For Quick Alerts
ALLOW NOTIFICATIONS  
For Daily Alerts

ಕ್ಯಾರೆಟ್ ಸೇವಿಸಿದರೆ ಈ 12 ಲಾಭಗಳು ಗ್ಯಾರಂಟಿ!

By Arshad
|

ನಿಮ್ಮ ಆರೋಗ್ಯವನ್ನು ನಿಸ್ಸಂಶಯವಾಗಿ ಹೆಚ್ಚಿಸುವ ತರಕಾರಿಯಲ್ಲಿ ಕ್ಯಾರೆಟ್‍ಗೆ ಅಗ್ರಸ್ಥಾನ ನೀಡಬಹುದು. ಇವುಗಳಲ್ಲಿ ಏನೆಲ್ಲಾ ಆರೋಗ್ಯವು ದೊರೆಯುತ್ತದೆ ಎಂಬುದನ್ನು ನಾವು ಇಂದು ನಿಮಗೆ ತಿಳಿಸುತ್ತಿದ್ದೇವೆ. ಇದನ್ನು ಆದಷ್ಟು ನಿಮ್ಮ ದೈನಂದಿನ ಡಯಟ್‍ನಲ್ಲಿ ಸೇರಿಸಿಕೊಳ್ಳಿ. ಕ್ಯಾರೆಟ್‍ಗಳು ಅಪಿಯಸಿಯೆ ಕುಟುಂಬಕ್ಕೆ ಸೇರಿದ ಗಿಡಗಳು.

ಈ ಹೆಸರು ಗ್ರೀಕ್ ಭಾಷೆಯ "ಕರಟಾನ್" ಪದದಿಂದ ಬಂದಿದೆ. ಸಂಯುಕ್ತ ರಾಷ್ಟ್ರಗಳ ಕೃಷಿ ಇಲಾಖೆಯ ಪ್ರಕಾರ ಒಂದು ಕ್ಯಾರೆಟ್ ಅಥವಾ ಕತ್ತರಿಸಿದ ಅರ್ಧ ಕಪ್ ಕ್ಯಾರೆಟ್‍ನಲ್ಲಿ 25 ಕ್ಯಾಲೊರಿ, 6 ಗ್ರಾಂ ಕಾರ್ಬೋಹೈಡ್ರೇಟ್, 3 ಗ್ರಾಂ ಸಕ್ಕರೆ ಮತ್ತು 1 ಗ್ರಾಂ ಪ್ರೋಟಿನ್ ದೊರೆಯುತ್ತದೆಯಂತೆ. ಕ್ಯಾರೆಟ್‍ನಲ್ಲಿ ವಿಟಮಿನ್ ಎ, ಕ್ಯಾಲ್ಸಿಯಂ, ಕಬ್ಬಿಣಾಂಶ, ವಿಟಮಿನ್ ಇ, ನಾರಿನಂಶ, ವಿಟಮಿನ್ ಕೆ, ಪೊಟಾಶಿಯಂ, ವಿಟಮಿನ್ ಸಿ, ಪೊಟಾಶಿಯಂ, ಮೆಗ್ನಿಶಿಯಂ, ಫೋಲೆಟ್, ಮ್ಯಾಂಗನೀಸ್, ವಿಟಮಿನ್ ಇ ಮತ್ತು ಸತು ಇರುತ್ತದೆಯಂತೆ. ಸಾಮಾನ್ಯವಾಗಿ ಕೇಸರಿ ಬಣ್ಣ ಇರುವಂತೆ ತಯಾರಿಸುವ, ಆಹಾರಗಳಲ್ಲಿ ಕೇಸರಿ ಬಣ್ಣಕ್ಕೆ ಗಜ್ಜರಿಯೇ ಪ್ರಥಮ ಆಯ್ಕೆ. ಆದರೆ ಇವು ಕೇವಲ ಕೇಸರಿ ಬಣ್ಣದಲ್ಲಿ ಮಾತ್ರವಲ್ಲ, ಹಳದಿ, ಬಿಳಿ, ಕೆಂಪು ಮತ್ತು ನೇರಳೆ ಬಣ್ಣದ ಗಜ್ಜರಿಗಳೂ ಇವೆ ಎಂದರೆ ಅಚ್ಚರಿಯಲ್ಲವೇ? ಬನ್ನಿ, ಗಜ್ಜರಿಯ ಬಗ್ಗೆ ಇನ್ನೂ ಹಲವಾರು ಮಾಹಿತಿಗಳಿದ್ದು ನಿಮಗೆ ಇದುವರೆಗೆ ತಿಳಿದಿರದೇ ಇದ್ದ ಪ್ರಮುಖ ಹನ್ನೆರಡು ಮಾಹಿತಿಗಳನ್ನು ಇಲ್ಲಿ ನೀಡಲಾಗಿದೆ...

