Latest Updates
-
ಬೆಂಗಳೂರಿನಲ್ಲಿ 'ಫ್ರೀಡಂ ಫ್ರಮ್ ವೇಸ್ಟ್': ದಂಡದಿಂದ ಪಾರಾಗಲು ಆಗಸ್ಟ್ 15ರೊಳಗೆ ಈ ಕೆಲಸ ಮಾಡಿ! -
8,000mAh ಬ್ಯಾಟರಿಯ ರೆಡ್ಮಿ ನೋಟ್ 17 ಲಾಂಚ್: ಖರೀದಿಸುವ ಮುನ್ನ ನೀವು ತಿಳಿಯಲೇಬೇಕಾದ ಪ್ರಮುಖ ವಿಷಯಗಳಿವು! -
ಬಾಣಂತಿಯರಿಗೆ ಬೆಂಬಲ: ತಾಯಿಯ ಆರೋಗ್ಯಕ್ಕೆ ತಂದೆಯ ಸಣ್ಣ ಸಹಾಯ ಎಷ್ಟು ಮುಖ್ಯ? -
8,000mAh ಬ್ಯಾಟರಿಯ POCO M8 Power ಲಾಂಚ್: ಈ ಫೋನ್ ಖರೀದಿಸುವ ಮುನ್ನ ನೀವು ತಿಳಿಯಲೇಬೇಕಾದ ವಿಷಯಗಳಿವು! -
ರಾಷ್ಟ್ರೀಯ ಮೂಳೆ ಮತ್ತು ಕೀಲು ದಿನ: ಬೆನ್ನು ಮತ್ತು ಮೊಣಕಾಲು ನೋವಿಗೆ ಈ 10 ನಿಮಿಷದ ವ್ಯಾಯಾಮವೇ ಮದ್ದು! -
ಫ್ರೆಂಡ್ಶಿಪ್ ಡೇ ವಿಶ್ ಮಾಡೋಕೆ ಮರೆತಿದ್ದೀರಾ? ನಿಮ್ಮ ಸ್ನೇಹಿತರ ಮನ ಗೆಲ್ಲಲು ಇಲ್ಲಿದೆ ಸಿಂಪಲ್ ಟಿಪ್ಸ್! -
ಅಮೆಜಾನ್-ಫ್ಲಿಪ್ಕಾರ್ಟ್ ಸೇಲ್: 999 ರೂ. ಒಳಗಿನ ಬೆಸ್ಟ್ ಡೀಲ್ಗಳು ಮತ್ತು ಶಾಪಿಂಗ್ ಟಿಪ್ಸ್! -
ಶ್ರಾವಣ ಸೋಮವಾರದ ಉಪವಾಸ: ಆಫೀಸ್ ಕೆಲಸದ ನಡುವೆಯೂ ಆರೋಗ್ಯ ಕಾಪಾಡಿಕೊಳ್ಳಲು ಇಲ್ಲಿವೆ ಸರಳ ಟಿಪ್ಸ್! -
ಟಾಟಾ ಮುಂಬೈ ಮ್ಯಾರಥಾನ್ 2027: ನೋಂದಣಿಗೆ ಸಿದ್ಧರಾಗಿ, ಓಟಗಾರರಿಗೆ ಇಲ್ಲಿದೆ ಮಹತ್ವದ ಸಲಹೆಗಳು! -
ಆರ್ಬಿಐ ಸಭೆಗೂ ಮುನ್ನ ದಂಪತಿಗಳಿಗೆ ಎಚ್ಚರಿಕೆ: ಇಂದೇ ಈ 30 ನಿಮಿಷದ ಫೈನಾನ್ಶಿಯಲ್ ಟೆಸ್ಟ್ ಮಾಡಿ!
