Latest Updates
-
ಗಣೇಶೋತ್ಸವದ ಮಳೆ ಮತ್ತು ದರ್ಶನದ ಕ್ಯೂ: ಆಯಾಸವಿಲ್ಲದೆ ಬಪ್ಪನ ದರ್ಶನ ಪಡೆಯಲು ಇಲ್ಲಿದೆ ಬೆಸ್ಟ್ ಟಿಪ್ಸ್! -
ಅಮಾವಾಸ್ಯೆಯ ದಿನ ಜಗಳ ಬೇಡ: ದಂಪತಿಗಳ ನಡುವಿನ ಪ್ರೀತಿ ಹೆಚ್ಚಿಸಲು ಈ ಸಂಭಾಷಣೆ ಸೂತ್ರಗಳು -
ಆರೆಂಜ್ ಅಲರ್ಟ್: ಭಾರಿ ಮಳೆಯಿಂದ ಮನೆ ರಕ್ಷಿಸಲು ಈ 5 ಟಿಪ್ಸ್ ಪಾಲಿಸಿ, ಸುರಕ್ಷಿತವಾಗಿರಿ! -
ಪ್ರೊಟೀನ್ ಪೌಡರ್ನಲ್ಲಿ ಹುಳುಗಳು! ಬಾಲಿವುಡ್ ನಟಿಯ ಆತಂಕ, ಎಫ್ಡಿಎ ತನಿಖೆ ಮತ್ತು ನೀವು ತಿಳಿಯಲೇಬೇಕಾದ ಸುರಕ್ಷತಾ ಟಿಪ್ಸ್ -
BRICS ಶೃಂಗಸಭೆ: ದೆಹಲಿಯಲ್ಲಿ ಟ್ರಾಫಿಕ್ ನಿರ್ಬಂಧ, ಪ್ರಯಾಣಕ್ಕೂ ಮುನ್ನ ಈ ರೂಟ್ ಮ್ಯಾಪ್ ನೋಡಿ! -
ತೆಲಂಗಾಣದಲ್ಲಿ ಭಾರಿ ಮಳೆ: ಮಳೆಯಲ್ಲಿ ವಾಕಿಂಗ್ ಹೋಗುವ ಮುನ್ನ ಈ ಸುರಕ್ಷತಾ ಟಿಪ್ಸ್ ಮರೆಯದಿರಿ -
ಮದುವೆಯಾದ ತಕ್ಷಣ ಸ್ವಾತಂತ್ರ್ಯ ಕೊನೆಗೊಳ್ಳುವುದಿಲ್ಲ: ದಾಂಪತ್ಯದಲ್ಲಿ 'ಸಮ್ಮತಿ'ಯ ಮಹತ್ವವೇನು? -
ಕೇರಳದಲ್ಲಿ ಭಾರೀ ಮಳೆ: ಯೆಲ್ಲೋ ಅಲರ್ಟ್ ಘೋಷಣೆ; ನಿಮ್ಮ ಮನೆ ಮತ್ತು ಸುರಕ್ಷತೆಗಾಗಿ ಈ ಮುನ್ನೆಚ್ಚರಿಕೆ ಕ್ರಮಗಳು ಅತ್ಯಗತ್ಯ -
ಗಣೇಶ ಹಬ್ಬದ ಪ್ರಸಾದ ತಯಾರಿಸುತ್ತಿದ್ದೀರಾ? ಕಲಬೆರಕೆ ತಡೆಯಲು ಮತ್ತು ಸುರಕ್ಷಿತ ಪ್ರಸಾದಕ್ಕೆ ಇಲ್ಲಿದೆ ಮಹತ್ವದ ಟಿಪ್ಸ್ -
ಐಫೋನ್ 18 ಪ್ರೋ ಮತ್ತು ಡ್ಯುವೋ ಭಾರತದಲ್ಲಿ ಲಾಂಚ್: ಬೆಲೆ, ಆಫರ್ ಮತ್ತು ಪ್ರಿ-ಆರ್ಡರ್ ಮಾಹಿತಿ ಇಲ್ಲಿದೆ!
ಮೈ ಕೈ ನೋವಿದ್ದರೆ, ಈ ಮನೆಮದ್ದು ಸೇವಿಸಿ, ಕೂಡಲೇ ಕಡಿಮೆಯಾಗುವುದು!
ಕೆಲವೊಮ್ಮೆ ಮೈ ಕೈ ನೋವು ಒಂದು ಕಿರಿಕಿರಿ ತರಿಸುವ ತೊಂದರೆಯಾಗಿದ್ದು ನಿತ್ಯದ ಇತರ ಚಟುವಟಿಕೆಗಳನ್ನೆಲ್ಲಾ ಕಷ್ಟಕರವಾಗಿಸುತ್ತದೆ. ಚಿಕ್ಕ ಪುಟ್ಟ ಕೆಲಸಗಳೂ ಭಾರೀ ತ್ರಾಸವಾದಂತೆ ಅನ್ನಿಸುತ್ತದೆ.
ಬೆಳಿಗ್ಗೆ ಹಾಸಿಗೆಯಿಂದ ಏಳಬೇಕಾದರೆ ದೇಹಪೂರ್ತಿ ನೋವು ಕಾಣಿಸಿಕೊಂಡರೆ ಆ ದಿನ ಯಾವುದೇ ಕೆಲಸ ಕಾರ್ಯಗಳನ್ನು ಮಾಡಲು ಸಾಧ್ಯವಾಗುವುದಿಲ್ಲ. ಮೈ ಪೂರ್ತಿ ನೋವು ಕಾಣಿಸಿಕೊಂಡರೆ ಅದಕ್ಕೆ ಒಂದು ನೋವು ನಿವಾರಕ ಮಾತ್ರೆ ತೆಗೆದುಕೊಂಡು ಸುಮ್ಮನಿರುವುದು ಹೆಚ್ಚಿನವರ ಅಭ್ಯಾಸವಾಗಿದೆ. ಪ್ರಯಾಣದ ನಂತರ ಕಾಡುವ ಮೈ ಕೈ ನೋವಿಗೆ ಮನೆಮದ್ದು
ಆದರೆ ಈ ಮೈ ನೋವು ಹಿಂದೆ ಆಗಿರುವಂತಹ ಅಪಘಾತದಲ್ಲಿ ಆದಂತಹ ಗಾಯಗಳು, ಸರಿಯಾದ ಭಂಗಿಯಲ್ಲಿ ಕುಳಿತುಕೊಳ್ಳದೆ ಇರುವುದು, ಭಾರವಾದ ವಸ್ತುವನ್ನು ಒಮ್ಮೆಲೇ ಎತ್ತುವುದರಿಂದ ಬೆನ್ನಿಗೆ ನೋವಾಗಬಹುದು. ದೇಹಕ್ಕೆ ಅತಿಯಾಗಿ ಶ್ರಮವಹಿಸಿದರೂ ಮೈಕೈ ನೋವು ಕಾಣಿಸಿಕೊಳ್ಳುವುದು. ಈ ನೋವಿನಿಂದ ಯಾವುದೇ ಕೆಲಸಗಳನ್ನು ಮಾಡುವುದು ಅಸಾಧ್ಯವೆನಿಸುತ್ತದೆ. ದೇಹದ ನೋವನ್ನು ಕಡಿಮೆ ಮಾಡುವ ಆಹಾರಗಳು
ಇಂತಹ ಸಮಯದಲ್ಲಿ ನೀವು ನೈಸರ್ಗಿಕವಾಗಿರುವ ಒಂದು ಪಾನೀಯವನ್ನು ಕುಡಿದರೆ ನೋವು ಮಾಯವಾಗಿ ನೀವು ಉಲ್ಲಾಸದಿಂದ ಓಡಾಡಬಹುದು. ನೋವು ಯಾವಾಗಲೂ ಕಾಡುತ್ತಾ ಇದ್ದರೆ ಅಗತ್ಯವಾಗಿ ವೈದ್ಯರನ್ನು ಭೇಟಿಯಾಗಿ ಸಲಹೆ ಪಡೆಯಿರಿ. ನೈಸರ್ಗಿಕ ಪಾನೀಯ ತಯಾರಿಸುವ ಬಗ್ಗೆ ಮುಂದೆ ತಿಳಿಯಿರಿ....

