Latest Updates
-
ಹಬ್ಬದ ಸೀಸನ್ನಲ್ಲಿ ಎಚ್ಚರ! ದೆಹಲಿಯಲ್ಲಿ ಕಲಬೆರಕೆ ಸ್ವೀಟ್ಸ್ ದಾಳಿ: 30 ಸೆಕೆಂಡ್ಗಳಲ್ಲಿ ಪರೀಕ್ಷಿಸುವುದು ಹೇಗೆ? -
ಸೆಪ್ಟೆಂಬರ್ 25 ಗಣೇಶ ವಿಸರ್ಜನೆ: ಮುಂಬೈ, ಪುಣೆ, ಹೈದರಾಬಾದ್ನಲ್ಲಿ ಟ್ರಾಫಿಕ್ ರೂಟ್ ಬದಲಾವಣೆ, ಪರ್ಯಾಯ ಮಾರ್ಗಗಳ ಮಾಹಿತಿ ಇಲ್ಲಿದೆ! -
ಗಣೇಶ ವಿಸರ್ಜನೆ ಮೆರವಣಿಗೆ: ಬೆನ್ನು, ಮೊಣಕಾಲು ನೋವು ತಡೆಯಲು 12 ನಿಮಿಷದ ಸ್ಮಾರ್ಟ್ ರೊಟೀನ್ ಇಲ್ಲಿದೆ! -
ಯುಸಿಸಿ ಸಮಿತಿಯಲ್ಲಿ ಭಿನ್ನಮತ: ನಿಮ್ಮ ಮದುವೆ, ಆಸ್ತಿ ಹಕ್ಕಿನ ಮೇಲೆ ಪರಿಣಾಮವೇನು? -
15 ನಿಮಿಷದ ಡೆಂಗ್ಯೂ ಹೋಮ್ ಆಡಿಟ್: ನಿಮ್ಮ ಮನೆಯೇ ಸೊಳ್ಳೆಗಳ ತಾಣವಾಗದಿರಲಿ, ಈ ಸರಳ ಮುನ್ನೆಚ್ಚರಿಕೆಗಳನ್ನು ತಪ್ಪದೇ ಪಾಲಿಸಿ! -
ನಕಲಿ ಪ್ರೋಟೀನ್ ಸಪ್ಲಿಮೆಂಟ್ಸ್ ಎಚ್ಚರಿಕೆ: ನಿಮ್ಮ ಆರೋಗ್ಯಕ್ಕೆ ಕಂಟಕವಾಗುವ ಮುನ್ನ ಈ ಲೇಬಲ್ ಚೆಕ್ ಮಾಡಿ! -
ಒಡಿಶಾ-ಆಂಧ್ರ ಕರಾವಳಿಗೆ ಅಪ್ಪಳಿಸಲಿದೆ 'ಡೀಪ್ ಡಿಪ್ರೆಷನ್': ನಿಮ್ಮ ಸುರಕ್ಷತೆಗಾಗಿ ಈ 15 ನಿಮಿಷಗಳ ಮುನ್ನೆಚ್ಚರಿಕೆ ಮರೆಯದಿರಿ! -
ದೆಹಲಿ-ಎನ್ಸಿಆರ್ನಲ್ಲಿ ಕಳಪೆ AQI: ಶ್ವಾಸಕೋಶದ ಆರೋಗ್ಯಕ್ಕಾಗಿ ಮನೆಯಲ್ಲೇ ಮಾಡಿ ಈ 10 ನಿಮಿಷದ ಸರಳ ವ್ಯಾಯಾಮ -
ರಣವೀರ್-ದೀಪಿಕಾ ದಂಪತಿಗೆ ಹೆಣ್ಣು ಮಗು: ಹೊಸ ಪೋಷಕರಿಗೆ ಸಂಬಂಧಿಕರು ನೀಡಬೇಕಾದ ಗೌರವಯುತ ಬೆಂಬಲವೇನು? -
ಬೆಂಗಳೂರಿನಲ್ಲಿ ಇಂದು 6 ಗಂಟೆಗಳ ಕಾಲ ನೀರಿನ ವ್ಯತ್ಯಯ: ಈ ಪ್ರದೇಶಗಳ ನಿವಾಸಿಗಳು ಎಚ್ಚರ!
