ಅಧ್ಯಯನ ವರದಿ: ತೂಕ ಕಳೆದುಕೊಳ್ಳಲು ಲೈಂಗಿಕ ಕ್ರಿಯೆಯಲ್ಲಿ ತೊಡಗಿ ಸಾಕು!

Posted By: Lekhaka
Subscribe to Boldsky

ಸಂಬಂಧವೆನ್ನುವುದು ಹಾಗೆ ಉಳಿಯುವುದಿಲ್ಲ. ಅದಕ್ಕೆ ನಂಬಿಕೆ, ಹೊಂದಾಣಿಕೆ ಮತ್ತು ವಿಶ್ವಾಸ ಅತೀ ಅಗತ್ಯವಾಗಿ ಬೇಕೇಬೇಕು. ಇವುಗಳು ಇಲ್ಲದಂತಹ ಸಂಬಂಧವು ಹೆಚ್ಚು ಕಾಲ ಉಳಿಯಲು ಸಾಧ್ಯವಿಲ್ಲ. ಅದರಲ್ಲೂ ಸಂಬಂಧವು ಸರಿಯಾಗಿದ್ದರೆ ಆಗ ಜೀವನವು ಖುಷಿಯಿಂದ ಇರುವುದು. ಸಂಗಾತಿಯೊಂದಿಗಿನ ಸಂಬಂಧವು ಸರಿಯಾಗಿದ್ದರೆ ಆಗ ಲೈಂಗಿಕಾಸಕ್ತಿಯು ವೃದ್ಧಿಯಾಗುವುದು. ಪರಸ್ಪರರನ್ನು ಅರ್ಥ ಮಾಡಿಕೊಂಡು, ಗೌರವಿಸಿ, ಪ್ರೀತಿಸಿದರೆ ಆಗ ಸಂಬಂಧವು ಪರಿಪೂರ್ಣವಾಗಿರುವುದು. ಏಕಮುಖವಾಗಿರುವ ಸಂಬಂಧದಲ್ಲಿ ಯಾವಾಗಲೂ ಜಗಳ ಕಂಡುಬರುವುದು.

ಸಂಬಂಧದಲ್ಲಿ ಹೇಗೆ ಪ್ರೀತಿ ಮುಖ್ಯವೋ ಅದೇ ರೀತಿ ಲೈಂಗಿಕ ಕ್ರಿಯೆ ಕೂಡ. ನೀವು ಲೈಂಗಿಕ ಕ್ರಿಯೆಯಲ್ಲಿ ಸಂಗಾತಿಯೊಂದಿಗೆ ಸಹಕರಿಸಿದರೆ ಇದ್ದರೆ ಆಗ ಜೀವನದಲ್ಲಿ ನಿರಾಸಕ್ತಿ ಬರುವುದು. ಕಾಮಾಸಕ್ತಿಯನ್ನು ನೀಗಿಸುವುದು ಮತ್ತು ಸಂಬಂಧದಲ್ಲಿ ಮತ್ತಷ್ಟು ಹತ್ತಿರವಾಗುವುದೇ ಲೈಂಗಿಕ ಕ್ರಿಯೆಯ ಪ್ರಮುಖ ಅಂಶ.

ಲೈಂಗಿಕ ಕ್ರಿಯೆಯಿಂದ ಹಲವಾರು ರೀತಿಯ ಆರೋಗ್ಯ ಲಾಭಗಳು ಇದೆ ಎಂದು ಈಗಾಗಲೇ ನಾವು ತಿಳಿದುಕೊಂಡಿದ್ದೇವೆ. ಲೈಂಗಿಕ ಕ್ರಿಯೆಯಲ್ಲಿ ನೀವು ಸಂತೃಪ್ತಿಯನ್ನು ಪಡೆದಾಗ ದೇಹದಲ್ಲಿ ಖುಷಿಯ ಹಾರ್ಮೋನು ಎಂಡ್ರೋಫಿನ್ ಬಿಡುಗಡೆಯಾಗುವುದು. ಇದರಿಂದ ಆತಂಕ, ಒತ್ತಡ, ಖಿನ್ನತೆ, ಅಧಿಕರಕ್ತದೊತ್ತಡ ಇತ್ಯಾದಿ ನಿವಾರಣೆಯಾಗುವುದು.

