ನಿಂಬೆ-ಶುಂಠಿ ಬೆರೆಸಿದ ನೀರು ಕುಡಿಯಿರಿ-ತೂಕ ಇಳಿಸಿಕೊಳ್ಳಿ

Posted By: Arshad
Subscribe to Boldsky

ತೂಕವಿಳಿಸಬೇಕೆಂಬ ಇರಾದೆಯುಳ್ಳವರಿಗೆ ಲಿಂಬೆ-ಶುಂಠಿ ಬೆರೆಸಿದ ನೀರು ಒಂದು ಉತ್ತಮ ಆಯ್ಕೆಯಾಗಿದೆ. ಏಕೆಂದರೆ ಈ ನೀರನ್ನು ಜೀರ್ಣಿಸಿಕೊಳ್ಳಲು ದೇಹಕ್ಕೆ ಅನಿವಾರ್ಯವಾಗಿ ಸಂಗ್ರಹವಾಗಿರುವ ಕೊಬ್ಬನ್ನು ಬಳಸಿಕೊಳ್ಳಲೇಬೇಕಾಗಿ ಬರುವ ಕಾರಣ ತೂಕ ಇಳಿಯುವುದು ಸುಲಭವಾಗುತ್ತದೆ. ಇದರಲ್ಲಿರುವ ವಿಟಮಿನ್ ಸಿ ಅತ್ಯುತ್ತಮ ಆಂಟಿ ಆಕ್ಸಿಡೆಂಟ್ ಮಾತ್ರವಲ್ಲ, ತೂಕವಿಳಿಸುವ ಕ್ರಮಗಳಿಗೆ ಬೆಂಬಲವನ್ನೂ ನೀಡ್ತುತದೆ. ನೈಸರ್ಗಿಕವಾಗಿ, ಯಾವುದೇ ಅಡ್ಡಪರಿಣಾಮವಿಲ್ಲದೇ ತೂಕವನ್ನು ಇಳಿಸಬಯಸುವವರಿಗೆ ಈ ಪಾನೀಯ ಅಮೃತಸಮಾನವಾಗಿದೆ.

ಶುಂಠಿ ಚಹಾ- ಸ್ವಾದದ ಜೊತೆಗೆ ಆರೋಗ್ಯದ ಭಾಗ್ಯ!

ಅಲ್ಲದೇ ಈ ಸಂಯೋಜನೆಯನ್ನು ಇತರ ಪೇಯಗಳಲ್ಲಿ ಬೆರೆಸಿ ಕುಡಿಯುವುದರಿಂದ ದೇಹ ಈ ಪೇಯದ ಎಲ್ಲಾ ಪೋಷಕಾಂಶಗಳನ್ನು ಪಡೆಯಲು ನೆರವಾಗುತ್ತದೆ. ಲಿಂಬೆಯಲ್ಲಿ ವಿಟಮಿನ್ ಸಿ, ಬಿ6, ಪಾಲಿಫೆನಾಲುಗಳು, ಟರ್ಪೀನ್, ನಾರಿಂಜಿನ್, ಹೆಸ್ಪರಿಡಿನ್, ಪೊಟ್ಯಾಶಿಯಂ, ಕಬ್ಬಿಣ, ಮೆಗ್ನೀಶಿಯಂ, ಕ್ಯಾಲ್ಸಿಯಂ ಹಾಗೂ ಕರಗುವ ನಾರು ಹೇರಳವಾಗಿದೆ. ಈ ಪಟ್ಟಿಯಲ್ಲಿ ಶುಂಠಿಯೇನೂ ಹಿಂದೆ ಬಿದ್ದಿಲ್ಲ. ಇದರಲ್ಲಿಯೂ ಅವಶ್ಯಕ ತೈಲ, ಬಿಸಾಬೋಲೀನ್, ಜಿಂಜರಾಲ್ ಸಹಿತ ಇನ್ನೂ ಹಲವಾರು ಪೋಷಕಾಂಶಗಳಿವೆ. ಇದರ ಸೇವನೆಯಿಂದ ತೂಕ ಇಳಿಕೆಯ ಜೊತೆಗೇ ಇನ್ನೂ ಕೆಲವಾರು ಪ್ರಯೋಜನಗಳನ್ನು ಪಡೆಯಬಹುದು. ಬನ್ನಿ, ಈ ಪ್ರಯೋಜನಗಳು ಯಾವುವು ಎಂದುದನ್ನು ನೋಡೋಣ... 

