For Quick Alerts
ALLOW NOTIFICATIONS  
For Daily Alerts

ತುಂಬಾ ಹೊತ್ತು ನಿದ್ದೆ ಮಾಡುವವರಿಗಾಗಿ ಈ ಲೇಖನ

|

ನಿದ್ದೆ ಯಾರಿಗೆ ಇಷ್ಟಾ ಇಲ್ಲ ಹೇಳಿ? ಇಡೀ ದಿನ ದುಡಿದ ದೇಹವನ್ನು, ದಣಿದ ಮನಸ್ಸನ್ನು ಬಾಚಿ ತಬ್ಬಿ ಸಂತೈಸಿ ಮತ್ತೆ ದುಡಿಯುವ ಚೈತನ್ಯ ತುಂಬುತ್ತಾಳೆ ಈ ನಿದ್ರಾ ದೇವಿ. ಹತ್ತು ನಿಮಿಷಗಳ ತೂಗಡಿಕೆ ಹತ್ತು ತಾಸುಗಳಿಗೆ ಬೇಕಾಗುವ ಚೈತನ್ಯ ನೀಡಬಲ್ಲದು. ಭೂಮಿಯ ಮೇಲಿನ ಪ್ರತಿಯೊಂದು ಜೀವಿಗೂ ನಿದ್ದೆಬೇಕು. ನಿದ್ದೆಗೆಡುವುದರಿಂದ ಅನೇಕ ದೈಹಿಕ ಮತ್ತು ಮಾನಸಿಕ ತೊಂದರೆಗಳಾಗುವುವು ಎಂದು ನಮಗೆಲ್ಲಾ ತಿಳಿದಿದೆ. ಒಬ್ಬ ಮನುಷ್ಯ ನಿದ್ದೆ ಬರದ ಸ್ಥಿತಿಯನ್ನು ತಲುಪಿದರೆ ಅದನ್ನು ರೋಗವೆಂದು ಪರಿಗಣಿಸಿ ಚಿಕಿತ್ಸೆ ನೀಡುವರು.

ನಿದ್ದೆ ಮಾಡುವುದು ಒಳ್ಳೆಯದೆಂದು ಅವಶ್ಯಕತೆಗಿಂತ ಹೆಚ್ಚು ನಿದ್ದೆ ಮಾಡಿದರೆ? ಹೆಚ್ಚಾದರೆ ಅಮೃತವೂ ವಿಷ ಎಂಬಂತೆ ಅತಿಯಾದ ನಿದ್ದೆ, ಹಲವಾರು ರೋಗಗಳಿಗೆ ನಾಂದಿ ಹಾಡುತ್ತದೆ.

ನಾವು ಆರೋಗ್ಯವಾಗಿರಬೇಕಾದರೆ ಎಲ್ಲವೂ ಇತಿ-ಮಿತಿಯಲ್ಲಿರಬೇಕು. "ನಿದ್ದೆಯೂ ಕೂಡ". ಅದಕ್ಕೆ ಅತಿಶಯ ನಿದ್ದೆಯಿಂದ ತಪ್ಪಿಸಿಕೊಳ್ಳಲು ಇಲ್ಲಿ ಕೆಲವು ಉಪಾಯಗಳನ್ನು ಹೇಳಿದ್ದೇವೆ. ಹಾಗೇ ಅತೀ ನಿದ್ದೆಯಿಂದ ಉಂಟಾಗುವ ತೊಂದರೆಗಳ ಬಗೆಗಿನ ವಿವರಗಳೂ ಇಲ್ಲಿವೆ. ಇವುಗಳ ಲಾಭ ಪಡೆದು ಹಿತ-ಮಿತವಾದ ನಿದ್ದೆಯಿಂದ ಆರೋಗ್ಯ ವೃದ್ಧಿಸಿಕೊಂಡರೆ ನಮ್ಮ ಪರಿಶ್ರಮ ಸಾರ್ಥಕ.

