For Quick Alerts
ALLOW NOTIFICATIONS  
For Daily Alerts

ನಿತ್ಯ ಹಣ್ಣು-ತರಕಾರಿ ತಿಂದು ಸಂತೋಷವಾಗಿರಿ

By Manu
|

ಜೀವನದಲ್ಲಿ ಪ್ರತಿಯೊಬ್ಬರು ಸಂತೋಷವಾಗಿರಬೇಕೆಂದು ಬಯಸುತ್ತಾರೆ. ಸಂತೋಷವಾಗಿರಬೇಕೆಂದರೆ ಬಯಸಿದೆಲ್ಲವೂ ಸಿಗುತ್ತಿರಬೇಕು. ಆದರೆ ಕೆಲವೊಂದು ಸಲ ಇದು ಲಭ್ಯವಾಗುವುದಿಲ್ಲ. ಕೆಲವರು ಎಲ್ಲವನ್ನು ಪಡೆದುಕೊಂಡು ಸಂತೋಷವಾಗಿರುತ್ತಾರೆ. ಹೀಗೆ ಖುಷಿಯಾಗಿರಲು ಹಲವಾರು ರೀತಿಯ ಕಾರಣಗಳು ಇರುತ್ತದೆ.

ಆದರೆ ಅಧ್ಯಯನವೊಂದರ ಪ್ರಕಾರ ಹಣ್ಣುಗಳು ಹಾಗೂ ತರಕಾರಿಯನ್ನು ಹೆಚ್ಚಾಗಿ ಸೇವನೆ ಮಾಡುವುದರಿಂದ ಕ್ಯಾನ್ಸರ್ ಮತ್ತು ಹೃದಯಾಘಾತದ ಅಪಾಯ ಕಡಿಮೆಯಾಗುವುದು ಮಾತ್ರವಲ್ಲದೆ ಜನರ ಸಂತೋಷದ ಮಟ್ಟವು ಹೆಚ್ಚಾಗುತ್ತದೆಯಂತೆ.

Study Reveals The Secret To Happy Life, Check It Out !

ಹಣ್ಣುಗಳು ಹಾಗೂ ತರಕಾರಿ ಸೇವನೆ ಮಾಡುವುದರಿಂದ ಅದು ಆರೋಗ್ಯಕ್ಕೆ ಒಳ್ಳೆಯದು ಮಾಡುವುದಕ್ಕಿಂತ ಹೆಚ್ಚಾಗಿ ಸಂತೋಷವನ್ನು ಉಂಟು ಮಾಡುತ್ತದೆ ಎಂದು ಲಂಡನ್‌ನ ವಾರ್ವಿಕ್ ವಿಶ್ವವಿದ್ಯಾನಿಲಯದ ಪ್ರಾಧ್ಯಾಪಕ ಆಂಡ್ರೂ ಒಸ್ವಾಲ್ಡ್ ಅಭಿಪ್ರಾಯಪಟ್ಟಿದ್ದಾರೆ.

ಸಂತೋಷದ ಮಟ್ಟವು ಪ್ರತೀ ಸಲ ಹಣ್ಣು ಮತ್ತು ತರಕಾರಿ ಸೇವನೆ ಮಾಡುವಾಗ ವೃದ್ಧಿಯಾಗುವುದು ಎಂದು ಅಧ್ಯಯನಗಳಿಂದ ತಿಳಿದುಬಂದಿದೆ. ಹಣ್ಣು ಮತ್ತು ತರಕಾರಿ ಸೇವನೆ ಮಾಡದೆ ಇರುವವರಿಗಿಂತ ಹೆಚ್ಚಾಗಿ ದಿನದಲ್ಲಿ ಎಂಟು ಸಲ ಹಣ್ಣು ಮತ್ತು ತರಕಾರಿ ಸೇವನೆ ಮಾಡುವವರ ಸಂತೋಷವು ಉತ್ತಮವಾಗಿರುತ್ತದೆ.

ಆರೋಗ್ಯಕರ ಆಹಾರವನ್ನು ಸೇವನೆ ಮಾಡಬೇಕೆಂದು ಪ್ರತಿಯೊಬ್ಬರು ಹೇಳುತ್ತಾ ಇರುತ್ತಾರೆ. ಆದರೆ ಜೀವನದಲ್ಲಿ ಸುಖ ಹಾಗೂ ಸಂತೋಷಕ್ಕಾಗಿ ಹಣ್ಣು ಮತ್ತು ತರಕಾರಿ ಸೇವನೆ ಮಾಡಬೇಕು. ಹಣ್ಣುಗಳು ಹಾಗೂ ತರಕಾರಿ ಸೇವನೆಯಿಂದಾಗಿ ಜನರಲ್ಲಿ ಸಂತೋಷದ ಮಟ್ಟವು ಹೆಚ್ಚಾಗಿದೆ ಎಂದು ಒಸ್ವಾಲ್ಡ್ ಅಧ್ಯಯನದಿಂದ ತಿಳಿದುಕೊಂಡಿದ್ದಾರೆ.