 ದೇಹದ ರೋಗ ನಿರೋಧಕ ಶಕ್ತಿ ಹೆಚ್ಚಿಸುತ್ತದೆ

ದೇಹದ ರೋಗ ನಿರೋಧಕ ಶಕ್ತಿ ಹೆಚ್ಚಿಸುತ್ತದೆ

ಇದರಲ್ಲಿರುವ ವಿಟಮಿನ್ ಸಿ ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸುವ ಪೋಷಕಾಂಶವಾಗಿದೆ. ದೇಹದ ರೋಗ ನಿರೋಧಕ ಶಕ್ತಿ ಹೆಚ್ಚಿದ್ದಷ್ಟೂ ಆರೋಗ್ಯವೂ ಉತ್ತಮವಾಗಿರುತ್ತದೆ ಹಾಗೂ ನಿಮ್ಮ ಚಟುವಟಿಕೆಗಳನ್ನು ಪೂರ್ಣ ಕ್ಷಮತೆಯಿಂದ ನಿರ್ವಹಿಸಲು ಸಾಧ್ಯವಾಗುತ್ತದೆ.

 ಫ್ರೀ ರ್‍ಯಾಡಿಕಲ್ ಗಳನ್ನು ದೂರವಾಗಿಸುತ್ತದೆ:

ಫ್ರೀ ರ್‍ಯಾಡಿಕಲ್ ಗಳನ್ನು ದೂರವಾಗಿಸುತ್ತದೆ:

ಈ ಪೇಯದಲ್ಲಿ ವಿಟಮಿನ್ ಸಿ ಸಹಿತ ಇನ್ನೂ ಹಲವಾರು ಆಂಟಿ ಆಕ್ಸಿಡೆಂಟುಗಳಿವೆ. ಇವು ದೇಹದಲ್ಲಿ ಸಂಗ್ರಹವಾಗಿದ್ದ ಫ್ರೀ ರ್‍ಯಾಡಿಕಲ್ ಎಂಬ ಕಣಗಳನ್ನು ಹೊಡೆದೋಡಿಸಿ ಕ್ಯಾನ್ಸರ್ ಆವರಿಸುವ ಸಾಧ್ಯತೆಯನ್ನು ಕಡಿಮೆ ಮಾಡುತ್ತದೆ. ಅಲ್ಲದೇ ಈ ಕಣಗಳಿಂದ ಎದುರಾಗುವ ಇನ್ನೂ ಹಲವಾರು ತೊಂದರೆಗಳಿಂದ ರಕ್ಷಿಸುತ್ತದೆ.

ಹೊಟ್ಟೆಯುರಿ-ಹುಳಿತೇಗುಗಳಿಂದ ರಕ್ಷಿಸುತ್ತದೆ

ಹೊಟ್ಟೆಯುರಿ-ಹುಳಿತೇಗುಗಳಿಂದ ರಕ್ಷಿಸುತ್ತದೆ

ಒಂದು ವೇಳೆ ನಿಮಗೆ ಹೊಟ್ಟೆಯಲ್ಲಿ ನೋವು, ಉರಿ ಅಥವಾ ಹುಳಿತೇಗು ಮೊದಲಾದ ತೊಂದರೆ ಕಾಣಿಸಿಕೊಂಡರೆ ತಕ್ಷಣವೇ ಲಿಂಬೆ-ಶುಂಠಿ ಬೆರೆಸಿದ ನೀರನ್ನು ಕುಡಿದುಬಿಡಬೇಕು. ವಿಶೇಷವಾಗಿ ಶುಂಠಿಯಲ್ಲಿರುವ ಪೋಷಕಾಂಶಗಳು ಕ್ಷಾರೀಯವಾಗಿದ್ದು ಹೊಟ್ಟೆಯ ಆಮ್ಲೀಯತೆಯನ್ನು ಕಡಿಮೆಗೊಳಿಸಿ ಈ ಎಲ್ಲಾ ತೊಂದರೆಗಳಿಂದ ರಕ್ಷಿಸುತ್ತದೆ.

