ಆರೋಗ್ಯ ಟಿಪ್ಸ್: ಕೆಂಪು ವೈನ್ ಸೇವನೆಯಿಂದ ಆರೋಗ್ಯ ವೃದ್ಧಿ!

By: Arshad
Subscribe to Boldsky

ವೈನ್ ಎಂದರೆ ಮಾದಕ ಪಾನೀಯವೆಂದೇ ಹೆಚ್ಚಿನವರು ಪರಿಗಣಿಸಿದ್ದಾರೆ. ಆದರೆ ಇದನ್ನು ಹೆಚ್ಚು ಕೊಳೆಸದೇ ಆಲ್ಕೋಹಾಲ್ ಪ್ರಮಾಣ ಕಡಿಮೆಯಾಗಿಸುವ ಕಲೆಯೇ ವೈನ್. ಇದೊಂದು ಪವಾಡಕರ ಪಾನೀಯ ಎಂದೂ ಪರಿಗಣಿಸಲ್ಪಡುತ್ತದೆ. ಇದು ಎಷ್ಟು ಆರೋಗ್ಯಕರ ಎಂಬ ಬಗ್ಗೆ ಸಂಶೋಧನೆ ನಡೆದಿದೆ ಹಾಗೂ ನಡೆಯುತ್ತಲೂ ಇದೆ.

ಇದುವರೆಗೆ ಬಂದ ಫಲಿತಾಂಶಗಳ ಪ್ರಕಾರ ಆರೋಗ್ಯಕರ ವಿಧಾನದಲ್ಲಿ ಸಂಸ್ಕರಿಸಿದ ಕೆಂಪುದ್ರಾಕ್ಷಿಯ ವೈನ್ ಅಥವಾ ರೆಡ್ ವೈನ್ ಆರೋಗ್ಯವನ್ನು ಹಲವು ರೀತಿಯಲ್ಲಿ ವೃದ್ಧಿಸುತ್ತದೆ. ಅಷ್ಟೇ ಅಲ್ಲ, ಕೆಲವು ಮಾರಣಾಂತಿಕ ಕಾಯಿಲೆಗಳಿಗೆ ಔಷಧಿಯ ರೂಪದಲ್ಲಿಯೂ ಬಳಕೆಯಾಗುತ್ತದೆ. ರೆಡ್ ವೈನ್ ಮೆದುಳಿನ ಆರೋಗ್ಯಕ್ಕೆ ಒಳ್ಳೆಯದು

ಬನ್ನಿ, ಈ ವೈನ್ ಸೇವನೆಯಿಂದ ಯಾವ ರೀತಿಯ ಪ್ರಯೋಜನಗಳಿವೆ ಎಂಬುದನ್ನು ಇಂದಿನ ಲೇಖನದಲ್ಲಿ ನೋಡೋಣ. ಕೆಂಪು ವೈನ್ ನಲ್ಲಿ ರೆಸ್ವೆರೆಟ್ರಾಲ್ (resveratrol) ಮತ್ತು ಪ್ರೊಯಾಂಥೋಸಯಾನಿಡಿನ್ (proanthocyanidin) ಎಂಬ ಪೋಷಕಾಂಶಗಳಿದ್ದು ಇವು ಕ್ಯಾನ್ಸರ್‌ಗೆ ಕಾರಣವಾಗಬಲ್ಲ ಫ್ರೀ ರ್‍ಯಾಡಿಕಲ್ ಎಂಬ ಕಣಗಳ ವಿರುದ್ಧ ಹೋರಾಡುವ ಮೂಲಕ ಹಲವು ತೊಂದರೆಗಳಿಂದ ಆರೋಗ್ಯವನ್ನು ಕಾಪಾಡುತ್ತದೆ. ಅಮಲೇರಿಸೋ ಸುದ್ದಿ: ವನಿತೆಯರಿಗೆ ವೈನ್ ಉಡುಗೆ!

