For Quick Alerts
ALLOW NOTIFICATIONS  
For Daily Alerts

ಬೇವು ಹತ್ತಿರವಿದ್ದರೆ, ಸೊಳ್ಳೆಗಳು ದೂರ

By Deepu
|

ಸೊಳ್ಳೆಗಳೆಂದರೆ ಇಂದಿಗೂ ಸಹ ಹೆಚ್ಚಿನವರು ಬೆಚ್ಚಿ ಬೀಳುತ್ತಾರೆ. ಸೊಳ್ಳೆಗಳು ಮಾನವನ ಜೀವನದಲ್ಲಿ ಹೆಚ್ಚು ತೊಂದರೆ ನೀಡಿರುವುದನ್ನು ಅನೇಕ ಪ್ರಕರಣಗಳಲ್ಲಿ ಕಂಡಿದ್ದೇವೆ. ಸೊಳ್ಳೆಗಳಿಂದ ದೂರವಿರಲು ಅನೇಕ ಉತ್ಪನ್ನಗಳ ಮತ್ತು ವಿಧಾನಗಳ ಬಳಕೆಯು ಚಾಲ್ತಿಯಲ್ಲಿವೆ. ಅದರಲ್ಲೂ ಕೆಲವು ಬಲಿಷ್ಠ ಸೊಳ್ಳೆಗಳು ನೀವು ಬಳಸುವ ಸರಳವಾದ ವಿಧಾನಗಳಿಂದ ಜಗ್ಗುವುದಿಲ್ಲ. ಇವುಗಳಿಂದ ಅನೇಕ ಆರೋಗ್ಯ ಸಮಸ್ಯೆಗಳು ಎದುರಾಗುತ್ತವೆ. ಸೊಳ್ಳೆ ಬರದಂತೆ ತಡೆಯುವುದು ಹೇಗೆ?

ಇತ್ತೀಚಿನ ದಿನಗಳಲ್ಲಿ ಸೊಳ್ಳೆಗಳಿಂದ ತೊಂದರೆಗೆ ಕಾರಣವಾಗುವ ಸಮಸ್ಯೆಯಾಗಿರುವ ಚಿಕೂನ್ ಗುನ್ಯ ಮತ್ತು ಡೆಂಗ್ಯೂ ಜ್ವರ ಎಂಬ ಕಾಯಿಲೆಗಳು ಹೆಚ್ಚು ಜನಪ್ರಿಯಗೊಂಡಿವೆ. ಇದರ ಜೊತೆಗೆ ಮಲೇರಿಯಾ ಸಹ ಹೊರತಾಗಿಲ್ಲ. ಸೊಳ್ಳೆಗಳು ಕಚ್ಚುವುದರಿಂದ ಈ ಸಮಸ್ಯೆಗಳು ಬರಲಿದ್ದು, ಈ ಕಾಯಿಲೆಗಳು ಕ್ಷಣಮಾತ್ರದಲ್ಲಿ ಎಲ್ಲರಿಗೂ ಹಬ್ಬುತ್ತವೆ. ಇತ್ತೀಚೆಗೆ ವಿದೇಶಗಳಲ್ಲಿ ಝಿಕಾ ಎಂಬ ಸೊಳ್ಳೆಯಿಂದ ಮಾರಣಾಂತಿಕ ಸಮಸ್ಯೆ ಎದುರಾಗಿರುವುದನ್ನು ನಾವು ಗಮನಿಸಿದ್ದೇವೆ. ಈ ಸೊಳ್ಳೆಗಳನ್ನು ನಿಮ್ಮ ಮನೆಯಲ್ಲಿಯೇ ನೈಸರ್ಗಿಕವಾಗಿ ನಾಶಮಾಡಲು ಮತ್ತು ನಿಯಂತ್ರಿಸಲು ಬೇವಿನ ಉಪಯೋಗದ ಬಗ್ಗೆ ಕೆಲವು ಉಪಯುಕ್ತ ವಿಧಾನಗಳನ್ನು ನೀಡಲಾಗಿದೆ. ಮನೆಯಲ್ಲಿಯೇ ಬೆಳೆಸಬಹುದಾದ ಸೊಳ್ಳೆ ನಿವಾರಕ ಸಸ್ಯಗಳು!

Neem, a natural mosquito repellent you must try!

