For Quick Alerts
ALLOW NOTIFICATIONS  
For Daily Alerts

ದೇಹದ ನೋವನ್ನು ಕಡಿಮೆ ಮಾಡುವ ಆಹಾರಗಳು

By Super
|

ದೇಹದ ವಿಪರೀತವಾದ ನೋವು ಪ್ರತಿ ಐದು ಮಂದಿಯಲ್ಲಿ ಇಬ್ಬರನ್ನು ಕಾಡುತ್ತಿರುತ್ತದೆ. ಅವರಿಗೆ ಬೆನ್ನು ನೋವು, ಕೀಲು ನೋವು ಅಥವಾ ಮುಂತಾದ ನೋವುಗಳು ಕಾಡುತ್ತಿರಬಹುದು. ಇದಕ್ಕೆ ಕಾರಣ ವ್ಯಾಯಾಮದ ಕೊರತೆ ಮತ್ತು ಅಸಮರ್ಪಕ ಜೀವನಶೈಲಿ. ಅದಕ್ಕಾಗಿ ಪ್ರತಿಯೊಬ್ಬರು ನಿತ್ಯ ವ್ಯಾಯಾಮವನ್ನು ಮಾಡಬೇಕು, ಅನಾರೋಗ್ಯಕಾರಿ ಆಹಾರಗಳನ್ನು ಸೇವಿಸಬಾರದು ಹಾಗು ಅನಾರೋಗ್ಯವನ್ನುಂಟು ಮಾಡುವ ಭಂಗಿಗಳನ್ನು ಬಳಕೆ ಮಾಡಬಾರದು.

ಆರೋಗ್ಯಕರವಾದ ಆಹಾರವು ನಿಮ್ಮ ನೋವನ್ನು ನಿವಾರಿಸುವುದರ ಜೊತೆಗೆ ಮುಂದೆ ಬರುವ ನೋವನ್ನು ಸಹ ನಿವಾರಿಸುತ್ತದೆ. ಅದಕ್ಕಾಗಿ ಹಲವಾರು ಆಹಾರ ಪದಾರ್ಥಗಳು ನಮ್ಮ ನಡುವೆ ದೊರೆಯುತ್ತವೆ ಎಂಬುದು ಸಂತಸದ ವಿಚಾರ. ಈ ಆಹಾರ ಪದಾರ್ಥಗಳನ್ನು ಪ್ರತಿನಿತ್ಯ ಸೇವಿಸುವುದರಿಂದ ನಾವು ನೋವನ್ನು ಮತ್ತು ಒತ್ತಡವನ್ನು ನಿವಾರಿಸಿಕೊಳ್ಳಬಹುದು.

ಅಂತಹ 10 ಆಹಾರಗಳನ್ನು ನಾವು ಇಲ್ಲಿ ಪಟ್ಟಿ ಮಾಡಿದ್ದೇವೆ ಓದಿ ತಿಳಿದುಕೊಳ್ಳಿ'-

1. ಚೆರ್ರಿಗಳು

1. ಚೆರ್ರಿಗಳು

ಕೆಂಪು ಬಣ್ಣದ ಈ ಸಣ್ಣ ಹಣ್ಣುಗಳು ಸಮೃದ್ಧವಾದ ಅಂಟಿ ಆಕ್ಸಿಡೆಂಟ್‍ಗಳನ್ನು ಮತ್ತು ಅಂಟಿ ಇನ್‍ಫ್ಲೆಮ್ಮಟೊರಿ ಎನ್‍ಜೈಮ್‍ಗಳನ್ನು ತನ್ನಲ್ಲಿ ಒಳಗೊಂಡಿದೆ. ಇವುಗಳು ಕೀಲು ನೋವು ಮತ್ತು ಅರ್ತಿರಿಟಿಸ್‍ನಿಂದ ಉಂಟಾಗುವ ನೋವುಗಳನ್ನು ಕಡಿಮೆ ಮಾಡುತ್ತದೆ. ಇದಕ್ಕಾಗಿ ನೀವು ಪ್ರತಿದಿನ 45 ಚೆರ್ರಿಗಳನ್ನು ಸೇವಿಸಬೇಕಾಗುತ್ತದೆ.

2. ಶುಂಠಿ

2. ಶುಂಠಿ

ಅಸ್ಪಿರಿನ್ ಮಾತ್ರೆಯ ಬದಲು ಶುಂಠಿಯನ್ನು ಬಳಸುವುದು ಉತ್ತಮ. ಇದು ಅಸ್ಪಿರಿನ್ ಮಾಡುವ ಕೆಲಸವನ್ನು ಸ್ವಾಭಾವಿಕವಾಗಿ ಮಾಡಿ ತೋರಿಸುತ್ತದೆ. ತಲೆ ನೋವು ಮತ್ತು ಮೈಗ್ರೇನ್ ನೋವುಗಳಿಗೆ ಇದು ಅಸ್ಪಿರಿನ್‍ಗಿಂತ ಒಳ್ಳೆಯ ಮುಲಾಮಾಗಿದೆ. ಇದನ್ನು ಸುಲಭವಾಗಿ ನಿಮ್ಮ ಆಹಾರದ ಜೊತೆಗೆ ಸೇವಿಸಬಹುದು. ಹಾಗಾಗಿ ನಿಮ್ಮ ದೈನಂದಿನ ಆಹಾರದಲ್ಲಿ ಶುಂಠಿಯನ್ನು ಮಿತವಾಗಿ ಬಳಸಿ ಸಾಕು.

