For Quick Alerts
ALLOW NOTIFICATIONS  
For Daily Alerts

ಕ್ಯಾನ್ಸರ್-ಸಂಧಿವಾತ ನಿಯಂತ್ರಿಸುವ 'ಶುಂಠಿ ಬಿಯರ್'!

By Arshad
|

ತೂಕ ಇಳಿಸಿಕೊಳ್ಳಬೇಕೇ?, ಹಸಿಶುಂಠಿಯ ನೆರವು ಪಡೆದುಕೊಳ್ಳಿ!

ಆದರೆ ಇದು ಮಾರುಕಟ್ಟೆಯಲ್ಲಿ ಲಭ್ಯವಿಲ್ಲದಿರುವುದರಿಂದ ಮನೆಯಲ್ಲಿ ನೀವೇ ತಯಾರಿಸಿಕೊಳ್ಳಬೇಕು. ಆದರೆ ಇದು ಹೆಚ್ಚು ಕಷ್ಟದ್ದೇನೂ ಅಲ್ಲ, ಬದಲಿಗೆ ಇದರ ನಿಯಮಿತ ಸೇವನೆಯಿಂದ ಕೆಲವಾರು ವಿಧದ ಕ್ಯಾನ್ಸರ್, ಸಂಧಿವಾತ ಹಾಗೂ ಜೀರ್ಣಕ್ರಿಯೆಗೆ ಸಂಬಂಧಿಸಿದ ತೊಂದರೆಗಳಿಗೂ ಔಷಧಿಯಂತೆ ಕೆಲಸ ಮಾಡುತ್ತದೆ. ಅಷ್ಟೇ ಅಲ್ಲ, ಇದು ರಕ್ತದಲ್ಲಿನ ಕೆಟ್ಟ ಕೊಲೆಸ್ಟ್ರಾಲ್ ಹಾಗೂ ಅಧಿಕ ರಕ್ತದೊತ್ತಡ ಕಡಿಮೆಗೊಳಿಸಲೂ ನೆರವಾಗುತ್ತದೆ....

ಕೊಂಚ ಸಕ್ಕರೆ ಮತ್ತು ಲಿಂಬೆರಸ...

ಕೊಂಚ ಸಕ್ಕರೆ ಮತ್ತು ಲಿಂಬೆರಸ...

ಶುಂಠಿ ಬಿಯರ್ ತಯಾರಿಸಲು ಕೊಂಚ ಸಕ್ಕರೆ ಮತ್ತು ಲಿಂಬೆರಸದ ಅಗತ್ಯವೂ ಇದ್ದು ನಿಮ್ಮ ಬಿಡುವಿನ ವೇಳೆಯಲ್ಲಿ ಸುಲಭವಾಗಿ ಮನೆಯಲ್ಲಿಯೇ ತಯಾರಿಸಿಕೊಳ್ಳಬಹುದು. ಅಲ್ಲದೇ ಇದರಲ್ಲಿ ಜೀರ್ಣಶಕ್ತಿಯನ್ನು ಹೆಚ್ಚಿಸುವ ಸ್ನೇಹಿ ಬ್ಯಾಕ್ಟೀರಿಯಾಗಳು ಹಾಗೂ ಹಲವು ವಿಟಮಿನ್ನುಗಳು ಇರುವುದರಿಂದ ಅನಾರೋಗ್ಯಕರ ಬುರುಗುಬರಿಸುವ ಸಿದ್ಧ ಪಾನೀಯಗಳ ಬದಲಿಗೆ ಸೇವಿಸಿ ಆರೋಗ್ಯ ವೃದ್ಧಿಸಿಕೊಳ್ಳಬಹುದು.