ತ್ವಚೆಯ ಆರೋಗ್ಯವನ್ನು ಕಾಪಾಡುತ್ತದೆ

ತ್ವಚೆಯ ಆರೋಗ್ಯವನ್ನು ಕಾಪಾಡುತ್ತದೆ

ನಿಯಮಿತ ಸೇವನೆಯಿಂದ ನಿಮ್ಮ ತ್ವಚೆ ಆರೋಗ್ಯಕರವಾಗಿರುತ್ತದೆ. ಇದರಲ್ಲಿರುವ ವಿಟಮಿನ್ ಸಿ ಚರ್ಮಕ್ಕೆ ಬುಡದಿಂದ ಪೋಷಣೆ ನೀಡುವ ಮೂಲಕ ಚರ್ಮದ ಸೆಳೆತ ಹೆಚ್ಚಿ ನೈಸರ್ಗಿಕ ಕಾಂತಿ ಪಡೆಯುವಂತಾಗುತ್ತದೆ.

ದೇಹವನ್ನು ಬೆಚ್ಚಗಿರಿಸುತ್ತದೆ

ದೇಹವನ್ನು ಬೆಚ್ಚಗಿರಿಸುತ್ತದೆ

ಶುಂಠಿಯಲ್ಲಿರುವ ಖಾರವಾದ ಪೋಷಕಾಂಶ ದೇಹವನ್ನು ಬೆಚ್ಚಗಿರಿಸಲು ನೆರವಾಗುತ್ತದೆ. ವಿಶೇಷವಾಗಿ ಚಳಿಗಾಲದಲ್ಲಿ ಹಾಗೂ ಸಂಜೆಯ ಥಂಡಿಯ ಸಮಯದಲ್ಲಿ ದೇಹವನ್ನು ಬೆಚ್ಚಗಿರಿಸಲು ನೆರವಾಗುತ್ತದೆ.

 ಮೈಗ್ರೇನ್ ಕಡಿಮೆ ಮಾಡಲು ನೆರವಾಗುತ್ತದೆ

ಮೈಗ್ರೇನ್ ಕಡಿಮೆ ಮಾಡಲು ನೆರವಾಗುತ್ತದೆ

ಮೈಗ್ರೇನ್ ತಲೆನೋವು ಪ್ರಾರಂಭವಾದ ತಕ್ಷಣವೇ ಒಂದು ಲೋಟ ಲಿಂಬೆ ಹಾಗೂ ಶುಂಠಿಯ ನೀರನ್ನು ಕುಡಿಯುವ ಮೂಲಕ ತಲೆನೋವನ್ನು ಉಲ್ಬಣಗೊಳ್ಳದಂತೆ ತಡೆಯಬಹುದು. ಆದ್ದರಿಂದ ಮೈಗ್ರೇನ್ ತಲೆನೋವು ಇರುವ ವ್ಯಕ್ತಿಗಳು ಈ ನೀರನ್ನು ಸದಾ ಸಿದ್ಧವಾಗಿರಿಸುವ ಮೂಲಕ ತಲೆನೋವು ಕಡಿಮೆ ಮಾಡಲು ನೆರವಾಗುತ್ತದೆ.

ಕ್ಯಾನ್ಸರ್ ನಿಂದ ರಕ್ಷಿಸುತ್ತದೆ

ಕ್ಯಾನ್ಸರ್ ನಿಂದ ರಕ್ಷಿಸುತ್ತದೆ

ಇದರಲ್ಲಿರುವ ಆಂಟಿ ಆಕ್ಸಿಡೆಂಟುಗಳು ದೇಹದಲ್ಲಿ ಕ್ಯಾನ್ಸರ್ ಎದುರಾಗುವ ಸಾಧ್ಯತೆಯನ್ನು ಕಡಿಮೆ ಮಾಡುತ್ತವೆ. ಇದರಲ್ಲಿರುವ ಆಂಟಿ ಆಕ್ಸಿಡೆಂಟುಗಳು ಕ್ಯಾನ್ಸರ್ ಉಂಟುಮಾಡುವ ಕಣಗಳನ್ನು ನಿವಾರಿಸುವ ಮೂಲಕ ಕ್ಯಾನ್ಸರ್ ಸಹಿತ ಇನ್ನೂ ಕೆಲವಾರು ಕಾಯಿಲೆಗಳಿಂದ ರಕ್ಷಿಸುತ್ತದೆ.

