For Quick Alerts
ALLOW NOTIFICATIONS  
For Daily Alerts

  ಸಾಮಾನ್ಯ ಕಾಯಿಲೆಗಳಿಗೆ ಸರಳ ಮನೆಮದ್ದು-ಪ್ರಯತ್ನಿಸಿ ನೋಡಿ

  By Manu
  |

  ನಮ್ಮೆಲ್ಲರ ಮನೆಯ ಊಟದ ಮೇಜಿನ ಮೇಲೆ ಉಪ್ಪು ಮತ್ತು ಕಾಳುಮೆಣಸಿನ ಅಥವಾ ಕರಿಮೆಣಸಿನ ಪುಡಿಯನ್ನು ಸದಾ ಇಟ್ಟಿರುತ್ತೇವೆ. ಆದರೆ ಇವು ರುಚಿಯನ್ನು ಹೆಚ್ಚಿಸುವ ಜೊತೆಗೇ ಆರೋಗ್ಯವನ್ನು ಹಲವು ವಿಧದಲ್ಲಿ ವೃದ್ಧಿಸುತ್ತವೆ ಎಂದು ಹೆಚ್ಚಿನವರಿಗೆ ಗೊತ್ತಿಲ್ಲ. ಹಾಲಿಗೆ ಜೀರಿಗೆ-ಕರಿಮೆಣಸಿನ ಪುಡಿ ಸೇರಿಸಿ ಕುಡಿದು ನೋಡಿ...

  ಕರಿಮೆಣಸು ಉಪ್ಪಿನ ಜೊತೆಗೆ ಲಿಂಬೆ ಮತ್ತು ಜೇನು ಸೇರಿಸಿದರೆ ಇದರ ಗುಣಗಳು ಇನ್ನಷ್ಟು ಹೆಚ್ಚುತ್ತವೆ. ತೂಕ ಇಳಿಸಲು ನೆರವಾಗುವುದರಿಂದ ಹಿಡಿದು ಅಸ್ತಮಾ ಆಘಾತದವರೆಗೆ ಹಲವು ವಿಧದ ರೋಗಗಳಿಗೆ ಇದು ಔಷಧಿಯಂತೆ ಕೆಲಸ ಮಾಡುತ್ತವೆ. ಅಡುಗೆಮನೆಯ ಡಬ್ಬದಲ್ಲಿರುವ ಕರಿಮೆಣಸು, ತುಂಬಾನೇ ಪವರ್‌ಫುಲ್!

  ಸಾಮಾನ್ಯ ಶೀತ, ನೆಗಡಿ, ಗಂಟಲ ಬೇನೆ, ವಾಕರಿಕೆ, ಹಲ್ಲುನೋವು, ಮೂಗಿನಲ್ಲಿ ರಕ್ತ ಸೋರುವುದು ಮೊದಲಾದ ತೊಂದರೆಗಳಿಗೆ ಈ ಸಾಮಾಗ್ರಿಗಳು ಅತ್ಯುತ್ತಮವಾಗಿವೆ. ಬನ್ನಿ, ಇವುಗಳನ್ನು ಯಾವ ಕಾಯಿಲೆಗೆ ಹೇಗೆ ಬಳಸಬಹುದು ಎಂಬುದನ್ನು ನೋಡೋಣ....

  ಮೂಗಿನಲ್ಲಿ ರಕ್ತ ಸೋರುವುದು

  ಮೂಗಿನಲ್ಲಿ ರಕ್ತ ಸೋರುವುದು

  ಮೂಗಿನ ಒಳಭಾಗದ ಚರ್ಮ ಅತಿ ತೆಳುವಾಗಿದ್ದು ಕೆಲವಾರು ಕಾರಣಗಳಿಂದ ಸುಲಭವಾಗಿ ಹರಿದು ರಕ್ತಸೋರಲು ಪ್ರಾರಂಭವಾಗುತ್ತದೆ. ಇದಕ್ಕಾಗಿ ಒಂದು ಚಿಕ್ಕ ಹತ್ತಿಯುಂಡೆಯನ್ನು ಲಿಂಬೆರಸದಲ್ಲಿ ಮುಳುಗಿಸಿ ಹಿಂಡಿ ಈ ಉಂಡೆಯನ್ನು ಮಲಗಿದ್ದಂತೆ ಮೂಗಿನ ಒಳಭಾಗದಲ್ಲಿ ಇರಿಸಬೇಕು. ಇದರಿಂದ ಮೂಗಿನಿಂದ ರಕ್ತ ಒಸರುವುದು ನಿಲ್ಲುತ್ತದೆ. ಮೂಗಿನಲ್ಲಿ ರಕ್ತಸ್ರಾವದ ತೊಂದರೆ-ಒಂದಿಷ್ಟು ಟಿಪ್ಸ್ ನೆನಪಿಟ್ಟುಕೊಳ್ಳಿ

