Latest Updates
-
ವಿಶ್ವ ಆತ್ಮಹತ್ಯೆ ತಡೆ ದಿನ: ಮಾನಸಿಕ ಆರೋಗ್ಯ ಸುಧಾರಿಸಲು 10 ನಿಮಿಷದ ಸಿಂಪಲ್ ಮಾರ್ನಿಂಗ್ ರೂಟೀನ್ ಮತ್ತು ಹೆಲ್ಪ್ಲೈನ್ ವಿವರಗಳು -
ವಿಚ್ಛೇದನದ ನಂತರವೂ ಜೀವನಾಂಶ ಪಡೆಯಬಹುದೇ? ಮಧ್ಯಪ್ರದೇಶ ಹೈಕೋರ್ಟ್ನಿಂದ ಮಹತ್ವದ ತೀರ್ಪು! -
ದೆಹಲಿ ವಾಯು ಮಾಲಿನ್ಯ: ಮನೆಯಲ್ಲಿ ಶುದ್ಧ ಗಾಳಿ ಪಡೆಯಲು ಈ ಸರಳ ಟಿಪ್ಸ್ ಪಾಲಿಸಿ -
ಪ್ಯಾಕ್ ಮಾಡಿದ ಆಹಾರದ ಮೇಲೆ 'ರೆಡ್ ಹೆಕ್ಸಗನ್' ಎಚ್ಚರಿಕೆ: ಇನ್ಮುಂದೆ ತಿನ್ನುವ ಮುನ್ನ ಈ ವಿಷಯ ಗಮನಿಸಿ! -
ಆಪಲ್ 'ಸರ್ಪ್ರೈಸ್ ಆಂಡ್ ಶೈನ್' ಈವೆಂಟ್: ಐಫೋನ್ 18 ಪ್ರೋ ಮತ್ತು ಫೋಲ್ಡಬಲ್ ಆಲ್ಟ್ರಾ ಲಾಂಚ್, ಭಾರತದಲ್ಲಿ ಬೆಲೆ ಎಷ್ಟು? -
ಟಾಟಾ ಮುಂಬೈ ಮ್ಯಾರಥಾನ್ ಡ್ರೀಮ್ ರನ್: ಇಂದೇ ನೋಂದಣಿ ಮುಕ್ತಾಯ, ಓಟಕ್ಕೆ ಸಜ್ಜಾಗಲು 20 ನಿಮಿಷದ ಪ್ಲಾನ್ ಇಲ್ಲಿದೆ! -
ಲೈವ್-ಇನ್ ಸಂಬಂಧಕ್ಕೂ ಅನ್ವಯವಾಗುತ್ತೆ 498A: ಕಲ್ಕತ್ತಾ ಹೈಕೋರ್ಟ್ ಮಹತ್ವದ ತೀರ್ಪು ಮತ್ತು ನೀವು ತಿಳಿಯಲೇಬೇಕಾದ ಸುರಕ್ಷತಾ ಕ್ರಮಗಳು -
ಬೆಂಗಳೂರಿನ ಬಿಸಿಲಿಗೆ ಹೈರಾಣಾಗಿದ್ದೀರಾ? ಎಸಿ ಇಲ್ಲದೆ ಮನೆ ತಂಪು ಮಾಡೋದು ಹೇಗೆ? ಇಲ್ಲಿದೆ ಸಿಂಪಲ್ ಟಿಪ್ಸ್ -
ವೆಜ್ ಥಾಲಿ ಬೆಲೆ ಗಗನಕ್ಕೆ: ಕಡಿಮೆ ಖರ್ಚಿನಲ್ಲಿ ಪೌಷ್ಟಿಕ ಊಟ ತಯಾರಿಸುವ ಸರಳ ಟಿಪ್ಸ್ -
ಶಿವಾಜಿನಗರ ಸೇಂಟ್ ಮೇರಿಸ್ ಬಾಸಿಲಿಕಾ ಜಾತ್ರೆ: ಇಂದಿನ ಸಂಚಾರ ಮಾರ್ಗ ಬದಲಾವಣೆ ಮತ್ತು ಪಾರ್ಕಿಂಗ್ ಬಗ್ಗೆ ನೀವು ತಿಳಿಯಲೇಬೇಕಾದ ವಿಷಯಗಳು!
ಮೈಗ್ರೇನ್ ತಲೆನೋವಿಗೆ ಮಾತ್ರೆ ಬಿಡಿ; ಮನೆ ಮದ್ದು ಪ್ರಯತ್ನಿಸಿ
ಮೈಗ್ರೇನ್ ತಲೆನೋವು ಕಾಣಿಸಿಕೊಂಡರೆ ಉಪಶಮನ ಮಾಡೋದು ಅಷ್ಟು ಸುಲಭವಲ್ಲ. ಮಾತ್ರೆ ತೆಗೆದುಕೊಂಡರೂ ಮೈಗ್ರೇನ್ ಬೇಗ ಹೋಗೋದಿಲ್ಲ...ಆದರೆ ಇದನ್ನು ನಿಯಂತ್ರಿಸಬಹುದಾದ ಮನೆಮದ್ದಗಳಿವೆ...