ರೆಡ್ ವೈನ್ ಮೆದುಳಿನ ಆರೋಗ್ಯಕ್ಕೆ ಒಳ್ಳೆಯದು
ಒಬ್ಬ ವ್ಯಕ್ತಿ ಆಲ್ಕೋಹಾಲ್ ನ್ನು ತನ್ನ ಅತ್ಯುತ್ತಮ ಗೆಳೆಯನೆಂದು ಭಾವಿಸಿದ್ದರೆ ಅಂತವರಿಗೆ ಒಂದು ಒಳ್ಳೆಯ ಸುದ್ದಿಯಿದೆ. ಮಿತಿಯಾಗಿ ರೆಡ್ ವೈನ್ ಸೇವಿಸುವುದರಿಂದ ಮೆದುಳಿನ ಆರೋಗ್ಯ ಉತ್ತಮವಾಗಿರುತ್ತದೆ. ರೆಡ್ ವೈನ್ ನ ಆರೋಗ್ಯಕಾರಿ ಲಾಭಗಳ ಬಗ್ಗೆ ಹಲವಾರು ವರದಿಗಳು ಪ್ರಕಟವಾಗಿದೆ. ಮೆದುಳಿನ ಆರೋಗ್ಯದಲ್ಲಿ ಪ್ರಮುಖ ಪಾತ್ರ ನಿರ್ವಹಿಸುತ್ತದೆ. ನೀವು ಹುಟ್ಟುಹಬ್ಬದ ಪಾರ್ಟಿ ಅಥವಾ ಮದುವೆ ವಾರ್ಷಿಕೋತ್ಸವದ ಬಗ್ಗೆ ಚಿಂತಿಸುತ್ತಿದ್ದರೆ ಅತಿಥಿಗಳಿಗೆ ರೆಡ್ ವೈನ್ ನೀಡುವುದನ್ನು ಮರೆಯಬೇಡಿ.
ಇತ್ತೀಚೆಗೆ ನಡೆಸಿದ ಅಧ್ಯಯನವೊಂದರ ಪ್ರಕಾರ ರೆಡ್ ವೈನ್ ಕೇವಲ ಹೃದಯದ ಆರೋಗ್ಯವನ್ನು ಸುಧಾರಿಸುವುದಲ್ಲವೆ ನಿಮ್ಮ ಮೆದುಳನ್ನು ಬಲಗೊಳಿಸುತ್ತದೆ. ಜಾರ್ಜ್ ಟೌನ್ ಯೂನಿವರ್ಸಿಟಿ ಮೆಡಿಕಲ್ ಸೆಂಟರ್ ನಲ್ಲಿ ನಡೆಸಿದ ರೆಡ್ ವೈನ್ ಸ್ಟಡಿ' ಯಿಂದ ರೆಡ್ ವೈನ್ ಆಲ್ಝೈಮರ್ ಬರುವ ಸಾಧ್ಯತೆ ಕಡಿಮೆ ಮಾಡುತ್ತದೆ ಎಂದು ತಿಳಿದುಬಂದಿದೆ. ರೆಡ್ ವೈನ್ ನಲ್ಲಿ ಕಂಡುಬರುವ ರೆಸ್ವೆರಾಟ್ರೊಲ್ ಎನ್ನುವ ಸಂಯುಕ್ತವು ಮೆದುಳಿನ ಆರೋಗ್ಯಕ್ಕೆ ತುಂಬಾ ಲಾಭಕಾರಿ ಎಂದು ತಿಳಿದುಬಂದಿದೆ. ರೆಡ್ ವೈನ್ ನ ಆರೋಗ್ಯಕಾರಿ ಲಾಭಗಳು ತುಂಬಾ ಇದೆ. ಇದು ನಿಮ್ಮ ಸೊಂಟದ ಬೊಜ್ಜು ಕರಗಿಸುತ್ತದೆ. ಇದರ ಆರೋಗ್ಯಕಾರಿ ಗುಣಗಳಿಂದ ರೆಡ್ ವೈನ್ ದಿನದಿಂದ ದಿನಕ್ಕೆ ಜನಪ್ರಿಯತೆ ಪಡೆಯುತ್ತಿದೆ. ರೆಡ್ ವೈನ್ ಕುಡಿಯುವುದರಿಂದ ನಿಮ್ಮ ಮೆದುಳು ಮಾತ್ರವಲ್ಲದೆ ಹೃದಯ ಕೂಡ ಆರೋಗ್ಯಕರವಾಗಿರುತ್ತದೆ. ನಿಮ್ಮ ಹೃದಯ ತುಂಬಾ ಅಮೂಲ್ಯ! ಮೆದುಳಿನ ಆರೋಗ್ಯಕ್ಕೆ ರೆಡ್ ವೈನ್ ನ ಕೆಲವೊಂದು ಆರೋಗ್ಯಕಾರಿ ಲಾಭಗಳು.