ಅತೀ ನಿದ್ದೆಯಿಂದಾಗುವ ತೊಂದರೆಗಳು--

ಮಧುಮೇಹ

ಮಧುಮೇಹ

ಹೆಸರು ಕೇಳಿದರೇ ಸಿಹಿ ತಿನಿಸು ನೆನಪಿಸುವ ರೋಗ. ರಾತ್ರಿಯ ಅಸಮರ್ಪಕ ನಿದ್ದೆ ಹಾಗೂ ಹಗಲಿನ ಅತಿಶಯ ನಿದ್ದೆಗಳು ಈ ಮಧುಮೇಹ ರೋಗಕ್ಕೆ ಸ್ವಾಗತ ನೀಡುವುದೆಂದು ಅಧ್ಯಯನಗಳು ಸಾಬೀತು ಪಡಿಸಿವೆ.

ಬೊಜ್ಜು

ಬೊಜ್ಜು

ಅತೀ ಹೆಚ್ಚು ನಿದ್ದೆ ಅಥವಾ ಅತೀ ಕಡಿಮೆ ನಿದ್ದೆಯ ಪರಿಣಾಮ ನಿಮ್ಮ ತೂಕದ ಹೆಚ್ಚಾಗುವುದು. ದಿನಕ್ಕೆ ಏಳೆಂಟು ಗಂಟೆ ಮಲಗುವವರಿಗಿಂತ ಒಂಬತ್ತು ಹತ್ತು ಗಂಟೆಗಳ ಕಾಲ ಮಲಗುವವರಿಗೆ ಬೊಜ್ಜು ಬರುವ ಸಂಭವ 21% ರಷ್ಟು ಹೆಚ್ಚಿರುತ್ತದೆ ಎಂದು ಅಧ್ಯಯನಗಳು ತಿಳಿಸಿವೆ. ಬಳ್ಳಿಯಂತೆ ಬಳಕಬೇಕಾದರೆ ನಿದ್ದೆಗೆ ನಿರ್ದಿಷ್ಟ ಅವಧಿ ಕೊಡಿ.

ತಲೆನೋವು -

ತಲೆನೋವು -

ವಾರಾಂತ್ಯದಲ್ಲಿ ಅಥವಾ ರಜಾ ದಿನಗಳಲ್ಲಿ ಹೆಚ್ಚು ಸಮಯ ನಿದ್ದೆ ಮಾಡುವುದರಿಂದ ಕೆಲವರಿಗೆ ತಲೆ ನೋವು ಕಾಣಬಹುದು. ಮೆದುಳಿನ ಕೆಲವು ನರಗಳ ಮೇಲೆ ಅತಿಯಾದ ನಿದ್ದೆಯಿಂದ ಉಂಟಾಗುವ ಪರಿಣಾಮದಿಂದ ಈ ಥರ ತಲೆನೋವು ಬರುವುದೆಂದು ಸಂಶೋಧಕರು ಅಭಿಪ್ರಾಯ ಪಟ್ಟಿದ್ದಾರೆ.

ಬೆನ್ನುನೋವು

ಬೆನ್ನುನೋವು

ಅತೀಹೆಚ್ಚಿನ ನಿದ್ದೆ ಬೆನ್ನು ನೋವಿಗೆ ಒಂದು ಪ್ರಮುಖ ಕಾರಣವಾಗಿರುವುದರಿಂದ ವೈದ್ಯರು ಅವಶ್ಯಕ್ಕಿಂತ ಹೆಚ್ಚು ನಿದ್ದೆ ಮಾಡದಿರುವಂತೆ ಶಿಫಾರಸ್ಸು ಮಾಡಿತ್ತಿದ್ದಾರೆ.

ಖಿನ್ನತೆ

ಖಿನ್ನತೆ

ಸಾಮಾನ್ಯವಾಗಿ ನಿದ್ರಾಹೀನತೆಗೆ ಒಳಪಟ್ಟವರು ಅತೀಯಾಗಿ ನಿದ್ರೆ ಮಾಡುವವರಿಗಿಂತ ಹೆಚ್ಚು ಖಿನ್ನತೆ ಅನುಭವಿಸುತ್ತಾರೆ. ಆದಾಗ್ಯೂ, ಸುಮಾರು 15% ರಷ್ಟು ಜನರು ಅತಿ ಹೆಚ್ಚು ನಿದ್ರೆ ಮಾಡುವದರಿಂದ ಖಿನ್ನತೆಗೆ ಒಳಗಾಗುವರು. ಅತಿಯಾದ ನಿದ್ದೆಯಿಂದ ಈ ಖಿನ್ನತೆ ಹೆಚ್ಚುವ ಸಾಧ್ಯತೆ ಇದೆ. ಅವಶ್ಯವಿದ್ದಷ್ಟು ನಿದ್ರಿಸುವ ಅಭ್ಯಾಸ ಖಿನ್ನತೆಯನ್ನು ಹೋಗಲಾಡಿಸಿ ಮನಸ್ಸಿಗೆ ಚೈತನ್ಯವನ್ನು ತುಂಬುತ್ತದೆ.

