Latest Updates
-
ಡೇಟಿಂಗ್ ಆ್ಯಪ್ ಹನಿಟ್ರ್ಯಾಪ್: ಪಬ್ಗಳಲ್ಲಿ ನಡೆಯುವ ಈ ದಂಧೆಯಿಂದ ಪಾರಾಗುವುದು ಹೇಗೆ? -
IMD ಮಳೆ ಅಲರ್ಟ್: ಬೆಂಗಳೂರು, ಚೆನ್ನೈ, ಕೇರಳದಲ್ಲಿ ಭಾರೀ ಮಳೆ; ಮನೆಯನ್ನು ಸುರಕ್ಷಿತವಾಗಿರಿಸಲು ಈ ಟಿಪ್ಸ್ ಪಾಲಿಸಿ! -
ಇಂದಿನಿಂದ ಎನರ್ಜಿ ಡ್ರಿಂಕ್ಸ್ ನಿಯಮ ಬದಲಾವಣೆ: ಕ್ಯಾನ್ ಖರೀದಿಸುವ ಮುನ್ನ ಈ ಎಚ್ಚರಿಕೆ ಮರೆಯದಿರಿ! -
ಅಪಾರ್ಟ್ಮೆಂಟ್ ಗೇಟ್ನಲ್ಲಿ ಟ್ರಾಫಿಕ್ ಜಾಮ್? ಈ ಸರಳ ಟಿಪ್ಸ್ ಪಾಲಿಸಿದರೆ 5 ನಿಮಿಷದಲ್ಲಿ ಹೊರಬರಬಹುದು! -
ಬೆಳಗಿನ ವಾಕಿಂಗ್ ಹೋಗ್ತಿದ್ದೀರಾ? ಡೆಂಗ್ಯೂ ಸೊಳ್ಳೆಗಳಿಂದ ಪಾರಾಗಲು ಈ ಸರಳ ಟಿಪ್ಸ್ ಮಿಸ್ ಮಾಡ್ಬೇಡಿ! -
ಸೆಪ್ಟೆಂಬರ್ 28ರ ಪ್ರೇಮ ರಾಶಿಫಲ: ನಿಮ್ಮ ಸಂಬಂಧದಲ್ಲಿ ಹೊಸ ಉತ್ಸಾಹ ತುಂಬಲು ಇಂದಿನ ರಾಶಿವಾರು ಸಲಹೆಗಳು ಮತ್ತು ಶುಭ ಸಮಯ -
ಅಕ್ಟೋಬರ್ 1 ರಿಂದ ಎಸಿ, ಟಿವಿ ಬೆಲೆ ಏರಿಕೆ: ಹಬ್ಬದ ಆಫರ್ ಬಳಸಿಕೊಂಡು ಹಣ ಉಳಿಸುವುದು ಹೇಗೆ? -
ವಿಶ್ವ ಹೃದಯ ದಿನ: ನಿಮ್ಮ ಊಟದ ತಟ್ಟೆಯಲ್ಲಿ ಈ ಸಣ್ಣ ಬದಲಾವಣೆ ಮಾಡಿದರೆ ಹೃದಯ ಸದಾ ಆರೋಗ್ಯ! -
ಬ್ಯಾಂಕ್ ಮುಷ್ಕರ ವಾಪಸ್: ಇಂದಿನಿಂದ ಬ್ಯಾಂಕ್ಗಳು ಎಂದಿನಂತೆ ಓಪನ್, ಗ್ರಾಹಕರಿಗೆ ಸಿಹಿ ಸುದ್ದಿ; 5 ದಿನಗಳ ಕೆಲಸದ ಬಗ್ಗೆ ಅಪ್ಡೇಟ್ -
ವಾಕಿಂಗ್ ಹೋಗುವಾಗ ಬೀದಿ ನಾಯಿಗಳ ಕಾಟವೇ? ಸುರಕ್ಷಿತವಾಗಿರಲು ಈ ಸರಳ ಟಿಪ್ಸ್ ಪಾಲಿಸಿ
ಹಾಲಿಗೆ ಜೀರಿಗೆ-ಕರಿಮೆಣಸಿನ ಪುಡಿ ಸೇರಿಸಿ ಕುಡಿದು ನೋಡಿ...
