ರಂಜಾನ್ ಆಹಾರ ಪಥ್ಯ- ಕಷ್ಟವಾದರೂ, ಇಷ್ಟಪಟ್ಟು ಅನುಸರಿಸಿ

Posted By: manu
Subscribe to Boldsky

ಇಸ್ಲಾಮಿಕ್ ಕ್ಯಾಲೆಂಡರ್ ಪ್ರಕಾರ ವರ್ಷದ ಒಂಬತ್ತನೆಯ ತಿಂಗಳಾದ ರಂಜಾನ್ (ಸರಿಯಾದ ಉಚ್ಛಾರವೆಂದರೆ ರಮಧಾನ್) ಉಪವಾಸ ಆಚರಿಸುವ ತಿಂಗಳಾಗಿದೆ. ಈ ತಿಂಗಳಿಡೀ ಮುಸ್ಲಿಮರು ಸೂರ್ಯೋದಯಕ್ಕೂ ಒಂದು ಗಂಟೆಗೂ ಹಿಂದಿನಿಂದ ಸೂರ್ಯಾಸ್ತದವರೆಗೂ ಅನ್ನಾಹಾರಗಳನ್ನು ಸೇವಿಸದೇ ಉಪವಾಸ ಮಾಡುತ್ತಾವೆ.

ವಾಸ್ತವವಾಗಿ ಅನ್ನಾಹಾರಗಳಿಂದ ದೂರವಿವುರುವುದೇ ಉಪವಾಸವಲ್ಲ, ಈ ಅವಧಿಯಲ್ಲಿ ಯಾವುದೇ ಪ್ರಕಾರದ ಸುಳ್ಳು ಹೇಳದೇ ಇರುವುದು ಮನಸ್ಸಿನಲ್ಲಿ ಆಸೆ, ಹಸಿವು ಮೊದಲಾದ ಯಾವುದೇ ಪ್ರಲೋಭನೆಯನ್ನು ಮೂಡಿಸದಿರುವುದೇ ಪ್ರಮುಖ ಉದ್ದೇಶವಾಗಿದೆ. ಊಟ ಮಾಡದೇ ಇರುವುದು ಒಂದು ಅಂಗವಷ್ಟೇ. 

ರಂಜಾನ್ ಮಾಸದಲ್ಲಿ ಮಧುಮೇಹಿ ರೋಗಿಗಳ ಪಾಡೇನು?

ಈ ಉಪವಾಸದಿಂದ ಆರೋಗ್ಯ ಹಾಗೂ ಧಾರ್ಮಿಕವಾಗಿ ಹಲವಾರು ಪ್ರಯೋಜನಗಳಿವೆ. ಸರಿಸುಮಾರು ಹದಿನಾಲ್ಕು ಗಂಟೆಗಳ ಕಾಲ ಉಪವಾಸವಿರುವ ಮೂಲಕ ರಕ್ತದಲ್ಲಿ ಗ್ಲುಕೋಸ್ ಅಂಶ ಕಡಿಮೆಯಾಗುತ್ತದೆ. ಇದು ಈಗಾಗಲೇ ರಕ್ತದಲ್ಲಿ ಗ್ಲೂಕೋಸ್ ಅತಿ ಹೆಚ್ಚಾಗಿರುವ ವ್ಯಕ್ತಿಗಳಿಗೆ ಬಯಸದೇ ಬಂದ ಭಾಗ್ಯವಾಗಿದೆ. ಉಪವಾಸದ ಅವಧಿಯಲ್ಲಿ ದೇಹ ದೈನಂದಿನ ಕೆಲಸಗಳಿಗಾಗಿ ಸಂಗ್ರಹಗೊಂಡಿದ್ದ ಕೊಬ್ಬನ್ನು ಬಳಸುವ ಕಾರಣ ತೂಕ ಇಳಿಯಲು ನೆರವಾಗುತ್ತದೆ. ಇನ್ನೂ ಕೆಲವರಲ್ಲಿ ಏರುಪೇರಾಗಿದ್ದ ಕೊಲೆಸ್ಟ್ರಾಲ್ ಮಟ್ಟ ತಹಬಂದಿಗೆ ಬರುತ್ತದೆ.