ಈ ಕಣಗಳ ವಿರುದ್ಧ ಹೋರಾಟ ನಡೆಸದೇ ಇದ್ದರೆ ಬರೆಯ ಕ್ಯಾನ್ಸರ್ ಮಾತ್ರವಲ್ಲ, ಹೃದಯ ಸಂಬಂಧಿ ತೊಂದರೆಗಳು, ಆಲ್ಜೀಜರ್ಸ್ ಕಾಯಿಲೆ, ಪಾರ್ಕಿನ್ಸನ್ ಕಾಯಿಲೆ ಮೊದಲಾದವುಗಳು ಸಹಾ ಆವರಿಸಬಹುದು. ಕೆಂಪು ದ್ರಾಕ್ಷಿಯನ್ನು ಹುದುಗು ಬರಿಸಿ ಇದರ ರಸವನ್ನು ಸಂಸ್ಕರಿಸಿ ಸಾರವಿಳಿಸಿದ ದ್ರವವೇ ರೆಡ್ ವೈನ್. ಬನ್ನಿ, ಈ ಪೇಯವನ್ನು ಹಿತಮಿತವಾಗಿಯೇ ಸೇವನೆಯಿಂದ ಯಾವ ರೀತಿಯ ಪ್ರಯೋಜನಗಳಿವೆ ಎಂಬುದನ್ನು ನೋಡೋಣ....  

 ಕೆಟ್ಟ ಕೊಲೆಸ್ಟ್ರಾಲ್ ಕಡಿಮೆಗೊಳಿಸಲು ನೆರವಾಗುತ್ತದೆ

ಕೆಟ್ಟ ಕೊಲೆಸ್ಟ್ರಾಲ್ ಕಡಿಮೆಗೊಳಿಸಲು ನೆರವಾಗುತ್ತದೆ

ರಕ್ತದಲ್ಲಿರುವ ಕೆಟ್ಟಾ ಕೊಲೆಸ್ಟ್ರಾಲ್ ಮಟ್ಟವನ್ನು ಕಡಿಮೆಗೊಳಿಸಲು ಕೆಂಪು ವೈನ್‌ನಲ್ಲಿರುವ

ಪೋಷಕಾಂಶಗಳು ನೆರವಾಗುತ್ತವೆ. ಈ ಪೋಷಕಾಂಶಗಳು ರಕ್ತನಾಳಗಳ ಒಳಗೆ ಜಿಡ್ಡುಕಟ್ಟಿಕೊಂಡಿದ್ದ ಕೆಟ್ಟ ಕೊಲೆಸ್ಟ್ರಾಲ್ ಕಣಗಳನ್ನು ಸಡಿಲಗೊಳಿಸಿ ನಿವಾರಿಸಲು ನೆರವಾಗುತ್ತದೆ.

ಅಧಿಕ ರಕ್ತದೊತ್ತಡ ನಿಯಂತ್ರಣಕ್ಕೆ....

ಅಧಿಕ ರಕ್ತದೊತ್ತಡ ನಿಯಂತ್ರಣಕ್ಕೆ....

ತನ್ಮೂಲಕ ಅಧಿಕ ರಕ್ತದೊತ್ತಡ ಕಡಿಮೆಯಾಗಿ ಇದರ ಮೂಲಕ ಎದುರಾಗಬಹುದಾಗಿದ್ದ ಹಲವು ತೊಂದರೆಗಳಿಂದ ರಕ್ಷಿಸುತ್ತದೆ.