ಅರಿಶಿನ
ಒಂದು ಚಮಚ ಅರಿಶಿನ ಹುಡಿಯನ್ನು ಹಾಕಿಕೊಂಡು ಅದಕ್ಕೆ ಸ್ವಲ್ಪ ನೀರು ಹಾಕಿ ದಪ್ಪಗಿನ ಪೇಸ್ಟ್ ಮಾಡಿಕೊಳ್ಳಿ. ಅರಿಶಿನದಲ್ಲಿ ಇರುವಂತಹ ಕುರ್ಕುಮಿನ್ ಎನ್ನುವ ಅಂಶವು ಉರಿಯೂತ ಶಮನಕಾರಿ ಗುಣವನ್ನು ಹೊಂದಿದೆ.

ಅರಿಶಿನ
ಒಂದು ಚಮಚ ಅರಿಶಿನ ಹುಡಿಯನ್ನು ಹಾಕಿಕೊಂಡು ಅದಕ್ಕೆ ಸ್ವಲ್ಪ ನೀರು ಹಾಕಿ ದಪ್ಪಗಿನ ಪೇಸ್ಟ್ ಮಾಡಿಕೊಳ್ಳಿ. ಅರಿಶಿನದಲ್ಲಿ ಇರುವಂತಹ ಕುರ್ಕುಮಿನ್ ಎನ್ನುವ ಅಂಶವು ಉರಿಯೂತ ಶಮನಕಾರಿ ಗುಣವನ್ನು ಹೊಂದಿದೆ.

