ಮಕ್ಕಳಿಗೆ ಸೊಳ್ಳೆ ಕಚ್ಚಿದರೆ ಈ ಔಷಧಗಳನ್ನು ಹಚ್ಚಿರಿ

By: Divya
Subscribe to Boldsky

ನೋಡಲು ಜೀರಿಗೆ ಗಾತ್ರ, ಕಚ್ಚಿದರೆ ಗಂಟೆಗಳ ಕಾಲ ಕೆರೆತವನ್ನು ಉಂಟುಮಾಡುವ ಕೀಟ ಸೊಳ್ಳೆ. ದೇವರಂತೆ ಸರ್ವವ್ಯಾಪಿಯಾಗಿ ಹಾರಾಡುವ ಇದರ ಪರಿಚಯ ಎಲ್ಲರಿಗೂ ಇದ್ದೇ ಇರುತ್ತದೆ. ತಮ್ಮ ಆಹಾರಕ್ಕಾಗಿ ಪ್ರಾಣಿ ಹಾಗೂ ಮನುಷ್ಯರ ರಕ್ತವನ್ನು ಹೀರುತ್ತವೆ. ಇದರ ಕಡಿತದಿಂದ ಅನೇಕ ಬಗೆಯ ಕಾಯಿಲೆಗಳು ನಮ್ಮನ್ನು ಆವರಿಸುವ ಸಾಧ್ಯತೆಗಳಿರುತ್ತವೆ. ಕೊಳಚೆ ಮತ್ತು ಹುಲ್ಲುಗಳ ಮಧ್ಯೆ ಹುಟ್ಟಿಕೊಳ್ಳುವ ಈ ಕೀಟದ ಮಗ್ಗೆ ಅಸಡ್ಡೆ ತೋರುವಂತಿಲ್ಲ.

ಸೊಳ್ಳೆಗಳು ಕಚ್ಚಿದ ಜಾಗವು ಕೆಂಪು ಬೊಬ್ಬೆಯಂತಾಗಿ ತುರಿಕೆ ಕಾಣಿಸಿಕೊಳ್ಳುವುದು. ಅದರಲ್ಲೂ ಶಿಶು ಮತ್ತು ಚಿಕ್ಕ ಮಕ್ಕಳಿಗೆ ಇದರ ಕಡಿತ ನಂಜಿನಂತಾಗಿ ಪರಿವರ್ತನೆಗೊಳ್ಳುವುದು. ಈ ಬಗೆಯ ತೊಂದರೆಗೆ ಪರಿಹಾರವಾಗಿ ಇಂಗ್ಲಿಷ್ ಔಷಧಗಳಿಲ್ಲ.

ಇದನ್ನೂ ಓದಿ - ಸೊಳ್ಳೆ ಕಡಿತದ ಉರಿ ಶಮನಕ್ಕೆ ಒಂದು ಬಾಳೆಹಣ್ಣು ಸಾಕು!

ಬದಲಾಗಿ ಮನೆಯಲ್ಲಿ ಇರುವ ಕೆಲವು ಪ್ರಮುಖ ಉತ್ಪನ್ನಗಳ ಸಹಾಯದಿಂದ ಗುಣಪಡಿಸಬಹುದು. ಅಡುಗೆ ಮನೆಯಲ್ಲಿಯೇ ಇರುವ ಈ ಉತ್ಪನ್ನಗಳು ಶಿಶುಗಳಿಗೂ ಯಾವುದೇ ಅಡ್ಡ ಪರಿಣಾಮ ಬೀರದು. ಹಾಗಾದರೆ ಈ ಉತ್ಪನ್ನಗಳು ಯಾವುದೆಂಬುದರ ಬಗ್ಗೆ ಅರಿಯೋಣ...  

ಅಲೋವೆರಾ

ಅಲೋವೆರಾ

ಅಲೋವೆರದ ಒಳಗಿನ ಜೆಲ್‍ಅನ್ನು ಸೊಳ್ಳೆ ಕಡಿದ ಜಾಗಕ್ಕೆ ಹಚ್ಚಬೇಕು. ಹೀಗೆ ಮಾಡುವುದರಿಂದ ಉರಿಯೂತ ಮತ್ತು ತುರಿಕೆಯು ಕಡಿಮೆಯಾಗುವುದು.

ಈರುಳ್ಳಿ

ಈರುಳ್ಳಿ

ಸೊಳ್ಳೆ ಕಡಿದ ಜಾಗದಲ್ಲಿ ಈರುಳ್ಳಿ ಚೂರಿನಿಂದ ಸ್ವಲ್ಪ ಮಸಾಜ್ ಮಾಡಬೇಕು. ಬಹಳ ಬೇಗ ತುರಿಕೆಯ ಸಂವೇದನೆಯು ನಿಯಂತ್ರಣಕ್ಕೆ ಬರುತ್ತದೆ.