ಕ್ಯಾರೆಟ್ಟುಗಳಲ್ಲಿ ಕಡಿಮೆ ಕ್ಯಾಲೋರಿಗಳಿವೆ

ಕ್ಯಾರೆಟ್ಟುಗಳಲ್ಲಿ ಕಡಿಮೆ ಕ್ಯಾಲೋರಿಗಳಿವೆ

ಕ್ಯಾರೆಟ್ಟುಗಳಲ್ಲಿ ಅತಿ ಕಡಿಮೆ ಕೊಬ್ಬು ಹಾಗೂ ಪ್ರೋಟೀನ್ ಇದ್ದು ಸುಮಾರು 86-95 ಶೇಖಡಾದಷ್ಟು ನೀರೇ ಇದೆ. ಅಲ್ಲದೇ ಕೇವಲ ಹತ್ತು ಶೇಖಡಾ ಕಾರ್ಬೋಹೈಡ್ರೇಟುಗಳಿದ್ದು ಒಂದು ಮಧ್ಯಮ ಗಾತ್ರದ ಕ್ಯಾರೆಟ್ ತಿನ್ನುವುದರಿಂದ ಕೇವಲ ಇಪ್ಪತ್ತೈದು ಕ್ಯಾಲೋರಿಗಳು ಹಾಗೂ ಕೇವಲ ನಾಲ್ಕು ಗ್ರಾಂ ನಷ್ಟು ಜೀರ್ಣವಾಗುವ ಕಾರ್ಬೋಹೈಡ್ರೇಟುಗಳು ಲಭ್ಯವಾಗುತ್ತವೆ.

ಕ್ಯಾರೆಟ್ಟುಗಳಲ್ಲಿದೆ ಕರಗುವ ನಾರು

ಕ್ಯಾರೆಟ್ಟುಗಳಲ್ಲಿದೆ ಕರಗುವ ನಾರು

ಕ್ಯಾರೆಟ್ಟುಗಳಲ್ಲಿ ಕಾರಗುವ ನಾರು ಹೆಚ್ಚಿನ ಪ್ರಮಾಣದಲ್ಲಿದ್ದು ಇವುಗಳ ಸೇವನೆಯಿಂದ ಸಕ್ಕರೆ ಹಾಗೂ ಪಿಷ್ಟದ ಜೀರ್ಣಕ್ರಿಯೆ ನಿಧಾನಗತಿಯಲ್ಲಿ ಸಾಗುತ್ತದೆ ಹಾಗೂ ಈ ಮೂಲಕ ರಕ್ತದಲ್ಲಿ ಸಕ್ಕರೆಯನ್ನು ನಿಧಾನವಾಗಿ ಪ್ರವಹಿಸಲು ಸಾಧ್ಯವಾಗುತ್ತದೆ. ಅಷ್ಟೇ ಅಲ್ಲ, ಕ್ಯಾರೆಟ್ಟುಗಳಲ್ಲಿ ಉತ್ತಮ ಪ್ರಮಾಣದ ಕರಗದ ನಾರು ಸಹಾ ಇದೆ. ಇವುಗಳು ಮಲಬದ್ದತೆಯಾಗದಂತೆ ನೆರವಾಗುತ್ತವೆ ಹಾಗೂ ಕರುಳುಗಳಲ್ಲಿ ಆಹಾರದ ಚಲನೆ ಸುಲಭವಾಗಿಸಿ ಆರೋಗ್ಯ ವೃದ್ದಿಸುತ್ತವೆ. ಅಲ್ಲದೇ ಇವುಗಳು ನಿಧಾನವಾಗಿ ಸಕ್ಕರೆಯನ್ನು ರಕ್ತಕ್ಕೆ ಸೇರಿಸುವುದರಿಂದ ಇವುಗಳ ಗ್ಲೈಸೆಮಿಕ್ ಕೋಷ್ಟಕದ ಮಟ್ಟವೂ ಕಡಿಮೆಯೇ ಇದೆ.