ಮಹಿಳೆಯರು ಮಿಲನವನ್ನು ಬಯಸದಿರಲು ಇರುವ 9 ಕಾರಣಗಳು

ನಿಯಮಿತವಾಗಿ ಲೈಂಗಿಕ ಕ್ರಿಯೆಯಲ್ಲಿ ತೊಡಗಿಕೊಂಡರೆ ತ್ವಚೆಯ ಕಾಂತಿ ಹೆಚ್ಚಾಗುವುದು ಮತ್ತು ಮೊಡವೆಗಳ ನಿವಾರಣೆಯಾಗುವುದು. ಆದರೆ ಇತ್ತೀಚಿನ ಅಧ್ಯಯನವೊಂದರ ಪ್ರಕಾರ ಲೈಂಗಿಕ ಕ್ರಿಯೆಯಿಂದ ದೇಹದ ತೂಕ ಕಡಿಮೆ ಮಾಡಿಕೊಳ್ಳಬಹುದು ಎಂದು ತಿಳಿದುಬಂದಿದೆ. ಬೊಜ್ಜನ್ನು ಹೊಂದಿರುವಂತಹ ಹಲವಾರು ಮಂದಿಗೆ ತೂಕ ಕಡಿಮೆ ಮಾಡಿಕೊಳ್ಳಲು ಇದು ಪ್ರಮುಖ ವಿಧಾನವಾಗಿದೆ. ನಿಯಮಿತ ವ್ಯಾಯಾಮ ಮತ್ತು ಆಹಾರ ಕ್ರಮವನ್ನು ಸರಿಯಾಗಿ ಪಾಲಿಸಿಕೊಂಡು ಹೋದರೆ ಇದು ಪರಿಣಾಮಕಾರಿಯಾಗಲಿದೆ. ನಿಯಮಿತವಾಗಿ ಲೈಂಗಿಕ ಕ್ರಿಯೆಯಲ್ಲಿ ತೊಡಗಿಕೊಂಡರೆ ಹೇಗೆ ತೂಕ ಕಡಿಮೆ ಮಾಡಿಕೊಳ್ಳಬಹುದು ಎಂದು ಈ ಲೇಖನದ ಮೂಲಕ ತಿಳಿಯಿರಿ...  

ಲೈಂಗಿಕ ಕ್ರಿಯೆಯೂ ಒಂದು ವ್ಯಾಯಾಮ!

ಲೈಂಗಿಕ ಕ್ರಿಯೆಯೂ ಒಂದು ವ್ಯಾಯಾಮ!

ಜಿಮ್ ಗೆ ಹೋಗುವುದು, ಓಡುವುದು, ಈಜುವುದು ಇತ್ಯಾದಿಗಳು ಮಾತ್ರ ವ್ಯಾಯಾಮವೆಂದು ಹೆಚ್ಚಿನವರು ಭಾವಿಸಿದ್ದಾರೆ. ಆದರೆ ದೈನಂದಿನ ಮನೆಗೆಲಸಗಳು ಮತ್ತು ಲೈಂಗಿಕ ಕ್ರಿಯೆಯು ಒಂದು ರೀತಿಯ ವ್ಯಾಯಾಮ ಎಂದು ಹೇಳಲಾಗುತ್ತಿದೆ.

ಲೈಂಗಿಕ ಕ್ರಿಯೆಯೂ ಒಂದು ವ್ಯಾಯಾಮ!

ಲೈಂಗಿಕ ಕ್ರಿಯೆಯೂ ಒಂದು ವ್ಯಾಯಾಮ!

ಅರ್ಧ ಗಂಟೆಕಾಲ ಲೈಂಗಿಕ ಚಟುವಟಿಕೆಯಲ್ಲಿ ತೊಡಗಿಕೊಳ್ಳುವುದರಿಂದ ಪುರುಷರಲ್ಲಿ ಸುಮಾರು 101 ಕ್ಯಾಲರಿ ಮತ್ತು ಮಹಿಳೆಯರಲ್ಲಿ 70ರಷ್ಟು ಕ್ಯಾಲರಿ ದಹಿಸುತ್ತದೆ ಎಂದು ಅಧ್ಯಯನಗಳು ಹೇಳಿವೆ. ಲೈಂಗಿಕ ಕ್ರಿಯೆಯು ನಿಮಗೆ ಮನೋರಂಜನೆ ಜತೆಗೆ ಕ್ಯಾಲರಿ ಕೂಡ ದಹಿಸುವಂತೆ ಮಾಡುವುದು.