ನಂಬಲೇಬೇಕು, ಮಾತ್ರೆಯ ಹಂಗಿಲ್ಲದೇ 'ಬಿಪಿ' ನಿಯಂತ್ರಣ!
ಅಧಿಕ ರಕ್ತದೊತ್ತಡ ಇರುವವರು ಧೂಮಪಾನ ಮತ್ತು ಮದ್ಯಪಾನವನ್ನು ಸಂಪೂರ್ಣವಾಗಿ ತ್ಯಜಿಸಬೇಕು. ಪ್ರತಿದಿನವೂ ದೈಹಿಕ ಚಟುವಟಿಕೆಯಲ್ಲಿ ತೊಡಗಿಕೊಂಡು ಸರಿಯಾದ ರೀತಿಯ ಆಹಾರ ಕ್ರಮವನ್ನು ಪಾಲಿಸಿಕೊಂಡು ಹೋದರೆ ಒಳ್ಳೆಯದು....
ಒತ್ತಡದಲ್ಲಿ ಕೆಲಸ ಮಾಡುತ್ತೀರಾ? ಕುರುಕಲು ತಿಂಡಿಯನ್ನು ಹೆಚ್ಚಿಗೆ ತಿನ್ನುತ್ತೀರಾ? ಧೂಮಪಾನ ಮತ್ತು ಮದ್ಯಪಾನ ಮಾಡುತ್ತೀರಾ? ಹಾಗಾದರೆ ನಿಮಗೆ ರಕ್ತದೊತ್ತಡ ಬಂದಿದೆಯೇ ಎಂಬುದನ್ನು ಮೊದಲು ಪರೀಕ್ಷಿಸಿಕೊಳ್ಳಿ. ಬಂದಿದೆ ಎಂದು ಖಚಿತವಾದಲ್ಲಿ ಹೆದರಬೇಡಿ, ಅದು ಬಂದರೆ ಅದನ್ನು ಹತೋಟಿಯಲ್ಲಿಡಲು ನಮ್ಮ ಬಳಿ ಮಾರ್ಗಗಳಿವೆ. ಅಧಿಕ ರಕ್ತದೊತ್ತಡವೇ? ನಿಯಂತ್ರಿಸಲು ಏಲಕ್ಕಿಯೇ ಸಾಕು!
ಈ ನಿಟ್ಟಿನಲ್ಲಿ ಹಲವಾರು ನೈಸರ್ಗಿಕ ಮನೆಮದ್ದುಗಳೂ ಸಹಾಯ ಮಾಡುತ್ತವೆ. ಆದರೆ ಅದಕ್ಕಿಂತ ಮೊದಲು ನಿಮ್ಮ ಜೀವನ ಶೈಲಿಯನ್ನು ಮೊದಲು ಬದಲಾಯಿಸಿಕೊಳ್ಳಿ. ಆಮೇಲೆ ರಕ್ತದೊತ್ತಡ ತನ್ನಷ್ಟಕ್ಕೆ ತಾನೇ ಸರಿಹೋಗುತ್ತದೆ. ಆರೋಗ್ಯಕರವಾದ ಆಹಾರ, ಸರಿಯಾದ ನಿದ್ದೆ ಮತ್ತು ಚಟುವಟಿಕೆಯಿಂದ ಕೂಡಿದ ಜೀವನ ಶೈಲಿ ರೂಢಿಸಿಕೊಳ್ಳಿ. ಬನ್ನಿ ಆ ಗಿಡಗಳ ಕುರಿತು ಮೊದಲು ತಿಳಿದುಕೊಳ್ಳೋಣ....