ಹೃದಯ ರೋಗ

ಹೃದಯ ರೋಗ

ಸುಮಾರು 72,000 ಮಹಿಳೆಯರನ್ನು ಒಳಗೊಂಡ "ನರ್ಸಸ್ ಹೆಲ್ತ್ ಸ್ಟಡಿ" ಅಧ್ಯಯನದಿಂದ ಸಾಬೀತಾದ ಅಂಶವೆಂದರೆ, ಪ್ರತಿ ರಾತ್ರಿ 9 - 11 ಗಂಟೆಗಳ ಕಾಲ ಮಲಗುವ ಮಹಿಳೆಯರು, ಎಂಟು ಗಂಟೆಗಳ ಕಾಲ ಮಲಗುವ ಮಹಿಳೆಯರಿಗಿಂತ 38% ರಷ್ಟು ಹೆಚ್ಚು ಹೃದಯ ಕಾಯಿಲೆಯನ್ನು ಹೊಂದಿರುತ್ತಾರೆ.

ಡೆತ್

ಡೆತ್

ದಿನಕ್ಕೆ ಒಂಬತ್ತು ಅಥವಾ ಅದಕ್ಕಿಂತ ಹೆಚ್ಚು ಗಂಟೆಗಳ ಕಾಲ ಮಲಗುವ ಜನರಿಗೆ, ಏಳರಿಂದ ಎಂಟು ಗಂಟೆಗಳ ಕಾಲ ಮಲಗುವವರಿಗಿಂತ ಹೆಚ್ಚು ಅಕಾಲಿಕ ಮರಣದ ಸಾಧ್ಯತೆ ಇದೆ ಎಂದು ಹಲವಾರು ಅಧ್ಯಯನಗಳು ತೋರಿಸಿಕೊಟ್ಟಿವೆ.

ಹಂತ 1:

ಹಂತ 1: " ಏಳಲೇ ಬೇಕೆಂದು" ನಿರ್ಧರಿಸಿ!

ಇಷ್ಟೆಲ್ಲಾ ತೊಂದರೆಗಳನ್ನೊಡ್ಡುವ ಈ ಅತಿಯಾದ ನಿದ್ದೆಯಿಂದ ತಪ್ಪಿಸಿಕೊಳ್ಳಲು ಇಲ್ಲಿವೆ 6 ಕ್ರಮಗಳು:

ಹಂತ 1: " ಏಳಲೇ ಬೇಕೆಂದು" ನಿರ್ಧರಿಸಿ!

ನೀವು ಅತೀಯಾಗಿ ಮಲಗುತ್ತಿದ್ದೀರಿ ಎಂದರೆ ನಿಮ್ಮಲ್ಲಿನ ಒಂದು ಭಾಗ ಅಥವಾ ಅಂಗ ಹಾಸಿಗೆಯ ಮೇಲೇ ಬಿದ್ದುಕೊಂಡಿರಲು ಇಚ್ಛಿಸುತ್ತದೆ ಎಂದರ್ಥ. ಹೆಚ್ಚಿನ ವೇಳೆಗಳಲ್ಲಿ ಅತಿಯಾಗಿ ನಿದ್ರಿಸುವುದರ ಹಿಂದೆ, ವ್ಯವಸ್ಥೆ ಅಥವಾ ನೈಜತೆಯಿಂದ ತಪ್ಪಿಸಿಕೊಳ್ಳುವ ಉದ್ದೇಶವಿರುತ್ತದೆ. ಇಂತಹ ಅತಿಯಾದ ನಿದ್ದೆಯನ್ನು ನಿಲ್ಲಿಸಲು ಬಯಸಿದ್ದರೆ, ಮೊದಲು ನೀವು 'ನಿಮ್ಮ ಜೀವನದಲ್ಲಿ ಎದುರಾಗುವ ರಾಕ್ಷಸರನ್ನು ಎದುರಿಸಲು' ಸಿದ್ಧರಾಗಿ.

