ಹಣ್ಣು-ತರಕಾರಿಗಳಲ್ಲಿ ಔಷಧೀಯ ಗುಣಗಳಿವೆ, ನಿರ್ಲಕ್ಷ್ಯ ಬೇಡ...

By Manu
Subscribe to Boldsky

ನಮ್ಮ ಆರೋಗ್ಯಕ್ಕೆ ಹಣ್ಣು ಮತ್ತು ತರಕಾರಿಗಳು ಅವಶ್ಯ. ಏಕೆಂದರೆ ಇವುಗಳು ಆಹಾರ ಒದಗಿಸುವ ಜೊತೆಗೇ ಔಷಧಿ ನೀಡುವ ಸೇವೆಯನ್ನೂ ನೀಡುತ್ತವೆ. ಪ್ರತಿ ಹಣ್ಣು ತರಕಾರಿಯಲ್ಲಿಯೂ ಒಂದೊಂದು ಔಷಧೀಯ ಗುಣವಿದ್ದು ಆರೋಗ್ಯವನ್ನು ವೃದ್ಧಿಸುತ್ತದೆ. ನಿತ್ಯ ಹಣ್ಣು-ತರಕಾರಿ ತಿಂದು ಸಂತೋಷವಾಗಿರಿ

ಕೆಲವು ಅಲ್ಪಾವಧಿಯ ಪರಿಣಾಮ ನೀಡಿದರೆ ಕೆಲವು ದೀರ್ಘಾವಧಿಯ ಪರಿಣಾಮವನ್ನು ನೀಡುತ್ತವೆ. ಇದೇ ಕಾರಣಕ್ಕೆ ನಿಮ್ಮ ಆಹಾರದಲ್ಲಿ ಸಾಕಷ್ಟು ಹಣ್ಣು ಮತ್ತು ತರಕಾರಿಗಳಿರಬೇಕು ಎಂದು ವೈದ್ಯರು ತಿಳಿಸುತ್ತಾರೆ. ಇವುಗಳು ಆರೋಗ್ಯವನ್ನು ವೃದ್ಧಿಸುವ ಜೊತೆಗೇ ಹೆಚ್ಚಿನ ಆಯಸ್ಸು ಹೊಂದಲೂ ನೆರವಾಗುತ್ತವೆ. ಬನ್ನಿ, ಕೆಲವು ಪ್ರಮುಖ ಹಣ್ಣು ಮತ್ತು ತರಕಾರಿಗಳ ಔಷಧೀಯ ಗುಣಗಳ ಬಗ್ಗೆ ಅರಿಯೋಣ... 

ಸೇಬು ಹಣ್ಣು

ಸೇಬು ಹಣ್ಣು

ಸೇಬಿನ ಸೇವನೆಯಿಂದ ಹೃದಯ ಉತ್ತಮಗೊಳ್ಳುತ್ತದೆ. ಇವುಗಳಲ್ಲಿರುವ ಕರಗದ ನಾರು ಅತಿಸಾರದಿಂದ, ಮಲಬದ್ಧತೆಯಿಂದ ರಕ್ಷಿಸುತ್ತದೆ ಹಾಗೂ ಶ್ವಾಸಕೋಶದ ಕ್ಯಾನ್ಸರ್ ಬರುವುದರಿಂದ ಕಾಪಾಡುತ್ತದೆ. ಅಲ್ಲದೇ ಮೂಳೆಗಳ ಸಂಧುಗಳನ್ನೂ ದೃಢಗೊಳಿಸುತ್ತದೆ.ದಿನಕ್ಕೊಂದು ಸೇಬು ಬಿಪಿ -ಹೃದಯ ಕಾಯಿಲೆಗಳನ್ನು ದೂರವಿಡುವುದು

