಯಾಹಾರಿ ಹೋಟೆಲುಗಳು ತಮ್ಮ ಫಲಕದಲ್ಲಿ 'ಪ್ಯೂರ್ ವೆಜ್' ಎಂಬ ಮಾಹಿತಿಯನ್ನು ಕಣ್ಣಿಗೆ ಸ್ಪಷ್ಟವಾಗಿ ಕಾಣುವಂತೆ ಪ್ರದರ್ಶಿಸುತ್ತಾರೆ). ಇನ್ನು ಫ್ರಿಜ್‌ನಲ್ಲಿ ಅಪ್ಪಿತಪ್ಪಿಯೂ ಮೊಟ್ಟೆಗಳನ್ನು ಇಡಬೇಡಿ!

  ಮೊಟ್ಟೆಯನ್ನು ಬಳಸಿ ಕಡಿಮೆ ಸಮಯದಲ್ಲಿ ನೂರಾರು ವಿಧದ ಖಾದ್ಯಗಳನ್ನು ತಯಾರಿಸಬಹುದು. ಅಲ್ಲದೇ ಹಳ್ಳಿಯಿಂದ ದಿಲ್ಲಿಯವರೆಗೆ ಯಾವುದೇ ಪುಟ್ಟ ಅಂಗಡಿಯಲ್ಲಿಯೂ ಸದಾ ಲಭ್ಯವಿರುವ ಅಪ್ಪಟ ಪ್ರೋಟೀನ್ ಯುಕ್ತ ಆಹಾರವೆಂದರೆ ಮೊಟ್ಟೆ. ಭಾರತದ ಕೋಟ್ಯಂತರ ಜನರಿಗೆ ಒದಗಿಸಲು ಈ ಮೊಟ್ಟೆಗಳನ್ನು ಕೋಟ್ಯಂತರ ಸಂಖ್ಯೆಯಲ್ಲಿ ಉತ್ಪಾದಿಸಲು ಭಾರೀ ದೊಡ್ಡ ದೊಡ್ಡ ಉದ್ಯಮಗಳೇ ತಲೆಯೆತ್ತಿವೆ. ಮಧ್ಯಾಹ್ನ ಊಟದ ಜೊತೆ, ಒಂದು ಮೊಟ್ಟೆಯೂ ಇರಲಿ!

  ಈ ಉದ್ಯಮಗಳಲ್ಲಿ ಮೊಟ್ಟೆಗಳನ್ನು ಅತಿ ಕಡಿಮೆ ವೆಚ್ಚದಲ್ಲಿ ಅತಿ ಹೆಚ್ಚು ಇಳುವರಿ ಬರುವ ಸಾಮಾಗ್ರಿಯಂತೆ ಪರಿಗಣಿಸುವ ಕಾರಣ ಹಲವಾರು ತಂತ್ರಗಳನ್ನು ಉಪಯೋಗಿಸಲಾಗುತ್ತದೆ. ಆದರೆ ಈ ತಂತ್ರಗಳಾವುದೂ ಜನಸಾಮಾನ್ಯರಿಗೆ ಗೊತ್ತಾಗದಂತೆ ಉದ್ದಿಮೆಗಳು ಭಾರೀ ಎಚ್ಚರಿಕೆ ವಹಿಸುತ್ತವೆ. 