ಹಂತ 2: ಅತಿಯಾದ ನಿದ್ರೆಯನ್ನು ನಿಲ್ಲಿಸುವುದಕ್ಕೆ ಪ್ರೇರಿತರಾಗಿ

ಹಂತ 2: ಅತಿಯಾದ ನಿದ್ರೆಯನ್ನು ನಿಲ್ಲಿಸುವುದಕ್ಕೆ ಪ್ರೇರಿತರಾಗಿ

ನಿಮ್ಮನ್ನು ನೀವು ಪ್ರೇರೇಪಿಸಿ ಕೊಳ್ಳಲು ಒಂದಕ್ಕಿಂತ ಹೆಚ್ಚು ಮಾರ್ಗಗಳಿವೆ...... ಆದರೆ ತುಂಬಾ ಸರಳ ಮಾರ್ಗಗಳಲ್ಲಿ ಕೆಲವು ಇಲ್ಲಿವೆ :

1. ಏಕೆ ನೀವು ಅತಿಯಾದ ನಿದ್ದೆಯಿಂದ ವಿಮುಖರಾಗಲು ಬಯಸುತ್ತಿದ್ದೀರಿ ಎಂಬ ಬಗ್ಗೆ ಸ್ಪಷ್ಟವಾಗಿ ತಿಳಿದುಕೊಳ್ಳಿ.

2. ಯಾವುದಾದರೂ ಧನಾತ್ಮಕ ಹೇಳಿಕೆಯನ್ನು ವರ್ತಮಾನಕ್ಕೆ ಹೋಲುವಂತೆ ಬರೆದಿಟ್ಟುಕೊಳ್ಳಿ. (ಉದಾಹರಣೆಗೆ: "ನಾನು ಪ್ರತಿ ದಿನ ಬೆಳಗ್ಗೆ 7 ಗಂಟೆಗೆ ಏಳುತ್ತೇನೆ. ಎದ್ದಾಗ ಅದಮ್ಯ ಶಕ್ತಿ, ಸಂತೋಷ ಮತ್ತು ಅಭಿಮಾನಗಳಿಂದ ತುಂಬಿದ ಹೊಸ ವ್ಯಕ್ತಿಯಾಗಿ ಹೊಸದಿನವನ್ನು ಪ್ರಾರಂಭಿಸುತ್ತೇನೆ ").

3. ಈ ಹೇಳಿಕೆಯನ್ನು ಪ್ರತಿದಿನ ಮಲಗುವ ಮುನ್ನ ತಪ್ಪದೇ ಓದಿ ಮತ್ತು ಪುನಃ ಬರೆಯಿರಿ.

ಹಂತ 3 ಮತ್ತು 4

ಹಂತ 3 ಮತ್ತು 4

ಬದುಕುವದಕ್ಕಾಗಿ ವಿಶ್ರಾಂತಿ ಬೇಕು ಅದಕ್ಕಾಗಿ ಮಾತ್ರ ನೀವು ಮಲಗಬೇಕು. ನಿದ್ದೆಯೇ ಬದುಕಾಗಬಾರದೆಂದು ಮನದಟ್ಟು ಮಾಡಿಕೊಳ್ಳಿ.

ಹಂತ 4: ಒಂದು ನಿಶ್ಚಿತವಾದ ನಿದ್ರಾ ವೇಳಾಪಟ್ಟಿಯನ್ನು ರೂಪಿಸಿಕೊಳ್ಳಿ ಮತ್ತು ಅದಕ್ಕೆ ಬದ್ದರಾಗಿರಿ.

ನೀವು ಪ್ರತಿದಿನ ಒಂದೇ ಸಮಯದಲ್ಲಿ ಮಲಗುವುದು ಮತ್ತು ಏಳುವುದು ಸಾಧ್ಯವಾದರೆ ತುಂಬಾ ಒಳ್ಳೆಯದು. ಅದಾಗದಿದ್ದರೆ ಕನಿಷ್ಠ ಪಕ್ಷ ಅದೇ ಸಮಯಕ್ಕೆ ಏಳುವ ಅಭ್ಯಾಸ ರೂಡಿಸಿಕೊಳ್ಳಿ.