ಕರಿಮೆಣಸು
ಒಂದು ಚಿಟಿಕೆ ಕರಿಮೆಣಸಿನ ಹುಡಿಯನ್ನು ತೆಗೆದುಕೊಳ್ಳಿ. ಇದು ಆ್ಯಂಟಿಆಕ್ಸಿಡೆಂಟ್ ಮತ್ತು ಉರಿಯೂತ ಶಮನಕಾರಿ, ಬ್ಯಾಕ್ಟೀರಿಯಾ ವಿರೋಧಿ ಗುಣವನ್ನು ಹೊಂದಿದೆ. 9 ಭಯಂಕರ ಕಾಯಿಲೆಗೆ ಮನೆಮದ್ದು ಈ ಕರಿಮೆಣಸು!

ಬಾದಾಮಿ ಹಾಲು/ತೆಂಗಿನ ಹಾಲು
ಒಂದು ಕಪ್ ಬಾದಾಮಿ ಹಾಲು ಅಥವಾ ತೆಂಗಿನ ಹಾಲು ತೆಗೆದುಕೊಳ್ಳಿ. ಬಾದಾಮಿ ಹಾಲಿನಲ್ಲಿ ವಿಟಮಿನ್ ಸಿ, ಇ, ಕಬ್ಬಿಣ, ಕ್ಯಾಲ್ಸಿಯಂ ಮತ್ತು ಪ್ರೋಟೀನ್ ಯಥೇಚ್ಛವಾಗಿದೆ. ತೆಂಗಿನ ಹಾಲಿನಲ್ಲಿ ನಾರಿನಾಂಶ, ವಿಟಮಿನ್ ಸಿ, ಇ, ಕಬ್ಬಿಣ ಮತ್ತು ಕ್ಯಾಲ್ಸಿಯಂ ಇದೆ.ಬಾದಾಮಿ ಹಾಲು+ ಜೇನುತುಪ್ಪದ ಜೋಡಿಗೆ ನಮ್ಮದೊಂದು ಸಲಾಂ!

ತೆಂಗಿನ ಹಾಲು
ಒಂದು ಚಮಚ ತೆಂಗಿನ ಹಾಲು ತೆಗೆದುಕೊಳ್ಳಿ. ತೆಂಗಿನ ಹಾಲಿನಲ್ಲಿ ಉರಿಯೂತ ಶಮನಕಾರಿ ಗುಣಗಳು ಸಮೃದ್ಧವಾಗಿದೆ.

ಜೇನುತುಪ್ಪ
ಜೇನುತುಪ್ಪದಲ್ಲಿ ಉರಿಯೂತ ಶಮನಕಾರಿ ಗುಣ ಹಾಗೂ ಬ್ಯಾಕ್ಟೀರಿಯಾ ವಿರೋಧಿ ಗುಣಗಳು ಇವೆ. ಒಂದು ಚಮಚ ತಾಜಾ ಜೇನುತುಪ್ಪ ತೆಗೆದುಕೊಳ್ಳಿ.

ತಯಾರಿಸುವ ವಿಧಾನ
*ಜೇನುತುಪ್ಪವನ್ನು ಬಿಟ್ಟು ಬೇರೆ ಎಲ್ಲಾ ಸಾಮಗ್ರಿಗಳನ್ನು ಒಂದು ತವಾಗೆ ಹಾಕಿಕೊಂಡು ಬಿಸಿ ಮಾಡಿ.

ತಯಾರಿಸುವ ವಿಧಾನ
*ಇದು ಕುದಿಯುವುದು ಬೇಡ, ಉಗುರು ಬೆಚ್ಚಗೆ ಬಿಸಿಯಾದರೆ ಸಾಕು. ಇದು ತಯಾರಾದರೆ ಅದಕ್ಕೆ ಜೇನುತುಪ್ಪ ಹಾಕಿಕೊಳ್ಳಿ ಮತ್ತು ಸರಿಯಾಗಿ ಮಿಶ್ರಣ ಮಾಡಿ.

ತಯಾರಿಸುವ ವಿಧಾನ
*ಮಲಗುವ ಮೊದಲು ಒಂದು ಕಪ್ ಬಿಸಿಯಾಗಿರುವ ಪಾನೀಯವನ್ನು ಸೇವಿಸಿದರೆ ಮೈ ನೋವು ಮಾಯವಾಗುವುದು.



Click it and Unblock the Notifications
