For Quick Alerts
ALLOW NOTIFICATIONS  
For Daily Alerts

  ಶ್ವಾಸಕೋಶದ ಕ್ಯಾನ್ಸರ್-ನೀವು ತಿಳಿಯಲೇ ಬೇಕಾದ ಸತ್ಯಾಸತ್ಯತೆ

  By Manu
  |

  ರೋಗ ಬಾರದಂತೆ ತಡೆಗಟ್ಟುವುದು ಚಿಕಿತ್ಸೆಗಿಂತ ಪರಿಣಾಮಕಾರಿ ವಿಧಾನ ಎಂಬ ಸುಭಾಷಿತ ಎಲ್ಲಾ ಕಾಲಕ್ಕೂ ಸಲ್ಲುವ ಸತ್ಯವಾಗಿದೆ. ವಿಶೇಷವಾಗಿ ಜೀವವನ್ನೇ ಬಲಿ ತೆಗೆದುಕೊಳ್ಳುವ ಕ್ಯಾನ್ಸರ್‌ಗೆ ಈ ಮಾತು ಪ್ರಥಮವಾಗಿ ಅನ್ವಯವಾಗುತ್ತದೆ. ನಮ್ಮ ದೇಹದ ಅಂಗಗಳಿಗೊಂದು ವಿಶೇಷ ಶಕ್ತಿಯಿದೆ. ಅದೆಂದರೆ ಸುಮಾರು ಎಂಬತ್ತು ತೊಂಬತ್ತು ಶೇಖಡಾ ಹಾಳಾಗುವವರೆಗೂ ಯಾವ ಸೂಚನೆಯನ್ನೇ ನೀಡದೇ ಬಳಿಕ ಥಟ್ಟನೇ ಕುಸಿಯುವುದು. ಉದಾಹರಣೆಗೆ ಧೂಮಪಾನಿಗಳ ಶ್ವಾಸಕೋಶ.

  ಪ್ರತಿ ಬಾರಿಯ ಧೂಮಪಾನದಿಂದ ಹಂತಹಂತವಾಗಿ ಶ್ವಾಸಕೋಶ ಹಾಳಾಗುತ್ತಾ ಹೋಗುತ್ತಿದ್ದರೂ ಕ್ಯಾನ್ಸರ್ ಆವರಿಸುವ ಹಂತದವರೆಗೂ ಇದು ಯಾವುದೇ ಸೂಚನೆಯನ್ನೇ ನೀಡುವುದಿಲ್ಲ. ಇದನ್ನೇ ಧೂಮಪಾನಿಗಳು ತಮ್ಮ ಕ್ಯಪಾಸಿಟಿ ಅಥವಾ ಸಾಮರ್ಥ್ಯ ಎಂದೇ ತಿಳಿದುಕೊಂಡು ಎದೆಯುಬ್ಬಿಸಿಕೊಂಡು ಬೀಗುತ್ತಾ ಇನ್ನಷ್ಟು ಹೊಗೆ ಬಿಡುತ್ತಾರೆ. ಅಷ್ಟೇ ಅಲ್ಲ, ಧೂಮಪಾನ ಕೆಟ್ಟದು ಎಂದು ಬುದ್ಧಿ ಹೇಳಿದವರಿಗೇ ದಬಾಯಿಸುತ್ತಾರೆ. ಆದರೆ ಯಾವುದೋ ಒಂದು ಹಂತದಲ್ಲಿ ಶ್ವಾಸಕೋಶ ಥಟ್ಟನೇ ಕುಸಿದು ಕ್ಯಾನ್ಸರ್ ಅಥವಾ ಇನ್ನಾವುದೋ ರೋಗ ಆವರಿಸಿದಾಗ ಪಶ್ಚಾತ್ತಾಪ ಪಡುತ್ತಾರೆ. ಬಿಟ್ಟುಬಿಡಿ 'ಧೂಮಪಾನದ' ಸಂಗ-ಇಲ್ಲದಿದ್ದರೆ ನಿದ್ದೆಗೆ ಭಂಗ!