ರೋಗ ಬಂದ ಬಳಿಕ ಮಾತ್ರೆ ತೆಗೆದುಕೊಳ್ಳುವ ಬದಲು ರೋಗ ಬರದಂತೆ ನೋಡಿಕೊಳ್ಳುವುದೇ ಜಾಣತನ ಎಂದು ವೈದ್ಯರು ಹಲವಾರು ವರ್ಷಗಳಿಂದ ಹೇಳುತ್ತಾ ಬಂದಿದ್ದರೂ ಹೆಚ್ಚಿನವರು ಇದನ್ನು ಅಲಕ್ಷಿಸುತ್ತಿದ್ದರು. ಆದರೆ ಇಂದಿನ ಜನತೆ ಈ ಬಗ್ಗೆ ಹೆಚ್ಚು ಜಾಗರೂಕರಾಗಿದ್ದು ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸಿಕೊಳ್ಳುವತ್ತ ಹೆಚ್ಚಿನ ಒಲವು ತೋರುತ್ತಿರುವುದು ಹಳ್ಳಿಗಳಿಂದ ನಗರದಲ್ಲಿ ಕಂಡುಬರುತ್ತಿದೆ.

ವಿಶೇಷವಾಗಿ ಇಂದಿನ ದಿನಗಳಲ್ಲಿ ವೈದ್ಯಕೀಯ ಚಿಕಿತ್ಸಾ ವೆಚ್ಚ ಮನೆ ಕಟ್ಟುವಷ್ಟೇ ಹೆಚ್ಚು ದುಬಾರಿಯಾಗುತ್ತಾ ಹೋಗುತ್ತಿರುವುದನ್ನು ಕಂಡು ಈ ಕ್ರಮ ಅನಿವಾರ್ಯವೂ ಆಗಿದೆ. ರೋಗ ನಿರೋಧಕ ಶಕ್ತಿ ಹೆಚ್ಚಿಸಿಕೊಳ್ಳಲು ಕೆಲವಾರು ಆರೋಗ್ಯಕರ ಪೇಯಗಳಿವೆ, ಇವನ್ನು ನಿತ್ಯವೂ ಸೇವಿಸುವ ಮೂಲಕ ರೋಗ ನಿರೋಧಕ ಶಕ್ತಿ ಹೆಚ್ಚುತ್ತದೆ ಹಾಗೂ ಇದರಿಂದ ಹಲವು ರೋಗಗಳು ಆವರಿಸುವ ಸಾಧ್ಯತೆ ಅಪಾರವಾಗಿ ಕಡಿಮೆಯಾಗುತ್ತದೆ.
ಇಂತಹ ಒಂದು ಪ್ರಬಲ ಪೇಯವನ್ನು ಸುಲಭವಾಗಿ, ಮನೆಯಲ್ಲಿಯೇ ತಯಾರಿಸಿಕೊಳ್ಳುವ ವಿಧಾನವನ್ನು ಕೆಳಗೆ ನೀಡಲಾಗಿದೆ. ಇದಕ್ಕೆ ಹೆಚ್ಚು ಪರಿಕರಗಳೇನೂ ಅಗತ್ಯವಿಲ್ಲ. ಕೊಂಚ ಹಾಲು, ಜೀರಿಗೆ ಮತ್ತು ಕಾಳುಮೆಣಸಿನ ಪುಡಿ ಇದ್ದರೆ ಸಾಕು. ಈ ಆರೋಗ್ಯಕರ ಪೇಯ ತಯಾರಿಸುವ ವಿಧಾನ: ರೈತರ ಕಪ್ಪು ಬಂಗಾರ, ಕರಿಮೆಣಸು ಕಾಳಿನ ಪವರ್...