ಬೀನ್ಸ್

ಬೀನ್ಸ್

ಕನ್ನಡದಲ್ಲಿ ತಿಂಗಳಾವರೆ ಎಂದು ಕರೆಯಲ್ಪಡುವ ಬೀನ್ಸ್ ಅನ್ನು ಹಸಿಯಾಗಿಯೇ ತಿನ್ನುವ ಮೂಲಕ ಕೊಲೆಸ್ಟ್ರಾಲ್ ನಿವಾರಿಸಲು ಸಾಧ್ಯವಾಗುತ್ತದೆ. ಅಲ್ಲದೇ ಮಲಬದ್ಧತೆ, ದೊಡ್ಡಕರುಳಿನ ಒಳಭಾಗದ ಗಂಟುಗಳು (hemorrhoids) ಮೊದಲಾದವುಗಳಿಗೆ ಔಷಧಿಯಂತೆ ಕೆಲಸ ಮಾಡುತ್ತದೆ. ಅಲ್ಲದೇ ಕೆಲವು ಬಗೆಯ ಕ್ಯಾನ್ಸರ್ ಬರುವುದರ ವಿರುದ್ಧ ರಕ್ಷಣೆ ನೀಡುತ್ತದೆ. ಕೆಲವೊಮ್ಮೆ ಹಠಾತ್ತಾಗಿ ಏರುವ ಸಕ್ಕರೆಯ ಮಟ್ಟವನ್ನೂ ನಿಯಂತ್ರಿಸುತ್ತದೆ. ಸರಳ ತಯಾರಿಕೆಯ ಹರಿಕಾರ ಆಲೂ-ಬೀನ್ಸ್ ಪಲ್ಯ

ಆಪ್ರಿಕಾಟ್

ಆಪ್ರಿಕಾಟ್

ಈ ಹಣ್ಣುಗಳಿಗೆ ಕ್ಯಾನ್ಸರ್ ತಡೆಯುವ ಶಕ್ತಿಯಿದೆ. ಅಲ್ಲದೇ ಇವುಗಳ ಸೇವನೆಯಿಂದ ಕಣ್ಣುಗಳ ದೃಷ್ಟಿ ಉತ್ತಮಗೊಳ್ಳುತ್ತದೆ, ರಕ್ತದ ಒತ್ತಡ ನಿಯಂತ್ರಣದಲ್ಲಿರುತ್ತದೆ, ಸಂಧಿವಾತ ಅಥವಾ ಅಲ್ಜೀಮರ್ಸ್ ಕಾಯಿಲೆ ಬರುವ ಸಾಧ್ಯತೆಯನ್ನು ಕಡಿಮೆಗೊಳಿಸುತ್ತದೆ ಹಾಗೂ ದೇಹಕ್ಕೆ ವಯಸ್ಸಾಗುವ ಗತಿಯನ್ನು ನಿಧಾನಗೊಳಿಸುತ್ತದೆ.

ಬಾಳೆಹಣ್ಣು

ಬಾಳೆಹಣ್ಣು

ಬಾಳೆಹಣ್ಣಿನ ಸೇವನೆಯಿಂದ ಹೃದಯದ ಕ್ಷಮತೆ ಹೆಚ್ಚುತ್ತದೆ ಹಾಗೂ ಮೂಳೆಗಳೂ ದೃಢಗೊಳ್ಳುತ್ತವೆ. ಅಲ್ಲದೇ ಕೆಮ್ಮನ್ನು ಕಡಿಮೆ ಮಾಡುವುದು, ಅಧಿಕ ರಕ್ತದೊತ್ತಡ ಕಡಿಮೆಗೊಳಿಸುವುದು ಹಾಗೂ ಅತಿಸಾರವಾಗದಂತೆ ತಡೆಯುವುದು ಮೊದಲಾದವು ಬಾಳೆಹಣ್ಣು ಸೇವಿಸುವ ಪಡೆಯುವ ಪ್ರಯೋಜನಗಳಾಗಿವೆ.ದಿನಕ್ಕೆರಡು ಬಾಳೆಹಣ್ಣು ಸೇವಿಸಿ, ವೈದ್ಯರಿಂದ ದೂರವಿರಿ!

ಬೆಣ್ಣೆಹಣ್ಣು (Avocado)

ಬೆಣ್ಣೆಹಣ್ಣು (Avocado)

ಈ ಹಣ್ಣಿನ ಸೇವನೆಯಿಂದ ಕೆಟ್ಟ ಕೊಲೆಸ್ಟ್ರಾಲ್ ಕಡಿಮೆಯಾಗುತ್ತದೆ, ಅಧಿಕ ರಕ್ತದೊತ್ತಡ ನಿಯಂತ್ರಣಕ್ಕೆ ಬರುತ್ತದೆ, ಪಾರ್ಶ್ವವಾಯು ಬರುವುದರಿಂದ ರಕ್ಷಿಸುತ್ತದೆ ಹಾಗೂ ಚರ್ಮದ ಕಾಂತಿಯನ್ನು ಹೆಚ್ಚಿಸುತ್ತದೆ.ಬೆಣ್ಣೆ ಹಣ್ಣು ತಿನ್ನಿ, ವೈದ್ಯರಿಂದ ದೂರವಿರಿ!