ಪಾರ್ಶ್ವವಾಯುಗೆ ಗುಡ್ ಬೈ ಹೇಳಿ
ವೈನ್ ನ ಪ್ರಮುಖ ಆರೋಗ್ಯಕರ ಗುಣವೆಂದರೆ ಅದು ಪಾರ್ಶ್ವವಾಯು ತಪ್ಪಿಸುತ್ತದೆ. ಮೆದುಳಿನ ಆರೋಗ್ಯದಲ್ಲಿ ರೆಡ್ ವೈನ್ ಪ್ರಮುಖ ಪಾತ್ರ ನಿರ್ವಹಿಸುತ್ತದೆ ಎಂದು ಇತ್ತೀಚಿನ ಅಧ್ಯಯನಗಳು ಹೇಳಿವೆ. ಸಂಯುಕ್ತ ರೆಸ್ವೆರಾಟ್ರೊಲ್ ಪಾರ್ಶ್ವವಾಯು ತಪ್ಪಿಸುವ ಸಾಮರ್ಥ್ಯ ಹೊಂದಿದೆ. ಈ ಸಂಯುಕ್ತವನ್ನು ಪ್ರಾಣಿಗಳಿಗೆ ನೀಡಲಾಯಿತು ಮತ್ತು ಈ ಸಂಯುಕ್ತ ನೀಡಿದ ಪ್ರಾಣಿಗಳು ಇತರ ಪ್ರಾಣಿಗಳಿಂತ ಮೆದುಳಿನ ಹಾನಿಗೊಳಗಾದದ್ದು ಕಡಿಮೆ ಎನ್ನುವುದನ್ನು ತೋರಿಸಿದೆ.
ಸಂಯುಕ್ತ ಮೆದುಳಿನಲ್ಲಿ ರಕ್ತ ಹೆಪ್ಪುಗಟ್ಟುವಿಕೆ ಕಡಿಮೆ ಮಾಡುತ್ತದೆ ಮತ್ತು ವೇಗವಾಗಿ ಚೇತರಿಸಲು ನೆರವಾಗುತ್ತದೆ. ಇದು ಕೆಂಪು ವೈನ್ ನಲ್ಲಿರುವ ಆರೋಗ್ಯಕಾರಿ ಲಾಭಗಳು. ದೀರ್ಘಾವಧಿ ತನಕ ಮೆದುಳಿನ ಹಾನಿಯನ್ನು ತಡೆಯುವಂತಹ ಸಾಮರ್ಥ್ಯ ರೆಡ್ ವೈನ್ ನಲ್ಲಿದೆ. ರೆಡ್ ವೈನ್ ನಿಂದಾಗಿ ಶೇ. 40ರಷ್ಟು ಮೆದುಳಿನ ಹಾನಿಯನ್ನು ತಡೆಯಬಹುದು ಎಂದು ಸಂಶೋಧನೆಗಳು ಹೇಳಿವೆ. ಆದಾಗ್ಯೂ ಇದರ ಬಗ್ಗೆ ಪ್ರಯೋಗ ಶಾಲೆಯಲ್ಲಿ ಯಾವುದೇ ಪ್ರಯೋಗವಾಗಿಲ್ಲ ಮತ್ತು ವೈನ್ ಅಥವಾ ಆಲ್ಕೋಹಾಲ್ ನ್ನು ಮಿತವಾಗಿ ಸೇವಿಸಬೇಕೆಂದು ಸಂಶೋಧನೆಗಳು ಹೇಳಿವೆ. ಅತಿಯಾದ ಸೇವನೆ ತೊಂದರೆಯನ್ನುಂಟು ಮಾಡಬಹುದು. ರೆಡ್ ವೈನ್ ನ್ನು ಮೆದುಳಿಗೆ ಆರೋಗ್ಯಕರವೆಂದು ಪರಿಗಣಿಸಲಾಗಿದೆ. ಇದರಿಂದ ಮಿತವಾಗಿ ಅದನ್ನು ಕುಡಿಯಿರಿ.