3. ಸಮುದ್ರ ಜನ್ಯ ಆಹಾರಗಳು

3. ಸಮುದ್ರ ಜನ್ಯ ಆಹಾರಗಳು

ಮೀನುಗಳಲ್ಲಿ ಒಮೆಗಾ-3 ಯಥೇಚ್ಛವಾಗಿರುತ್ತದೆ. ಇವುಗಳು ಅತ್ಯುತ್ತಮವಾದ ನೋವು ನಿವಾರಕಗಳು ಮತ್ತು ಬಾವು ನಿವಾರಕಗಳು. ಒಮೆಗಾ 3 ನಮ್ಮ ದೇಹದಲ್ಲಿ ರಕ್ತ ಪರಿಚಲನೆಯನ್ನು ಹೆಚ್ಚಿಸಿ ನೋವನ್ನು ಕಡಿಮೆ ಮಾಡುತ್ತವೆ. ಮೀನಿನ ಎಣ್ಣೆಯು ಹೃದಯ ಸಂಬಂಧಿ ಕಾಯಿಲೆಗಳಿಗೆ ಅತ್ಯುತ್ತಮವಾದ ನಿವಾರಕ ಗುಣಗಳನ್ನು ತನ್ನಲ್ಲಿ ಅಡಗಿಸಿಕೊಂಡಿದೆ. ಹಾಗಾಗಿ ಮುಂದೆ ಬರುವ ಯಾವುದೇ ತೀವ್ರತರವಾದ ನೋವುಗಳನ್ನು ನಿವಾರಿಸಿಕೊಳ್ಳಲು ಮೀನನ್ನು ನಿಮ್ಮ ಆಹಾರದಲ್ಲಿ ಸೇರಿಸಿಕೊಳ್ಳುವುದು ಉತ್ತಮ.

4. ಅರಿಶಿಣ

4. ಅರಿಶಿಣ

ಅರಿಶಿಣವು ದೇಹದಲ್ಲಿ ಉಂಟಾಗುವ ಟಿಶ್ಯೂ ಏರು ಪೇರು, ಕೀಲು ಬಾವುಗಳನ್ನು ತಡೆಯುತ್ತದೆ ಮತ್ತು ನರ ಕೋಶಗಳ ಕಾರ್ಯ ವೈಖರಿಯನ್ನು ಸುಧಾರಿಸುತ್ತದೆ. ಸ್ನಾಯುಗಳಲ್ಲಿ ಉಳುಕು ಅಥವಾ ಗಾಯವಾದಾಗ ಅರಿಶಿಣವನ್ನು ಹೊರಭಾಗದಲ್ಲಿ ಹಚ್ಚಿದಾಗ ನೋವು ಮತ್ತು ಬಾವು ಉಂಟಾಗುವುದು ತಪ್ಪುತ್ತದೆ.

5. ಕಾಫಿ

5. ಕಾಫಿ

ಕಾಫಿಯಲ್ಲಿ ಯಥೇಚ್ಛವಾಗಿ ಅಂಟಿ ಆಕ್ಸಿಡೆಂಟ್‍ಗಳು ಇವೆ. ಇದರ ಪ್ರಮಾಣವು ಒಂದು ಕಪ್ ಚೆರ್ರಿಗಳಿಗಿಂತ ಹೆಚ್ಚು. ಹಾಗಾಗಿ ಕಾಫಿಯು ಒಂದು ಅತ್ಯುತ್ತಮವಾದ ನೋವು ನಿವಾರಕವೆನ್ನಬಹುದು. ಕಾಫಿಯನ್ನು ತೀವ್ರತರವಾದ ತಲೆನೋವು ಅಥವಾ ಮೈಗ್ರೇನ್ ಸಮಸ್ಯೆಗಳಲ್ಲಿ ನೋವು ನಿವಾರಕವನ್ನಾಗಿ ಬಳಸುತ್ತಾರೆ. ತಲೆ ನೋವಿನಿಂದ ಪಾರಾಗಲು ಕಾಫಿ ಏಕೆ ಬೇಕಾಗುತ್ತದೆ ಎಂದು ತಿಳಿಯಿತಲ್ಲವೇ. ಒಂದು ಕಪ್ ಕಾಫಿಗೆ ಆರ್ಡರ್ ಮಾಡಿ ತಲೆನೋವೇಕೆ?