ತಲೆನೋವಿನ ಅತ್ಯುಗ್ರ ರೂಪವಾದ ಮೈಗ್ರೇನ್ ತಲೆನೋವಿನ ಪ್ರಕೋಪವನ್ನು ಅನುಭವಿಸಿದವರೇ ಬಲ್ಲರು. ಯೋಚನಾಶಕ್ತಿಯನ್ನೇ ಕುಂಠಿಸಿಬಿಡುವ, ನೋಟದ ಕೇಂದ್ರಭಾಗವನ್ನು ಮಂಕಾಗಿಸುವ, ಶಬ್ದಕ್ಕೂ ವಾಸನೆಗೂ ನೋವನ್ನು ಹೆಚ್ಚಿಸುವ ಈ ತಲೆನೋವು ಹೇಗೆ ಬರುತ್ತದೆ ಎಂಬುದನ್ನು ಇದುವರೆಗೆ ಕಂಡುಹಿಡಿಯಲಾಗಿಲ್ಲ.
ಕೆಲವೊಮ್ಮೆ ಈ ನೋವು ಅತಿ ಹೆಚ್ಚಾಗಿ ರೋಗಿ ತಲೆಕೆಳಗಾಗಿ ಮಲಗಿ ಹುಚ್ಚನೇ ಆಗಿ ಹೋಗುತ್ತಾನೆ. ಆಗ ಆಸ್ಪತ್ರೆಗೆ ಸೇರಿಸದೇ ಗತ್ಯಂತರವೇ ಇರುವುದಿಲ್ಲ. ಇದರ ಪರೋಕ್ಷ ಪರಿಣಾಮಗಳಾಗಿ ಖಿನ್ನತೆ, ಕಲಿಯುವಿಕೆಯಲ್ಲಿ ಹಿಂದುಳಿಯುವುದು, ತಾನು ಇತರರಿಗಿಂತ ಕೀಳು ಎಂಬ ಭಾವನೆ ಮೂಡುವುದು ಮೊದಲಾದ ತೊಂದರೆಗಳೂ ಎದುರಾಗುತ್ತದೆ. ಮೈಗ್ರೇನ್ ನೋವಿಗೆ ಅಂತ್ಯ ಹಾಡುವ ಹತ್ತು ಗಿಡಮೂಲಿಕೆಗಳು
ಇದಕ್ಕೆ ಕಾರಣಗಳು ಯಾವುವು ಎಂದು ಸ್ಪಷ್ಟವಾಗಿ ಹೇಳಲಾಗದೇ ಇದ್ದರೂ ಹಾರ್ಮೋನುಗಳ ಏರುಪೇರು, ಅನುವಂಶೀಯತೆ, ಖಿನ್ನತೆ, ಉದ್ವೇಗ, ಅಸಮರ್ಪಕ ಆಹಾರ, ಗರ್ಭನಿರೋಧಕಗಳ ಅಡ್ಡಪರಿಣಾಮ, ರಜೋನಿವೃತ್ತಿ ಮೊದಲಾದವೂ ಕಾರಣವಾಗಿರಬಹುದು. ಖತರ್ನಾಕ್ ಮೈಗ್ರೇನ್ ತಲೆ ನೋವಿಗೆ -ಪವರ್ ಫುಲ್ ಮನೆಮದ್ದು
ಇದರೊಂದಿಗೆ ಪ್ರಬಲ ನೋವು ನಿವಾರಕ ಗುಳಿಗೆಗಳ ಸೇವನೆಯಿಂದ ತಕ್ಷಣಕ್ಕೆ ನೋವು ಕಡಿಮೆಯಾದಂತೆ ಕಂಡುಬಂದರೂ ಇದರ ಇತರ ಪರಿಣಾಮಗಳೂ ದೇಹವನ್ನು ಇನ್ನಷ್ಟು ಬಾಧಿಸಬಹುದು. ಒಂದು ವೇಳೆ ಈ ನೋವಿನಿಂದ ನಿವಾರಣೆಯಾಗಬಯಸಿದರೆ ಇದಕ್ಕೆ ನಿಸರ್ಗ ನೀಡಿರುವ ಈ ಮೂರು ಸುಲಭ ಅಡುಗೆ ಸಾಮಾಗ್ರಿಗಳಿಂದ ಉತ್ತಮ ಪರಿಹಾರ ಪಡೆಯಬಹುದು.....