  ಶೀತಕ್ಕೆ

  ಶೀತಕ್ಕೆ

  ಒಂದು ಕಪ್ ಉಗುರುಬೆಚ್ಚನೆಯ ನೀರಿಗೆ ಎರಡು ಚಿಕ್ಕಚಮಚ ಲಿಂಬೆರಸ ಸೇರಿಸಿ ಇದಕ್ಕೆ ಮೂರು ಹನಿ ಜೇನು ಸೇರಿಸಿ ಕಲಕಿ ದಿನಕ್ಕೆರಡು ಬಾರಿ ಸೇವಿಸಿ. ಜ್ವರ-ಶೀತಕ್ಕೆ ಮನೆಯಂಗಳದ ತುಳಸಿ ಎಲೆಗಳೇ ಸಾಕು!

  ಗಂಟಲಬೇನೆಗೆ

  ಗಂಟಲಬೇನೆಗೆ

  ಒಂದು ಚಿಟಿಕೆ ಕಾಳುಮೆಣಸು, ಮೂರು ಚಿಕ್ಕಚಮಚ ಲಿಂಬೆರಸ ಮತ್ತು ಒಂದು ಚಿಟಿಕೆ ಉಪ್ಪು ಇಷ್ಟನ್ನೂ ಒಂದು ಖಾಲಿಲೋಟದಲ್ಲಿ ಮೊದಲು ಚೆನ್ನಾಗಿ ಬೆರೆಯುವಂತೆ ಮಾಡಿ ಬಳಿಕ ಕೊಂಚವೇ ನೀರು ಸೇರಿಸಿ ಈ ನೀರಿನಿಂದ ಮುಖ ಮೇಲೆತ್ತಿ ಎಷ್ಟು ಹೊತ್ತು ಸಾಧ್ಯವೋ ಅಷ್ಟು ಹೊತ್ತು ಗಳಗಳಿಸಿ ಈ ನೀರನ್ನು ಉಗಿಯಬೇಕು.ಗಂಟಲು ನೋವಿನ ಕಿರಿಕಿರಿಗೆ, ಇಲ್ಲಿದೆ ಗಿಡಮೂಲಿಕೆ ಚಹಾ

  ತೂಕ ಇಳಿಸಲು

  ತೂಕ ಇಳಿಸಲು

  ತೂಕ ಇಳಿಸುವ ಇಚ್ಛೆಯುಳ್ಳವರು ಈ ವಿಧಾನವನ್ನು ಅನುಸರಿಸಬೇಕು: ಅರ್ಧ ಚಮಚ ಕಾಳುಮೆಣಸಿನ ಪುಡಿ, ಒಂದು ದೊಡ್ಡಚಮಚ ಜೇನು ಮತ್ತು ಎರಡು ದೊಡ್ಡಚಮಚ ಲಿಂಬೆರಸ ಇಷ್ಟನ್ನೂ ಒಂದು ಲೋಟ ನೀರಿನಲ್ಲಿ ಬೆರೆಸಿ ಪ್ರತಿದಿನ ಬೆಳಿಗ್ಗೆ ಪ್ರಥಮ ಆಹಾರವಾಗಿ ಸೇವಿಸಬೇಕು. ಇದರಿಂದ ಕೊಬ್ಬು ಕರಗಿ ತೂಕ ಇಳಿಯಲು ಸಾಧ್ಯವಾಗುತ್ತದೆ. ದೇಹದ ತೂಕ ಇಳಿಸಲು ದಿನಕ್ಕೆರಡು ಚಮಚ ತುಪ್ಪ ಸಾಕು!

