ಮಾತ್ರೆಯ ಹಂಗಿಲ್ಲದೆ ಮೈಗ್ರೇನ್ ತಲೆನೋವು ನಿಯಂತ್ರಣಕ್ಕೆ!

By: manu
Subscribe to Boldsky

ತಲೆನೋವುಗಳು ವಿವಿಧ ತರ. (ಗಂಡ ಕರೆದಲ್ಲಿ ಹೋಗಲು ಇಷ್ಟವಿರದ ಪತ್ನಿಯರು ನೀಡುವ ಕಾರಣದ ತಲೆನೋವಲ್ಲ) ಇವುಗಳಲ್ಲಿ ಕೆಲವು ಮಾನಸಿಕ ಒತ್ತಡ ಅಥವಾ ಮೆದುಳಿಗೆ ತಲುಪುವ ರಕ್ತದಲ್ಲಿ ಕೊರತೆ ಅಥವಾ ಮೂಗಿನ ಹಿಂಭಾಗದಲ್ಲಿ ಆಗಿರುವ ಸೋಂಕಿನ ಮೂಲಕ ಎದುರಾಗುವ ಸಾಮಾನ್ಯ ತಲೆನೋವುಗಳಾದರೆ ತಲೆನೋವಿನ ಅತ್ಯುಗ್ರ ರೂಪವಾದ ಮೈಗ್ರೇನ್ ಜೀವವನ್ನೇ ಹಿಂಡಿ ಬಿಡುತ್ತದೆ. ಮೈಗ್ರೇನ್ ತಲೆನೋವೇ? ಒಮ್ಮೆ ಈ ಜ್ಯೂಸ್ ಕುಡಿದು ನೋಡಿ...

ಕೆಲವು ತಲೆನೋವುಗಳು ಬಿಸಿಲಿಗೆ ಅನುಸಾರವಾಗಿ ಏರಿಕೆ ಇಳಿಕೆ ಕ್ರಮದಲ್ಲಿ ಸಾಗಿದರೆ ಕೆಲವು ಆಹಾರದಲ್ಲಿ ವಿಷವಸ್ತುಗಳ ಇರುವಿಕೆಯ ಪರೋಕ್ಷ ಪರಿಣಾಮವಾಗಿದೆ. ಕಾರಣವೇನೇ ಇರಲಿ, ತಲೆನೋವು ಬಂದರೆ ಯಾರಿಗೂ ಯಾವ ಕೆಲಸವನ್ನೂ ಮಾಡಲು ಇಷ್ಟವಾಗುವುದಿಲ್ಲ. ತಲೆನೋವಿಗೆ ಇದುವರೆಗೆ ಸಮರ್ಪಕವಾದ ಔಷಧಿ ಇಲ್ಲ. ಮೈಗ್ರೇನ್ ತಲೆನೋವಿಗೆ ಮಾತ್ರೆ ಬಿಡಿ; ಮನೆ ಮದ್ದು ಪ್ರಯತ್ನಿಸಿ 

ಇರುವ ಔಷಧಿಗಳೆಲ್ಲಾ ನೋವು ನಿವಾರಕಗಳಾಗಿದ್ದು ನೋವಿನ ಭಾವನೆಯನ್ನು ತಡೆಯುತ್ತವೆ ಅಷ್ಟೇ. ಅಲ್ಲದೇ ಈ ಮಾತ್ರೆಗಳ ಅಡ್ಡಪರಿಣಾಮಗಳು ಭೀಕರವಾಗಬಹುದು. ಪ್ಯಾರಾಸೆಟಮಾಲ್ ನಂತಹ ಮಾತ್ರೆಗಳು ಯಕೃತ್ ಮತ್ತು ಮೂತ್ರಪಿಂಡಗಳಿಗೆ ಹಾನಿಯುಂಟುಮಾಡಬಹುದು. ತಲೆನೋವನ್ನು ಕಡಿಮೆ ಮಾಡಲು ಕೆಲವು ಸುಲಭ ವಿಧಾನಗಳಿದ್ದು ಇವು ನಿಮ್ಮ ನೆರವಿಗೆ ಬರಬಹುದು.... 

ಅಗತ್ಯವಿರುವ ಸಾಮಾಗ್ರಿಗಳು

ಅಗತ್ಯವಿರುವ ಸಾಮಾಗ್ರಿಗಳು

ನಿಮಗೆ ಹಿಮಾಲಯನ್ ಉಪ್ಪಿನ ಅಗತ್ಯವಿದೆ. ಇದು ಕೊಂಚ ಗುಲಾಬಿ ಬಣ್ಣದಲ್ಲಿದ್ದು ಸಾಮಾನ್ಯ ಅಯೋಡಿನ್ ಯುಕ್ತ ಉಪ್ಪಿಗಿಂತಲೂ ಭಿನ್ನವಾಗಿರುತ್ತದೆ. ಎರಡು ಚಮಚ ಹಿಮಾಲಯನ್ ಉಪ್ಪು ಮತ್ತು ಒಂದು ಲಿಂಬೆಯ ಅಗತ್ಯವಿದೆ.

ತಯಾರಿಸುವ ಬಗೆ

ತಯಾರಿಸುವ ಬಗೆ

ಒಂದು ಲೋಟದಲ್ಲಿ ಲಿಂಬೆಹಣ್ಣಿನ ರಸವನ್ನು ಹಿಂಡಿ ಇದಕ್ಕೆ ಉಪ್ಪು ಸೇರಿಸಿ ಮಿಶ್ರಣ ಮಾಡಿ. ಕೊಂಚ ನೀರನ್ನು ಬೆರೆಸಿ ಉಪ್ಪೆಲ್ಲಾ ಕರಗುವವರೆಗೆ ಕಲಕಿ.