ಕ್ಯಾರೆಟ್

ಕ್ಯಾರೆಟ್

ಕಣ್ಣುಗಳಿಗೆ ಕ್ಯಾರೆಟ್ ಉತ್ತಮವಾಗಿದ್ದು ಹೃದಯದ ಆರೋಗ್ಯ ಉತ್ತಮವಾಗಿರಲು ಸಹಕರಿಸುತ್ತದೆ. ಅಲ್ಲದೇ ಕ್ಯಾರೆಟ್ ಸೇವನೆಯಿಂದ ಮಲಬದ್ದತೆಯಾಗದಂತೆ ನೋಡಿಕೊಳ್ಳಬಹುದು. ಕ್ಯಾರೆಟ್ ಸೇವನೆಯಿಂದ ಕೆಲವು ಬಗೆಯ ಕ್ಯಾನ್ಸರ್ ಬರದಂತೆ ತಡೆಗಟ್ಟಲು ಹಾಗೂ ತೂಕ ಇಳಿಸಿಕೊಳ್ಳಲೂ ನೆರವಾಗುತ್ತದೆ.ಲವಲವಿಕೆಯ ಆರೋಗ್ಯಕ್ಕೆ, 'ಕ್ಯಾರೆಟ್' ಹೇಳಿ ಮಾಡಿಸಿದ ತರಕಾರಿ

ಬೀಟ್ರೂಟ್

ಬೀಟ್ರೂಟ್

ಈ ತರಕಾರಿಯ ರಸದ ಸೇವನೆಯಿಂದ ಅಧಿಕ ರಕ್ತದೊತ್ತಡ ಕಡಿಮೆಯಾಗುತದೆ. ಅಲ್ಲದೇ ಮೂಳೆಗಳು ದೃಢಗೊಳ್ಳುತ್ತವೆ, ಕೆಲವು ವಿಧದ ಕ್ಯಾನ್ಸರ್ ಬರದಂತೆ ತಡೆಗಟ್ಟುತ್ತದೆ, ಹೃದಯದ ಕ್ಷಮತೆಯನ್ನು ಹೆಚ್ಚಿಸುತ್ತದೆ ಹಾಗೂ ತೂಕ ಇಳಿಸಲು ನೆರವಾಗುತ್ತದೆ.ಅಬ್ಬಬ್ಬಾ ಬೀಟ್‌ರೂಟ್‌ನಲ್ಲಿ ಇಷ್ಟೆಲ್ಲಾ ಪ್ರಯೋಜನಗಳಿವೆಯೇ..?

ಬ್ಲೂ ಬೆರ್ರೀಸ್

ಬ್ಲೂ ಬೆರ್ರೀಸ್

ಇವುಗಳ ಸೇವನೆಯಿಂದ ಹೃದಯಕ್ಕೆ ಎದುರಾಗುವ ತೊಂದರೆಗಳಿಂದ ರಕ್ಷಣೆ ಪಡೆಯಬಹುದು. ಅಲ್ಲದೇ ರಕ್ತದಲ್ಲಿರುವ ಸಕ್ಕರೆಯ ಪ್ರಮಾಣದ ನಿಯಂತ್ರಣ ಹಾಗೂ ಸ್ಮರಣಶಕ್ತಿ ಹೆಚ್ಚಿವುವುದು ಹಾಗೂ ಮಲಬದ್ದತೆಯಿಂದ ಕಾಪಾಡುವುದು ಈ ಹಣ್ಣುಗಳ ಸೇವನೆಯ ಇತರ ಪ್ರಯೋಜನಗಳಾಗಿವೆ.

 
For Quick Alerts
ALLOW NOTIFICATIONS
For Daily Alerts

    English summary

    Medicinal Properties Of Fruits & Veggies

    Every fruit and every vegetable has some or the other medicinal property which can prevent some long term or short term health condition. Read on to know more...
    We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Boldsky sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Boldsky website. However, you can change your cookie settings at any time. Learn more