  ಒಂದು ವೇಳೆ ವೈದ್ಯರ ಅಥವಾ ಹಿತೈಶಿಗಳ ಮಾತನ್ನು ಕೇಳಿ ಅನುಸರಿಸುವಷ್ಟು ತಾಳ್ಮೆ ಮತ್ತು ಮನಸ್ಸು ಇದ್ದರೆ ಕೆಲವು ಸುಲಭ ವಿಧಾನಗಳಿಂದ ಮುಂದೆ ಶ್ವಾಸಕೋಶದ ಕ್ಯಾನ್ಸರ್ ಆವರಿಸದಂತೆ ತಡೆಯಬಹುದು. ಏಕೆಂದರೆ ಒಮ್ಮೆ ಕ್ಯಾನ್ಸರ್ ಬಂದರೆ ಸಾವನ್ನು ಮುಂದೂಡಬಹುದೇ ವಿನಃ ಗುಣಪಡಿಸಲು ಸಾಧ್ಯವಿಲ್ಲ. ಇದುವೇ ಕ್ಯಾನ್ಸರ್ ನಿಯಂತ್ರಿಸುವ ಪವರ್ ಫುಲ್ ಜ್ಯೂಸ್

  ಕ್ಯಾನ್ಸರ್ ಎಂದರೆ ದೇಹದ ಯಾವುದೋ ಒಂದು ಅಂಗ ಅಥವಾ ಅಂಗಾಂಶದ ಜೀವಕೋಶಗಳು ಕೆಲಸಕ್ಕೆ ಬಾರದೇ ಬೆಳೆಯುವುದು. ಕೆಲವು ಅಂಗಗಳು ಕ್ಯಾನ್ಸರ್ ಗೆ ಒಳಗಾದರೆ ಬಾಧೆಗೊಳಗಾದ ಅಂಗಗ ಚಿಕ್ಕ ಭಾಗವನ್ನು ಕತ್ತರಿಸಿ ಪ್ರಾಣಾಪಾಯದಿಂದ ತಪ್ಪಿಸಬಹುದು. ಉದಾಹರಣೆಗೆ ಕರುಳಿನ ಕ್ಯಾನ್ಸರ್.

  ಇದರಲ್ಲಿ ಕ್ಯಾನ್ಸರ್‌ಗೆ ಎದುರಾದ ಭಾಗವನ್ನು ಕತ್ತರಿಸಿ ಉಳಿದ ಭಾಗವನ್ನು ಜೋಡಿಸಲಾಗುತ್ತದೆ. ಆದರೆ ಪಚನದ ಕ್ಷಮತೆ ಕಡಿಮೆಯಾಗುವ ಕಾರಣ ಜೀವಮಾನವಿಡೀ ಸರಳ ಆಹಾರಗಳನ್ನು ಮಾತ್ರ ಸೇವಿಸಬೇಕು. ಆದರೆ ಈ ಚಿಕಿತ್ಸೆ ಶ್ವಾಸಕೋಶಕ್ಕೆ ಸಾಧ್ಯವಿಲ್ಲ. ಶ್ವಾಸಕೋಶವನ್ನು ಬದಲಿಸಲೂ ಸಾಧ್ಯವಿಲ್ಲ. ಆದ್ದರಿಂದ ರೋಗ ಬಾರದಂತೆ ತಡೆಗಟ್ಟುವುದೇ ಏಕೈಕ ಮಾರ್ಗ. ಶ್ವಾಸಕೋಶದ ಕ್ಯಾನ್ಸರ್ ಪ್ರಮುಖವಾಗಿ ಧೂಪಮಾನಿಗಳನ್ನು ಆವರಿಸುತ್ತದೆ.