ಕ್ಯಾರೆಟ್ಟುಗಳಲ್ಲಿ ಬೀಟಾ ಕ್ಯಾರೋಟೀನ್ ವಿಫುಲವಾಗಿದೆ

ಕ್ಯಾರೆಟ್ಟುಗಳಲ್ಲಿ ಬೀಟಾ ಕ್ಯಾರೋಟೀನ್ ವಿಫುಲವಾಗಿದೆ

ಕ್ಯಾರೆಟ್ಟುಗಳಲ್ಲಿ ವಿಟಮಿನ್ ಎ ಹಾಗೂ ಬೀಟಾ ಕ್ಯಾರೋಟೀನ್ ವಿಫುಲವಾಗಿವೆ. ಸುಮಾರು ನೂರು ಗ್ರಾಂ ನಷ್ಟು ತಾಜಾ ಕ್ಯಾರೆಟ್ ನಲ್ಲಿ 8,285 ಮೈಕ್ರೋ ಗ್ರಾಂ ನಷ್ಟು ಬೀಟಾ ಕ್ಯಾರೋಟೀನ್ ಇರುತ್ತದೆ ಹಾಗೂ 16,706 IU ನಷ್ಟು ವಿಟಮಿನ್ ಎ ಇದೆ. ಅಲ್ಲದೇ ಇದರಲ್ಲಿರುವ ಫ್ಲೇವನಾಯ್ಡುಗಳು ತ್ವಚೆ, ಶ್ವಾಸಕೋಶ ಹಾಗೂ ಬಾಯಿಯ ಕುಳಿಗಳ ಕ್ಯಾನ್ಸರ್ ನಿಂದ ರಕ್ಷಿಸುತ್ತದೆ.

ಕ್ಯಾರೆಟ್ಟುಗಳಲ್ಲಿ ಹೆಚ್ಚಿನ ಪ್ರಮಾಣದ ಖನಿಜಗಳಿವೆ

ಕ್ಯಾರೆಟ್ಟುಗಳಲ್ಲಿ ಹೆಚ್ಚಿನ ಪ್ರಮಾಣದ ಖನಿಜಗಳಿವೆ

ನಿಮ್ಮ ಆರೋಗ್ಯಕ್ಕೆ ಅಗತ್ಯವಾದ ಎಲ್ಲಾ ಖನಿಜಗಳನ್ನು ಕ್ಯಾರೆಟ್ ನೀಡಲು ಶಕ್ತವಾಗಿದೆ ಎಂದು ನಿಮಗೆ ಗೊತ್ತಿತ್ತೇ? ಇದರಲ್ಲಿ ತಾಮ್ರ, ಮ್ಯಾಂಗನೀಸ್, ಕ್ಯಾಲ್ಸಿಯಂ, ಕಬ್ಬಿಣ, ಗಂಧಕ, ಪೊಟ್ಯಾಶಿಯಂ ಹಾಗೂ ಮ್ಯಾಂಗನೀಸ್ ಇದ್ದು ಮೂಳೆಗಳನ್ನು ದೃಢಗೊಳಿಸುತ್ತದೆ. ನಿತ್ಯವೂ ಕ್ಯಾರೆಟ್ಟುಗಳನ್ನು ಸೇವಿಸುವ ಮೂಲಕ ನಿತ್ಯದ ಖನಿಜಗಳ ಅಗತ್ಯತೆಯನ್ನು ಪೂರೈಸಬಹುದು.