ಅಗತ್ಯವಿರುವ ಸಾಮಾಗ್ರಿಗಳು
ಲ್ಯಾವೆಂಡರ್ ಎಣ್ಣೆ: ಮೂರು-ನಾಲ್ಕು ಹನಿ

ಅಗತ್ಯವಿರುವ ಸಾಮಾಗ್ರಿಗಳು
ಪುದೀನಾ ಎಣ್ಣೆ: ಮೂರು-ನಾಲ್ಕು ಹನಿ

ಅಗತ್ಯವಿರುವ ಸಾಮಾಗ್ರಿಗಳು
ಜಜ್ಜಿದ ತುಳಸಿ ಎಲೆಗಳು: ಸುಮಾರು ನಾಲ್ಕೈದು

ಅಗತ್ಯವಿರುವ ಸಾಮಾಗ್ರಿಗಳು
ಈ ಮೂರೂ ಸಾಮಾಗ್ರಿಗಳಲ್ಲಿ ಮೈಗ್ರೇನ್ ನೋವಿಗೆ ಕಾರಣವಾಗಿರುವ ಕಣಗಳನ್ನು ನಿಷ್ಕ್ರಿಯಗೊಳಿಸುವ ಗುಣವಿದ್ದು ನಿಯಮಿತ ಸೇವನೆಯಿಂದ ಎಂತಹ ಪ್ರಬಲ ತಲೆನೋವಿದ್ದರೂ ಕಡಿಮೆಯಾಗುತ್ತದೆ.

ತಲೆನೋವು ಪ್ರಾರಂಭವಾಯಿತು ಎನಿಸತೊಡಗಿದಾಕ್ಷಣ ಸೇವಿಸಬೇಕು..
ಯಾವುದೇ ತಲೆನೋವಿನಂತೆ ಮೈಗ್ರೇನ್ ಸಹಾ ಪ್ರಾರಂಭದ ಹಂತದಲ್ಲಿಯ ಚಿಕಿತ್ಸೆಗೆ ಬಗ್ಗುತ್ತದೆಯೇ ಹೊರತು ಒಮ್ಮೆ ಇದು ಉಗ್ರ ರೂಪ ಪಡೆದುಕೊಂಡರೆ ಯಾವ ಔಷಧಿಗೂ ಬಗ್ಗುವುದಿಲ್ಲ. ಆದ್ದರಿಂದ ಈ ಔಷಧಿಯನ್ನು ತಲೆನೋವು ಪ್ರಾರಂಭವಾಯಿತು ಎನಿಸತೊಡಗಿದಾಕ್ಷಣ ಸೇವಿಸಬೇಕು. ಇದಕ್ಕೂ ಹೊರತಾಗಿ ತಲೆನೋವು ಎದುರಾದರೆ ಮಾತ್ರ ತಜ್ಞ ವೈದ್ಯರನ್ನು ಭೇಟಿಯಾಗಲೇಬೇಕು.