ಪ್ರಯಾಣದ ವಾಕರಿಕೆಯನ್ನು ತಡೆಯುತ್ತದೆ

ಪ್ರಯಾಣದ ವಾಕರಿಕೆಯನ್ನು ತಡೆಯುತ್ತದೆ

ಶುಂಠಿಯಲ್ಲಿರುವ ಕೊಂಚ ಖಾರವಾದ ಜಿಂಜೆರಾಲ್ ಹಾಗೂ ಲಿಂಬೆಯ ಹುಳಿಯಾದ ರುಚಿ ಪ್ರಯಾಣದಲ್ಲಿ ಎದುರಾಗುವ ವಾಕರಿಕೆಯನ್ನು ಇಲ್ಲವಾಗಿಸುತ್ತದೆ.

ಕೆಮ್ಮು ನಿವಾರಕವಾಗಿದೆ

ಕೆಮ್ಮು ನಿವಾರಕವಾಗಿದೆ

ಗಂಟಲಿನ ತೇವಭಾಗದಲ್ಲಿ ಬ್ಯಾಕ್ಟೀರಿಯಾಗಳು ಅಭಿವೃದ್ದಿಗೊಂಡು ಕೆರೆತ ಉಂಟುಮಾಡಿದಾ ಇದನ್ನು ಹೊರಹಾಕಲು ದೇಹ ಪ್ರಯೋಗಿಸುವ ವಿಧಾನವೇ ಕೆಮ್ಮು. ಈ ಪೇಯವನ್ನು ಕುಡಿಯುವ ಮೂಲಕ ಗಂಟಲಿನಲ್ಲಿರುವ ಬ್ಯಾಕ್ಟೀರಿಯಾಗಳು ನಿವಾರಣೆಯಾಗುತ್ತವೆ ಹಾಗೂ ಕೆಮ್ಮಿನ ಅಗತ್ಯವಿಲ್ಲದೇ ಹೋಗುತ್ತದೆ. ಈ ಪೇಯದಲ್ಲಿರುವ ಬ್ಯಾಕ್ಟೀರಿಯಾ ನಿವಾರಕ ಗುಣ ಕೆಮ್ಮು ನಿವಾರಿಸಲು ನೆರವಾಗುತ್ತದೆ.

ಫಲವತ್ತತೆಯನ್ನು ಹೆಚ್ಚಿಸುತ್ತದೆ

ಫಲವತ್ತತೆಯನ್ನು ಹೆಚ್ಚಿಸುತ್ತದೆ

ಶುಂಠಿಯಲ್ಲಿರುವ ಕೆಲವು ಪೋಷಕಾಂಶಗಳು ಪುರುಷರಲ್ಲಿ ಫಲವತ್ತತೆಯನು ಹೆಚ್ಚಿಸುವ ಕ್ಷಮತೆ ಹೆಚ್ಚಿಸುತ್ತದೆ. ಶುಂಠಿ ಪುರುಷರಲ್ಲಿ ನಿಮಿರುದೌರ್ಬಲ್ಯ ಕಡಿಮೆಗೊಳಿಸಿ ಲೈಂಗಿಕ ಶಕ್ತಿಯನ್ನು ಹೆಚ್ಚಿಸುತ್ತದೆ.

English summary

Drink Lemon Ginger Water Everyday For Weight Loss-Other Benefits

Ginger-lemon water can be used as the best formula for slimming the body because it is effective to burn the fat that accumulates. The vitamin C in lemon also helps in reducing the abdomen. The combinations of these ingredients are necessary to lose weight naturally. This herb when infused in beverages will make it easier for body to absorb the existing nutrients. In addition to weight loss, this herbal drink has several benefits. Read further to know about the health benefits of lemon ginger water.