6. ಯೋಗರ್ಟ್

6. ಯೋಗರ್ಟ್

ಹೊಟ್ಟೆಗೆ ಸಂಬಂಧಿಸಿದ ನೋವಿರಲಿ ಅಥವಾ ಅಸಿಡಿಟಿಯಿರಲಿ ಯೋಗರ್ಟ್ ಅದಕ್ಕೆ ಅತ್ಯುತ್ತಮ ಪರಿಹಾರ. ಇದನ್ನು ನಿಮ್ಮ ಆಹಾರದ ಜೊತೆಗೆ ಸೇವಿಸಬಹುದು ಅಥವಾ ಪ್ರತ್ಯೇಕವಾಗಿ ಸೇವಿಸಬಹುದು. ಈ ವಿಚಾರ ನಿಮ್ಮ ವಿವೇಚನೆಗೆ ಬಿಟ್ಟಿದ್ದು.

7. ಪುದಿನಾ

7. ಪುದಿನಾ

ಪುದಿನಾವನ್ನು ಅಗಿಯುವುದರಿಂದ ಉಸಿರಿನ ದುರ್ವಾಸನೆಯನ್ನು ತಡೆಯಬಹುದು. ಇದರ ಜೊತೆಗೆ ಸ್ನಾಯುಗಳಲ್ಲಿನ ಸಮಸ್ಯೆಗಳಿಗೆ ಮತ್ತು ರೋಗಗಳಿಗು ಸಹ ಇದು ರಾಮಬಾಣ. ಪುದಿನಾ ಎಣ್ಣೆಯು ತಲೆನೋವಿಗೆ ಅತ್ಯುತ್ತಮ ಔಷಧಿ, ಹಾಗಾಗಿ ಇದನ್ನು ಗಿಡಮೂಲಿಕೆಯ ಅಸ್ಪಿರಿನ್ ಎಂದು ಕರೆಯುತ್ತಾರೆ.

8. ಖಾರ ಮೆಣಸು

8. ಖಾರ ಮೆಣಸು

ಇವು ತಮ್ಮ ಖಾರದಿಂದ ನಿಮ್ಮ ಕಣ್ಣುಗಳಲ್ಲಿ ನೀರನ್ನು ತರಿಸುವುದರ ಜೊತೆಗೆ ನೋವು ನಿವಾರಕವಾಗಿ ಸಹ ಉಪಯೋಗವಾಗುತ್ತದೆ. ಇದನ್ನು ಅರ್ಥಿರಿಟಿಸ್ ಸಮಸ್ಯೆಗೆ ನಿವಾರಕವನ್ನಾಗಿ ಬಳಸಲಾಗುತ್ತದೆ. ಪ್ರತಿದಿನ ಮಿತವಾಗಿ ಇದನ್ನು ಸೇವಿಸುವುದರಿಂದ ಈ ಸಮಸ್ಯೆಯಿಂದ ಮುಕ್ತಿ ಪಡೆಯಬಹುದು ಎಂದು ಹೇಳಲಾಗುತ್ತದೆ.

9. ಗ್ರೀನ್ ಟೀ-

9. ಗ್ರೀನ್ ಟೀ-

ಇದು ಅತ್ಯುತ್ತಮ ತೂಕ ಇಳಿಸುವ ಔಷಧಿಯಾಗಿ ಬಳಕೆಯಾಗುತ್ತಿದೆ. ಅದಲ್ಲದೆ ಇದು ಬಾವು ನಿವಾರಕವಾಗಿ ಸಹ ಕಾರ್ಯ ನಿರ್ವಹಿಸುವುದರ ಜೊತೆಗೆ ಕೀವನ್ನು ಸಹ ಕಡಿಮೆ ಮಾಡುತ್ತದೆ. ಪ್ರತಿದಿನ ಒಂದು ಕಪ್ ಗ್ರೀನ್ ಟೀಯನ್ನು ಸೇವಿಸುವುದರಿಂದ ಅಪರಿಮಿತ ಪ್ರಯೋಜನಗಳನ್ನು ನಿಮ್ಮದಾಗಿಸಿಕೊಳ್ಳಬಹುದು.

10.ಆಲೀವ್ ಎಣ್ಣೆ

10.ಆಲೀವ್ ಎಣ್ಣೆ

ಈ ಎಣ್ಣೆಯು ಮೆಡಿಟರೇನಿಯನ್ ಪ್ರದೇಶದ ಕೊಡುಗೆಯಾಗಿದ್ದು, ನೋವನ್ನು ನಿವಾರಿಸಲು ಹೇಳಿ ಮಾಡಿಸಿದ ಎಣ್ಣೆಯಾಗಿದೆ. ಜೊತೆಗೆ ಇದು ಕೀವನ್ನು ಸಹ ಕಡಿಮೆ ಮಾಡುತ್ತದೆ. ಆಹಾರವನ್ನು ತಯಾರಿಸಲು ಆಲೀವ್ ಎಣ್ಣೆಯನ್ನು ಬಳಸುವುದರಿಂದ ಅತ್ಯುತ್ತಮ ಆರೋಗ್ಯಕಾರಿ ಪ್ರಯೋಜನಗಳನ್ನು ನಿಮ್ಮದಾಗಿಸಿಕೊಳ್ಳಬಹುದು.

English summary

Foods to reduce body pain

Good food habits will keep you fit and healthy. Studies have proved that healthy eating not only reduces chronic pain but also helps in avoiding such pains.
Story first published: Friday, November 22, 2013, 11:45 [IST]
X
Desktop Bottom Promotion