Latest Updates
-
2026ರ ನವರಾತ್ರಿ ಗರ್ಬಾ: ಪಾಸ್ ವಂಚನೆಗೆ ಬಲಿಯಾಗದಿರಿ, ಸುರಕ್ಷಿತವಾಗಿ ಆನಂದಿಸಲು ಇಲ್ಲಿವೆ ಬೆಸ್ಟ್ ಟಿಪ್ಸ್! -
ದೆಹಲಿಯಲ್ಲಿ ಕಠಿಣ GRAP ನಿಯಮ ಜಾರಿ: ಮನೆಯ ಗಾಳಿ ಶುದ್ಧವಾಗಿಡಲು ಮತ್ತು ಮಾಲಿನ್ಯ ತಡೆಯಲು ಇಲ್ಲಿವೆ ಸರಳ ಟಿಪ್ಸ್ -
ಹಬ್ಬದ ಸಿಹಿ ಕೊಳ್ಳುವ ಮುನ್ನ ಎಚ್ಚರ: FSSAI ಕಟ್ಟುನಿಟ್ಟಿನ ಕಾರ್ಯಾಚರಣೆ ಮತ್ತು ಹೊಸ ನಿಯಮಗಳೇನು? -
ಮೈಸೂರು ದಸರಾ 2026: ಟಿಕೆಟ್ ಬುಕ್ಕಿಂಗ್ ಆರಂಭ, ಕಂಬಳ ನೋಂದಣಿಗೆ ಇಂದೇ ಕೊನೆಯ ದಿನ! -
ಗಾಂಧಿ ಜಯಂತಿ ವಿಶೇಷ: ಫಿಟ್ನೆಸ್ ಮತ್ತು ಸಮಾಜ ಸೇವೆ ಬೆಸೆಯುವ 'ಪ್ಲಾಗಿಂಗ್'ಗೆ ಸಿದ್ಧರಾಗಿ! -
ಡೇಟಿಂಗ್ ಆ್ಯಪ್ ಹನಿಟ್ರ್ಯಾಪ್: ಪಬ್ಗಳಲ್ಲಿ ನಡೆಯುವ ಈ ದಂಧೆಯಿಂದ ಪಾರಾಗುವುದು ಹೇಗೆ? -
IMD ಮಳೆ ಅಲರ್ಟ್: ಬೆಂಗಳೂರು, ಚೆನ್ನೈ, ಕೇರಳದಲ್ಲಿ ಭಾರೀ ಮಳೆ; ಮನೆಯನ್ನು ಸುರಕ್ಷಿತವಾಗಿರಿಸಲು ಈ ಟಿಪ್ಸ್ ಪಾಲಿಸಿ! -
ಇಂದಿನಿಂದ ಎನರ್ಜಿ ಡ್ರಿಂಕ್ಸ್ ನಿಯಮ ಬದಲಾವಣೆ: ಕ್ಯಾನ್ ಖರೀದಿಸುವ ಮುನ್ನ ಈ ಎಚ್ಚರಿಕೆ ಮರೆಯದಿರಿ! -
ಅಪಾರ್ಟ್ಮೆಂಟ್ ಗೇಟ್ನಲ್ಲಿ ಟ್ರಾಫಿಕ್ ಜಾಮ್? ಈ ಸರಳ ಟಿಪ್ಸ್ ಪಾಲಿಸಿದರೆ 5 ನಿಮಿಷದಲ್ಲಿ ಹೊರಬರಬಹುದು! -
ಬೆಳಗಿನ ವಾಕಿಂಗ್ ಹೋಗ್ತಿದ್ದೀರಾ? ಡೆಂಗ್ಯೂ ಸೊಳ್ಳೆಗಳಿಂದ ಪಾರಾಗಲು ಈ ಸರಳ ಟಿಪ್ಸ್ ಮಿಸ್ ಮಾಡ್ಬೇಡಿ!
ತೂಕ ಇಳಿಸಿಕೊಳ್ಳಬೇಕೇ?, ಹಸಿಶುಂಠಿಯ ನೆರವು ಪಡೆದುಕೊಳ್ಳಿ!
ಶೀತ, ಕೆಮ್ಮು, ವಾಕರಿಕೆ, ಅಜೀರ್ಣ ಮೊದಲಾದ ತೊಂದರೆಗಳಿಗೆ ಹಸಿಶುಂಠಿ ಉತ್ತಮ ಔಷಧಿಯಾಗಿದೆ. ಅಲ್ಲದೇ ಸ್ಥೂಲಕಾಯ ಕಡಿಮೆಗೊಳಿಸಲು ಹಸಿಶುಂಠಿ ನೆರವಾಗುತ್ತದೆ....
ನಿಸರ್ಗ ನೀಡಿರುವ ಅದ್ಭುತ ಔಷಧೀಯ ಗಿಡಮೂಲಿಕೆಗಳಲ್ಲಿ ಹಸಿಶುಂಠಿ ಪ್ರಮುಖ ಸ್ಥಾನ ಪಡೆದಿದೆ. ಶೀತ, ಕೆಮ್ಮು, ವಾಕರಿಕೆ, ಅಜೀರ್ಣ ಮೊದಲಾದ ತೊಂದರೆಗಳಿಗೆ ಹಸಿಶುಂಠಿ ಉತ್ತಮ ಔಷಧಿಯಾಗಿದೆ. ಅಲ್ಲದೇ ಸ್ಥೂಲಕಾಯ ಕಡಿಮೆಗೊಳಿಸಲು ಹಸಿಶುಂಠಿ ನೆರವಾಗುತ್ತದೆ.ಶುಂಠಿ - ಮೂರ್ತಿ ಚಿಕ್ಕದಾದರೂ ಕೀರ್ತಿ ದೊಡ್ಡದು
ಈ ಗುಟ್ಟನ್ನು ಅರಿತ ಕೆಲವು ಸ್ಥೂಲದೇಹಿಗಳು ಹಸಿಶುಂಠಿಯ ಸೇವನೆಯ ನೆರವನ್ನು ಪಡೆದು ಸಾಕಷ್ಟು ತೂಕವನ್ನು ಕಳೆದುಕೊಂಡಿದ್ದಾರೆ. ನಿಮಗೂ ಸ್ಥೂಲಕಾಯವನ್ನು ಕಳೆದುಕೊಳ್ಳುವ ಇರಾದೆಯಿದ್ದರೆ ನೀವೂ ಹಸಿಶುಂಠಿಯ ನೆರವು ಪಡೆಯಬಹುದು. ಇದಕ್ಕಾಗಿ ಹಲವು ವಿಧಾನಗಳಿವೆ. ಶುಂಠಿ, ಅಜೀರ್ಣ ಪರಿಹಾರಕ್ಕೆ ಒಂದು ಒಳ್ಳೆಯ ಮನೆ ಮದ್ದು
ಆದರೆ ನಿಮಗೆ ಸೂಕ್ತವೆನಿಸಿದ ಒಂದು ವಿಧಾನವನ್ನು ಮಾತ್ರ ಆರಿಸಿ ಅನುಸರಿಸಿ. ಯಾವುದಕ್ಕೂ ನಿಮ್ಮ ಕುಟುಂಬ ವೈದ್ಯರ ಸಲಹೆ ಪಡೆದ ಬಳಿಕವೇ ಮುಂದುವರೆಯಿರಿ....

