ಆರೋಗ್ಯಕರ ಶ್ವಾಸಕೋಶ ಕಾಪಾಡಿಕೊಳ್ಳಲು 9 ಸಲಹೆಗಳು

By: Arpitha Rao
Subscribe to Boldsky

ಅರೊಗ್ಯಯುತವಾಗಿರುವುದು ಪ್ರತಿಯೊಬ್ಬರಿಗೂ ಅವಶ್ಯಕ.ಸಮಸ್ಯೆಗಳು ಬಂದ ನಂತರ ಪರಿಹಾರ ಹುಡುಕುವ ಬದಲು ಅರೋಗ್ಯ ಸಮಸ್ಯೆಗಳು ಬರದಂತೆ ಕಾಪಾಡಿಕೊಳ್ಳುವುದು ಮುಖ್ಯ.ಹೀಗೆ ಆರೋಗ್ಯಯುತವಾಗಿರಲು ಸರಿಯಾದ ರೀತಿಯ ಜೀವನ ಶೈಲಿಯನ್ನು ಅಳವಡಿಸಿಕೊಳ್ಳಬೇಕು. ಮಾಲಿನ್ಯಗಳನ್ನು ಆದಷ್ಟು ತಪ್ಪಿಸಬೇಕು, ಉಸಿರಾಡಲು ಶ್ವಾಸಕೋಶ ಅತಿ ಅವಶ್ಯಕ. ಆದ್ದರಿಂದ ಶ್ವಾಸಕೋಶವನ್ನು ಆರೋಗ್ಯಯುತವಾಗಿ ಕಾಪಾಡಿಕೊಳ್ಳುವುದು ಕೂಡ ಅಷ್ಟೇ ಮುಖ್ಯ.

ನಾವು ನಮ್ಮ ಶ್ವಾಸಕೋಶವನ್ನು ಸರಿಯಾಗಿ ನೋಡಿಕೊಂಡರೆ ಬದುಕಿನ ಕೊನೆಯವರೆಗೆ ನಮಗೇ ಅನುಕೂಲ.ಹೊರಗಿನಿಂದ ಯಾವುದೇ ಸಮಸ್ಯೆ ಎದುರಾಗದಿದ್ದರೆ ಶ್ವಾಸಕೋಶಗಳು ಅತಿ ಬಾಳಿಕೆ ಬರುವ ದೇಹದ ಒಂದು ಭಾಗ.

ಕೆಲವು ಅಪರೂಪದ ಸಂದರ್ಭಗಳನ್ನು ಹೊರತುಪಡಿಸಿ ಉಳಿದಂತೆ ಶ್ವಾಸಕೋಶಗಳು ನಾವಾಗೇ ಸಮಸ್ಯೆ ತರಿಸಿಕೊಳ್ಳುವವರೆಗೆ ಯಾವುದೇ ತೊಂದರೆ ಕಾಣಿಸಿಕೊಳ್ಳುವುದಿಲ್ಲ.ವಯಸ್ಸಿಗೆ ತಕ್ಕಂತೆ ಶ್ವಾಸಕೋಶವನ್ನು ಅರೊಗ್ಯಯುತವಾಗಿ ಇಟ್ಟುಕೊಳ್ಳಲು ಇಲ್ಲಿವೆ ಕೆಲವು ಸಲಹೆಗಳು.

ಇನ್ನಷ್ಟು ಮಾಹಿತಿಗಾಗಿ ಈ ಲಿಂಕ್ ಅನ್ನು ಕ್ಲಿಕ್ ಮಾಡಿ: ಕ್ಯಾನ್ಸರ್, ಮಧುಮೇಹ ರೋಗಗಳಿಗೆ ಇನ್ನು ಗುಡ್ ಬೈ ಹೇಳಿ!