ಕ್ಯಾರೆಟ್ಟುಗಳಲ್ಲಿ ಆಂಟಿ ಆಕ್ಸಿಡೆಂಟುಗಳು ಹೆಚ್ಚಿನ ಪ್ರಮಾಣದಲ್ಲಿವೆ

ಕ್ಯಾರೆಟ್ಟುಗಳಲ್ಲಿ ಆಂಟಿ ಆಕ್ಸಿಡೆಂಟುಗಳು ಹೆಚ್ಚಿನ ಪ್ರಮಾಣದಲ್ಲಿವೆ

ಕ್ಯಾರೆಟ್ಟುಗಳಲ್ಲಿರುವ ಬೀಟಾ ಕ್ಯಾರೋಟೀನ್ ಒಂದು ಪ್ರಬಲ ನೈಸರ್ಗಿಕ ಆಂಟಿ ಆಕ್ಸಿಡೆಂಟ್ ಆಗಿದ್ದು ನಮ್ಮ ದೇಹಗಳನ್ನು ಆಮ್ಲಜನಕದ ಕಣಗಳಿಂದ ಪ್ರೇರಿತವಾದ ಕ್ಯಾನ್ಸರ್ ಉಂಟುಮಾಡುವ ಫ್ರೀ ರ್‍ಯಾಡಿಕಲ್ ಎಂಬ ಕಣಗಳಿಂದ ರಕ್ಷಿಸುತ್ತದೆ. ಹಾಗೂ ಇದರಲ್ಲಿ ಫಾಲ್ಕಾರಿನಾಲ್ ಎಂಬ ಪಾಲಿಅಸಿಟೈಲೀನ್ ಆಂಟಿ ಆಕ್ಸಿಡೆಂಟ್ ಇದೆ. ಇವುಗಳು ಸಹಾ ಕ್ಯಾನ್ಸರ್ ವಿರುದ್ದ ಹೋರಾಡುವ ಶಕ್ತಿ ಹೊಂದಿದೆ.

ಕ್ಯಾರೆಟ್ ಬೇರುಗಳು ಸಹಾ ಆರೋಗ್ಯಕರ

ಕ್ಯಾರೆಟ್ ಬೇರುಗಳು ಸಹಾ ಆರೋಗ್ಯಕರ

ಕ್ಯಾರೆಟ್ ಒಂದು ಗಡ್ಡೆಯಾಗಿದ್ದು ಇದರಿಂದ ಹೊರಟ ಬೇರುಗಳು ಸಹಾ ಆರೋಗ್ಯಕರವಾಗಿವೆ. ಇದರಲ್ಲಿ ವಿಟಮಿನ್ ಸಿ ದಿನದ ಅಗತ್ಯದ ಒಂಭತ್ತು ಶೇಖಡಾದಷ್ಟು ಪ್ರಮಾಣವನ್ನು (RDA (Recommended Dietary Allowance) ನಿಗದಿಪಡಿಸಿದಂತೆ) ಪಡೆಯಬಹುದು. ಅಲ್ಲದೇ ವಿಟಮಿನ್ ಸಿ ದೇಹದ ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸುವ ಜೊತೆಗೇ, ಮೂಳೆ-ಸ್ನಾಯುಗಳನ್ನು ಬಂಧಿಸುವ ಅಂಗಾಂಶ, ಹಲ್ಲು ಮತ್ತು ಒಸಡುಗಳನ್ನೂ ದೃಢಗೊಳಿಸುತ್ತದೆ.

ಇವುಗಳನ್ನು ಹಲವು ರೂಪದಲ್ಲಿ ಸೇವಿಸಬಹುದು

ಇವುಗಳನ್ನು ಹಲವು ರೂಪದಲ್ಲಿ ಸೇವಿಸಬಹುದು

ತರಕಾರಿಗಳಲ್ಲಿ ಕೆಲವು ತರಕಾರಿಗಳು ಒಂದಕ್ಕಿಂತ ಹೆಚ್ಚು ಬಗೆಯ ಖಾದ್ಯದಲ್ಲಿ ಬಳಕೆಯಾಗುತ್ತವೆ. ಆಲುಗಡ್ಡೆ, ಕ್ಯಾರೆಟ್ ಇವುಗಳಲ್ಲಿ ಪ್ರಮುಖವಾಗಿವೆ. ಕ್ಯಾರೆಟ್ ಅನ್ನು ಹಸಿಯಾಗಿಯೂ, ಬೇಯಿಸಿಯೂ ಸೇವಿಸಬಹುದು. ಚಿಕ್ಕದಾಗಿ ತುರಿದು ಸಾಲಾಡ್ ನಲ್ಲಿ, ಬಟಾಣಿ, ಆಲುಗಡ್ಡೆ ಮೊದಲಾದವುಗಳ ಜೊತೆಗೆ ವಿವಿಧ ಬಗೆಯ ಖಾದ್ಯಗಳ ರೂಪದಲ್ಲಿ ಸೇವಿಸಬಹುದು.

