For Quick Alerts
ALLOW NOTIFICATIONS  
For Daily Alerts

  ಅಧಿಕ ರಕ್ತದೊತ್ತಡವೇ? ನಿಯಂತ್ರಿಸಲು ಏಲಕ್ಕಿಯೇ ಸಾಕು!

  By Manu
  |

  ಅಧಿಕ ರಕ್ತದೊತ್ತಡಕ್ಕೆ ಆನುವಂಶಿಕ ಕಾರಣಕ್ಕಿಂತಲೂ ಸೋಮಾರಿತನಕ್ಕೆ ಮೂಲವಾಗಿರುವ ನಮ್ಮ ಬದಲಾದ ಜೀವನಶೈಲಿಯೇ ಕಾರಣ. ಧಾವಂತವೆಂದು ಸಿದ್ಧ ಆಹಾರಗಳನ್ನು ತಿಂದು, ಸರಿಯಾದ ಸಮಯದಕ್ಕೆ ತಿನ್ನದೇ, ನಿದ್ರಿಸದೇ, ಓಡಾಡದೇ ಇರುವ ಮೂಲಕ ಎದುರಾದ ತೊಂದರೆ. ಅಧಿಕ ರಕ್ತದೊತ್ತಡಕ್ಕೆ ಔಷಧಿಗಳನ್ನು ನೀಡುವ ಜೊತೆಗೇ ಆಹಾರದಲ್ಲಿ ನಿಯಂತ್ರಣ ಮತ್ತು ಜೀವನಶೈಲಿಯನ್ನು ಚಟುವಟಿಕೆಯುಕ್ತವಾಗಿಸಲೂ ವೈದ್ಯರು ಸಲಹೆ ನೀಡುತ್ತಾರೆ.   ಕುಟುಂಬದ ಆರೋಗ್ಯಕ್ಕಾಗಿ ಮನೆಯಲ್ಲಿರಲಿ ಏಲಕ್ಕಿ ಮಾಲೆ  

  Cardamom
   

  ಸೂಕ್ತ ಅಹಾರವನ್ನು ಸೂಕ್ತ ಕಾಲದಲ್ಲಿಯೇ ಸೇವಿಸುವುದು, ಅಹಮ್ಮಿಕೆಯನ್ನು ಕೊಂಚ ಬದಿಗಿಟ್ಟು ಸಾಧ್ಯವಾದಷ್ಟು ವ್ಯಾಯಾಮ, ನಡಿಗೆ ಮೊದಲಾದವುಗಳನ್ನು ಅನುಸರಿಸುವುದು ಅಧಿಕ ರಕ್ತದೊತ್ತಡವನ್ನು ಕಡಿಮೆ ಮಾಡಲು ನೆರವಾಗುತ್ತವೆ. ಅಧಿಕ ರಕ್ತದೊತ್ತಡ ಹಲವು ಕಾಯಿಲೆಗಳಿಗೆ ಮೂಲವಾಗಿದೆ. ವಿಶೇಷವಾಗಿ atherosclerosis ಮತ್ತು ಹೃದಯಾಘಾತಕ್ಕೆ ಅಧಿಕ ರಕ್ತದೊತ್ತಡವೇ ಪ್ರಮುಖ ಕಾರಣವಾಗಿದೆ. 

  Cardamom
   

  ಆಹಾರಕ್ರಮದಲ್ಲಿಯೂ ಬದಲಾವಣೆಯಾಗಬೇಕು. ಮುಖ್ಯ ಬದಲಾವಣೆ ಎಂದರೆ ಉಪ್ಪಿನ ಪ್ರಮಾಣವನ್ನು ತಗ್ಗಿಸುವುದು. ಸಿದ್ಧ ಆಹಾರಗಳು ಎಷ್ಟೇ ಆಕರ್ಷಕವಿದ್ದರೂ ಬೇಡ ಎನ್ನಲು ಕಲಿಯುವುದು, ಮನೆಯ ಊಟವನ್ನೇ ಹೆಚ್ಚು ನಂಜಿಕೊಳ್ಳುವುದು, ಉಪ್ಪೇ ಪ್ರಮುಖವಾಗಿರುವ ಉಪ್ಪಿನಕಾಯಿ, ಕುರುಕುತಿಂಡಿಗಳನ್ನು ಬೇಡ ಎನ್ನಲು ಮನೋಬಲವನ್ನು ವೃದ್ಧಿಸಬೇಕು. ಮಸಾಲೆ ಪದಾರ್ಥಗಳ ರಾಣಿ- ಪುಟ್ಟ ಏಲಕ್ಕಿ  