ಕ್ಯಾಲರಿ ದಹಿಸುವುದು ಮತ್ತು ಲೈಂಗಿಕ ಕ್ರಿಯೆ

ಕ್ಯಾಲರಿ ದಹಿಸುವುದು ಮತ್ತು ಲೈಂಗಿಕ ಕ್ರಿಯೆ

ಕ್ಯಾಲರಿ ದಹಿಸುವುದು ನೀವು ಲೈಂಗಿಕ ಕ್ರಿಯೆಯಲ್ಲಿ ಎಷ್ಟು ತೀವ್ರವಾಗಿ ತೊಡಗಿಸಿಕೊಂಡಿದ್ದೀರಿ ಎನ್ನುವ ಮೇಲೆ ಅವಲಂಬಿತವಾಗಿದೆ. ಲೈಂಗಿಕ ಆಟ, ಹಲವಾರು ಭಂಗಿ ಹೀಗೆ ಲೈಂಗಿಕ ಕ್ರಿಯೆಯು ಸುಮಾರು ಒಂದು ಗಂಟೆ ಕಾಲ ಸಾಗಿದರೆ ಆಗ ಪುರುಷರಲ್ಲಿ ಸುಮಾರು 306ರಷ್ಟು ಕ್ಯಾಲರಿ ದಹಿಸುವುದು ಮತ್ತು ಮಹಿಳೆಯರಲ್ಲಿ ಸುಮಾರು 200 ಕ್ಯಾಲರಿ ದಹಿಸುವುದು.ಇದು ಲೈಂಗಿಕ ಕ್ರಿಯೆಯ ತೀವ್ರತೆಯನ್ನು ಅವಲಂಬಿಸಿರುವುದು ಎಂದು ಅಧ್ಯಯನಗಳು ಹೇಳಿವೆ. ಟ್ರೇಡ್ ಮಿಲ್ ನಲ್ಲಿ ಒಂದು ಗಂಟೆ ವ್ಯಾಯಾಮ ಮಾಡುವುದಕ್ಕಿಂತ ಹೆಚ್ಚು ಲೈಂಗಿಕ ಕ್ರಿಯೆಯಲ್ಲಿ ಕ್ಯಾಲರಿ ದಹಿಸಬಹುದು.

ಅಧ್ಯಯನಗಳು ಏನು ಹೇಳುತ್ತವೆ?

ಅಧ್ಯಯನಗಳು ಏನು ಹೇಳುತ್ತವೆ?

ಇಂಗ್ಲೆಂಡಿನ ಬಂಗ್ನೋರ್ ವಿಶ್ವವಿದ್ಯಾನಿಲಯದ ತಂಡವು ಸುಮಾರು ಎರಡು ತಿಂಗಳ ಕಾಲ ಈ ವಿಚಾರವಾಗಿ ವಿಶೇಷ ಅಧ್ಯಯನವನ್ನು ಮಾಡಿದೆ. ಮೊದಲ ಗುಂಪಿನಲ್ಲಿದ್ದ ಜನರು ಯಾವುದೇ ಲೈಂಗಿಕ ಕ್ರಿಯೆಯಲ್ಲಿ ತೊಡಗಿಕೊಳ್ಳದೆ ಕೇವಲ ವ್ಯಾಯಾಮ ಮಾಡುವುದು. ಎರಡನೇ ಗುಂಪಿನಲ್ಲಿರುವ ಜನರು ನಿಯಮಿತವಾಗಿ ವ್ಯಾಯಾಮ ಮತ್ತು ಲೈಂಗಿಕ ಕ್ರಿಯೆಯಲ್ಲಿ ತೊಡಗಿಕೊಳ್ಳುವುದು.

ಅಧ್ಯಯನಗಳು ಏನು ಹೇಳುತ್ತವೆ?