  ಅಸ್ತಮಾ ಆಘಾತ

  ಅಸ್ತಮಾ ಆಘಾತ

  ಒಂದು ವೇಳೆ ಅಸ್ತವಾ ಆಘಾತಕ್ಕೆ ಒಳಗಾಗಿದ್ದರೆ ಈ ವಿಧಾನ ಅನುಸರಿಸಿ: ಕೆಲವು ತುಳಸಿ ಎಲೆಗಳನ್ನು ಒಂದು ಚಿಕ್ಕಚಮಚ ಕಾಳುಮೆಣಸು, ಮೂರರಿಂದ ನಾಲ್ಕು ಲವಂಗದೊಡನೆ ಒಂದು ಚಿಕ್ಕ ಪಾತ್ರೆಯಲ್ಲಿ ನೀರಿನೊಂದಿಗೆ ಚಿಕ್ಕ ಉರಿಯಲ್ಲಿ ಕುದಿಸಿ. ಸುಮಾರು ಹದಿನೈದು ನಿಮಿಷ ಕುದಿದ ಬಳಿಕ ಉರಿ ಆರಿಸಿ ತಣಿಯಲು ಬಿಡಿ. ಬಳಿಕ ಇದಕ್ಕೆ ಕೆಲವು ಹನಿ ಜೇನು ಸೇರಿಸಿ. ಈ ಮಿಶ್ರಣದ ಮೂರು ಚಮಚದಷ್ಟನ್ನು ದಿನಕ್ಕೊಮ್ಮೆ ಕುಡಿಯಿರಿ. ಮಧುಮೇಹ, ಅಸ್ತಮಾ ನಿಯಂತ್ರಣಕ್ಕೆ ಬೆಂಡೆಕಾಯಿ ರಾಮಬಾಣ

  ಹಲ್ಲು ನೋವಿಗೆ

  ಹಲ್ಲು ನೋವಿಗೆ

  ಕೆಲವು ಹನಿ ಲವಂಗದ ಎಣ್ಣೆ ಮತ್ತು ಒಂದು ಚಿಟಿಕೆಯಷ್ಟು ಕಾಳುಮೆಣಸಿನ ಪುಡಿಯನ್ನು ಮಿಶ್ರಣ ಮಾಡಿ ಇದನ್ನು ನೋವಿರುವ ಹಲ್ಲಿನ ಭಾಗಕ್ಕೆ ಹಚ್ಚಬೇಕು. ಇದರಿಂದ ಹಲ್ಲುನೋವು ತಕ್ಷಣ ಕಡಿಮೆಯಾಗುತ್ತದೆ. ಚಿಟಿಕೆ ಹೊಡೆಯುವುದರೊಳಗೆ, ಹಲ್ಲು ನೋವು ಮಂಗಮಾಯ!

  ವಾಕರಿಕೆ

  ವಾಕರಿಕೆ

  ಒಂದು ಚಿಕ್ಕಚಮಚ ಕಾಳುಮೆಣಸಿನ ಪುಡಿ ಮತ್ತು ಒಂದು ಲಿಂಬೆಯ ರಸವನ್ನು ಒಂದು ಕಪ್ ನಲ್ಲಿ ಬೆರೆಸಿ ಇದಕ್ಕೆ ಕೊಂಚ ಉಗುರುಬೆಚ್ಚನೆಯ ನೀರನ್ನು ಬೆರೆಸಿ ಕುಡಿಯುವುದರಿಂದ ವಾಕರಿಕೆ ಕಡಿಮೆಯಾಗುತ್ತದೆ. ವಾಕರಿಕೆಯನ್ನು ಗುಣಪಡಿಸಲು ನೈಸರ್ಗಿಕ ಪರಿಹಾರ

   

  English summary

  Remedies For Nosebleed, Asthma, Sore Throat, Nausea & Cold

  You have a salt and a pepper jar on your dining table, but you use it only to add some taste to your dishes. But they can be used in many home remedies. In fact, pepper, lemon, honey and salt are useful in many home remedies. From losing weight to helping you cope up an asthma attack, these ingredients can do a lot. Yes, they can even offer relief from sore throat, cold, nausea and tooth pain. Here are some remedies using some or all of the above ingredients.
  We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Boldsky sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Boldsky website. However, you can change your cookie settings at any time. Learn more