  ನಂತರ ಇವರು ಬಿಟ್ಟ ಧೂಮವನ್ನು ಸೇವಿಸಿದರಿಗೂ ಎದುರಾಗುತ್ತದೆ. ಅಂದರೆ ಧೂಮಪಾನಿಗಳಲ್ಲದವರೂ ಈ ಭಯಾನಕ ಕಾಯಿಲೆಗೆ ಅರಿವಿಲ್ಲದೇ ತುತ್ತಾಗುವ ಸಂಭವವಿದೆ. ಇವರನ್ನು passive smokers ಎಂದು ಕರೆಯುತ್ತಾರೆ. ಧೂಮಪಾನಿಗಳಿರುವ ಕೋಣೆಯನ್ನು ಹಂಚಿಕೊಳ್ಳುವ ಮನೆಯ ಸದಸ್ಯರು ಈ ತೊಂದರೆಯನ್ನು ಹೆಚ್ಚು ಅನುಭವಿಸುತ್ತಾರೆ. ಶ್ವಾಸಕೋಶದ ಕ್ಯಾನ್ಸರ್‌ನ ಆರಂಭಿಕ ಲಕ್ಷಣಗಳು

  ಶ್ವಾಸಕೋಶದ ಕ್ಯಾನ್ಸರ್‌ನಿಂದ ಕೆಮ್ಮು, ಎದೆಯಲ್ಲಿ ನೋವು, ಉಸಿರಾಡಲು ಕಷ್ಟವಾಗುವುದು, ಶ್ವಾಸನಾಳಗಳಲ್ಲಿ ಸೋಂಕು, ಉಸಿರುಗಟ್ಟುವುದು, ಹಸಿವಿಲ್ಲದಿರುವುದು, ಕೆಲವು ಅಂಗಗಳು ಕೆಲಸ ಮಾಡುವುದುಅನ್ನು ನಿಲ್ಲಿಸುವುದು ಇತ್ಯಾದಿಗಳು ಎದುರಾಗುತ್ತವೆ. ಬನ್ನಿ ಈ ಭಯಾನಕ ಕಾಯಿಲೆಯಿಂದ ನಿಮ್ಮನ್ನೂ ನಿಮ್ಮ ಪ್ರೀತಿಪಾತ್ರರನ್ನೂ ರಕ್ಷಿಸುವುದು ಹೇಗೆ ಎಂಬುದನ್ನು ನೋಡೋಣ.....   

   ಧೂಮಪಾನ ತ್ಯಜಿಸಿ

  ಧೂಮಪಾನ ತ್ಯಜಿಸಿ

  ಧೂಮಪಾನಿಗಳು ಎಷ್ಟೇ ಇದರ ಪರವಾಗಿ ಹಾರಾಡಲಿ, ಕಡೆಗೊಮ್ಮೆ ಈ ಅಭ್ಯಾಸ ಇವರಿಗೆ ಪ್ರಾಣಾಪಾಯ ಒಡ್ಡುವುದರಲ್ಲಿ ಸಂಶಯವೇ ಇಲ್ಲ. ಶ್ವಾಸಕೋಶದ ಕ್ಯಾನ್ಸರ್‌ಗೆ ಒಳಗಾದವರಲ್ಲಿ ತೊಂಭತ್ತು ಶೇಖಡಾ ಧೂಮಪಾನಿಗಳಲ್ಲಿ ಕಂಡುಬಂದಿದೆ. ಉಳಿದ ಹತ್ತು ಇವರ ಪ್ರೀತಿಪಾತ್ರರಲ್ಲಿಯೇ ಕಂಡುಬಂದಿದೆ. ಸಿಗರೇಟ್‌ ಚಟಕ್ಕೆ ಚಟ್ಟ ಕಟ್ಟುವ ಪವರ್ ಫುಲ್ 'ಆಹಾರ ಪಥ್ಯ'...