ಅಧ್ಯಯನಗಳು ಏನು ಹೇಳುತ್ತವೆ?

ನಿಯಮಿತವಾಗಿ ಲೈಂಗಿಕ ಕ್ರಿಯೆಯಲ್ಲಿ ತೊಡಗಿಕೊಂಡ ಗುಂಪಿನಲ್ಲಿದ್ದವರು ಕೇವಲ ವ್ಯಾಯಾಮ ಮಾಡುವ ಗುಂಪಿಗಿಂತ ಹೆಚ್ಚು ತೂಕ ಕಳೆದುಕೊಂಡರು ಎಂದು ಅಧ್ಯಯನಗಳು ಕಂಡುಕೊಂಡಿವೆ. ಲೈಂಗಿಕ ಕ್ರಿಯೆ ವೇಳೆ ಬಿಡುಗಡೆಯಾಗುವ ಹಾರ್ಮೋನುಗಳು ಜನರಲ್ಲಿ ವೇಗವಾಗಿ ತೂಕ ಕಳೆದುಕೊಳ್ಳಲು ಕಾರಣವೆಂದು ಅಧ್ಯಯನಗಳು ಕಂಡುಕೊಂಡಿವೆ.

ನಿಯಮಿತ ಲೈಂಗಿಕ ಕ್ರಿಯೆಯಿಂದ ತಿನ್ನುವ ಬಯಕೆ ಕುಸಿತ!

ನಿಯಮಿತ ಲೈಂಗಿಕ ಕ್ರಿಯೆಯಿಂದ ತಿನ್ನುವ ಬಯಕೆ ಕುಸಿತ!

ಬೋಸ್ಟನ್ ನಲ್ಲಿ ನಡೆಸಿರುವಂತಹ ಇನ್ನೊಂದು ಅಧ್ಯಯನದ ಪ್ರಕಾರ ನಿಯಮಿತವಾಗಿ ಮಾಡುವಂತಹ ಲೈಂಗಿಕ ಕ್ರಿಯೆಯಿಂದ ತಿನ್ನುವ ಬಯಕೆಯು ಕಡಿಮೆಯಾಗುವುದು ಎಂದು ಹೇಳಲಾಗಿದೆ. ಲೈಂಗಿಕ ಕ್ರಿಯೆಯ ವೇಳೆ ಆಕ್ಸಿಟೊಸಿನ್ ಹಾರ್ಮೋನು ಬಿಡುಗಡೆಯಾಗುವುದು.

ನಿಯಮಿತ ಲೈಂಗಿಕ ಕ್ರಿಯೆಯಿಂದ ತಿನ್ನುವ ಬಯಕೆ ಕುಸಿತ!

ನಿಯಮಿತ ಲೈಂಗಿಕ ಕ್ರಿಯೆಯಿಂದ ತಿನ್ನುವ ಬಯಕೆ ಕುಸಿತ!

ಇದನ್ನೇ ಹೆಚ್ಚಿನವರು ಲವ್ ಹಾರ್ಮೋನು ಎಂದು ಕರೆಯುವರು. ಇದರಿಂದ ತಿನ್ನುವ ಬಯಕೆಯು ತೀವ್ರವಾಗಿ ಕಡಿಮೆಯಾಗುವುದು. ಹೀಗೆ ಆದರೆ ತೂಕ ಕೂಡ ಕಡಿಮೆಯಾಗುವುದು. ಅಂತಿಮವಾಗಿ ಹೇಳುವುದಾದರೆ ನಿಯಮಿತ ವ್ಯಾಯಾಮ, ಆಹಾರಕ್ರಮ ಮತ್ತು ಲೈಂಗಿಕ ಕ್ರಿಯೆಯಿಂದ ತೂಕ ಇಳಿಯುವುದು ಖಚಿತ.

English summary

Lovemaking-help-to-lose-weight

A recent research study has shown scientific evidence that regular sexual intercourse can help people lose weight! Yes, that is another amazing health benefit of sexual intercourse that many people battling obesity could take advantage of! However, it can only be effective when coupled with healthy diet and exercise habits. Have a look at how regular sexual intercourse can aid weight loss, in this article.