ಔಷಧಿಯ ರೂಪದಲ್ಲಿ ಬಳಕೆ

ಔಷಧಿಯ ರೂಪದಲ್ಲಿ ಬಳಕೆ

ಕ್ಯಾರೆಟ್ಟುಗಳ ರಸವನ್ನು ಕೆಲವಾರು ವ್ಯಾಧಿಗಳಿಗೆ ಔಷಧಿಯ ರೂಪದಲ್ಲಿ ಸೇವಿಸಲಾಗುತ್ತದೆ. ವಾಸ್ತವದಲ್ಲಿ ಕ್ಯಾರೆಟ್ಟುಗಳನ್ನು ತರಕಾರಿಯಾಗಿ ಬಳಸುವ ಮುನ್ನವೇ ಔಷಧಿಗಾಗಿ ಬೆಳೆಯಲಾಗುತ್ತಿತ್ತು. ತರಕಾರಿಗಿಂತಲೂ ಮುನ್ನವೇ ಹಲವು ವ್ಯಾಧಿಗಳಿಗೆ ಔಷಧಿಯಾಗಿ ಬಳಸಲಾಗುತ್ತಿತ್ತು.

ಬೇಬಿ ಕ್ಯಾರೆಟ್ ಕ್ಯಾರೆಟ್ ನ ಇನ್ನೊಂದು ಬಗೆ ಅಲ್ಲ!

ಬೇಬಿ ಕ್ಯಾರೆಟ್ ಕ್ಯಾರೆಟ್ ನ ಇನ್ನೊಂದು ಬಗೆ ಅಲ್ಲ!

ಮಾರುಕಟ್ಟೆಯಲ್ಲಿ ಕ್ಯಾರೆಟ್ಟುಗಳ ಹೃಸ್ವರೂಪದ ಬಗೆಯವೂ ಇವೆ. ಇದೊಂದು ಭಿನ್ನ ತಳಿ ಎಂದು ಹೇಳಲಾಗುತ್ತದೆ. ಆದರೆ ಇದು ಸೂಕ್ತ ಪೋಷಣೆ ನೀಡದೇ ಪೂರ್ಣವಾಗಿ ಬೆಳೆಯದ ಕ್ಯಾರೆಟ್ಟುಗಳಾಗಿದ್ದು ಇವು ಪೌಷ್ಟಿಕವೂ ಅಲ್ಲ, ಆರೋಗ್ಯಕರವೂ ಅಲ್ಲದ ತರಕಾರಿಯಾಗಿದೆ. ಬದಲಿಗೆ ದೊಡ್ಡ ಗಾತ್ರದ ಹಾಗೂ ಸಾಕಷ್ಟು ರಸಭರಿತ ಕ್ಯಾರೆಟ್ಟುಗಳೇ ಆರೋಗ್ಯಕರ.