ಸಲಹೆ #1
ಒಂದು ಚಿಕ್ಕ ತುಂಡು ಹಸಿಶುಂಠಿಯನ್ನು ತುರಿದು ಇದಕ್ಕೆ ಕೊಂಚವೇ ಲಿಂಬೆ ಮತ್ತು ಉಪ್ಪು ಸೇರಿಸಿ ಅರ್ಧ ಕಪ್ ಉಗುರುಬೆಚ್ಚನೆಯ ನೀರಿನಲ್ಲಿ ಬೆರೆಸಿ ಕುಡಿಯಿರಿ. ಈ ವಿಧಾನವನ್ನು ನಿಮ್ಮ ಮಧ್ಯಾಹ್ನದ ಮತ್ತು ರಾತ್ರಿಯ ಊಟಕ್ಕೂ ಒಂದು ಗಂಟೆ ಮುನ್ನ ಅನುಸರಿಸಿ.

ಸಲಹೆ #2
ಹೊಟ್ಟೆ ತುಂಬಾ ಊಟವಾದ ಬಳಿಕ ಒಂದು ಲೋಟ ಮಜ್ಜಿಗೆಯಲ್ಲಿ ಒಂದು ಚಿಕ್ಕ ತುಂಡು ಹಸಿಶುಂಠಿಯನ್ನು ತುರಿದು ಬೆರೆಸಿ ಕುಡಿಯಿರಿ.

