ಶ್ವಾಸಕೋಶದ ಆರೋಗ್ಯಕ್ಕೆ-ಪವರ್‌ಫುಲ್ ಗಿಡಮೂಲಿಕೆಗಳು...

Posted By: Arshad
Subscribe to Boldsky

ಸಾಮಾನ್ಯವಾಗಿ ನಮಗೆ ವಿಪರೀತ ಶೀತ ಕಾಡಿದಾಗಲೆಲ್ಲಾ ನಾವೆಲ್ಲಾ ತಕ್ಷಣ ಮನೆಯ ಕಪಾಟಿನಲ್ಲಿರುವ ಶೀತದ ಮಾತ್ರೆಯನ್ನೋ ಅಥವಾ ಯಾವಾಗಲೂ ತಂದಿಟ್ಟ ಟಾನಿಕ್ ಅನ್ನು ನುಂಗಿಬಿಡುತ್ತೇವೆ. ವಾಸ್ತವವಾಗಿ ಶೀತ ಒಂದು ರೋಗವೇ ಅಲ್ಲ, ಬದಲಿಗೆ ನಮ್ಮ ದೇಹವನ್ನು ಪ್ರವೇಶಿಸಿರುವ ವೈರಸ್ಸುಗಳ ವಿರುದ್ಧ ಹೋರಾಡಲು ನಮ್ಮ ರೋಗನಿರೋಧಕ ವ್ಯವಸ್ಥೆ ಪ್ರಯೋಗಿಸುವ ಸುರಕ್ಷತಾ ಕ್ರಮ.

ಆದ್ದರಿಂದ ವೈರಸ್ಸುಗಳನ್ನು ಕೊಲ್ಲದೇ ಶೀತವನ್ನು ಕಡಿಮೆಗೊಳಿಸಲು ಸಾಧ್ಯವಿಲ್ಲ. ಈ ಕೆಲಸವನ್ನು ಕೆಲವು ಗಿಡಮೂಲಿಕೆಗಳು ಸಮರ್ಥವಾಗಿ ನಿಭಾಯಿಸುತ್ತವೆ. ಅಲ್ಲದೇ ಸೋಂಕಿನಿಂದಲೂ ರಕ್ಷಿಸಿ ಶ್ವಾಸಕೋಶದ ಆರೋಗ್ಯವನ್ನು ವೃದ್ಧಿಸುತ್ತದೆ.

ಇಂದಿನ ಲೇಖನದಲ್ಲಿ ಈ ಸಾಮರ್ಥ್ಯವುಳ್ಳ ಕೆಲವು ಗಿಡಮೂಲಿಕೆಗಳ ಬಗ್ಗೆ ಮಾಹಿತಿಯನ್ನು ಸಂಗ್ರಹಿಸಲಾಗಿದ್ದು ಇವುಗಳ ಸರಿಯಾದ ಬಳಕೆಯಿಂದ ಇದುವರೆಗೆ ಶ್ವಾಸಕೋಶಕ್ಕಾಗಿರುವ ಘಾಸಿಯನ್ನು ರಿಪೇರಿಗೊಳಿಸಲು ಹಾಗೂ ಸೋಂಕಿನ ವಿರುದ್ಧ ಹೋರಾಡಲು ಮತ್ತು ಶ್ವಾಸಕೋಶದ ಆರೋಗ್ಯವನ್ನು ವೃದ್ಧಿಸಲು ಸಾಧ್ಯ. ಶ್ವಾಸಕೋಶದ ಕ್ಯಾನ್ಸರ್-ನೀವು ತಿಳಿಯಲೇ ಬೇಕಾದ ಸತ್ಯಾಸತ್ಯತೆ

ಇಂದು ಔಷಧಿ ಅಂಗಡಿಯಲ್ಲಿ ಶೀತಕ್ಕಾಗಿ ಲಭ್ಯವಿರುವ ಔಷಧಿಗಳಲ್ಲಿ ಆಂಟಿ ಬಯೋಟಿಕ್‌ಗಳು ಪ್ರಮುಖವಾಗಿದ್ದು ಸೋಂಕಿನ ವಿರುದ್ಧ ಹೋರಾಡುತ್ತವಾದರೂ ಇದರ ದೊಡ್ಡ ಋಣಾತ್ಮಕ ಪರಿಣಾಮವೆಂದರೆ ಈ ಔಷಧಿಗಳ ಸೇವನೆಯಿಂದ ದೇಹ ತನ್ನ ಪ್ರತಿಜೀವಕ ನಿರೋಧಕ ಶಕ್ತಿ (antibiotic resistance) ಹೆಚ್ಚುತ್ತಾ ಹೋಗುತ್ತದೆ. ಆರೋಗ್ಯಕರ ಶ್ವಾಸಕೋಶ ಕಾಪಾಡಿಕೊಳ್ಳಲು 9 ಸಲಹೆಗಳು