ಧೂಮಪಾನ ಮಾಡಬೇಡಿ

ಧೂಮಪಾನ ಮಾಡಬೇಡಿ

ಧೂಮಪಾನದಿಂದ ಯಾವುದೇ ರೀತಿಯ ಅನುಕೂಲಗಳಿಲ್ಲ. ನೀವು ಹೆಚ್ಚು ಧೂಮಪಾನ ಮಾಡಿದಂತೆ ಕ್ಯಾನ್ಸರ್ ಮತ್ತಿತರ ದೀರ್ಘಕಾಲದ ಎದೆಗೆಮ್ಮು ಮತ್ತು ವಾತಶೋಥ ಹೊಂದಿರುವ COPD ಕಾಯಿಲೆಗಳು ಬರುವ ಸಾಧ್ಯತೆ ಹೆಚ್ಚಿರುತ್ತದೆ. ಧೂಮಪಾನ ಅತಿ ಕೆಟ್ಟದ್ದಾಗಿದ್ದು ಇದು ಕೇವಲ ಧೂಮಪಾನ ಮಾಡುವವರಿಗೆ ಮಾತ್ರವಲ್ಲ ಧೂಮಪಾನ ಮಾಡುವಾಗ ಅವರ ಸುತ್ತಲಿರುವವರಿಗೂ ಇದು ಪರಿಣಾಮವನ್ನು ಬೀರುತ್ತದೆ.ಕೇವಲ ಸಿಗರೆಟ್ ಮಾತ್ರವಲ್ಲ.ಬೀಡಿ,ಗಾಂಜಾ,ಕೊಳವೆ ಧೂಮಪಾನ,ಸಿಗಾರ್ ಎಲ್ಲವೂ ಅಷ್ಟೇ ಪರಿಣಾಮಕಾರಿಯಾಗಿದ್ದು ಸಮಸ್ಯೆಗಳನ್ನು ತಂದೊಡ್ಡುವುದು ಖಚಿತ.

ಸ್ವಚ್ಚವಾದ ಗಾಳಿ ಮುಖ್ಯ

ಸ್ವಚ್ಚವಾದ ಗಾಳಿ ಮುಖ್ಯ

155 ಮಿಲಿಯನ್‌ ಗೂ ಹೆಚ್ಚು ಜನರು ವಾಯು ಮಾಲಿನ್ಯ ಅಧಿಕವಾಗಿರುವ ಸ್ಥಳದಲ್ಲಿ ಜೀವಿಸುತ್ತಿದ್ದಾರೆ!.ವಾಯುಮಾಲಿನ್ಯದಿಂದ ಅಸ್ಥಮಾ ಅಥವಾ COPD ಮಾತ್ರವಲ್ಲ ಇದು ಮನುಷ್ಯನನ್ನು ಕೊಂದುಬಿಡುವಷ್ಟು ಕೆಟ್ಟ ಪರಿಣಾಮ ಬೀರುತ್ತದೆ.ನೀವು ಕಾಯಿದೆಗಳನ್ನು ಬೆಂಬಲಿಸುವುದರ ಮೂಲಕ ಪರಿಸರದ ಸ್ವಚ್ಚತೆಯನ್ನು ಕಾಪಾಡಲು ಸಹಕರಿಸಬೇಕು ಇದರಿಂದ ವಾಯುಮಾಲಿನ್ಯ ತಡೆಯಬಹುದು. ವಾಯುಮಾಲಿನ್ಯವನ್ನು ತಡೆಯಲು ಕಸವನ್ನು ಸುಡುವುದು,ಹೆಚ್ಚು ಎಲೆಕ್ಟ್ರಿಸಿಟಿ ಬಳಕೆ,ವಾಹನಗಳ ಅಧಿಕ ಚಲಾವಣೆ ಇವುಗಳನ್ನು ಮೊದಲು ತಡೆಯಬೇಕು.

ಹೆಚ್ಚು ವರ್ಕ್ ಔಟ್ ಮಾಡಿ

ಹೆಚ್ಚು ವರ್ಕ್ ಔಟ್ ಮಾಡಿ

ಕೇವಲ ವ್ಯಾಯಾಮ ಮಾಡುವುದರಿಂದ ಶ್ವಾಸಕೋಶ ಬಲಿಷ್ಠವಾಗಲಾರದು ಆದರೆ ವ್ಯಾಯಾಮ ಮಾಡುವುದರಿಂದ ಕೆಲವು ಸಮಸ್ಯೆಗಳಿಂದ ದೂರವಿರಬಹುದು.ನೀವು ಹೃದಯ ಸಂಬಂಧಿ ವ್ಯಾಯಾಮಗಳನ್ನು ಮಾಡುವುದರಿಂದ ಶ್ವಾಸಕೋಶ ಇನ್ನಿತರ ದೇಹದ ಅಂಗಗಳಿಗೆ ಅಗತ್ಯ ಆಮ್ಲಜನಕವನ್ನು ಪೂರೈಸುವಲ್ಲಿ ಸಹಾಯಕವಾಗುತ್ತದೆ.ದೀರ್ಘಕಾಲೀನ ಶ್ವಾಸಕೋಶ ಕಾಯಿಲೆಯಿಂದ ಬಳಲುತ್ತಿರುವವರಿಗೆ ಪ್ರತಿದಿನದ ವ್ಯಾಯಾಮ ಅತಿ ಅವಶ್ಯಕವಾಗಿದೆ.ತಣ್ಣನೆಯ ಗಾಳಿಯಿಂದ ಅಥವಾ ಚಳಿಗಾಲದಲ್ಲಿ ನಿಮಗೆ ಅಸ್ತಮಾ ಸಮಸ್ಯೆ ಹೆಚ್ಚಾಗದಂತೆ ತಡೆಯಲು ಮುಖಕ್ಕೆ ಬಟ್ಟೆಯನ್ನು ಕಟ್ಟಿಕೊಳ್ಳಿ.