  ಧೂಮವನ್ನು ಹಂಚಿಕೊಳ್ಳಬೇಡಿ

  ಧೂಮವನ್ನು ಹಂಚಿಕೊಳ್ಳಬೇಡಿ

  ನಿಮ್ಮ ಮನೆಯಲ್ಲಿಯೇ ಆಗಲಿ, ಸಾರ್ವಜನಿಕ ಸ್ಥಳದಲ್ಲಿಯೇ ಆಗಲಿ, ಯಾರೇ ಧೂಮಪಾನ ಮಾಡಿದರೂ ಅವರು ಬಿಡುವ ಹೊಗೆ ಅಕ್ಕಪಕ್ಕದಲ್ಲಿರುವ ಎಲ್ಲರಿಗೂ ಹಾನಿಕಾರಕವಾಗಿದೆ. ಇವರೆಲ್ಲರೂ ಪರೋಕ್ಷ ಧೂಮಪಾನಿಗಳು ಅಥವಾ passive smokers. ಇಂದು ಕಾನೂನು ಸಹಾ ಧೂಮಪಾನವನ್ನು ವಿರೋಧಿಸುತ್ತಿದ್ದು ಈ ಬಗ್ಗೆ ಯಾವುದೇ ಅಳುಕಿಲ್ಲದೇ ದನಿ ಎತ್ತಿ. ಹೆಚ್ಚಿನ ಸಾರ್ವಜನಿಕ ಸ್ಥಳಗಳಲ್ಲಿ ಧೂಮಪಾನಿಗಳಿಗೆಂದೇ ವಿಶೇಷ ಸ್ಥಳಗಳಿವೆ, ಇವರು ಅಲ್ಲಿ ಹೋಗಲಿ.

  ಧೂಮದ ರಾಸಾಯನಿಕಗಳನ್ನು ಗಮನಿಸಿ

  ಧೂಮದ ರಾಸಾಯನಿಕಗಳನ್ನು ಗಮನಿಸಿ

  ಕ್ಯಾನ್ಸರ್ ಆವರಿಸಲು ಧೂಮಪಾನ ಏಕಮಾತ್ರ ಕಾರಣವಲ್ಲ, ನಮ್ಮ ಸುತ್ತಮುತ್ತಲ ಹೊಗೆ ಉಗುಳುವ ಕಾರ್ಖಾನೆ ಅಥವಾ ಚಿಮಣಿಗಳೂ ಕಾರಣವಾಗಬಹುದು. ಅಷ್ಟೇ ಅಲ್ಲ, ಹಿಂದಿನ ಕಾಲದ ಚಿಮಣಿ, ಹೊಗೆಕೊಳವೆಗಳಲ್ಲಿ ಉಳಿದ ಮಸಿಯೂ ಕಾರಣವಾಗಬಹುದು. ನಿಮ್ಮ ಸುತ್ತಮುತ್ತಲ ಗಾಳಿಯಲ್ಲಿ ರೇಡಾನ್ (radon) ಇಲ್ಲವೆಂದು ಖಚಿತಪಡಿಸಿಕೊಳ್ಳಿ. ಒಂದು ವೇಳೆ ನಿಮ್ಮ ಮನೆಯ ಆಸುಪಾಸಿನಲ್ಲಿ ಹೊಗೆಯುಗುಳುವ ಮೂಲಗಳಿದ್ದರೆ ಗಾಳಿಯನ್ನು ತಪಾಸಣೆಗೊಳಿಸಿ ಸೂಕ್ತ ಕ್ರಮ ಕೈಗೊಳ್ಳುವುದು ನಿಮ್ಮ ನಗರದ ಪಾಲಿಕೆಯ ಜವಾಬ್ದಾರಿಯೂ ಆಗಿದೆ.