ಈ ಔಷಧಿ ಹೇಗೆ ಕೆಲಸ ಮಾಡುತ್ತದೆ ಗೊತ್ತೇ?
ಈ ಔಷಧಿ ಹೇಗೆ ಕೆಲಸ ಮಾಡುತ್ತವೆಂದರೆ ಇದರ ಸೇವನೆಯಿಂದ ತಲೆಗೆ ರಕ್ತ ಪರಿಚಲನೆ ಹೆಚ್ಚುತ್ತದೆ. ಇದರ ಮೂಲಕ ಹೆಚ್ಚಿನ ಆಮ್ಲಜನಕ ಲಭ್ಯವಾಗುತ್ತದೆ ಹಾಗೂ ನೋವನ್ನು ನೈಸರ್ಗಿಕವಾಗಿ ಕಡಿಮೆ ಮಾಡಲು ನೆರವಾಗುತ್ತದೆ. ಬರೆಯ ತಲೆನೋವಲ್ಲ, ಇದರೊಂದಿಗೆ ದೇಹದ ಇತರ ಭಾಗದ ಉರಿಯೂತಗಳೂ
ಕಡಿಮೆಯಾಗುತ್ತವೆ.

ತಯಾರಿಕಾ ಮತ್ತು ಬಳಕೆಯ ವಿಧಾನ
ಈ ಮೂರೂ ಸಮಾಗ್ರಿಗಳನ್ನು ಒಂದು ಚಿಕ್ಕ ಬೋಗುಣಿಯಲ್ಲಿ ಸಂಗ್ರಹಿಸಿ ಚೆನ್ನಾಗಿ ಕಲಕಿ ಮಿಶ್ರಣ ಮಾಡಿ.ಈ ಮಿಶ್ರಣವನ್ನು ತಲೆನೋವು ಪ್ರಾರಂಭವಾದ ತಕ್ಷಣ ಹಣೆಯ ಮೇಲೆ, ವಿಶೇಶವಾಗಿ ಕಿವಿಯ ಮುಂದಿನ ಭಾಗ, ಹಣೆಯ ನಡುವಿನ ಭಾಗ ಮತ್ತು ಕಿವಿಯ ಹಿಂದಿನ ಮೂಳೆಯ ಭಾಗದಲ್ಲಿ ನಯವಾದ ಮಸಾಜ್ ನೊಂದಿಗೆ ಹಚ್ಚುತ್ತಿರಿ.

ತಯಾರಿಕಾ ಮತ್ತು ಬಳಕೆಯ ವಿಧಾನ
*ಕೆಲವು ನಿಮಿಷಗಳಾದರೂ ಹಚ್ಚುತ್ತಾ ಎಲ್ಲಾ ಪ್ರಮಾಣವನ್ನು ಖಾಲಿಮಾಡಿ.
*ಬಳಿಕ ಕೊಂಚ ಹೊತ್ತು ಕುಕ್ಕರುಗಾಲಿನಲ್ಲಿ ಕುಳಿತು ತಲೆಯನ್ನು ಮೊಣಕಾಲುಗಳ ಬಳಿ ನೆಲಕ್ಕೆ ತಾಕಿರುವ ಭಂಗಿಯಲ್ಲಿ ಮಲಗಿ ದೀರ್ಘವಾಗಿ ಉಸಿರಾಡಿ.
ಇದರಿಂದ ತಲೆಗೆ ಹೆಚ್ಚಿನ ರಕ್ತಸಂಚಾರ ದೊರೆತು ತಲೆನೋವು ನಿಧಾನವಾಗಿ ಕಡಿಮೆಯಾಗುತ್ತಾ ಹೋಗುತ್ತದೆ. ಉತ್ತಮ ಪರಿಣಾಮಕ್ಕಾಗಿ ದಿನಕ್ಕೆರಡು ಬಾರಿ ಈ ವಿಧಾನವನ್ನು ಅನುಸರಿಸಿ.



Click it and Unblock the Notifications