ಅಗತ್ಯವಿರುವ ಸಾಧನಗಳು:
*ಹಾಲು - 1 ಕಪ್
*ಜೀರಿಗೆಪುಡಿ - 1 ಚಿಕ್ಕ ಚಮಚ
*ಕಾಳುಮೆಣಸಿನ ಪುಡಿ - ½ ಚಿಕ್ಕ ಚಮಚ (ಇವೆರಡರ ಕಾಳುಗಳನ್ನು ಮಿಕ್ಸಿಯಲ್ಲಿ ಪುಡಿಮಾಡಿಕೊಂಡರೆ ಇನ್ನೂ ಉತ್ತಮ)
ಮನೆಯಲ್ಲಿಯೇ ತಯಾರಿಸಬಹುದಾದ ಈ ಪೇಯದಲ್ಲಿ ಹಲವು ವಿಟಮಿನ್ನುಗಳು ಮತ್ತು ಖನಿಜಗಳಿದ್ದು ನಮ್ಮ ದೇಹದ ಪ್ರತಿ ಜೀವಕೋಶಕ್ಕೂ ಅಗತ್ಯವಾದ ಪೋಷಕಾಂಶಗಳನ್ನು ಒದಗಿಸುತ್ತದೆ.
ರೋಗ ನಿರೋಧಕ ಶಕ್ತಿ ಹೆಚ್ಚುವ ಮೂಲಕ ದೇಹವನ್ನು ಪ್ರವೇಶಿಸುವ ವಿವಿಧ ರೋಗಾಣುಗಳನ್ನು ಕೊಂದು ದೇಹವನ್ನು ರಕ್ಷಿಸುತ್ತದೆ. ಈ ಪೇಯದ ಸೇವನೆಯಿಂದ ಸಾಮಾನ್ಯ ತೊಂದರೆಗಳಾದ ಕೆಮ್ಮು, ಶೀತ, ವೈರಲ್ ಜ್ವರ, ಅಜೀರ್ಣ ಮೊದಲಾದವುಗಳು ಸುಲಭವಾಗಿ ಗುಣವಾಗುತ್ತವೆ. ಜೀರಿಗೆ: ಸೌಂದರ್ಯದ ಸರ್ವ ಸಮಸ್ಯೆಗೆ ಒಂದೇ ಪರಿಹಾರ
ತಯಾರಿಕಾ ವಿಧಾನ:
*ಒಂದು ಕಪ್ ಹಾಲನ್ನು ಒಂದು ಚಿಕ್ಕ ಪಾತ್ರೆಯಲ್ಲಿ ಕುದಿಸಿ
*ಈಗ ಎರಡೂ ಪುಡಿಗಳನ್ನು ಹಾಲಿಗೆ ಬೆರೆಸಿ ಚೆನ್ನಾಗಿ ಕಲಕಿ ಮಿಶ್ರಣ ಮಾಡಿ.
*ಈ ಹಾಲನ್ನು ಪ್ರತಿ ರಾತ್ರಿ ಮಲಗುವ ಮುನ್ನ ದಿನದ ಅಂತಿಮ ಆಹಾರವಾಗಿ ಸೇವಿಸಿ ಕೊಂಚವೇ ನಡೆದಾಡಿ ಬಳಿಕ ಮಲಗಿ.
Disclaimer: ಈ ಲೇಖನದಲ್ಲಿ ಒದಗಿಸಲಾದ ಮಾಹಿತಿಯು ಸಾಮಾನ್ಯ ಮಾಹಿತಿ ಮತ್ತು ಶೈಕ್ಷಣಿಕ ಉದ್ದೇಶಗಳಿಗಾಗಿ ಮಾತ್ರವಾಗಿದೆ. ವೃತ್ತಿಪರ ವೈದ್ಯಕೀಯ ಸಲಹೆ, ರೋಗನಿರ್ಣಯ ಅಥವಾ ಚಿಕಿತ್ಸೆಗೆ ಪರ್ಯಾಯವಾಗಿ ಇದನ್ನು ದೃಢೀಕರಿಸಿಲ್ಲ. ವೈದ್ಯಕೀಯ ಸ್ಥಿತಿಯ ಕುರಿತು ನೀವು ಹೊಂದಿರುವ ಯಾವುದೇ ಪ್ರಶ್ನೆಗಳಿಗೆ ಯಾವಾಗಲೂ ನಿಮ್ಮ ವೈದ್ಯರು ಅಥವಾ ಅರ್ಹ ಆರೋಗ್ಯ ಸಿಬ್ಬಂದಿಯ ಸಲಹೆಯನ್ನು ಪಡೆಯಿರಿ.



Click it and Unblock the Notifications