  Cardamom
   

  ಇದರಿಂದ ಪ್ರಾರಂಭದಲ್ಲಿ ಕೊಂಚ ಸುಸ್ತಾದಂತೆ ಅನ್ನಿಸಿದರೂ ಇದು ತಾತ್ಕಾಲಿಕವೇ ಹೊರತು ಕೆಲವೇ ದಿನಗಳಲ್ಲಿ (ಸುಮಾರು ಎರಡು ತಿಂಗಳಾದರೂ ಬೇಕು) ನಿಧಾನವಾಗಿ ದೇಹ ಈ ಪರಿಗೆ ಒಗ್ಗಿಕೊಂಡು ಆರೋಗ್ಯ ವೃದ್ಧಿಸುತ್ತದೆ ಹಾಗೂ ತೂಕವೂ ಕಡಿಮೆಯಾಗುತ್ತದೆ. ಅಧಿಕ ರಕ್ತದೊತ್ತಡದ ಶಮನಕ್ಕೆ ಲಿಂಬೆಯ ಚಮತ್ಕಾರ

  ನಮ್ಮ ಮನೆಯ ಊಟದಲ್ಲಿ ಉಪ್ಪು ಕಡಿಮೆ ಮಾಡಬಹುದು. ಆದರೆ ದಿನದ ಒಂದೆರಡಾದರೂ ಹೊತ್ತು ಹೊರಗೆ ಊಟ ಮಾಡುವವರಿಗೆ ಹೋಟೆಲಿನ ಊಟ ಉಪ್ಪಿಲ್ಲದೇ ಸಿಗುವುದು ಕಷ್ಟ. ಇದಕ್ಕೆ ಒಂದು ಸುಲಭ ಉಪಾಯವಿದೆ. ಇದೇ ಏಲಕ್ಕಿಯ ಸೇವನೆ. ತಲೆ ನೋವೆ? ಹಾಗಿದ್ದರೆ ಏಲಕ್ಕಿ ಜಗಿಯಿರಿ!   

   

  Cardamom

  ನೂರಾರು ವರ್ಷಗಳಿಂದ ಭಾರತದ ಅಡುಗೆಗಳ ರುಚಿಯನ್ನು ಹೆಚ್ಚಿಸುತ್ತಾ ಬಂದಿರುವ ಏಲಕ್ಕಿ ತನ್ನ ಪರಿಮಳ ಮತ್ತು ರುಚಿಯಿಂದಾಗಿಯೇ ಹೆಚ್ಚು ಪ್ರಸಿದ್ಧಿ ಪಡೆದಿದೆ. ಪಲಾವ್, ಮಾಂಸದ ಅಡುಗೆಗಳು, ಪಂಚಭಕ್ಷ್ಯಗಳು ಇತ್ಯಾದಿಗಳಲ್ಲಿ ಏಲಕ್ಕಿ ನೀಡುವ ಘಮಘಮ ಹಸಿವನ್ನು ಹೆಚ್ಚಿಸುತ್ತದೆ. ಆದರೆ ಏಲಕ್ಕಿಯ ಪ್ರಯೋಜನಗಳು ಆಹಾರದ ಕಂಪು ಹೆಚ್ಚಿಸುವಷ್ಟು ಮಾತ್ರ ಸೀಮಿತವಲ್ಲ.

  ಬದಲಿಗೆ, ಇದರಲ್ಲಿ ಹಲವಾರು ಔಷಧೀಯ ಗುಣಗಳೂ ಇವೆ. ಪ್ರಮುಖವಾಗಿ ಇದರ ಜೀರ್ಣಶಕ್ತಿ ಹೆಚ್ಚಿಸುವ ಗುಣ. ಊಟದ ಬಳಿಕ ಹಸಿಯಾಗಿ ಒಂದು ಏಲಕ್ಕಿ ಸೇವಿಸಿದರೆ ಜೀರ್ಣಶಕ್ತಿಯನ್ನು ಉತ್ತಮಗೊಳಿಸುವ ಜೊತೆಗೇ ಅಧಿಕ ರಕ್ತದೊತ್ತಡವನ್ನು ಕಡಿಮೆಗೊಳಿಸಲೂ ನೆರವಾಗುತ್ತದೆ. ಇದರಲ್ಲಿರುವ ಆಂಟಿ ಆಕ್ಸಿಡೆಂಟುಗಳು ಮತ್ತು ಇತರ ಪೋಷಕಾಂಶಗಳು ಅಧಿಕ ರಕ್ತದೊತ್ತಡ ಕಡಿಮೆಗೊಳಿಸುವ ಗುಣದ ಜೊತೆಗೇ ಇನ್ನೂ ಹಲವಾರು ರೀತಿಯಲ್ಲಿ ಆರೋಗ್ಯವನ್ನು ವೃದ್ಧಿಸುತ್ತವೆ.