ಸಲಹೆ #3
ನಿಮ್ಮ ಅಡುಗೆಯ ತರಕಾರಿಗಳನ್ನು ಹುರಿಯುವ ಮುನ್ನ ಒಂದು ಚಿಕ್ಕ ತುಂಡು ಹಸಿಶುಂಠಿಯನ್ನು ತುರಿದು ಒಂದು ಚಿಕ್ಕ ಚಮಚ ಎಣ್ಣೆಯಲ್ಲಿ ಹುರಿದ ಬಳಿಕ ತರಕಾರಿಗಳನ್ನು ಹಾಕಿ ಹುರಿಯಿರಿ ಬಳಿಕ ಮುಂದುವರೆಯಿರಿ.

ಸಲಹೆ #3
ಇದರಿಂದ ಅಡುಗೆ ಇನ್ನಷ್ಟು ರುಚಿಕರವಾಗುವುದು ಮಾತ್ರವಲ್ಲ, ಆರೋಗ್ಯವೂ ವೃದ್ಧಿಸುತ್ತದೆ ಹಾಗೂ ಸ್ಥೂಲಕಾಯವೂ ಕಡಿಮೆಯಾಗುತ್ತದೆ.

ಸಲಹೆ #4
ಮಧ್ಯಾಹ್ನದ ಬಳಿಕ ಒಂದು ವೇಳೆ ನಿಮಗೆ ಏನಾದರೂ ತಿನ್ನಬೇಕೆಂದು ಮನಸ್ಸಾದರೆ ಒಂದು ಚಿಕ್ಕ ತುಂಡು ಹಸಿಶುಂಠಿಯನ್ನು ಜಗಿದು ಬಾಯಿಯಲ್ಲಿಯೇ ಕೆಲವು ನಿಮಿಷ ಹಾಗೇ ಚಾಕಲೇಟಿನಂತೆ ಚೀಪುತ್ತಾ ಇರಿ.

ಸಲಹೆ #4
ಇದರಿಂದ ಏನಾದರೂ ತಿನ್ನಬೇಕೆಂಬ ಬಯಕೆ ಉಡುಗಿ ಹೋಗುತ್ತದೆ ಹಾಗೂ ಇದರ ಮೂಲಕ ಅನಗತ್ಯವಾಗಿ ತಿನ್ನಬಹುದಾಗಿದ್ದ ಸಿದ್ಧ ಆಹಾರಗಳು ಹೊಟ್ಟೆ ಸೇರದೇ ಹೆಚ್ಚುವರಿ ತೂಕ ಏರದಂತೆ ನೆರವಾಗುತ್ತದೆ. ಅಲ್ಲದೇ ಶುಂಠಿಯ ರಸ ಹೊಟ್ಟೆಗೆ ಹೋದ ಬಳಿಕ ತನ್ನ ಎಂದಿನ ಪ್ರಯೋಜನಗಳನ್ನು ನೀಡುತ್ತದೆ.

ಸಲಹೆ #5
ನಿಮ್ಮ ದಿನದ ಮೂರು ಹೊತ್ತಿನ ಹಾಲು ಬೆರೆಸಿದ ಟೀ ಬದಲಿಗೆ ಹಸಿಶುಂಠಿಯನ್ನು ಬಳಸಿದ ಹಾಲಿಲ್ಲದ ಟೀ ತಯಾರಿಸಿ ಕುಡಿಯಿರಿ.

ಸಲಹೆ #5
ಇದಕ್ಕಾಗಿ ಒಂದು ಚಿಕ್ಕ ತುಂಡು ಹಸಿಶುಂಠಿಯನ್ನು ಕೊಂಚವೇ ಜಜ್ಜಿ ಒಂದು ಕಪ್ ನೀರಿನಲ್ಲಿ ಸುಮಾರು ಹದಿನೈದು ನಿಮಿಷ ಮಧ್ಯಮ ಉರಿಯಲ್ಲಿ ಕುದಿಸಿ. ಈ ನೀರಿಗೆ ಕೊಂಚ ಜೇನು ಬೆರೆಸಿ ಶೋಧಿಸಿ ಟೀ ಬದಲಿಗೆ ದಿನಕ್ಕೆ ಮೂರು ಬಾರಿ ಕುಡಿಯಿರಿ.
ಬೆಕ್ಕಸ ಬೆರಗಾಗಿಸುವ ಹಸಿ ಶುಂಠಿಯ ಕಾರುಬಾರು...!


Click it and Unblock the Notifications