  ಕೆಲವು ತಂತ್ರಗಳು ಕುತಂತ್ರವಾಗಿದ್ದು ಇದರ ಬಗ್ಗೆ ತಿಳಿದರೆ ಜನಸಾಮಾನ್ಯರು ಉದ್ದಿಮೆಯ ವಿರುದ್ಧ ದಂಗೆಯೇಳುವುದು ಖಂಡಿತಾ ಎಂಬ ಅರಿವಿರುವ ಕಾರಣ ಉದ್ಯಮಿಗಳು ಈ ಸತ್ಯಗಳನ್ನು ಮುಚ್ಚಿಡುತ್ತಾರೆ. ಅಲ್ಲದೇ ಯಾವುದೇ ಕಾರಣಕ್ಕೂ ಜನಸಾಮಾನ್ಯರಿಗೆ ಈ ಫಾರಮ್ಮುಗಳಿಗೆ ಪ್ರವೇಶ ನೀಡದಿರಲು ಇದು ಪ್ರಮುಖ ಕಾರಣವಾಗಿದೆ. ಆದರೆ ಇಂದು ಈ ನಗ್ನಸತ್ಯಗಳನ್ನು ನಿಮ್ಮ ಮುಂದಿಡುತ್ತಿದ್ದು ಇದರ ವಾಸ್ತವವನ್ನು ಪರಿಚಯಿಸುವ ಚಿತ್ರಗಳು ನಿಮ್ಮ ಚಿತ್ತವನ್ನು ಕೆಡಿಸಬಹುದು....  

  ವಾಸ್ತವಾಂಶ #1

  ವಾಸ್ತವಾಂಶ #1

  ಹೆಣ್ಣು ಕೋಳಿ ಅಥವಾ ಹೇಟೆಯನ್ನು ನೈಸರ್ಗಿಕ ಸಂಪರ್ಕವಿಲ್ಲದೇ ಮೊಟ್ಟೆಯಿಡುವಂತೆ ಅದರ ಅನುವಂಶೀಯ ಗುಣಗಳನ್ನೇ ಮಾರ್ಪಾಡು ಮಾಡಲು ಮೊದಲು ಫಾರಮ್ಮಿಗೆ ಕಳುಹಿಸಲಾಗುತ್ತದೆ. ಈ ಕೋಳಿಗಳಿಗೆ ಲೇಯರ್ಸ್ (layers) ಎಂದು ಕರೆಯುತ್ತಾರೆ. ಇದರ ಪ್ರಕಾರ ಇದರ ಶರೀರದಲ್ಲಿ ಕೃತಕವಾಗಿ ವರ್ಷಕ್ಕೆ 250 ರಿಂದ 300 ಮೊಟ್ಟೆಗಳು ಉತ್ಪತ್ತಿಯಾಗುತ್ತವೆ, ಅದೂ ಗಂಡಿನ ಸಂಪರ್ಕವಿಲ್ಲದೇ! ವಾಸ್ತವವಾಗಿ ನಿಸರ್ಗ ಹೇಟೆಯ ದೇಹವನ್ನು ವರ್ಷಕ್ಕೆ ಹತ್ತರಿಂದ ಹದಿನೈದು ಮೊಟ್ಟೆಗಳನ್ನು ಮಾತ್ರ ಉತ್ಪಾದಿಸುವಂತೆ ನಿರ್ಮಿಸಿದೆ. ಹಾಗಾಗಿ ಮಾರುಕಟ್ಟೆಯಲ್ಲಿ ಸಿಗುವ ಮೊಟ್ಟೆಗಳೆಲ್ಲಾ ವೆಜ್ ಅಥವಾ ಸಸ್ಯಾಹಾರಿ, ಎಂದರೆ ಅಪ್ಪನಿಲ್ಲದೇ ಹುಟ್ಟಿದವು!

  ವಾಸ್ತವಾಂಶ #2

  ವಾಸ್ತವಾಂಶ #2

  ಅಮೇರಿಕಾದಲ್ಲಿರುವ 95%ಕ್ಕೂ ಹೆಚ್ಚು ಮೊಟ್ಟೆ ನೀಡುವ ಕೋಳಿಗಳು ಅಂದರೆ ಅಂದಾಜು ಮೂವತ್ತು ಕೋಟಿ ಕೋಳಿಗಳು ತಮ್ಮ ಜೀವನವನ್ನು ಇಕ್ಕಟ್ಟಾದ ಕೋಳಿಗೂಡಿನೊಳಗೆ ಕಳೆಯುತ್ತವೆ. ಎಷ್ಟು ಇಕ್ಕಟ್ಟು ಎಂದರೆ ಇವುಗಳಿಗೆ ರೆಕ್ಕೆಯನ್ನು ಬಿಚ್ಚಲೂ ಸ್ಥಳಾವಕಾಶವಿರುವುದಿಲ್ಲ.