ಕ್ಯಾರೆಟ್ಟುಗಳಲ್ಲಿ ಇತರ ಬಣ್ಣದವೂ ಇವೆ

ಕ್ಯಾರೆಟ್ಟುಗಳಲ್ಲಿ ಇತರ ಬಣ್ಣದವೂ ಇವೆ

ಕೇಸರಿ ಬಣ್ಣ ಸಾಮಾನ್ಯವಾದ ಬಣ್ಣವಾಗಿದ್ದರೂ ಕ್ಯಾರೆಟ್ಟುಗಳು ನೈಸರ್ಗಿಕವಾಗಿ ಇತರ ಬಣ್ಣಗಳಲ್ಲಿಯೂ ದೊರಕುತ್ತದೆ. ಬಿಳಿ, ಹಳದಿ, ಹಾಗೂ ಗಾಢ ನೇರಳೆ ಬಣ್ಣದವೂ ಇವೆ. ವಾಸ್ತವವಾಗಿ ಇಂದಿನ ಕೇಸರಿ ಬಣ್ಣದ ಕ್ಯಾರೆಟ್ಟುಗಳು ನೇರಳೆ ಬಣ್ಣದ ಕ್ಯಾರೆಟ್ಟುಗಳಿಗೆ ಅನುಅಂಶಿಕವಾದ ಬದಲಾವಣೆಯನ್ನು ನೀಡಿ ಪಡೆದ ಬಣ್ಣವೇ ಆಗಿದೆ. ವಿಶ್ವದಲ್ಲಿ ಸುಮಾರು ಇಪ್ಪತ್ತರಷ್ಟು ವಿವಿಧ ಬಣ್ಣದ ಕ್ಯಾರೆಟ್ಟುಗಳಿವೆ.

ಬೇಯಿಸಿದ ಕ್ಯಾರೆಟ್ಟುಗಳೇ ಹೆಚ್ಚು ಪೌಷ್ಟಿಕ

ಬೇಯಿಸಿದ ಕ್ಯಾರೆಟ್ಟುಗಳೇ ಹೆಚ್ಚು ಪೌಷ್ಟಿಕ

ಸಾಮಾನ್ಯವಾಗಿ ಹಸಿ ತರಕಾರಿ ಹೆಚ್ಚು ಪೌಷ್ಟಿಕ ಎಂದು ನಾವೆಲ್ಲರೂ ಭಾವಿಸಿದ್ದೇವೆ. ಆದರೆ ಕ್ಯಾರೆಟ್ಟುಗಳ ಜೀವಕೋಶಗಳ ಹೊರಕೋಶ ಹೆಚ್ಚು ದೃಢವಾಗಿದ್ದು ಒಳಗಿನ ಪೋಷಕಾಂಶಗಳನ್ನು ಸುಲಭವಾಗಿ ಬಿಟ್ಟುಕೊಡುವುದಿಲ್ಲ. ಕ್ಯಾರೆಟ್ಟುಗಳನ್ನು ಬೇಯಿಸುವ ಮೂಲಕ ಈ ಪದರ ಮೃದುವಾಗಿ ಕರಗಿ ಹೋಗುತ್ತದೆ, ತನ್ಮೂಲಕ ಪೋಷಕಾಂಶಗಳನ್ನು ಜೀರ್ಣೀಸಿಕೊಳ್ಳಲು ಸುಲಭವಾಗುತ್ತದೆ.

ಕ್ಯಾರೆಟ್ ಎಲೆಗಳನ್ನೂ ಹಸಿಯಾಗಿ ಸೇವಿಸಬಹುದು

ಕ್ಯಾರೆಟ್ ಎಲೆಗಳನ್ನೂ ಹಸಿಯಾಗಿ ಸೇವಿಸಬಹುದು

ಕ್ಯಾರೆಟ್ಟಿನ ಮೇಲಿರುವ ಎಲೆಗಳನ್ನು ಸಹಾ ಹಸಿಯಾಗಿ ಸೇವಿಸಬಹುದು ಎಂದು ನಿಮಗೆ ತಿಳಿದಿತ್ತೇ? ಇದರಲ್ಲಿಯೂ ಉತ್ತಮ ಪ್ರಮಾಣದ ಪೋಷಕಾಂಶಗಳು, ಹೆಚ್ಚಿನ ಪ್ರಮಾಣದ ಪ್ರೋಟೀನ್, ವಿಟಮಿನ್ನುಗಳು ಹಾಗೂ ಖನಿಜಗಳಿವೆ. ಇವುಗಳು ಮೃದುವಾಗಿಯೂ, ನಾರುಭರಿತವಾಗಿದ್ದು ಹಸಿಯಾಗಿ ಸೇವಿಸಲು ಸೂಕ್ತವಾಗಿದೆ.

English summary

Healthy Facts About Carrots You Didn't Know

Who doesn't like the naturally sugary, crunchy and delicious carrots? Indeed everyone loves these root vegetables cooked in any form. Carrots are crunchy, tasty and highly nutritious and are often claimed to be the perfect health food. The orange-coloured vegetables are cultivated all across the world. They are a favourite during the winter season because Indians love to cook gajar ka halwa, which is widely eaten in most Indian homes.
X
Desktop Bottom Promotion