For Quick Alerts
ALLOW NOTIFICATIONS  
For Daily Alerts

ಅಡುಗೆಮನೆಯ ಡಬ್ಬದಲ್ಲಿರುವ ಕರಿಮೆಣಸು, ತುಂಬಾನೇ ಪವರ್‌ಫುಲ್!

By Arshad
|

ಕರಿಮೆಣಸು ಅಥವಾ ಕಾಳುಮೆಣಸಿಗೆ ಖಾರ ನೀಡುವ ಪೋಷಕಾಂಶವೇ ಪೈಪರಿನ್ ಅಥವಾ ಪೈಪರೈನ್ (Piperine). ಕರಿಮೆಣಸನ್ನು ಔಷಧಿಗಿಂತಲೂ ರುಚಿ ಹೆಚ್ಚಿಸುವ ಸಾಂಬಾರ ಪದಾರ್ಥವಾಗಿಯೇ ಹೆಚ್ಚು ಸೇವಿಸಲಾಗುತ್ತದೆ. ಆದರೆ ಇದರ ನಿಜವಾದ ಶಕ್ತಿ ಔಷಧಿರೂಪದಲ್ಲಿಯೇ ಇದೆ. ಇಂದಿನ ಲೇಖನದಲ್ಲಿ ಇದು ಯಾವ ರೀತಿಯಾಗಿ ಆರೋಗ್ಯವನ್ನು ಕಾಪಾಡುತ್ತದೆ ಮತ್ತು ವೃದ್ಧಿಸುತ್ತದೆ ಎಂಬುದನ್ನು ನೋಡೋಣ. 9 ಭಯಂಕರ ಕಾಯಿಲೆಗೆ ಮನೆಮದ್ದು ಈ ಕರಿಮೆಣಸು!

pepper

ಈ ಪೋಷಕಾಂಶದ ನಿಜವಾದ ಸಾಮರ್ಥ್ಯವಿರುವುದು ಕೊಬ್ಬು ಕರಗಿಸುವಿಕೆಯಲ್ಲಿ. ಅಂದರೆ ಈ ಪೋಷಕಾಂಶವನ್ನು ಅರಗಿಸಿಕೊಳ್ಳಲು ಶರೀರಕ್ಕೆ ಹೆಚ್ಚು ಕೊಬ್ಬನ್ನು ಬಳಸಬೇಕಾಗಿ ಬರುತ್ತದೆ. ಇದು ತೂಕ ಕಳೆದುಕೊಳ್ಳುವವರಿಗೆ ಒಂದು ವರದಾನವಾಗಿದೆ. ಅಲ್ಲದೇ ಈ ಕಾರ್ಯದಲ್ಲಿ ದೇಹದ ತಾಪಮಾನವೂ ಏರುತ್ತದೆ. ಇದರಿಂದ ದೇಹದ ಪ್ರತಿ ಜೀವಕೋಶದ ಶಕ್ತಿ ಹೆಚ್ಚುತ್ತದೆ ಹಾಗೂ ಜೀವರಾಸಾಯನಿಕ ಕ್ರಿಯೆಗಳೂ ಉತ್ತಮಗೊಳ್ಳುತ್ತವೆ. ಜ್ವರ ಶೀತಕ್ಕೆ ಸಿದ್ಧೌಷಧ-ಬೆಳ್ಳುಳ್ಳಿ ಕರಿಮೆಣಸು ರಸಂ

ಈ ಪೋಷಕಾಂಶದ ಇನ್ನೊಂದು ಗುಣವೆಂದರೆ ಜೀರ್ಣಶಕ್ತಿಯನ್ನು ಉತ್ತಮಗೊಳಿಸುವುದು. ಅಂದರೆ ಇತರ ಆಹಾರಗಳ ಮೂಲಕ ಪಡೆದ ಪೋಷಕಾಂಶಗಳನ್ನು ಹೀರಿಕೊಳ್ಳಲು ನೆರವಾಗುತ್ತದೆ. ವಿಶೇಷವಾಗಿ ಬೀಟಾ ಕ್ಯಾರೋಟೀನ್, ವಿಟಮಿನ್ ಬಿ6, ಅಮೈನೋ ಆಮ್ಲಗಳು, ಸೆಲೆನಿಯಂ, ಗ್ಲುಕೋಸ್ ಹಾಗೂ ಕುರ್ಕುಮಿನ್ ಎಂಬ ಪೋಷಕಾಂಶಗಳು ಪೈಪಿರೈನ್ ಪೋಷಕಾಂಶದ ಆಶ್ರಯದಲ್ಲಿ ಹೆಚ್ಚು ಫಲಪ್ರದವಾಗುತ್ತವೆ.

ಅಷ್ಟೇ ಅಲ್ಲ, ಇದು ಉರಿಯೂತವನ್ನು ಕಡಿಮೆಗೊಳಿಸಲೂ ಉತ್ತಮವಾಗಿದೆ. ಉರಿಯೂತದ ಮೂಲಕ ಎದುರಾಗುವ ಸಂಧಿವಾತ, ರ್‍ಹೂಮಾಟಾಯ್ಡ್ ಆರ್ಥೈಟಿಸ್ (rheumatoid arthritis)ಮೊದಲಾದ ತೊಂದರೆಗಳು ಕಡಿಮೆಯಾಗಲು ನೆರವಾಗುತ್ತವೆ.