ಹೃದಯದ ಕ್ಷಮತೆ ಹೆಚ್ಚಿಸುತ್ತದೆ

ಹೃದಯದ ಕ್ಷಮತೆ ಹೆಚ್ಚಿಸುತ್ತದೆ

ಕೆಂಪು ವೈನ್‌ನಲ್ಲಿ ಪಾಲಿಫೆನಾಲ್‌ಗಳೆಂಬ ಕಣಗಳಿದ್ದು ರಕ್ತನಾಳಗಳು ಪೆಡಸಾಗದಂತೆ ತಡೆಯುತ್ತದೆ. ಅಲ್ಲದೇ ರಕ್ತದಲ್ಲಿ ಹೆಪ್ಪುಗಟ್ಟುವ ಸಾಧ್ಯತೆಯನ್ನೂ ಕಡಿಮೆಗೊಳಿಸಿ ಹೃದಯದ ಮೇಲಿನ ಭಾರವನ್ನು ಕಡಿಮೆಗೊಳಿಸುತ್ತದೆ. ತನ್ಮೂಲಕ ರಕ್ತಪರಿಚಲನೆ ಉತ್ತಮಗೊಂಡು ಆರೋಗ್ಯ ವೃದ್ಧಿಸುತ್ತದೆ.

ರಕ್ತದಲ್ಲಿ ಸಕ್ಕರೆಯ ಪ್ರಮಾಣವನ್ನು ನಿಯಂತ್ರಿಸುತ್ತದೆ

ರಕ್ತದಲ್ಲಿ ಸಕ್ಕರೆಯ ಪ್ರಮಾಣವನ್ನು ನಿಯಂತ್ರಿಸುತ್ತದೆ

ಕೆಂಪುದ್ರಾಕ್ಷಿಯ ಸಿಪ್ಪೆಯಲ್ಲಿ ರೆಸ್ವೆರೆಟ್ರಾಲ್ ಎಂಬ ಪೋಷಕಾಂಶವಿದ್ದು ಇದು ರಕ್ತದಲ್ಲಿ ಸಕ್ಕರೆಯ ಮಟ್ಟವನ್ನು ನಿಯಂತ್ರಣದಲ್ಲಿರಿಸಲು ನೆರವಾಗುತ್ತದೆ. ಅಲ್ಲದೇ ಮೇದೋಜೀರಕ ಗ್ರಂಥ ಹೆಚ್ಚಿನ ಸೂಕ್ತ ಪ್ರಮಾಣದ ಇನ್ಸುಲಿನ್ ಸ್ರವಿಸಲು ನೆರವಾಗುತ್ತದೆ ಹಾಗೂ ರಕ್ತದಲ್ಲಿ ಥಟ್ಟನೇ ಸಕ್ಕರೆಯ ಪ್ರಮಾಣ ಏರುವುದನ್ನು ತಡೆಯುವ ಪ್ರೋಟೀನ್ ಅನ್ನು ಉತ್ಪಾದಿಸುತ್ತದೆ.

ಶೀತ ಮತ್ತು ಕೆಮ್ಮಿನ ವಿರುದ್ಧ ಹೋರಾಡುತ್ತದೆ

ಶೀತ ಮತ್ತು ಕೆಮ್ಮಿನ ವಿರುದ್ಧ ಹೋರಾಡುತ್ತದೆ

ಶೀತ ಮತ್ತು ಕೆಮ್ಮಿನ ವಿರುದ್ಧ ಹೋರಾಡಲು ಒಂದು ಗ್ಲಾಸ್ ಕೆಂಪು ವೈನ್ ಸಾಕು. ಇದರಲ್ಲಿರುವ ಆಂಟಿ ಆಕ್ಸಿಡೆಂಟುಗಳು ಜೀವಕೋಶಗಳಿಗೆ ಹೆಚ್ಚಿನ ಶಕ್ತಿ ನೀಡುವ ಮೂಲಕ ಫ್ರೀ ರ್‍ಯಾಡಿಕಲ್ ಕಣಗಳ ವಿರುದ್ಧ ಹೋರಾಡಲು ನೆರವು ನೀಡುತ್ತದೆ. ಪರಿಣಾಮವಾಗಿ ರೋಗ ನಿರೋಧಕ ಶಕ್ತಿ ಇನ್ನಷ್ಟು ಹೆಚ್ಚುತ್ತದೆ.

 
English summary

everything-you-need-to-know-about-the-health-benefits-of-red-wine

In this article, we are presenting to you the health benefits of red wine. Red wine is loaded with ingredients called resveratrol and proanthocyanidin, which are antioxidants that protect the body against free radicals.
Subscribe Newsletter