ಮತ್ತೊಮ್ಮೆ ಆಲ್ಝೈಮರ್ ಕುರಿತು ಭೀತಿ ಬೇಡ
ರೆಡ್ ವೈನ್ ನ ಮತ್ತೊಂದು ಆರೋಗ್ಯಕಾರಿ ಲಕ್ಷಣವೆಂದರೆ ಇದು ಆಲ್ಝೈಮರ್ ನ ಸಾಧ್ಯತೆ ಕಡಿಮೆ ಮಾಡುತ್ತದೆ. ಯಾವತ್ತೂ ಒಂದು ಹನಿ ಆಲ್ಕೋಹಾಲ್ ಸೇವನೆ ಮಾಡದಿರುವಂತಹ ವ್ಯಕ್ತಿಗಳು ಆಲ್ಝೈಮರ್ ನಿಂದ ಹೊರಗಿದ್ದೇವೆ ಎಂದು ಆತ್ಮವಿಶ್ವಾಸದಿಂದ ಇರುತ್ತಾರೆ. ರೆಡ್ ವೈನ್ ನ ಆರೋಗ್ಯಕಾರಿ ಗುಣಗಳು ಜನರಲ್ಲಿ ಆತ್ಮವಿಶ್ವಾಸ ಮೂಡಿಸುತ್ತದೆ. ಫ್ರಾನ್ಸ್ ನ ಜನರು ಹೆಚ್ಚಿನ ಕ್ಯಾಲೋರಿ ಇರುವ ಆಹಾರ ಸೇವಿಸುತ್ತಾರೆ ಮತ್ತು ಅವರು ಹೃದಯದ ಸಮಸ್ಯೆಗೆ ಒಳಗಾಗುವುದು ಅತೀ ಕಡಿಮೆ. ಇದು ಯಾಕೆಂದರೆ ರೆಡ್ ವೈನ್ ಸೇವನೆಯಿಂದ.
ಆಲ್ಝೈಮರ್ ಗೆ ಬಂದರೆ ರೆಡ್ ವೈನ್ ನ ಆರೋಗ್ಯಕರ ಗುಣಗಳು ತುಂಬಾ ಅಚ್ಚರಿಯನ್ನುಂಟು ಮಾಡುತ್ತದೆ. ರೆಡ್ ವೈನ್ ನಲ್ಲಿರುವ ರೆಸ್ವೆರಾಟ್ರೊಲ್ ಗುಣಲಕ್ಷಣಗಳ ಬಗ್ಗೆ ಈಗಲೂ ಸಂಶೋಧನೆಗಳು ನಡೆಯುತ್ತಲೇ ಇದೆ. ಇದರ ಮೂಲ ಸ್ವಭಾವ ಮತ್ತು ಅದು ಹೇಗೆ ಕೆಲಸ ಮಾಡುತ್ತದೆ ಎನ್ನುವುದು ಇದುವರೆಗೆ ತಿಳಿದಿಲ್ಲ. ಆದಾಗ್ಯೂ ವಿಜ್ಞಾನಿಗಳು ನಂಬಿರುವ ಪ್ರಕಾರ ಇದರಲ್ಲಿರುವ ಸಂಯುಕ್ತವು ಒಂದು ವಂಶವಾಹಿಯನ್ನು ಜೀವಂತವಾಗಿರಿಸಿ ಮೆದುಳಿಗೆ ವಯಸ್ಸಾಗದಂತೆ ತಡೆಯುತ್ತದೆ. ರೆಡ್ ವೈನ್ ನಿಂದ ಮೆದುಳಿನ ಆರೋಗ್ಯಕ್ಕೆ ಯಾವುದೇ ಮಿತಿಯಿಲ್ಲ.
