For Quick Alerts
ALLOW NOTIFICATIONS  
For Daily Alerts

ಅಮಲೇರಿಸೋ ಸುದ್ದಿ: ವನಿತೆಯರಿಗೆ ವೈನ್ ಉಡುಗೆ!

|
Dress manufactured By Wine
ಬಟ್ಟೆಗಳಲ್ಲಿ ಫ್ಯಾಬ್ರಿಕ್, ಸಿಲ್ಕ್, ಕಾಟನ್ ಹೀಗೆ ಅನೇಕ ಬಗೆಯ ಬಟ್ಟೆಗಳನ್ನು ಧರಿಸುವುದು ಸಾಮಾನ್ಯ. ಇನ್ನು ರೂಪದರ್ಶಿಯರು ಚಾಕಲೇಟ್ ಡ್ರೆಸ್, ತರಕಾರಿ ಡ್ರೆಸ್, ಚಿನ್ನದ ಡ್ರೆಸ್ ಡೈಮೆಂಡ್ ಡ್ರೆಸ್ ಅಂತ ಧರಿಸಿ ತಮ್ಮ ಸೌಂದರ್ಯ ಪ್ರದರ್ಶನ ಮಾಡುವುದನ್ನು ಕಾಣಬಹುದು. ಆದರೆ ವೈನ್ ಸುಂದರಿ ಬಂದರೆ ಹೇಗಿರಬಹುದು ಎಂದು ಯೋಚಿಸುತ್ತಿದ್ದೀರಾ ಈಗ ಅದು ಕೂಡಿ ಬರುವ ಸಾಧ್ಯತೆ ಇದೆ.

ಲಂಡನ್ ನಲ್ಲಿ ವಿಜ್ಞಾನಿಗಳು ವೈನ್ ನಿಂದ ಮಹಿಳೆಯರಿಗೆ ಮೈಗಂಟಿದ ರೀತಿಯ ಟಿ ಶರ್ಟ್ ಮತ್ತು ಸ್ವಿಮಿಂಗ್ ಡ್ರೆಸ್ ಗಳನ್ನು ತಯಾರಿಸಲು ಸಂಶೋಧನೆಯನ್ನು ಮಾಡುತ್ತಿದ್ದಾರೆ ಎಂದು ಡೈಲಿ ಮೇಲ್ ಪತ್ರಿಕೆ ವರದಿ ಮಾಡಿದೆ.

ವೆಸ್ಟರ್ನ್ ಆಸ್ಟ್ರೀಲಿಯಾ ಯೂನಿವರ್ಸಿಟಿಯ ವಿಜ್ಞಾನಿಗಳ ಗುಂಪೊಂದು ಮಾಡಿದ ಪ್ರಯೋಗದಲ್ಲಿ ಬ್ಯಾಕ್ಟೀರಿಯಾಗಳನ್ನು ಮದ್ಯಕ್ಕೆ ಸೇರಿಸಿದಾಗ ಹತ್ತಿ ಹುಳಗಳು ಹತ್ತಿಯನ್ನು ಉತ್ಪತ್ತಿ ಮಾಡುವಂತೆ ಈ ಬ್ಯಾಕ್ಟೀರಿಯಾಗಳು ಬಟ್ಟೆ ರೀತಿಯ ವಸ್ತುಗಳನ್ನು ತಯಾರಿಸುತ್ತವೆ.ಅದನ್ನು ಬಳಸಿ ವೈನ್ ಬಟ್ಟೆ ತಯಾರಿಸುವ ಪ್ರಯತ್ನದಲ್ಲಿದ್ದರೆ ಎಂದು ಡೈಲಿ ಮೇಲ್ ಪತ್ರಿಕೆಯಲ್ಲಿ ಹೇಳಲಾಗಿದೆ. ಆದರೆ ಇದರಿಂದ ತಯಾರಿಸಿದ ಬಟ್ಟೆಗಳು ತುಂಬಾ ತೆಳುವಾಗಿದ್ದು ಬೇಗನೆ ಹರಿಯುವಂತೆ ಇರುವುದರಿಂದ, ಆ ಬಟ್ಟೆಯನ್ನು ಗಟ್ಟಿ ಮಾಡಲು ಮತ್ತಷ್ಟು ಸಂಶೋಧನೆಗಳು ನಡೆಯುತ್ತಿವೆ.

ಈ ವೈನ್ ಡ್ರೆಸ್ ಧರಿಸಿದರೆ ವೈನ್ ವಾಸನೆ ಬರುವುದಿಲ್ಲವೆ? ವೈನ್ ನಿಂದ ತಯಾರಿಸಿದ ಡ್ರೆಸ್ ಧರಿಸಿದರೆ ಬಣ್ಣ ಲೇಡಿ ಗಾಗ ಮಾಂಸದಿಂದ ತಯಾರಿಸಿದ ಬಟ್ಟೆ ಹಾಕಿದಂತೆ ಕಾಣಬಹುದೆ? ವೈನ್ ಬಟ್ಟೆ ತುಂಬಾ ಮೃದುವಾಗಿರುವುದರಿಂದ (ಹರಿಯದಂತೆ) ಧರಿಸುವುದು ಹೇಗೆ? ಎಂಬ ಕುತೂಹಲ ಅನೇಕರಲ್ಲಿದೆ.

ಕುಡಿಯಲು ಬಳಸುವ ವೈನ್ ನಿಂದ ಬಟ್ಟೆ ತಯಾರಿಸುವುದು ಇದೇ ಮೊದಲಾಗಿದ್ದು, ಕಳೆದ ವರ್ಷ ಜರ್ಮನ್ ನ ಮೈಕ್ರೋಬಯೋಲಜಿ ವಿದ್ಯಾರ್ಥಿಗಳು ಫ್ಯಾಬ್ರಿಕ್ ಬಟ್ಟೆ ತಯಾರಿಸಿದ್ದರು. ವೈನ್ ನಿಂದ ಬಟ್ಟೆ ತಯಾರಿಸಬಹುದು ಎಂಬ ಸುದ್ಧಿ ಕೇಳಿದ ನಂತರ ವೈನ್ ಪ್ರಿಯರಿಗೆ ವೈನ್ ಬಟ್ಟೆಗೆ ಬಳಸಿ, ಸರಕು ಕಡಿಮೆಯಾಗಿ, ಬೆಲೆ ಹೆಚ್ಚಾಗಬಹುದೇ ಎಂಬ ಚಿಂತೆ ಬರುವಂತಾಗಿದೆ!

English summary

Dress manufactured By Wine | Fashion And Lifestyle | ವೈನ್ ನಿಂದ ತಯಾರಿಸಿದ ಡ್ರೆಸ್ | ಫ್ಯಾಷನ್ ಮತ್ತು ಜೀವನ ಶೈಲಿ

Scientists have unveiled a collection of skin-tight garments fashioned from red wine. A team from the University of Western Australia added a bacteria to the alcoholic beverage to create a cotton-like substance.
Story first published: Thursday, June 14, 2012, 17:08 [IST]
X
Desktop Bottom Promotion