  ವಾಸ್ತವಾಂಶ #3

  ವಾಸ್ತವಾಂಶ #3

  ಇವುಗಳ ಹಿಕ್ಕೆ ನೇರವಾಗಿ ಕೆಳಗಿನ ಟ್ರೇ ಒಂದರಲ್ಲಿ ಸಂಗ್ರಹವಾಗುವಂತೆ ಕೋಳಿಗೂಡಿನ ನೆಲವನ್ನು ಜಾಲರಿ ಅಥವಾ ದಪ್ಪನಾದ ತಂತಿಗಳಿಮ್ದ ಮಾಡಿರಲಾಗಿರುತ್ತದೆ. ಕೋಳಿಯ ಪಾದಗಳು ನೆಲದ ಮೇಲೆ ಓಡಾಡಲು ಅನುಕೂಲವಾಗುವಂತೆ ನಿಸರ್ಗ ನಿರ್ಮಿಸಿದ್ದು ಈ ಜಾಲರಿಯ ಮೇಲೆ ಕಾಲಿಟ್ಟಾಗ ಅವುಗಳ ಪಾದಗಳು ಅಪಾರವಾದ ನೋವು ಕೊಡುತ್ತದೆ. ಕೆಲವೊಮ್ಮೆ ಜಾಲರಿಯ ನಡುವಣ ಸ್ಥಳದಲ್ಲಿ ಪಾದ ಸಿಲುಕಿ ಗಾಯವಾಗಿ ರಕ್ತ ಒಸರುತ್ತದೆ. ಕೋಳಿಗಳ ಒಂದು ಸ್ವಭಾವವೆಂದರೆ ರಕ್ತ ಕಂಡ ತಕ್ಷಣ ಅಲ್ಲಿ ಕುಕ್ಕುವುದು. ಈ ರಕ್ತವನ್ನು ಕಂಡ ಇತರ ಕೋಳಿಗಳು ಒಂದೇ ಸಮನೆ ಕುಕ್ಕಲು ಪ್ರಾರಂಭಿಸುತ್ತವೆ. ಎಲ್ಲಿಯವರೆಗೆ ಈ ಕೋಳಿಯ ಪ್ರಾಣ ಹೋಗಿ ಒಂದೊಂದು ಭಾಗವನ್ನೂ ತಿಂದು ಖಾಲಿ ಮಾಡುವುದಿಲ್ಲವೋ ಅಲ್ಲಿಯವರೆಗೆ ಇವುಗಳ ಆರ್ಭಟ ಮುಂದುವರೆಯುತ್ತದೆ.

  ವಾಸ್ತವಾಂಶ #4

  ವಾಸ್ತವಾಂಶ #4

  ಮನೆಯಲ್ಲಿ ಸಾಕುವ ಕೋಳಿಗಳ ಆಯಸ್ಸು ಹತ್ತರಿಂದ ಇಪ್ಪತ್ತು ವರ್ಷಗಳವರೆಗೆ ಇದೆ. ಕಾಡುಕೋಳಿಗಳು ಇನ್ನೂ ಹೆಚ್ಚು ಜೀವಿಸುತ್ತವೆ. ಆದರೆ ಮೊಟ್ಟೆ ನೀಡಲೆಂದೇ ಮಾರ್ಪಾಡಿಸಿರುವ ಈ ಕೋಳಿಗಳು ಕೇವಲ ಒಂದೂವರೆ ವರ್ಷದಲ್ಲಿ ತಮ್ಮ ಮೊಟ್ಟೆ ನೀಡುವ ಸಾಮರ್ಥ ಕಡಿಮೆಯಾದ ಬಳಿಕ ಕಡಿಮೆ ಬೆಲೆಗೆ ಮಾರಲ್ಪಟ್ಟು ಕೊಲ್ಲಲ್ಪಡುತ್ತವೆ.