ಓಟ್ಸ್
ಓಟ್ಸ್ ಡೈಯಾಸ್ಟೊಲಿಕ್ ಮತ್ತು ಸಿಸ್ಟೊಲಿಕ್ ಒತ್ತಡವನ್ನು ಕಡಿಮೆ ಮಾಡುತ್ತದೆ ಎಂದು ಹೇಳಲಾಗುತ್ತದೆ. ಓಟ್ಸ್‌ನಲ್ಲಿರುವ ನಾರಿನಂಶವು ಜೀರ್ಣಾಂಗ ವ್ಯೂಹಕ್ಕೆ ಒಳ್ಳೆಯದು. ಇದು ರಕ್ತದೊತ್ತಡವನ್ನು ಕಡಿಮೆ ಮಾಡುತ್ತದೆ.

ಶುಂಠಿ
ಶುಂಠಿಯು ರಕ್ತವನ್ನು ತೆಳ್ಳಗೆ ಮಾಡುತ್ತದೆ. ಇದರಲ್ಲಿ ಉರಿಯೂತ ನಿವಾರಕ ಅಂಶಗಳು ಇರುತ್ತವೆ. ಹಾಗಾಗಿ ಶುಂಠಿ ಟೀಯನ್ನು ಒಂದು ಕಪ್ ಸೇವಿಸುವುದರಿಂದ ನಿಮ್ಮ ರಕ್ತದೊತ್ತಡವನ್ನು ಹತೋಟಿಯಲ್ಲಿರಿಸಿಕೊಳ್ಳಬಹುದು.ಸರಳ ಟಿಪ್ಸ್: ಮನೆಯಲ್ಲಿಯೇ ಮಾಡಿ ನೋಡಿ-'ಶುಂಠಿ ಪೌಡರ್'

ಡಾರ್ಕ್ ಚಾಕೊಲೇಟ್
ಡಾರ್ಕ್ ಚಾಕೊಲೇಟ್‌ನಲ್ಲಿ ಕೊಕೊವಾ ಇರುತ್ತದೆ. ಇದರಲ್ಲಿರುವ ಕೊಕೊವಾ ಫ್ಲಾವನೊಲ್‌ಗಳು ಹೃದ್ರೋಗದ ಸಮಸ್ಯೆಗಳನ್ನು ಕಡಿಮೆ ಮಾಡುತ್ತವೆ ಎಂದು ಹೇಳಲಾಗುತ್ತದೆ.

ಎಳ್ಳು
ಎಳ್ಳೆಣ್ಣೆಯಲ್ಲಿ ಸಿಸಮೊಲ್ ಮತ್ತು ಸಿಸೆಮಿನ್ ಎಂಬ ಆಂಟಿಆಕ್ಸಿಡೆಂಟ್‌ಗಳು ಇರುತ್ತವೆ. ಇದರಲ್ಲಿ ವಿಟಮಿನ್ ಇ ಮತ್ತು ಸಿಸೆಮಿನ್ ಎಣ್ಣೆ ಇದ್ದು, ಇದು ರಕ್ತದೊತ್ತಡವನ್ನು ಕಡಿಮೆ ಮಾಡುತ್ತದೆ ಎಂದು ಹೇಳಲಾಗುತ್ತದೆ.

ಮೂಲಂಗಿ
ಮೂಲಂಗಿ ಹಾಗೂ ಅದರ ಎಲೆಗಳು ಬಿಪಿಯನ್ನು ಕಡಿಮೆ ಮಾಡುತ್ತವೆ. ಇದರಲ್ಲಿ ಪೊಟಾಶಿಯಂ ಇದ್ದು, ಅದು ದೇಹದಲ್ಲಿರುವ ಸೋಡಿಯಂ ಅಂಶವನ್ನು ಕಡಿಮೆ ಮಾಡುವುದರ ಜೊತೆಗೆ ಬಿಪಿಯನ್ನು ಸಹ ಕಡಿಮೆ ಮಾಡುತ್ತದೆ. ಮೂಲಂಗಿ ಜ್ಯೂಸ್+ಲಿಂಬೆ ರಸದ ಜೋಡಿಯ ಜಬರ್ದಸ್ತ್ ಪವರ್...

ದಾಳಿಂಬೆ ಜ್ಯೂಸ್
ದಾಳಿಂಬೆಯ ರಸವನ್ನು ಸೇವಿಸಿ. ಇದರಲ್ಲಿ ಪಾಲಿಫೆನೊಲಿಕ್ ಎಂಬ ಆಂಟಿಆಕ್ಸಿಡೆಂಟ್ ಇದ್ದು, ಇದು ಹೃದಯದ ನಾಳಗಳು ಕಟ್ಟಿಕೊಳ್ಳುವಿಕೆಯನ್ನು ತಡೆಯುತ್ತದೆ ಎಂದು ಹೇಳಲಾಗುತ್ತದೆ. ದಾಳಿಂಬೆ ಹಣ್ಣಿನಲ್ಲಿರುವ 10 ಅದ್ಭುತ ಪ್ರಯೋಜನಗಳು

