For Quick Alerts
ALLOW NOTIFICATIONS  
For Daily Alerts

ಮಲಗಿದ ತಕ್ಷಣ ನಿದ್ದೆ ಬರಬೇಕೇ? ಹಾಗಾದರೆ ಒಮ್ಮೆ ಈ ಲೇಖನ ಓದಿ...

ಅರೆನಿದ್ದೆ ಅಥವಾ ಕಡಿಮೆ ನಿದ್ದೆ ಅಥವಾ ಅತಿ ಹೆಚ್ಚು ನಿದ್ದೆ ಸಹಾ ಆರೋಗ್ಯಕರವಲ್ಲ. ಸೂಕ್ತ ಪ್ರಮಾಣದ ಗಾಢ ನಿದ್ದೆಯೇ ಆರೋಗ್ಯಕರ ನಿದ್ದೆ. ಗಾಢವಾದ ನಿದ್ದೆ ಬೇಕೆಂದರೆ ಮಲಗುವ ಮುನ್ನ ಸೇವಿಸುವ ಕೆಲವು ಆಹಾರಗಳನ್ನು ಸೇವಿಸದಿರುವುದೇ ಉತ್ತಮ...

By Manu
|

ನಮಗೆಲ್ಲರಿಗೂ ಪ್ರತಿದಿನವೂ ಸಾಕಷ್ಟು ನಿದ್ದೆ ಬೇಕು. ಏಕೆಂದರೆ ನಮ್ಮ ಹಲವು ಅನೈಶ್ಚಿಕ ಕಾರ್ಯಗಳೆಲ್ಲಾ ನಿದ್ದೆಯ ಸಮಯದಲ್ಲಿಯೇ ನಡೆಯುತ್ತವೆ. ಅಲ್ಲದೇ ದಿನದ ಚಟುವಟಿಕೆಯಿಂದ ದಣಿದು ಸವೆದ ಜೀವಕೋಶಗಳು ಪುನರುತ್ಪತ್ತಿಗೊಳ್ಳಲೂ ನಿದ್ದೆ ಬೇಕೇ ಬೇಕು.

ಅರೆನಿದ್ದೆ ಅಥವಾ ಕಡಿಮೆ ನಿದ್ದೆ ಅಥವಾ ಅತಿ ಹೆಚ್ಚು ನಿದ್ದೆ ಸಹಾ ಆರೋಗ್ಯಕರವಲ್ಲ. ಸೂಕ್ತ ಪ್ರಮಾಣದ ಗಾಢ ನಿದ್ದೆಯೇ ಆರೋಗ್ಯಕರ ನಿದ್ದೆ. ಗಾಢವಾದ ನಿದ್ದೆ ಬೇಕೆಂದರೆ ಮಲಗುವ ಮುನ್ನ ಸೇವಿಸುವ ಕೆಲವು ಆಹಾರಗಳನ್ನು ಸೇವಿಸದಿರುವುದೇ ಉತ್ತಮ. ಕಣ್ತುಂಬ ನಿದ್ದೆ-ರಾತ್ರಿಯ ಆಹಾರ ಕ್ರಮ ಹೀಗಿರಲಿ

ಅವು ಯಾವುವು? ಎಂಬ ಕುತೂಹಲ ಮೂಡಿತೇ? ಹಾಗಾದರೆ ತಡವೇಕೆ? ಮುಂದೆ ಓದಿ.... ಇದಕ್ಕೂ ಮುಖ್ಯವಾದ ವಿಷಯವೆಂದರೆ ಮಲಗುವ ಮುನ್ನ ಮನಸ್ಸು ನಿರಾಳವಾಗಿರಬೇಕು. ಸುಖಕರ ನಿದ್ದೆಗೆ ಒತ್ತಡರಹಿತ ಮನಸ್ಸು ಬಹಳ ಮುಖ್ಯ.