ಅಂದರೆ ಕಾಲಕ್ರಮೇಣ ಪ್ರತಿಜೀವಕಗಳು ಕೆಲವೇ ದಿನಗಳಲ್ಲಿ ದೇಹಕ್ಕೆ ಒಗ್ಗಿಹೋಗುತ್ತವೆ ಹಾಗೂ ಇವುಗಳ ಪ್ರಭಾವ ಕಡಿಮೆಯಾಗುತ್ತಾ ಹೋಗುತ್ತದೆ. ಆದರೆ ನೈಸರ್ಗಿಕ ಔಷಧಿಗಳಲ್ಲಿ ಈ ಗುಣವಿಲ್ಲದೇ ಇರುವ ಕಾರಣ ಆರೋಗ್ಯದ ಮೇಲೆ ಯಾವುದೇ ಪ್ರತಿಕೂಲ ಪರಿಣಾಮ ಬೀರುವುದಿಲ್ಲ ಹಾಗೂ ಶ್ವಾಸಕೋಶಕ್ಕಾಗಿರುವ ಘಾಸಿಯನ್ನು ರಿಪೇರಿಗೊಳಿಸಲು ಹಾಗೂ ಸೋಂಕಿನ ವಿರುದ್ಧ ಹೋರಾಡಲು ಮತ್ತು ಶ್ವಾಸಕೋಶದ ಆರೋಗ್ಯವನ್ನು ವೃದ್ಧಿಸಲೂ ನೆರವಾಗುತ್ತದೆ. ಬನ್ನಿ, ಈ ಗುಣಗಳನ್ನು ಹೊಂದಿರುವ ಅತ್ಯುತ್ತಮ ಔಷಧಿಗಳು ಯಾವುವು ಎಂಬುದನ್ನು ನೋಡೋಣ....    

ನೀಲಗಿರಿ ಎಣ್ಣೆ

ನೀಲಗಿರಿ ಎಣ್ಣೆ

ನೀಲಗಿರಿ ಎಣ್ಣೆಯಲ್ಲಿ ಕಣ್ಣಿಗೆ ಉರಿಬರುವ ಸಿನಿಯೋಲ್ (cineole) ಎಂಬ ಪೋಷಕಾಂಶವಿದ್ದು ಇದು ಕೆಮ್ಮು, ಗಂಟಲಿನಲ್ಲಿ ಕಫ ಕಟ್ಟಿರುವುದು ಹಾಗೂ ಉರಿಯೂತದ ಪ್ರಭಾವಕ್ಕೊಳಗಾಗಿರುವ ಶ್ವಾಸನಾಳಗಳಿಗೆ ಶಮನ ನೀಡುತ್ತದೆ. ಸೋಂಕಿನ ವಿರುದ್ಧ ಹೋರಾಡಲು ನೀಲಗಿರಿ ಎಣ್ಣೆ ಅತ್ಯುತ್ತಮವಾಗಿದೆ. ಆದರೆ ಈ ಶಕ್ತಿ ಪಾರದರ್ಶಕ ನೀಲಗಿರಿ ಎಣ್ಣೆಗಿಂತಲೂ ಉದಕಮಂಡಲದ ಹಳದಿ ಎಣ್ಣೆಯಲ್ಲಿ ಅತಿ ಹೆಚ್ಚಾಗಿರುತ್ತದೆ.

ಲಿಕೋರಿಸ್ ಬೇರು (Licorice Root)

ಲಿಕೋರಿಸ್ ಬೇರು (Licorice Root)

ಈ ಬೇರಿನಲ್ಲಿರುವ ಪೋಷಕಾಂಶಗಳು ಗಂಟಲ ಒಳಭಾಗ, ಹೊಟ್ಟೆ ಮತ್ತು ಶ್ವಾಸನಾಳದಲ್ಲಿ ಅಂಟಿಕೊಂಡಿರುವ ಕಫವನ್ನು ಸಡಿಲಿಸುವ ಗುಣ ಹೊಂದಿವೆ. ಅಲ್ಲದೇ ಗಂಟಲ ಒಳಭಾಗದ ಉರಿಯೂತವನ್ನು ನಿವಾರಿಸಿ ಕೆಮ್ಮು, ಕೆರೆತಗಳನ್ನು ಕಡಿಮೆಗೊಳಿಸಲು ನೆರವಾಗುತ್ತದೆ. ತನ್ಮೂಲಕ ಶ್ವಾಸಕೋಶದ ಆರೋಗ್ಯವನ್ನು ವೃದ್ಧಿಸುವಲ್ಲಿ ಈ ಬೇರು ಅಗ್ರಸ್ಥಾನ ಪಡೆಯುತ್ತದೆ.