  ಕೆಲಸದ ಸ್ಥಳಗಳಲ್ಲಿ ಸುರಕ್ಷತೆ ವಹಿಸಿ

  ಕೆಲಸದ ಸ್ಥಳಗಳಲ್ಲಿ ಸುರಕ್ಷತೆ ವಹಿಸಿ

  ನಿಮ್ಮ ಕೆಲಸದ ಸ್ಥಳಗಳಲ್ಲಿ ಕ್ಯಾನ್ಸರ್ ಕಾರಕ ವಸ್ತುಗಳೊಂದಿಗೆ ಸಂಪರ್ಕ ಹೊಂದುವ ಸಾಧ್ಯತೆ ಇದ್ದರೆ ಪೂರ್ಣ ಪ್ರಮಾಣದ ಸುರಕ್ಷತೆಯನ್ನು ಪರಿಗಣಿಸಲಾಗುತ್ತಿದೆ ಎಂಬುದನ್ನು ಖಚಿತಪಡಿಸಿ. ಅಣುಸ್ಥಾವರ, ರಾಸಾಯನಿಕಗಳ ಕಾರ್ಖಾನೆ, ಕೀಟನಾಶಕ, ರಾಸಾಯನಿಕ ಗೊಬ್ಬರ ಇತ್ಯಾದಿಗಳ ನಿರ್ಮಾಣಸ್ಥಾನದಲ್ಲಿ ಕೆಲಸ ಮಾಡುವವರು ಹೆಚ್ಚಿನ ಸುರಕ್ಷತೆ ವಹಿಸಬೇಕು.

  ಹಸಿರು ಟೀ ಕುಡಿಯಿರಿ

  ಹಸಿರು ಟೀ ಕುಡಿಯಿರಿ

  ಹಸಿರು ಟೀ ಹಲವು ರೋಗಗಳಿಗೆ ಮದ್ದು ಎಂಬುದನ್ನು ಈಗಾಗಲೇ ಕಂಡುಕೊಂಡಿದ್ದೇವೆ. ಇದರಲ್ಲಿರುವ ವಿವಿಧ ಆಂಟಿ ಆಕ್ಸಿಡೆಂಟುಗಳು ಶ್ವಾಸಕೋಶದ ಜೀವಕೋಶಗಳಿಗೂ ಹೆಚ್ಚಿನ ಶಕ್ತಿ ನೀಡುವ ಮೂಲಕ ಕ್ಯಾನ್ಸರ್‌ಗೆ ಆವರಿಸುವ ಸಾಧ್ಯತೆಯನ್ನು ಕಡಿಮೆಗೊಳಿಸುತ್ತದೆ.

  ಮದ್ಯಪಾನ ತ್ಯಜಿಸಿ

  ಮದ್ಯಪಾನ ತ್ಯಜಿಸಿ

  ಮದ್ಯಪಾನದ ಮೂಲಕ ಕೇವಲ ಯಕೃತ್ ಮಾತ್ರವಲ್ಲ ಶ್ವಾಸಕೋಶವೂ ಹಾಳಾಗುತ್ತದೆ. ಶ್ವಾಸಕೋಶದ ಕ್ಯಾನ್ಸರ್ ಎದುರಾಗಿರುವವರಲ್ಲಿ ಧೂಮಪಾನಿಗಳಾರದೇ ಕೇವಲ ಹೆಚ್ಚಿನ ಮದ್ಯ ಸೇವಿಸುವ ಅಭ್ಯಾಸದವರೂ ಇರುವುದು ಈ ಸಾಧ್ಯತೆಗೆ ಪುಷ್ಟಿ ನೀಡಿದೆ. ಈ ಟಿಪ್ಸ್ ಮದ್ಯ ಬೇಡ ಅನ್ನುವವರಿಗೆ ಮಾತ್ರ!

   

  English summary

  Simple Ways To Avoid Getting Lung Cancer

  The popular saying, "prevention is better than cure" can be extremely true when it comes to deadly diseases like cancer! If you know about lung cancer, then you must also be wondering if lung cancer can be prevented, right? Well, when it comes to potentially fatal diseases, we must always be more concerned about trying to prevent them, as there is no guarantee that they can be cured, if we do get afflicted.
  We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Boldsky sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Boldsky website. However, you can change your cookie settings at any time. Learn more