ಹಂತ 5: ನಿಮ್ಮ ನಿದ್ದೆಯ ಗುಣಮಟ್ಟವನ್ನು ಸುಧಾರಿಸಿಕೊಳ್ಳಿ

ಹಂತ 5: ನಿಮ್ಮ ನಿದ್ದೆಯ ಗುಣಮಟ್ಟವನ್ನು ಸುಧಾರಿಸಿಕೊಳ್ಳಿ

ಉನ್ನತ ಗುಣಮಟ್ಟದ ನಿದ್ದೆ ಪಡೆಯಲು ಅನೇಕ ಸರಳ ವಿಧಾನಗಳಿವೆ. ಅವುಗಳನ್ನು ಅಳವಡಿಸಿಕೊಳ್ಳುವದರಿಂದ ಕಡಿಮೆ ಅವಧಿಯ ವರೆಗೆ ಮಲಗಿ ಹೆಚ್ಚು ಚೈತನ್ಯ ಪಡೆಯಬಹುದು....

ನೀವು ಮಾಡಬಹುದಾದ ಕೆಲವು ಸುದಾರಣೆಗಳು:

1) ಸ್ಥಿರವಾದ ನಿದ್ರಾ ವೇಳಾಪಟ್ಟಿಯನ್ನು ಪಾಲಿಸಿ

2) ಮಧ್ಯಾಹ್ನ ಕೆಫೀನ್ ಯುಕ್ತಪದಾರ್ಥಗಳನ್ನು ಸೇವಿಸಬೇಡಿ.

3) ಮಲಗುವ ವೇಳೆ ನಿಕೋಟಿನ್ ಮತ್ತು ಆಲ್ಕೋಹಾಲ್ ಯುಕ್ತ ಪದಾರ್ಥಗಳನ್ನು ಸೇವಿಸಬೇಡಿ.

4) ಪ್ರತಿದಿನ ಕನಿಷ್ಠ 2 ಗಂಟೆಗಳ ಕಾಲ ನಿಮ್ಮ ಕಣ್ಣುಗಳು ಸೂರ್ಯರಶ್ಮಿಗೆ ತೆರೆದುಕೊಂಡಿರುವಂತೆ ನೋಡಿಕೊಳ್ಳಿ.

ಹಂತ 6: ನಿಮ್ಮ ನಿದ್ದೆಯನ್ನು ಹಂತ-ಹಂತವಾಗಿ ಕಡಿತ ಗೊಳಿಸಿ

ಹಂತ 6: ನಿಮ್ಮ ನಿದ್ದೆಯನ್ನು ಹಂತ-ಹಂತವಾಗಿ ಕಡಿತ ಗೊಳಿಸಿ

ಒಂದು ಅಥವಾ ಎರಡು ವಾರಕ್ಕೆ 30-60 ನಿಮಿಷಗಳಷ್ಟು ನಿದ್ದೆಯನ್ನು ಕಡಿಮೆ ಮಾಡಿ. ಇದು ಮೊದಲು ಕಷ್ಟ ಎನಿಸಬಹುದು. ಹೊಸ ವೇಳಾಪಟ್ಟಿಗೆ ಹೊಂದಿಕೊಳ್ಳಲು ದೇಹಕ್ಕೆ ಸುಮಾರು 7-10 ದಿನಗಳು ಬೇಕಾಗಬಹುದು. ಆದರೆ ನೀವು ಪ್ರಯತ್ನವನ್ನು ನಿಲ್ಲಿಸಬೇಡಿ. ಹಾಗೇ ಅತಿಯಾದ ಕಟ್ಟುನಿಟ್ಟೂ ಒಳ್ಳೆಯದಲ್ಲ.

ಪ್ರತಿ ರಾತ್ರಿ 6-8 ಗಂಟೆ ಮಲಗುವ ಗುರಿ ಇಟ್ಟುಕೊಳ್ಳಿ. ಹಾಗು ಅಗತ್ಯವಿದ್ದಾಗ 20-40 ನಿಮಿಷಗಳ ಲಘುವಾಗಿ ನಿದ್ರಿಸಲು ಮರಿಯದಿರಿ.

English summary

Side Effects of Oversleeping

A lack of sleep can cause a lot of problems for a person. But what about the opposite? What happens if you sleep too much? Can it be a problem? In fact, yes it can. Oversleeping can cause certain issues.
X
Desktop Bottom Promotion