ಹೊರಗಿನ ವಾಯುಮಾಲಿನ್ಯದಿಂದ ಅರೋಗ್ಯ ಜೋಪಾನ:

ಹೊರಗಿನ ವಾಯುಮಾಲಿನ್ಯದಿಂದ ಅರೋಗ್ಯ ಜೋಪಾನ:

ಬೇಸಿಗೆ ಕಾಲದಲ್ಲಿ ಹೊರಗೆ ಹೆಚ್ಚು ಸಮಯ ಕಳೆಯುವುದರಿಂದ ವಾಯುಮಾಲಿನ್ಯ ಹೆಚ್ಚಿರುವ ಕಡೆಗಳಲ್ಲಿ ಶ್ವಾಸಕೋಶದ ಸಮಸ್ಯೆಗಳು ಹೆಚ್ಚಬಹುದು. ಶ್ವಾಸಕೋಶದ ಸಮಸ್ಯೆ ಇರುವವರು ತುಂಬಾ ಸೂಕ್ಷ್ಮವಾಗಿರುವುದರಿಂದ ವಾಯುಮಾಲಿನ್ಯದಿಂದ ದೂರವಿರುವುದು ಸೂಕ್ತ.

ಒಳಗಿನ ಗಾಳಿ ಉತ್ತಮವಾಗಿರಲಿ:

ಒಳಗಿನ ಗಾಳಿ ಉತ್ತಮವಾಗಿರಲಿ:

ವಾಯುಮಾಲಿನ್ಯ ಕೇವಲ ಹೊರಗೆ ಮಾತ್ರವಲ್ಲ.ಮನೆಯ ಒಳಗೂ ಕೂಡ ವಾಯುಮಾಲಿನ್ಯ ಇರುತ್ತದೆ.ಉದಾಹರಣೆಗೆ ಸುಡುವ ಒಲೆ,ಕಟ್ಟಿಗೆ ಒಲೆಗಳು,ನಿರ್ಮಾಣ ಸಾಮಗ್ರಿಗಳು,ಕೆಲವು ಸಾಕುಪ್ರಾಣಿಗಳಿಂದ,ಏರ್ ಫ್ರೆಶ್ನರ್,ಕೆಲವು ಸುಗಂಧಭರಿತ ಮೇಣದ ಬತ್ತಿಗಳು ಇವುಗಳೆಲ್ಲ ವಾಯುಮಾಲಿನ್ಯಕ್ಕೆ ಅಸ್ತಮಾ ಹೆಚ್ಚಲು ಕಾರಣವಾಗಬಹುದು.ಇಂತಹ ಸಂದರ್ಭದಲ್ಲಿ ಹೊರಗಿನ ಗಾಳಿ ಸೂಕ್ತವಾಗಿ ಬರುವಂತೆ ಮಾಡುವುದು ಜೊತೆಗೆ ಏರ್ ಕ್ಲೀನರ್ ಬಳಸುವುದರಿಂದ ಆಮ್ಲಜನಕದ ಪ್ರಾಮಾಣವನ್ನು ಹೆಚ್ಚಿಸಬಹುದು.ಏರ್ ಕ್ಲೀನರ್ ಬೇಡದ ಕಣಗಳನ್ನು ನಾಶಮಾಡುತ್ತದೆ ಮತ್ತು ಇದು ಗ್ಯಾಸ್ ಉತ್ಪತ್ತಿ ಮಾಡುವುದಿಲ್ಲ ಇದರಿಂದ ವಾಯುಮಾಲಿನ್ಯವಾಗುವುದಿಲ್ಲ.