ಸಕ್ಕರೆ ಇರುವ ಆಹಾರಗಳು

ಸಕ್ಕರೆ ಇರುವ ಆಹಾರಗಳು

ರಾತ್ರಿ ಮಲಗುವ ಮುನ್ನ ಸಿಹಿ ಹೆಚ್ಚಿರುವ ತಿಂಡಿಗಳನ್ನು ತಿನ್ನಬಾರದು. ಏಕೆಂದರೆ ರಕ್ತದಲ್ಲಿ ಸಕ್ಕರೆ ಹೆಚ್ಚಾದರೆ ರಾತ್ರಿ ನಿದ್ದೆಯಲ್ಲಿ ಹಲವು ಬಾರಿ ಬೆಚ್ಚಿ ಬಿದ್ದು ಎಚ್ಚರಾಗುವುದನ್ನು ಗಮನಿಸಲಾಗಿದೆ. ಆದರೆ ಬೆಚ್ಚಿ ಬೀಳಲು ಸಿಹಿತಿಂಡಿಗಳೇ ಏಕೈಕ ಕಾರಣ ಎಂದು ಹೇಳಲಾಗುವುದಿಲ್ಲ. ಆದರೂ ಸುಖನಿದ್ದೆಗೆ ಅಡ್ಡಿಯಾಗದಿರಲು ಸಿಹಿತಿಂಡಿ, ಚಾಕಲೇಟು ಮೊದಲಾದವುಗಳನ್ನು ಸೇವಿಸದಿರುವುದೇ ಉತ್ತಮ.

ಬೆಳ್ಳುಳ್ಳಿ

ಬೆಳ್ಳುಳ್ಳಿ

ಬೆಳ್ಳುಳ್ಳಿ ಒಂದು ಖಾರವಾದ ಮತ್ತು ಜೀರ್ಣಕ್ರಿಯೆಯನ್ನು ಚುರುಕುಗೊಳಿಸುವ ಸಾಂಬಾರವಸ್ತುವಾಗಿದೆ. ರಾತ್ರಿ ಮಲಗುವ ಮುನ್ನ ಬೆಳ್ಳುಳ್ಳಿಯನ್ನು ಸೇವಿಸಿದರೆ ಇದು ಜೀರ್ಣರಸಗಳನ್ನು ಇನ್ನಷ್ಟು ಆಮ್ಲೀಯವಾಗಿಸಿ ಹೊಟ್ಟೆಯಲ್ಲಿ ಉರಿ ಹೆಚ್ಚಿಸುತ್ತದೆ. ಇದು ನಿದ್ದೆಯನ್ನು ಬಾಧಿಸಬಹುದು.

ಮದ್ಯ

ಮದ್ಯ

ರಾತ್ರಿ ಮಲಗುವ ಮುನ್ನ ಮದ್ಯ ಸೇವಿಸಿ ಮಲಗಿದರೆ ಉತ್ತಮ ನಿದ್ದೆ ಬರುತ್ತದೆ ಎಂದು ಹೆಚ್ಚಿನವರು ತಿಳಿದುಕೊಂಡಿದ್ದಾರೆ. ಆದರೆ ಇದು ತಪ್ಪಾಗಿದ್ದು ರಾತ್ರಿ ಮಲಗುವ ಮುನ್ನ ಮದ್ಯಪಾನದಿಂದ ದೇಹದಲ್ಲಿ ನೀರಿನ ಪ್ರಮಾಣ ಅತಿಯಾಗಿ ಕಡಿಮೆಯಾಗುತ್ತದೆ. ಇದು ರಾತ್ರಿ ನೀರು ಕುಡಿಯಲು ಬಾಯಾರಿಕೆಯ ಸೂಚನೆ ನೀಡುವ ಮೂಲಕ ನಿದ್ದೆಗೆಡಿಸುತ್ತದೆ.