ತುಳಸಿ
ತುಳಸಿಯಲ್ಲಿ ಯೂಜೆನಲ್ ಎಂಬ ಅಂಶ ಇರುತ್ತದೆ. ಇದು ರಕ್ತದೊತ್ತಡವನ್ನು ಕಿರು ಅವಧಿಯಲ್ಲಿ ಕಡಿಮೆ ಮಾಡುತ್ತದೆ ಎಂದು ಹೇಳಲಾಗುತ್ತದೆ.ಆರೋಗ್ಯ ರಕ್ಷಕ- ತುಳಸಿ ಎಲೆಯ ವೈಶಿಷ್ಟ್ಯ ಒಂದೇ, ಎರಡೇ?

ನುಗ್ಗೆಸೊಪ್ಪು
ಬಾಳೆಹಣ್ಣುಗಳಿಗೆ ಹೋಲಿಸಿದರೆ ಇದರಲ್ಲಿ ಹೆಚ್ಚಿನ ಪ್ರಮಾಣದ ಪೊಟಾಶಿಯಂ ಇರುತ್ತದೆಯಂತೆ. ಇದು ಸಹ ದೇಹದಲ್ಲಿರುವ ಸೋಡಿಯಂ ಅಂಶವನ್ನು ಕಡಿಮೆ ಮಾಡುವುದರ ಮೂಲಕ ರಕ್ತದೊತ್ತಡವನ್ನು ಕಡಿಮೆ ಮಾಡುತ್ತದೆ. ಕ್ಯಾನ್ಸರ್, ಮಧುಮೇಹ ನಿಯಂತ್ರಿಸುವ ಪವರ್
ನುಗ್ಗೆಸೊಪ್ಪಿನಲ್ಲಿದೆ

ಟೊಮೇಟೊ
ಟೊಮೇಟೊಗಳಲ್ಲಿ ಲೈಕೊಪೀನ್ ಎಂಬ ಅಂಶವಿರುತ್ತದೆ. ಇದು ದೇಹದಲ್ಲಿರುವ ಕೆಟ್ಟ ಕೊಲೆಸ್ಟ್ರಾಲ್ ಅನ್ನು ಕಡಿಮೆ ಮಾಡುವುದರ ಮೂಲಕ ರಕ್ತದೊತ್ತಡವನ್ನು ಕಡಿಮೆ ಮಾಡುತ್ತದೆ.

ಬೆಳ್ಳುಳ್ಳಿ
ಒಂದು ವೇಳೆ ನೀವು ಸಿಸ್ಟೊಲಿಕ್ ಒತ್ತಡದಿಂದ ಬಳಲುತ್ತಿದ್ದಲ್ಲಿ, ಬೆಳ್ಳುಳ್ಳಿಯನ್ನು ಸೇವಿಸುವುದು ಒಳ್ಳೆಯದು. ಇದರಿಂದ ದೇಹದಲ್ಲಿ ನೈಟ್ರಿಕ್ ಆಮ್ಲದ ಉತ್ಪಾದನೆ ಹೆಚ್ಚಾಗುತ್ತದೆ ಹಾಗು ಅದು ರಕ್ತದೊತ್ತಡವನ್ನು ಹತೋಟಿಗೆ ತರುತ್ತದೆ. ಬೆಳ್ಳುಳ್ಳಿಯಲ್ಲಿರುವ ಅಲ್ಲಿಸಿನ್ ಎಂಬ ಅಂಶವು ತುಂಬಾ ಒಳ್ಳೆಯ ಔಷಧೀಯ ಅಂಶವಾಗಿರುತ್ತದೆ.ಉಪಹಾರಕ್ಕಿಂತ ಮುಂಚೆಯೇ ಬೆಳ್ಳುಳ್ಳಿ ಸೇವಿಸಿ, ಆರೋಗ್ಯವೃದ್ಧಿಸಿ!



Click it and Unblock the Notifications