ಆರೋಗ್ಯಕರ ಆಹಾರವನ್ನು ಬಳಸಿ

ಆರೋಗ್ಯಕರ ಆಹಾರವನ್ನು ಬಳಸಿ

ಆಂಟಿ ಆಕ್ಸಿಡೆಂಟ್ ಹೆಚ್ಚಿರುವ ಆಹಾರಗಳು ಶ್ವಾಸಕೋಶಕ್ಕೆ ಸಹಾಯಕ ಎನ್ನಲಾಗುತ್ತದೆ.೨೦೧೧ ರಲ್ಲಿ ನಡೆಸಿದ ಅಧ್ಯಯನದ ಪ್ರಕಾರ ಹೂ ಕೋಸು,ಎಲೆ ಕೋಸು,ಬ್ರೋಕೊಲಿ ಇವುಗಳನ್ನು ಹೆಚ್ಚು ತಿಂದವರು ಕಡಿಮೆ ಬಲಸಿದವರಿಗಿಂತ ಹೆಚ್ಚು ಶ್ವಾಸಕೋಶದ ಸಮಸ್ಯೆಗಳಿಗೆ ತುತ್ತಾಗಿದ್ದಾರೆ.ಹಸಿರು ಎಲೆ ಮತ್ತು ತರಕಾರಿಗಳು ಶ್ವಾಸಕೋಶದ ಅರೋಗ್ಯ ಕಾಪಾಡಿಕೊಳ್ಳಲು ಹೆಚ್ಚು ಸೂಕ್ತ ಎನ್ನಲಾಗುತ್ತದೆ.

ಕೆಲಸದ ವೇಳೆ ನಿಮ್ಮ ಶ್ವಾಸಕೋಶ ರಕ್ಷಿಸಿಕೊಳ್ಳಿ

ಕೆಲಸದ ವೇಳೆ ನಿಮ್ಮ ಶ್ವಾಸಕೋಶ ರಕ್ಷಿಸಿಕೊಳ್ಳಿ

ಮನೆ ನಿರ್ಮಾಣ ಅಥವಾ ಇನ್ನಿತರ ಸಂದರ್ಭದಲ್ಲಿ ಹೆಚ್ಚು ಧೂಳಿನಿಂದ ಶ್ವಾಸಕೋಶಕ್ಕೆ ತೊಂದರೆಯಾಗಬಹುದು.ಡೀಸೆಲ್,ಪೇಯಿಂಟ್ ಅಥವಾ ಧೂಳು ಇವುಗಳಿಂದ ದೂರವಿರಿ.ಇಂತಹ ಸಂದರ್ಭದಲ್ಲಿ ಕೊಡಲಾಗುವ ರಕ್ಷಣಾ ಕವಚ ಅಥವಾ ಮಾಸ್ಕ್ ಅನ್ನು ಬಳಸಬೇಕು.ಸ್ಥಳೀಯ ಅರೋಗ್ಯ ತಪಾಸಕರನ್ನು ಸಂಪರ್ಕಿಸಿ ಇದರ ಬಗ್ಗೆ ಸಂಪೂರ್ಣ ಮಾಹಿತಿಯನ್ನು ತಿಳಿದುಕೊಳ್ಳಿ.

ಸುರಕ್ಷಿತ ಉತ್ಪನ್ನಗಳನ್ನು ಬಳಸಿ

ಸುರಕ್ಷಿತ ಉತ್ಪನ್ನಗಳನ್ನು ಬಳಸಿ

ಮನೆ ಸ್ವಚ್ಚಗೊಳಿಸುವುದು,ಇನ್ನಿತರ ಕೆಲಸಗಳಿಂದ ಶ್ವಾಸಕೋಶ ಸಮಸ್ಯೆಗಳು ಕಾಣಿಸಿಕೊಳ್ಳಬಹುದು. ಮಾಸ್ಕ್ ಬಳಸುವುದರ ಮೂಲಕ ಅಥವಾ ಉತ್ತಮ ಗಾಳಿ ಇರುವ ಜಾಗಗಳನ್ನು ಬಳಸುವುದರಿಂದ ಶ್ವಾಸಕೋಶದ ತೊಂದರೆಯಿಂದ ದೂರವಿರಬಹುದು.ಸಾವಯುವ ಸಂಯುಕ್ತಗಳನ್ನು ಬಿಡುಗಡೆ ಮಾಡುವ ಎಣ್ಣೆಯುಕ್ತ ಪೇಯಿಂಟ್ ಬದಲು ನೀರು ಬಳಸಿದ ಬಣ್ಣಗಳನ್ನು ಬಳಸಿ. ಕ್ಲೀನಿಂಗ್ ಗೆ ಬಳಸುವ ಉತ್ಪನ್ನಗಳಲ್ಲೂ ಅಮೋನಿಯ ಮತ್ತು ಬ್ಲೀಚ್ ಇರಬಹುದು ಅದ್ದರಿಂದ ಕೊಂಡುಕೊಳ್ಳುವ ಮೊದಲು ಇದನ್ನು ಪರಿಶೀಲಿಸಿ ನಂತರ ಬಳಸಿ.

English summary

9 Ways of Having Healthier Lungs

The lungs are very durable if they are not attacked from the outside. With a few exceptions, our lungs do not get into trouble unless we get them into trouble. Here are some things everyone should do to keep the lungs healthy as with age.
Subscribe Newsletter