ಪುದೀನಾ

ಪುದೀನಾ

ಇದರಲ್ಲಿರುವ ಮೆಂಥಾಲ್ ಶ್ವಾಸನಾಳಗಳ ಸ್ನಾಯುಗಳನ್ನು ಸಡಿಲಿಸಿ ಉಸಿರಾಟ ಸರಾಗಗೊಳಿಸಲು ನೆರವಾಗುತ್ತದೆ. ಅಲ್ಲದೇ ಗಟ್ಟಿಯಾಗಿರುವ ಕಫವನ್ನು ಸಡಿಲಿಸುವ ಮೂಲಕ ಸೋಂಕನ್ನು ನಿವಾರಿಸಿ ಈ ಮೂಲಕ ಎದುರಾಗಬಹುದಾಗಿದ್ದ ಹಲವು ತೊಂದರೆಗಳಿಂದ ರಕ್ಷಣೆ ಒದಗಿಸುತ್ತದೆ.

ಬಾಳೆ ಎಲೆ

ಬಾಳೆ ಎಲೆ

ಸಾಮಾನ್ಯವಾಗಿ ನಮಗೆ ನಿಕೃಷ್ಟವೆಂದು ಕಂಡುಬರುವ ಬಾಳೆ ಎಲೆಯಲ್ಲಿಯೂ ಬ್ಯಾಕ್ಟೀರಿಯಾ ನಿವಾರಕ ಹಾಗೂ ಅತಿಸೂಕ್ಷ್ಮವೈರಾಣುನಿರೋಧಕ ಗುಣವಿದೆ. ಅಲ್ಲದೇ ಇದರಲ್ಲಿ ಉರಿಯೂತ ನಿವಾರಕ ಗುಣವೂ ಇದೆ. ಅಲ್ಲದೇ ಕಫವನ್ನು ಸಡಿಲಿಸಿ ನಿವಾರಿಸುವ ಮೂಲಕ ಉಸಿರಾಟ ಸರಾಗಗೊಳಿಸಲು ನೆರವಾಗುತ್ತದೆ. ಬಿಸಿಬಿಸಿಯಾಗಿ ಬಾಳೆಯೆಲೆಯ ಮೇಲೆ ಬಡಿಸಿದ ಊಟವನ್ನು ಸೇವಿಸುವ ಮೂಲಕ ಬಾಳೆ ಎಲೆಯ ಗುಣಗಳನ್ನು ಪಡೆಯಲು ಸಾಧ್ಯ.

ಸೇಜ್ ಎಲೆಗಳು (Sage)

ಸೇಜ್ ಎಲೆಗಳು (Sage)

ಶ್ವಾಸಕೋಶದ ಸೋಂಕನ್ನು ನಿವಾರಿಸಲು ಈ ಎಲೆಗಳೂ ಅತ್ಯುತ್ತಮವಾಗಿವೆ. ಇದರಲ್ಲಿರುವ ಸುಗಂಧ ಮನಸ್ಸಿಗೆ ಮುದ ನೀಡುವ ಗುಣ ಹೊಂದಿದ್ದು ಶ್ವಾಸನಾಳಗಳನ್ನು ನಿರಾಳಗೊಳಿಸುವ ಮೂಲಕ ಸೈನಸ್ ಸೋಂಕಿನಿಂದಲೂ ರಕ್ಷಣೆ ನೀಡುತ್ತದೆ.

ಕಾಡು ಹೊಗೆಸೊಪ್ಪು (Mullein)

ಕಾಡು ಹೊಗೆಸೊಪ್ಪು (Mullein)

ಶ್ವಾಸಕೋಶದಲ್ಲಿ ಕಟ್ಟಿರುವ ಕಫವನ್ನು ಸಡಿಲಿಸಿ ನಿವಾರಿಸಲು ಈ ಮೂಲಿಕೆ ಅತ್ಯುತ್ತಮವಾಗಿದೆ. ಇದರಲ್ಲಿರುವ ಪೋಷಕಾಂಶಗಳು ವಿಶೇಷವಾಗಿ ಶ್ವಾಸನಾಳಗಳ ಒಳಭಾಗದ ಸೋಂಕು ಮತ್ತು ಉರಿಯೂತವನ್ನು ನಿವಾರಿಸಿ ಉಸಿರಾಟವನ್ನು ಸರಾಗಗೊಳಿಸಲು ನೆರವಾಗುತ್ತದೆ.