ಐಸ್ ಕ್ರೀಂ

ಐಸ್ ಕ್ರೀಂ

ಒಂದು ಐಸ್ ಕ್ರೀಂ ಒಂದು ಪೂರ್ಣ ಊಟದ ಮೂಲಕ ದೊರಕುವುದಕ್ಕಿಂತಲೂ ಹೆಚ್ಚಿನ ಕೊಬ್ಬನ್ನು ನೀಡುತ್ತದೆ. ಅಂದರೆ ರಾತ್ರಿ ಮಲಗುವ ಮುನ್ನ ಒಂದು ಐಸ್ ಕ್ರೀಂ ತಿಂದರೂ ದೇಹಕ್ಕೆ ಲಭಿಸಿರುವ ಅಪಾರವಾದ ಕೊಬ್ಬನ್ನು ದಹಿಸಲು ಸಮಯವೇ ಉಳಿಯುವುದಿಲ್ಲ. ಇದು ತೂಕ ಹೆಚ್ಚಿಸಲು ನೆರವಾಗುತ್ತದೆ ಹಾಗೂ ರಾತ್ರಿ ಸುಖನಿದ್ದೆಯನ್ನೂ ಬಾಧಿಸುತ್ತದೆ.

ಧೂಮಪಾನ

ಧೂಮಪಾನ

ನಿದ್ದೆ ಬರದೇ ಇರಲು ರಾತ್ರಿ ಮಲಗುವ ಮುನ್ನ ಮಾಡುವ ಧೂಮಪಾನವೂ ಒಂದು ಕಾರಣವಾಗಿದೆ. ಧೂಮಪಾನಿಗಳ ಶ್ವಾಸನಾಳಗಳು ಕಿರಿದಾಗಿದ್ದು ಮೂಗಿನ ನಳಿಕೆಗಳು ಶಿಥಿಲವೂ ಸಡಿಲವೂ ಆಗಿರುತ್ತವೆ. ಇವು ನಿದ್ದೆಯಲ್ಲಿ ಗೊರಕೆಯನ್ನೂ, ಸರಾಗ ಉಸಿರಾಟಕ್ಕೆ ಅಡ್ಡಿಯುಂಟುಮಾಡುವ ಮೂಲಕ ನಿದ್ದೆಯಲ್ಲಿ ಆಗಾಗ ಎಚ್ಚರಿಸುತ್ತಾ ಸುಖನಿದ್ದೆಯನ್ನು ಮರೀಚಿಕೆಯಾಗಿಸುತ್ತದೆ.

ಕಾಫಿ

ಕಾಫಿ

ನಿದ್ದೆ ಬರಬೇಡವೆಂದಿದ್ದರೆ ಟೀ ಕುಡಿಯಬೇಕು, ನಿದ್ದೆ ಬರಬೇಕೆಂದಿದ್ದರೆ ಕಾಫಿ ಕುಡಿಯಬೇಕು ಎಂದು ಇದುವರೆಗೂ ನಂಬಲಾಗಿತ್ತು. ಆದರೆ ಕಾಫಿಯಲ್ಲಿರುವ ಕೆಫೀನ್ ದೈಹಿಕ ಚಟುವಟಿಕೆಗೆ ಪ್ರಚೋದನಾಕಾರಿಯಾಗಿದ್ದು ರಾತ್ರಿ ಮಲಗುವ ಮುನ್ನ ಕುಡಿಯುವುದರಿಂದ ಸುಖನಿದ್ದೆ ಬಾಧೆಗೊಳ್ಳಬಹುದು.

English summary

Never Eat These Foods Before Sleeping

You need sufficient sleep to allow your body to repair itself. If the quality of your sleep is compromised, you tend to wake up tired. Your productivity may suffer and gradually your health also may suffer if you don't get enough sleep. So, if you wish to sleep peacefully, you may need to avoid certain foods in the evening. What are they? Read on to know about what not to consume before sleeping. Also, ensure that you de-stress yourself before sleeping because stress is the first sleep killer.
Story first published: Tuesday, November 15, 2016, 18:44 [IST]
X
Desktop Bottom Promotion