ಬೇವು ಹೇಗೆ ಉಪಯುಕ್ತ?
ಬೇವು ಮತ್ತು ತೆಂಗಿನ ಎಣ್ಣೆಯ ಮಿಶ್ರಣವನ್ನು ನಿಮ್ಮ ಚರ್ಮಕ್ಕೆ ಹಚ್ಚಿಕೊಂಡಲ್ಲಿ ಸೊಳ್ಳೆಗಳು ಹತ್ತಿರವೂ ಸುಳಿಯುವುದಿಲ್ಲ ಎಂದು ಅಮೆರಿಕಾದ ಸೊಳ್ಳೆ ನಿಯಂತ್ರಣ ಸಂಘವು ತನ್ನ ಪತ್ರಿಕೆಯಲ್ಲಿ ಪ್ರಕಟಿಸಿದೆ. ಬೇವಿನಲ್ಲಿ ಆಂಟಿಪ್ರೊಟೊಸೋಲ್ ಸತ್ವವಿದ್ದು, ವಿಲಕ್ಷಣ ವಾಸನೆಯನ್ನು ಸೊಳ್ಳೆಗಳ ಮೇಲೆ ಹೊರಹೊಮ್ಮಿಸಲಿದೆ. ಅಲ್ಲದೆ ರಾಸಾಯನಿಕ ಉತ್ಪನ್ನಗಳಿಗಿಂತ ಬೇವು ಹೆಚ್ಚು ಶಕ್ತಿಶಾಲಿಯಾಗಿದ್ದು, ಇದರ ಬಳಕೆಯಿಂದ ನವೆ, ಚರ್ಮದ ಉರಿ ಮತ್ತು ಅಡ್ಡಪರಿಣಾಮಗಳು ಉಂಟಾಗುವುದಿಲ್ಲ ಜೊತೆಗೆ ಇತರೆ ಚರ್ಮದ ಸಮಸ್ಯೆಗಳಿಂದ ಪಾರುಮಾಡುತ್ತದೆ. ಸೊಳ್ಳೆ ಕಡಿತದಿಂದ ಪಾರಾಗಬೇಕೆ?

ಉಪಯೋಗಿಸುವ ಬಗೆ?

ಒಂದು ಚಮಚ ತೆಂಗಿನ ಎಣ್ಣೆ ಮತ್ತು ಒಂದು ಚಮಚ ಬೇವಿನ ಎಣ್ಣೆಯನ್ನು ಬೆರೆಸಿಕೊಳ್ಳಿ. ಈ ಮಿಶ್ರಣವನ್ನು ನಿಮ್ಮ ಚರ್ಮದ ಮೇಲೆ ಮಲಗುವಾಗ ಹಚ್ಚಿಕೊಳ್ಳಿ. ಇದನ್ನು ನಿಮ್ಮ ಮಕ್ಕಳಿಗೂ ಬಳಸಬಹುದಾಗಿದ್ದು, ಇದು ನೈಸರ್ಗಿಕವಾಗಿದ್ದು ಸುರಕ್ಷಿತವೂ ಹೌದು. ನಿಮಗಿನ್ನೂ ಸಂಶಯವಿದ್ದಲ್ಲಿ ನಿಮ್ಮ ಮಕ್ಕಳಲ್ಲಿ ನವೆ ಅಥವಾ ಅಲರ್ಜಿಯಿದ್ದಲ್ಲಿ ಒಮ್ಮೆ ಪ್ಯಾಚ್ ಟೆಸ್ಟ್ ಅನ್ನು ಪ್ರಯತ್ನಿಸಿ. ಇದು ಹೊರಹೊಮ್ಮಿಸುವ ವಾಸನೆಯು ನಿಮಗೆ ಅಹಿತವಾಗಿದ್ದಲ್ಲಿ, ಬೇವಿನ ಎಣ್ಣೆಯ ಡಿಫ್ಯೂಸರ್ ಅನ್ನು ಬಳಸಬಹುದು. 2 ರಿಂದ 3 ಚಮಚ ಬೇವಿನ ಎಣ್ಣೆಯನ್ನು ಡಿಫ್ಯೂಸರ್ ನಲ್ಲಿ ಇರಿಸಿ ನಿಮ್ಮ ಕೊಠಡಿಯ ಮೂಲೆಯಲ್ಲಿ ಇರಿಸಿ. ಇದರಿಂದ ಸೊಳ್ಳೆಗಳು ದೂರವಾಗುತ್ತವೆ. ಇದೇ ಬೇವಿನ ತಾತ್ಪರ್ಯ.
English summary

Neem, a natural mosquito repellent you must try!

A single mosquito bite can land you in a hospital for dengue, malaria or chikungunya. And the only way to prevent this is to either use chemical mosquito repellents or innovative electric devices to kill mosquitoes. But if you are looking for natural and effective home remedies to prevent a mosquito bite, apply neem oil on your skin 
Story first published: Wednesday, February 3, 2016, 20:23 [IST]
X
Desktop Bottom Promotion