ಇದನ್ನೂ ಓದಿ- ಬೇವು ಹತ್ತಿರವಿದ್ದರೆ, ಸೊಳ್ಳೆಗಳು ದೂರ

ಜೇನು ತುಪ್ಪ

ಜೇನು ತುಪ್ಪ

ಜೇನು ತುಪ್ಪದಲ್ಲಿ ಆಂಟಿಮೈಕ್ರೊಬಿಯಲ್ ಅಂಶವು ಸಮೃದ್ಧವಾಗಿದೆ. ಇದನ್ನು ಸೊಳ್ಳೆ ಕಡಿದ ಜಾಗದಲ್ಲಿ ಅನ್ವಯಿಸಿದರೆ ಬಹು ಬೇಗ ಗಾಯ ಗುಣಮುಖವಾಗುವುದು.

ನಿಂಬೆ ಹಣ್ಣು

ನಿಂಬೆ ಹಣ್ಣು

ಇದರಲ್ಲಿ ಆಮ್ಲೀಯ ಗುಣ ಅಧಿಕವಾಗಿದೆ. ಸೊಳ್ಳೆಯ ಕಡಿತದ ಜಾಗದಲ್ಲಿ ನಿಂಬೆ ರಸವನ್ನು ಹಚ್ಚುವುದರಿಂದ ಸೋಂಕಿನ ಸಂಭವನೀಯ ಏರಿಕೆಯ ಪ್ರಮಾಣ ಕಡಿಮೆಯಾಗುತ್ತದೆ.

ಟೂತ್ ಪೇಸ್ಟ್

ಟೂತ್ ಪೇಸ್ಟ್

ಸೊಳ್ಳೆ ಕಡಿದ ಜಾಗದಲ್ಲಿ ದಿನಕ್ಕೆರಡು ಬಾರಿ ಟೂತ್‍ಪೇಸ್ಟ್ ಹಚ್ಚಬೇಕು. ಆಗ ಉರಿಯೂತ ಹಾಗೂ ತುರಿಕೆಯನ್ನು ನಿಯಂತ್ರಿಸಬಹುದು.

ಸಾಬೂನು

ಸಾಬೂನು

ಸೊಳ್ಳೆ ಕಚ್ಚಿರುವಲ್ಲಿ ಸಾಬೂನಿನಿಂದ ತೊಳೆದರೆ ಸೋಂಕುಗಳಿಂದ ಮುಕ್ತಿಪಡೆಯಬಹುದು.

ಬೆಳ್ಳುಳ್ಳಿ

ಬೆಳ್ಳುಳ್ಳಿ

ಸೊಳ್ಳೆ ಕಡಿದ ಜಾಗದಲ್ಲಿ ಬೆಳ್ಳುಳ್ಳಿಯ ರಸ/ ಪೇಸ್ಟ್ ಹಚ್ಚುವುದರಿಂದ ಸ್ವಲ್ಪ ನೋವಿನ ಅನುಭವ ಆಗುವುದು. ಆದರೆ ಬಹಳ ಬೇಗ ಉರಿಯೂತ ಮತ್ತು ತುರಿಕೆ ಗುಣವಾಗುವುದು.

ಉಪ್ಪು

ಉಪ್ಪು

ಉತ್ತಮ ಆಂಟಿಸೆಫ್ಟಿಕ್ ಗುಣಲಕ್ಷಣ ಹೊಂದಿರುವ ಮೂಲ ವಸ್ತು ಉಪ್ಪು. ಇದನ್ನು ಸೊಳ್ಳೆಕಡಿದ ಜಾಗದ ಮೇಲೆ ಅನ್ವಯಿಸಿದರೆ ಒಮ್ಮೆಲೇ ಉರಿ ಆಗುವುದು. ಆದರೆ ಗಾಯವನ್ನು ಬಹಳಬೇಗ ನಿವಾರಿಸುತ್ತದೆ.

ತುಳಸಿ

ತುಳಸಿ

ಉತ್ತಮ ರೋಗ ನಿರೋಧಕ ಅಂಶವನ್ನು ಒಳಗೊಂಡಿರುವ ಸಸ್ಯ ತುಳಸಿ. ಸೊಳ್ಳೆ ಕಚ್ಚಿದ ಜಾಗದಲ್ಲಿ ಇದರ ರಸವನ್ನು ಹಚ್ಚುವುದರಿಂದ ಹೆಚ್ಚು ಪರಿಣಾಮಕಾರಿಯಾಗಿ ಕೆಲಸ ನಿರ್ವಹಿಸುತ್ತದೆ.

ಬಿಳಿ ವಿನೆಗರ್

ಬಿಳಿ ವಿನೆಗರ್

ಸೊಳ್ಳೆ ಕಡಿದರೆ, ಒಂದು ಬಕೇಟ್ ನೀರಿಗೆ 3 ಕಪ್ ವಿನೆಗರ್ ಸೇರಿಸಿ ಸ್ನಾನ ಮಾಡಬೇಕು. ಹೀಗೆ ಮಾಡುವುದರಿಂದ ಉರಿಯೂತ ಮತ್ತು ತುರಿಕೆ ಶಮನವಾಗುವುದು.

Read more about: home, health, ಮನೆ, ಆರೋಗ್ಯ
English summary

Kitchen Remedies To Soothe Mosquito Bite In Seconds

Mosquito bite causes mild pain and itching. Listed here are a few of the quick kitchen ingredients that can help to soothe a mosquito bite.
Story first published: Wednesday, May 17, 2017, 5:01 [IST]
Subscribe Newsletter