ಇದರ ಉತ್ತಮಗುಣಗಳಲ್ಲೇ ಉತ್ತಮವಾದುದು ಎಂದರೆ ಇದರ ಕ್ಯಾನ್ಸರ್ ನಿರೋಧಕ ಗುಣ. ಹಲವು ಸಂಶೋಧನೆಗಳ ಮೂಲಕ ಹಲವು ರೀತಿಯ ಕ್ಯಾನ್ಸರ್ ಬರುವುದನ್ನು ಈ ಪೋಷಕಾಂಶದ ಮೂಲಕ ತಡೆಗಟ್ಟಬಹುದು. ಇಲಿಗಳ ಮೇಲೆ ನಡೆಸಿದ ಸಂಶೋಧನೆಯಲ್ಲಿ ಕ್ಯಾನ್ಸರ್ ಬರದಿರಲು ಈ ಪೋಷಕಾಂಶ ಮಹತ್ತರ ಪಾತ್ರ ವಹಿಸಿರುವುದು ಖಚಿತವಾಗಿದೆ. ಇಲಿಯ ಶ್ವಾಸಕೋಶದ ಕ್ಯಾನ್ಸರ್ ಪೀಡಿತ ಅಂಗಾಂಶದ ಬೆಳವಣಿಗೆಯನ್ನು ಈ ಪೋಷಕಾಂಶ ತಡೆಗಟ್ಟಿರುವುದು ಕಂಡುಬಂದಿದೆ. ಹಾಲಿಗೆ ಜೀರಿಗೆ-ಕರಿಮೆಣಸಿನ ಪುಡಿ ಸೇರಿಸಿ ಕುಡಿದು ನೋಡಿ...

ಈ ಖಾರವಾದ ಪೋಷಕಾಂಶ ನಾಲಿಗೆಗೆ ಚುರುಕುಮುಟ್ಟಿಸಿದರೂ ಮೆದುಳಿಗೆ ಮಾತ್ರ ಆರಾಮದಾಯಕವಾಗಿದೆ. ಏಕೆಂದರೆ ಮೆದುಳಿನಲ್ಲಿ ಮುದನೀಡುವ ಸೆರೋಟೋನಿನ್ ಎಂಬ ರಸದೂತದ ಉತ್ಪತ್ತಿ ಹೆಚ್ಚಿಸಲು ನೆರವಾಗುವ ಮೂಲಕ ಮನೋಭಾವ ಉತ್ತಮಗೊಳ್ಳಲೂ ನೆರವಾಗುತ್ತದೆ. ಅಲ್ಲದೇ ಈ ರಸದೂತ ನೋವನ್ನು ಮರೆಸುವ ಗುಣವನ್ನೂ ಹೊಂದಿದೆ.

ಆದರೆ ಈ ಪೋಷಕಾಂಶದ ಪ್ರಮಾಣಕ್ಕೆ ಒಂದು ಮಿತಿ ಇದೆ. ಏಕೆಂದರೆ ಇದೊಂದು ಅಲ್ಕಲಾಯ್ಡ್ ಅಂದರೆ ಜೀವರಾಸಾಯನಿಕ ಕ್ರಿಯೆಯನ್ನೇ ಏರುಪೇರುಗೊಳಿಸುವ ಕ್ಷಮತೆ ಇರುವ ಔಷಧಿಯಾಗಿದೆ. ಆದ್ದರಿಂದ ಇದರ ಪ್ರಮಾಣ ಹೆಚ್ಚಾದರೆ ಆರೋಗ್ಯದ ಮೇಲೆ ಮಾರಕ ಪರಿಣಾಮ ಬೀರಬಹುದು. ಆದ್ದರಿಂದ ಚಿಕ್ಕ ಪ್ರಮಾಣದಲ್ಲಿ ಸೇವಿಸಿದಾಗ ಮಾತ್ರ ಇದು ಆರೋಗ್ಯಕರವಾಗಿದೆ.

ಇದು ರಸದೂತಗಳ ಮೇಲೆಯೂ ಪ್ರಭಾವ ಬೀರುವ ಕಾರಣ ಗರ್ಭಿಣಿಯರು, ಬಾಣಂತಿಯರು, ರೋಗಿಗಳು ಇದರ ಸೇವನೆಗೂ ಮುನ್ನ ತಮ್ಮ ವೈದ್ಯರ ಸಲಹೆ ಪಡೆದೇ ಮುಂದುವರೆಯಬೇಕು. ಈ ಪೋಷಕಾಂಶ ಕಾಳುಮೆಣಸು, ಖಾರವಾದ ಗಿಡ್ಡ ಮೆಣಸು (peppercorn) ಮತ್ತು ಪೆಪ್ಪರ್ ಬೆರ್ರಿ ಹಣ್ಣುಗಳಿಂದ ದೊರಕುತ್ತದೆ. ಈ ಪೋಷಕಾಂಶವನ್ನು ಹಾಗೇ ಸೇವಿಸುವ ಬದಲು ಅಮೈನೋ ಆಮ್ಲ, ಗಿಡಮೂಲಿಕೆಗಳ ರಸಗಳ ಜೊತೆಗೆ ಸೇವಿಸುವುದೇ ಉತ್ತಮ. ಇದರಿಂದ ಜಠರದಲ್ಲಿ ಜೀರ್ಣಶಕ್ತಿ ಉತ್ತಮಗೊಳ್ಳುತ್ತದೆ.

English summary

What Happens When You Consume Piperine?

Medical advantages of piperine are less popular when compared to its culinary use, but you will find various wellness advantages of piperine which are worth mentioning. Here we shall discuss the health advantages of piperine that can be helpful for you. Piperine aids in weight loss.
X
Desktop Bottom Promotion