  ವಾಸ್ತವಾಂಶ #5

  ವಾಸ್ತವಾಂಶ #5

  ವರದಿಗಳ ಪ್ರಕಾರ ಯಾವುದೇ ದೇಹದ ಸಾಮರ್ಥಕ್ಕೂ ಹೆಚ್ಚಾಗಿ ಮೊಟ್ಟೆಗಳನ್ನು ಉತ್ಪಾದಿಸುವಂತೆ ಮಾಡಿದರೆ ಇದರಿಂದ ದೇಹ ಜರ್ಝರಿತವಾಗಿ ಹಲವಾರು ಕಾಯಿಲೆಗಳು ಆವರಿಸುತ್ತವೆ. ಅಪರಿಮಿತ ನೋವು ಮತ್ತು ಅಕಾಲಿಕ ಮರಣ ಸಂಭವಿಸುತ್ತದೆ. ಮೊಟ್ಟೆಯಿಡುವ ಕೋಳಿಗಳೆಲ್ಲಾ ಸದಾ ಯಾತನೆಯನ್ನು ಅನುಭವಿಸುತ್ತಾ ಇಕ್ಕಟ್ಟಿನಲ್ಲಿ ಉಸಿರುಕಟ್ಟುವ ವಾತಾವರಣದಲ್ಲಿದ್ದು ಅವಧಿಗೂ ಮುನ್ನ ಮರಣವನ್ನು ನಿರೀಕ್ಷಿಸುತ್ತಾ ಕಾಲ ಕಳೆಯುತ್ತವೆ.ಫಾರಂ ಕೋಳಿಗಳ ಮಾಂಸ ವಿಷದಷ್ಟೇ ಅಪಾಯಕಾರಿ...!

  ವಾಸ್ತವಾಂಶ #6

  ವಾಸ್ತವಾಂಶ #6

  ಪ್ರತಿ ಬಾರಿ ಮೊಟ್ಟೆಯಿಟ್ಟಾದ ಇದರ ಕವಚಕ್ಕಾಗಿ ತನ್ನ ದೇಹದಿಂದ ಹೇಟೆ 10% ನಷ್ಟು ಕ್ಯಾಲ್ಸಿಯಂ ಅನ್ನು ಒದಗಿಸಬೇಕು. ಪ್ರತಿದಿನವೂ ಒಂದು ಮೊಟ್ಟೆಯಿಡುವ ಮೂಲಕ ದೇಹದ ಕ್ಯಾಲ್ಸಿಯಂ ಎಲ್ಲವೂ ಹೀಗೇ ಹೊರಹೋಗಿ ಹೇಟೆಯ ದೇಹ ಶಿಥಿಲವಾಗುತ್ತದೆ.

  ವಾಸ್ತವಾಂಶ #7

  ವಾಸ್ತವಾಂಶ #7

  ಹೆಚ್ಚಿನ ಹೇಟೆಗಳು ‘fatty liver syndrome' ಎಂಬ ತೊಂದರೆಯಿಂದ ಬಳಲುತ್ತವೆ. ಏಕೆಂದರೆ ಮೊಟ್ಟೆಯ ಒಳಭಾಗದ ಪ್ರೋಟೀನ್ ಮತ್ತು ಕೊಬ್ಬಿನ ಉತ್ಪಾದನೆಗೆ ಯಕೃತ್ ಸತತವಾಗಿ ಕೊಬ್ಬು ಮತ್ತು ಪ್ರೋಟೀನುಗಳನ್ನು ಉತ್ಪಾದಿಸುತ್ತಲೇ ಇರಬೇಕಾಗುತ್ತದೆ.ಮಾಂಸದ ಕೋಳಿಗಳನ್ನು ಚಪ್ಪರಿಸುವ ಮುನ್ನ, ಇರಲಿ ಎಚ್ಚರ!

   

  English summary

  Facts The Egg Industry Doesn’t Want You To Know

  There are many facts about an egg industry that they do not wish a common man to know! These are the dirty, dark secrets about an egg industry that is usually hidden from us, as it can be quite disturbing. Check out these facts!
  We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Boldsky sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Boldsky website. However, you can change your cookie settings at any time. Learn more