ಸೇವನೆಯ ವಿಧಾನ

ಸೇವನೆಯ ವಿಧಾನ

ತಲೆನೋವಿದ್ದಾಗ ಈ ಪಾನೀಯವನ್ನು ಗಟಗಟನೇ ಕುಡಿದುಬಿಡಿ. ಕೆಲವೇ ನಿಮಿಷಗಳಲ್ಲಿ ತಲೆನೋವು ಕಡಿಮೆಯಾಗುತ್ತಿರುವುದನ್ನು ಗಮನಿಸಬಹುದು.

ಹಿಮಾಲಯದಲ್ಲಿ ಉಪ್ಪು ಹೇಗೆ ಬಂತು?

ಹಿಮಾಲಯದಲ್ಲಿ ಉಪ್ಪು ಹೇಗೆ ಬಂತು?

ಮಿಲಿಯಾಂತರ ವರ್ಷಗಳ ಹಿಂದೆ ಅಂಟಾರ್ಕ್ಟಿಕಾದಿಂದ ಭಾರತಖಂಡ ಮೇಲೆದ್ದು ಬಡಿದಾಗ ಹಿಮಾಲಯ ಉದ್ಭವವಾಯಿತು. ಈ ಭಾಗದಲ್ಲಿ ಕೆಲವು ಸಮುದ್ರಗಳೂ ಇದ್ದವು. ಕಾಲಕ್ರಮೇಣ ಈ ನೀರೆಲ್ಲಾ ಆವಿಯಾಗಿ ಕೇವಲ ಉಪ್ಪು ಉಳಿದುಕೊಂಡಿತು. ಇದೇ ಹಿಮಾಲಯನ್ ಸಾಲ್ಟ್. ಇದರಲ್ಲಿ 84 ಬಗೆಯ ಖನಿಜಗಳು ಮತ್ತು ಎಲೆಕ್ಟ್ರೋಲೈಟುಗಳಿವೆ. ಈ ಉಪ್ಪಿಗೆ ಮೈಗ್ರೇನ್ ತಲೆನೋವನ್ನೂ ಗುಣಪಡಿಸುವ ಶಕ್ತಿಯಿದೆ. ಅಲ್ಲದೇ ರೋಗ ನಿರೋಧಕ ಶಕ್ತಿ ಹೆಚ್ಚುವುದು, ದೇಹದ ಶಕ್ತಿ ಹೆಚ್ಚುವುದು, ದೇಹದಲ್ಲಿ ಆಮ್ಲೀಯ-ಕ್ಷಾರೀಯ ಸಂತುಲತೆ ಕಾಪಾಡುವುದು, ಎಲೆಕ್ಟ್ರೋಲೈಟುಗಳ ಸಂತುಲತೆ ಕಾಪಾಡುವುದು ಮೊದಲಾದ ಪ್ರಯೋಜನಗಳಿವೆ.

ಇನ್ನೊಂದು ವಿಧಾನ

ಇನ್ನೊಂದು ವಿಧಾನ

ಒಂದು ಲೋಟದಲ್ಲಿ ಎಳನೀರನ್ನು ಸಂಗ್ರಹಿಸಿ ಇದಕ್ಕೆ ಚಿಟಿಕೆಯಷ್ಟು ಹಿಮಾಲಯನ್ ಉಪ್ಪನ್ನು ಬೆರೆಸಿ ಕೆಲವು ಹನಿ ಲಿಂಬೆರಸ ಸೇರಿಸಿ ಕಲಕಿ ಕುಡಿಯಿರಿ.

ನಿರ್ಜಲೀಕರಣದಿಂದ ಬರುವ ತಲೆನೋವು

ನಿರ್ಜಲೀಕರಣದಿಂದ ಬರುವ ತಲೆನೋವು

ಒಂದು ವೇಳೆ ಬೇಸಿಗೆಯಲ್ಲಿ ನಿರ್ಜಲೀಕರಣದಿಂದ ತಲೆನೋವು ಎದುರಾದರೆ ಈ ವಿಧಾನದಿಂದ ತಕ್ಷಣವೇ ತಲೆನೋವು ಕಡಿಮೆಯಾಗುತ್ತದೆ.

ಇತರ ಪ್ರಯೋಜನಗಳು

ಇತರ ಪ್ರಯೋಜನಗಳು

ಈ ರಸದ ಸೇವನೆಯಿಂದ ದೇಹದಲ್ಲಿ ಖನಿಜಗಳ ಕೊರತೆ ಹಾಗೂ ಈ ಮೂಲಕ ಎದುರಾಗಿದ್ದ ಎಲೆಕ್ಟ್ರೋಲೈಟುಗಳ ಅಸಂತುಲತೆಯ ತೊಂದರೆ ಸರಿಯಾಗುತ್ತದೆ. ವಿಶೇಷವಾಗಿ ಯಕೃತ್ ನಲ್ಲಿ ವಿಷಕಾರಿ ವಸ್ತುಗಳು ಹೆಚ್ಚಾಗುವ ಕಾರಣ ಎದುರಾಗುವ ತಲೆನೋವು ತಕ್ಷಣವೇ ಕಡಿಮೆಯಾಗುತ್ತದೆ.

 
English summary

Migraine Headache? Try This!!

There are so many types of headaches. Some of them could be migraine and some of them could be a result of stress. Some headaches could also be due to sun exposure and some could be due to food poisoning. But headaches are horrible. They totally pin you down and make you unable to carry on with anything else. The problem with taking a pill is that you may suffer the side effects. Some pills are bad for your liver and kidneys too. So, here is a simple remedy which may work for your headache.
Please Wait while comments are loading...
Subscribe Newsletter