ನಿಯಮಿತವಾಗಿ ಹಣ್ಣುಗಳು ಹಾಗೂ ತರಕಾರಿ ಸೇವನೆ ಮಾಡಲು ಆರಂಭಿಸಿದ ಜನರಲ್ಲಿ ಎರಡೇ ವರ್ಷದಲ್ಲಿ ಸಾಕಷ್ಟು ಸುಧಾರಣೆ ಕಂಡು ಬಂದಿದೆ ಎಂದು ಅಧ್ಯಯನಗಳು ಹೇಳಿವೆ. ಹಣ್ಣುಗಳು ಮತ್ತು ತರಕಾರಿಗಳು ಕೇವಲ ಕಾಯಿಲೆಗಳನ್ನು ದೂರವಿಡುವುದಿಲ್ಲ. ಇದು ಜನರ ಮನಸ್ಸಿನ ಮೇಲೂ ಪರಿಣಾಮ ಬೀರುತ್ತದೆ ಎಂದು ಆಸ್ಟ್ರೇಲಿಯಾದ ಕ್ವೀನ್ಸ್ ಲ್ಯಾಂಡ್ ಯೂನಿರ್ವಸಿಟಿಯ ಸಂಶೋಧಕ ರೆಡ್ಜೊ ಮುಜಿಕಿಕ್ ತಿಳಿಸಿದ್ದಾರೆ.

ಪ್ರಗತಿಪರ ರಾಷ್ಟ್ರಗಳಲ್ಲಿ ಹೆಚ್ಚಾಗಿ ಅನಾರೋಗ್ಯಕರ ಆಹಾರಗಳನ್ನು ತಿನ್ನುವ ಅಭ್ಯಾಸ ಬೆಳೆಸಿಕೊಂಡಿರುವ ಕಾರಣದಿಂದ ಅಲ್ಲಿನ ವೈದ್ಯರು ಹೆಚ್ಚು ಹಣ್ಣು ಹಾಗೂ ತರಕಾರಿಗಳ ಸೇವನೆ ಮಾಡಲು ಸೂಚಿಸಬಹುದು ಎಂದು ಅಮೆರಿನ್ ಜರ್ನಲ್ ಆಫ್ ಪಬ್ಲಿಕ್ ಹೆಲ್ತ್‌ನಲ್ಲಿ ಪ್ರಕಟನೆಯಾಗಿರುವ ಲೇಖನದಲ್ಲಿ ತಿಳಿಸಿದೆ.

ಈ ಅಧ್ಯಯನಕ್ಕಾಗಿ ಆಯ್ಕೆಯಾದ ಸುಮಾರು 12,835 ಜನರ ಆಹಾರ ಕ್ರಮವನ್ನು ಸರಿಯಾಗಿ ಅಧ್ಯಯನ ಮಾಡಲಾಗಿದೆ. ಸಂತೋಷ ಮತ್ತು ಜೀವನ ತೃಪ್ತಿಗಾಗಿ ಆದಾಯದಲ್ಲಿ ಹೆಚ್ಚಳ ಮತ್ತು ವೈಯಕ್ತಿಕ ಸನ್ನಿವೇಶಗಳಲ್ಲಿ ಜನರು ಬದಲಾಗುವುದರಿಂದ ಆಗುವ ಪರಿಣಾಮವನ್ನು ಲೇಖಕರು ಸರಿಪಡಿಸಿಕೊಂಡಿದ್ದಾರೆ.

(ಐಎಎನ್ಎಸ್ ವರದಿ)

English summary

Study Reveals The Secret To Happy Life, Check It Out !

Besides reducing the risk of cancer and heart attacks, consuming up to eight portions of more fruit and vegetables a day can also substantially increase levels of people's happiness in life, finds a new study. "Eating fruit and vegetables apparently boosts our happiness far more quickly than it improves human health," said Andrew Oswald, professor at the University of Warwick in London.
Story first published: Wednesday, August 10, 2016, 19:45 [IST]
X
Desktop Bottom Promotion