ಕೊಂಚ ಖಾರ, ಕೊಂಚ ಸಿಹಿಮಿಶ್ರಿತ

ಕೊಂಚ ಖಾರ, ಕೊಂಚ ಸಿಹಿಮಿಶ್ರಿತ

ಈ ಬಿಯರ್ ಕೊಂಚ ಖಾರ, ಕೊಂಚ ಸಿಹಿಮಿಶ್ರಿತವಾಗಿದ್ದು ಇದನ್ನು ಸವಿಯಲು ಇದು ಸಕಾಲವಾಗಿದೆ. ಅಲ್ಲದೇ ಇದರ ಸೇವನೆಯಿಂದ ಹಲವಾರು ವಿಧದ ಆರೋಗ್ಯಕರ ಪ್ರಯೋಜನಗಳಿವೆ. ಸಂಧಿವಾತಕ್ಕೆ ಇದು ಹೇಳಿ ಮಾಡಿಸಿದ ಪೇಯವಾಗಿದೆ. ಬನ್ನಿ, ಈ ಪ್ರಯೋಜನಗಳನ್ನು ಪಡೆದುಕೊಳ್ಳಲು ಇಂದೇ, ಮನೆಯಲ್ಲಿಯೇ ತಯಾರಿಸುವ ವಿಧಾನವನ್ನು ನೋಡೋಣ...

ಅಗತ್ಯವಿರುವ ಸಾಮಾಗ್ರಿಗಳು

ಅಗತ್ಯವಿರುವ ಸಾಮಾಗ್ರಿಗಳು

*200 ಗ್ರಾಂ ಸಿಪ್ಪೆ ಸುಲಿದು ಚಿಕ್ಕದಾಗಿ ತುಂಡರಿಸಿದ ಶುಂಠಿ

*450 ಮಿ.ಲೀ. ನೀರು

*20 ಗ್ರಾಂ ಉಪ್ಪು

*120 ಮಿಲಿ ಮಿನೆರಲ್ ವಾಟರ್

*ಒಂದು ಚಿಕ್ಕ ಬೋಗುಣಿಯಷ್ಟು ಲಿಂಬೆರಸ

*1 ಲಿಂಬೆಯ ಬಿಲ್ಲೆ

*ಕೊಂಚ ಜೇನು (ಕಾಡಿನ ಜೇನೇ ಅತ್ಯುತ್ತಮ)

ವಿಧಾನ:

ವಿಧಾನ:

*ಒಂದು ಪಾತ್ರೆಯಲ್ಲಿ 450 ಮಿ.ಲೀ. ನೀರನ್ನು ಹಾಕಿ ಕುದಿಸಿ. ಇದು ಕುದಿಯಲು ಪ್ರಾರಂಭವಾದ ತಕ್ಷಣ ಶುಂಠಿಯನ್ನು ಸೇರಿಸಿ. ಈಗ ಉರಿಯನ್ನು ತೀರಾ ಚಿಕ್ಕದಾಗಿಸಿ ಸುಮಾರು ಐದು ನಿಮಿಷಗಳವರೆಗೆ ಕುದಿಸಿ.

ವಿಧಾನ:

ವಿಧಾನ:

ಬಳಿಕ ಉರಿ ಆರಿಸಿ ಇಪ್ಪತ್ತು ನಿಮಿಷ ಹಾಗೇ ತಣಿಯಲು ಬಿಡಿ. ನಂತರ ಈ ನೀರನ್ನು ಸೋಸಿ ಇನ್ನೊಂದು ಪಾತ್ರೆಯಲ್ಲಿ ಸಂಗ್ರಹಿಸಿ. ಇನ್ನೊಂದು ಪಾತ್ರೆಯಲ್ಲಿ 120 ಮಿಲಿ ಮಿನೆರಲ್ ನೀರು ಹಾಕಿ ಇದಕ್ಕೆ ಅರ್ಧ ಕಪ್ ನಷ್ಟು ಶುಂಠಿ ಕುದಿಸಿ ಸೋಸಿದ್ದ ನೀರು, ಉಪ್ಪು, ಜೇನು ಮತ್ತು ಅರ್ಧ ಕಪ್ ನೀರು ಸೇರಿಸಿ ಮಿಶ್ರಣ ಮಾಡಿ.

ವಿಧಾನ:

ವಿಧಾನ:

ಈ ನೀರನ್ನು ಖಾಲಿ ಪ್ಲಾಸ್ಟಿಕ್ ಬಾಟಲಿಯಲ್ಲಿ ಹಾಕಿ ಹಾಕಿ ಶೇಖರಿಸಿ. ನಿಮ್ಮ ಅಗತ್ಯಕ್ಕೆ ತಕ್ಕಂತೆ ಕೆಲವು ದಿನಗಳ ಬಳಿಕ ಸೇವಿಸಿ. ಈ ಪೇಯ ಒಂದು ಅತ್ಯುತ್ತಮ ಆರೋಗ್ಯಕರ ಪೇಯವಾಗಿದ್ದು ಕ್ಯಾನ್ಸರ್ ಮತ್ತು ಸಂಧಿವಾತವನ್ನು ಕಡಿಮೆಗೊಳಿಸುತ್ತದೆ.