ಮೆದುಳಿನ ಜೀವಕೋಶದ ಹಾನಿ ತಡೆಯುತ್ತದೆ
ರೆಡ್ ವೈನ್ ನ ಆರೋಗ್ಯಕಾರಿ ಗುಣಗಳು ನಿಮ್ಮನ್ನು ವಿಸ್ಮಯಗೊಳಿಸಬಹುದು. ರೆಡ್ ವೈನ್ ಕುಡಿಯುವ ವ್ಯಕ್ತಿಯ ಮೆದುಳು ಯಾವಾಗಲೂ ಕ್ರಿಯಾಶೀಲವಾಗಿರುತ್ತದೆ. ಇದು ಯಾಕೆಂದರೆ ರೆಡ್ ವೈನ್ ನಲ್ಲಿ ಉತ್ಕರ್ಷಣ ನಿರೋಧಕಗಳಿರುತ್ತದೆ. ಈ ಉತ್ಕರ್ಷಣ ನಿರೋಧಕಗಳು ಫ್ರೀ ರ್‍ಯಾಡಿಕಲ್ ನ ದಾಳಿಯನ್ನು ತಡೆಯುತ್ತದೆ. ಫ್ರೀ ರ್‍ಯಾಡಿಕಲ್ ನಿಂದ ಮುಕ್ತವಾಗಿರುವ ಮೆದುಳು ಯಾವಾಗಲೂ ಹದಿಹರೆಯದಂತ ಇರುತ್ತದೆ. ಇದು ಅನುವಂಶಕಿ ದೂರ ಮತ್ತು ಸಾವನ್ನು ದೂರ ಮಾಡುತ್ತದೆ. ರೆಡ್ ವೈನ್ ನಲ್ಲಿರುವ ಕೆಲವೊಂದು ಅಂಶಗಳು ಈಸ್ಟ್ರೊಜೆನ್ ನ್ನು ಉತ್ಪಾದಿಸಿ ಮತ್ತು ಅದರ ಮಟ್ಟವನ್ನು ದೇಹದಲ್ಲಿ ಹೆಚ್ಚಿಸುತ್ತದೆ. ಈಸ್ಟ್ರೊಜೆನ್ ಉತ್ಕರ್ಷಣ ನಿರೋಧಕವಾಗಿದ್ದು, ಇದು ಮೆದುಳಿನ ಜೀವಕೋಶಗಳನ್ನು ಆರೋಗ್ಯಕರವಾಗಿರಿಸುತ್ತದೆ. ರೆಡ್ ವೈನ್ ಕುಡಿಯುವ ಮೆದುಳು ಯಾವಾಗಲೂ ಯುವಕನಾಗಿರುತ್ತದೆ!
Disclaimer: ಈ ಲೇಖನದಲ್ಲಿ ಒದಗಿಸಲಾದ ಮಾಹಿತಿಯು ಸಾಮಾನ್ಯ ಮಾಹಿತಿ ಮತ್ತು ಶೈಕ್ಷಣಿಕ ಉದ್ದೇಶಗಳಿಗಾಗಿ ಮಾತ್ರವಾಗಿದೆ. ವೃತ್ತಿಪರ ವೈದ್ಯಕೀಯ ಸಲಹೆ, ರೋಗನಿರ್ಣಯ ಅಥವಾ ಚಿಕಿತ್ಸೆಗೆ ಪರ್ಯಾಯವಾಗಿ ಇದನ್ನು ದೃಢೀಕರಿಸಿಲ್ಲ. ವೈದ್ಯಕೀಯ ಸ್ಥಿತಿಯ ಕುರಿತು ನೀವು ಹೊಂದಿರುವ ಯಾವುದೇ ಪ್ರಶ್ನೆಗಳಿಗೆ ಯಾವಾಗಲೂ ನಿಮ್ಮ ವೈದ್ಯರು ಅಥವಾ ಅರ್ಹ ಆರೋಗ್ಯ ಸಿಬ್ಬಂದಿಯ ಸಲಹೆಯನ್ನು ಪಡೆಯಿರಿ.



Click it and Unblock the Notifications