ಒರಿಗ್ಯಾನೋ (Oregano)

ಒರಿಗ್ಯಾನೋ (Oregano)

ಸಾಮಾನ್ಯವಾಗಿ ಪಿಜ್ಜಾಗಳಲ್ಲಿ ರುಚಿ ಹೆಚ್ಚಿಸಲು ಬಳಸಲಾಗುವ ಈ ಎಲೆಗಳ ಪುಡಿ ವಾಸ್ತವವಾಗಿ ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸುವ ಶಕ್ತಿಯನ್ನು ಹೊಂದಿರುವ ಔಷದಿಯೂ ಆಗಿದೆ. ಇದರಲ್ಲಿರುವ ಕಾರ್ವಾಕ್ರಾಲ್ (carvacrol) ಹಾಗೂ rosmarinic acid ಎಂಬ ಪೋಷಕಾಂಶಗಳು ನೈಸರ್ಗಿಕ ಕಫನಿವಾರಕಗಳಾಗಿವೆ ಹಾಗೂ ಇವುಗಳಲ್ಲಿ ಉರಿಯೂತಕ್ಕೊಳಗಾದ ಜೀವಕೋಶಗಳು ಶೀಘ್ರವಾಗಿ ಸರಿಪಡಿಸಿಕೊಳ್ಳಲು ನೆರವಾಗುವ ಗುಣವೂ ಇದೆ.

ಓಮ (thyme)

ಓಮ (thyme)

ಈ ಮೂಲಿಕೆಯಲ್ಲಿ ಎದೆಯಲ್ಲಿ ಗಟ್ಟಿಯಾಗಿರುವ ಕಫವನ್ನು ಕರಗಿಸುವ ಗುಣವಿದೆ. ಗಾತ್ರದಲ್ಲಿ ಪುಟ್ಟದಾದರೂ ಇದರಲ್ಲಿರುವ ನಂಜುನಿರೋಧಕ ಗುಣ ದೊಡ್ಡದು. ಅಲ್ಲದೇ ಇದೊಂದು ನೈಸರ್ಗಿಕ ಪ್ರತಿಜೀವಕ ಹಾಗೂ ಶಿಲೀಂಧ್ರನಿವಾರಕವೂ ಆಗಿದೆ. ಇದಕ್ಕಾಗಿ ಓಮ ಕುದಿಸಿದ ಟೀ ಕುಡಿಯುವ ಮೂಲಕ ಶ್ವಾಸನಾಳದ ಸೋಂಕಿಗೆ ಕಾರಣವಾಗಿರುವ ವೈರಸ್ಸು ಮತ್ತು ಬ್ಯಾಕ್ಟೀರಿಯಾದ ವಿರುದ್ದ ಹೋರಾಡಲು ಸಾಧ್ಯವಾಗುತ್ತದೆ ಹಾಗೂ ಹಲವು ಸೋಂಕುಗಳಿಂದ ರಕ್ಷಣ ಪಡೆಯಲು ಸಾಧ್ಯವಾಗುತ್ತದೆ.

ಓಷಾ ಬೇರು (Osha Root)

ಓಷಾ ಬೇರು (Osha Root)

ಈ ಬೇರಿನಲ್ಲಿ ಹೆಚ್ಚಿನ ಪ್ರಮಾಣದ ಕರ್ಪೂರವಿದ್ದು ಶ್ವಾಸಕೋಶಕ್ಕೆ ಅತ್ಯುತ್ತಮ ಶಮನ ನೀಡುತ್ತದೆ. ಅಲ್ಲದೇ ಇದರಲ್ಲಿರುವ ಪೋಷಕಾಂಶಗಳು ಶ್ವಾಸಕೋಶಕ್ಕೆ ಹರಿಯುವ ರಕ್ತಪರಿಚಲನೆಯನ್ನು ಚುರುಕುಗೊಳಿಸಿ ಶ್ವಾಸನಾಳಗಳ ಮೂಲಕ ಉಸಿರು ಇನ್ನಷ್ಟು ಸರಾಗವಾಗಿ ಸಾಗಲು ನೆರವಾಗುತ್ತದೆ.

 
For Quick Alerts
ALLOW NOTIFICATIONS
For Daily Alerts

    English summary

    Herbs That Can Repair Lung Damage, And Boost Lung Health!

    If you're resorting to conventional medicine to address these infections with antibiotics, you're not only complicating the problems with antibiotic resistance (which your body will develop), but you're also doing very little to address the issue. Herbal medicines are not only known to boost lung health, but they can also heal the infections and repair lung damage. Scroll further to see some of the best known herbs that can help fight infections and boost lung health.
    We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Boldsky sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Boldsky website. However, you can change your cookie settings at any time. Learn more