ಶುಂಠಿ ಬಿಯರ್‌ನ ಇತರ ಪ್ರಯೋಜನಗಳು

ಶುಂಠಿ ಬಿಯರ್‌ನ ಇತರ ಪ್ರಯೋಜನಗಳು

ಈ ಪೇಯವನ್ನು ಸೇವಿಸುವ ಮೂಲಕ ಜೀರ್ಣಕ್ರಿಯೆ ಉತ್ತಮಗೊಳ್ಳುತ್ತದೆ ಹಾಗೂ ಹೊಟ್ಟೆಗೆ ಸಂಬಂಧಿಸಿದ ಕೆಲವಾರು ತೊಂದರೆಗಳಿಂದ ಮುಕ್ತಿ ದೊರಕುತ್ತದೆ. ಅಲ್ಲದೇ ಕೆಟ್ಟ ಕೊಲೆಸ್ಟ್ರಾಲ್ ಹಾಗೂ ರಕ್ತದಲ್ಲಿ ಅಧಿಕ ಸಕ್ಕರೆಯ ಪ್ರಮಾಣವನ್ನು ನಿಯಂತ್ರಿಸುತ್ತದೆ. ಅಲ್ಲದೇ ಶೀತ ಮತ್ತು ಫ್ಲೂ ಜ್ವರ ಬರುವುದರಿಂದಲೂ ತಡೆಯುತ್ತದೆ ಹಾಗೂ ರಕ್ತಪರಿಚಲನೆಯನ್ನು ಉತ್ತಮಗೊಳಿಸುತ್ತದೆ.

ನೋವು ಮತ್ತು ಉರಿಯೂತಗಳಿಗಾಗಿ

ನೋವು ಮತ್ತು ಉರಿಯೂತಗಳಿಗಾಗಿ

ಶುಂಠಿಯ ಸೇವನೆಯಿಂದ ಬೆನ್ನು ನೋವು ಮತ್ತು ಸೊಂಟನೋವನ್ನು ಕಡಿಮೆಗೊಳಿಸಬಹುದು. ಹಾಗೂ ಉರಿಯೂತದ ಪರಿಣಾಮಗಳಾದ ಸಂಧಿವಾತ, ಕ್ಷೀಣಗೊಳ್ಳುವ ಮೂಳೆಗಳು ಮೊದಲಾದ ತೊಂದರೆಗಳಿಂದ ಬಳಲುವ ರೋಗಿಗಳಿಗೆ ಉತ್ತಮ ಪರಿಹಾರ ಒದಗಿಸುತ್ತದೆ.

ಮುಖ್ಯವಾದ ಸೂಚನೆ

ಮುಖ್ಯವಾದ ಸೂಚನೆ

ಈ ಪೇಯವನ್ನು ಶೇಖರಿಸಿಡಲು ಗಾಜಿನ ಬಾಟಲಿಗಳನ್ನು ಬಳಸಬೇಡಿ. ಏಕೆಂದರೆ ಒಂದೆರಡು ದಿನಗಳಲ್ಲಿಯೇ ಹುದುಗು ಬರುವ ಸಮದಯದಲ್ಲಿ ಇದರೊಳಗಿನ ರಾಸಾಯನಿಕ ಕ್ರಿಯೆಯಿಂದ ಒತ್ತಡ ಹೆಚ್ಚಾಗುವ ಕಾರಣ ಇದು ಗಾಜನ್ನು ಒಳಗಿನಿಂದ ಸ್ಫೋಟಿಸಬಹುದು...

English summary

Make Your Own Beer Which Helps In Treating Cancer & Arthritis!

This recipe that we are introducing here could be the best beer you might have ever tried. It is one strong and effective remedy to treat cancer, arthritis as well as stomach issues. It also helps to reduce cholesterol and blood sugar levels.
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Boldsky sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Boldsky website. However, you can change your cookie settings at any time. Learn more