  ಏಲಕ್ಕಿಯನ್ನು ಹೇಗೆ ಸೇವಿಸಬೇಕು?

  ಪಲಾವ್, ಖಾದ್ಯ, ಸಿಹಿತಿಂಡಿಗಳನ್ನು ತಯಾರಿಸುವಾಗ ಏಲಕ್ಕಿಯನ್ನು ಪ್ರಾರಂಭದಲ್ಲಿ ಸೇರಿಸಿ ರುಚಿಯನ್ನು ಹೆಚ್ಚಿಸಲಾಗುತ್ತದೆ. ಅಧಿಕ ರಕ್ತದೊತ್ತಡಕ್ಕೂ ನಾಲಿಗೆಯ ರುಚಿಗೂ ನೇರವಾದ ಸಂಬಂಧವಿದೆ. ಏನೆಂದರೆ ಸಿಹಿತಿಂಡಿಗಳಲ್ಲಿರುವ ಅಪಾರವಾದ ಸಕ್ಕರೆ ಅಗತ್ಯಕ್ಕೂ ಹೆಚ್ಚು ಪ್ರಮಾಣದಲ್ಲಿ ದೇಹ ಸೇರುತ್ತದೆ. ಅಲ್ಲದೇ ಈ ಸಿಹಿತಿಂಡಿಗಳ ಸೇವನೆಯ ಮೂಲಕ ಕೊಲೆಸ್ಟ್ರಾಲ್ ಸಹಾ ಹೆಚ್ಚುತ್ತದೆ. ಪರಿಣಾಮವಾಗಿ ರಕ್ತದೊತ್ತಡ ಇನ್ನಷ್ಟು ಹೆಚ್ಚುತ್ತದೆ.  ಅಧಿಕ ರಕ್ತದೊತ್ತಡದ ಕಿರಿಕಿರಿ-ಮನೆಮದ್ದೇ ಸರಿ  

  Cardamom
   

  ಈ ತೊಂದರೆಯಿಂದ ಮುಕ್ತಿ ಪಡೆಯಲು ನಿಮ್ಮ ನಿತ್ಯದ ಆಹಾರಗಳಲ್ಲಿ ಕೊಂಚವೇ ಏಲಕ್ಕಿ ಪುಡಿಯನ್ನು ಸೇರಿಸಿದರೆ ಸಾಕು. ಜೊತೆಗೇ ನೀವು ಕುಡಿಯುವ ನಿತ್ಯದ ಟೀ ಕಾಫಿಗಳ ಮೇಲೆ ಸಹಾ ಏಲಕ್ಕಿ ಪುಡಿಯನ್ನು ಕೊಂಚವೇ ಬೆರೆಸಿ ಕುಡಿದರೆ ಸಾಕು. 

  ಇನ್ನೂ ಉತ್ತಮ ಎಂದರೆ ಪ್ರತಿ ಊಟದ ಬಳಿಕ ಒಂದು ಏಲಕ್ಕಿಯನ್ನು ಜಗಿದು ನೀರಾಗಿಸಿ ನುಂಗುವುದು. ಇದರಿಂದ ಜೀರ್ಣಕ್ರಿಯೆಯೂ ಉತ್ತಮಗೊಳ್ಳುತ್ತದೆ ಹಾಗೂ ಅಧಿಕ ರಕ್ತದೊತ್ತಡವೂ ನಿಯಂತ್ರಣಕ್ಕೆ ಬರುತ್ತದೆ. ಜೊತೆಗೇ ಏಲಕ್ಕಿಯ ಘಮಘಮ ಬಾಯಿಯ ದುರ್ವಾಸನೆಯನ್ನೂ ಇಲ್ಲವಾಗಿಸುತ್ತದೆ.

  English summary

  Suffering from hypertension? Cardamom can help

  Hypertension can easily be controlled with a few changes to your lifestyle and dietary habits. Apart from prescribing medicines for the condition, doctors suggest living a more active life, exercising more and eating right. Along with you can also include certain natural remedies that assist in reducing your blood pressure levels. One such natural remedy is cardamom.
  We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Boldsky sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Boldsky website. However, you can change your cookie settings at any time. Learn more