ಆದರೆ ಈ ಎಲ್ಲಾ ಪ್ರಯೋಜನಗಳು ಸಿಗುವುದು ರಂಜಾನ್ ತಿಂಗಳ ಆಚರಣೆಯನ್ನು ಸರಿಯಾದ ಕ್ರಮದಲ್ಲಿ ಆಚರಿಸಿದರೆ ಮಾತ್ರ! ಅರಿವಿಲ್ಲದೇ ಸೇವಿಸುವ ಆಹಾರ, ಆಹಾರ ಕ್ರಮ ಅಥವಾ ಅಭ್ಯಾಸಗಳು ಮೂಲ ಉದ್ದೇಶಕ್ಕೇ ಭಂಗ ತರಬಹುದು. ಬನ್ನಿ, ಇವು ಯಾವುವು ಎಂಬುದನ್ನು ನೋಡೋಣ....

#1

#1

ರಂಜಾನ್ ತಿಂಗಳ ಅಚ್ಚುಮೆಚ್ಚಿನ ಪೇಯವಂದರೆ "ರೂಹ್ ಅಫ್ಜಾಹ್" ಆದರೆ ಇದಕ್ಕೆ ರುಚಿ ಬರಲೆಂದು ಹೆಚ್ಚಿನ ಆಡಿಟಿವ್ ಅಥವಾ ಹೆಚ್ಚುವರಿ ವಸ್ತುಗಳು, ಅಪಾರ ಪ್ರಮಾಣದ ಸಕ್ಕರೆ, ಕೃತಕ ಬಣ್ಣಗಳು ಆರೋಗ್ಯಕ್ಕೆ ಒಳ್ಳೆಯದಲ್ಲ. ಆದ್ದರಿಂದ ರೂಹ್ ಅಫ್ಜಾಹ್ ಶರಬತ್ತನ್ನು ವಾರಕೆ ಎರಡು ಲೋಟಗಳಿಗಿಂತ ಹೆಚ್ಚು ಕುಡಿಯುವುದು ಒಳ್ಳೆಯದಲ್ಲ.

ರಂಜಾನ್ ಉಪವಾಸಕ್ಕಾಗಿ ತಂಪುಣಿಸುವ ಬಾದಾಮಿ ಹಾಲು

#2

#2

ಇಫ್ತಾರ್ ಅಥವಾ ಸೂರ್ಯಾಸ್ತದ ಸಮಯದಲ್ಲಿ ಉಪವಾಸ ಸಂಪನ್ನಗೊಳಿಸುವ ಸಮಯದಲ್ಲಿ ಒಮ್ಮೆಲೇ ಭಾರೀ ಪ್ರಮಾಣದ ನೀರು ಕುಡಿಯುವುದೂ ಸರಿಯಲ್ಲ. ಇಡಿಯ ದಿನ ನೀರಡಿಕೆಯಿಂದ ಬಳಲಿದ್ದರೂ ನಿಧಾನವಾಗಿ ಒಂದೇ ಲೋಟ ನೀರನ್ನು ಕುಡಿದರೆ ಸಾಕು.

#3

#3

ಇಫ್ತಾರ್ ಬಳಿಕ ವ್ಯಾಯಾಮಶಾಲೆಗೆ ಹೋಗಬೇಡಿ. ಆಹಾರ ಸೇವನೆಯ ಬಳಿಕ ಕನಿಷ್ಠ ಎರಡು ಗಂಟೆಗಳಾದರೂ ಆಹಾರವನ್ನು ಜೀರ್ಣಿಸಲು ಸಾಧ್ಯವಾಗುವಂತೆ ವಿಶ್ರಾಂತಿ ಪಡೆಯಿರಿ.

#4

#4

ಹಸಿವು ತಾಳಲಾರದೇ ಇಫ್ತಾರ್ ಹೊತ್ತಿನಲ್ಲಿ ಲಗುಬಗೆಯಿಂದ ತಿನ್ನುವುದು ಇನ್ನೊಂದು ಸಾಮಾನ್ಯ ತಪ್ಪಾಗಿದೆ. ನಿಧಾನಗತಿಯಿಂದ ಸಾವಕಾಶವಾಗಿ ಅಗಿದು ನುಂಗಿರಿ.

#5

#5

ಇಫ್ತಾರ್ ಸಮಯವಾಗುತ್ತಿದ್ದಂತೆಯೇ ಸಿಹಿವಸ್ತುಗಳನ್ನು ಪ್ರಾರಂಭದಲ್ಲಿಯೇ ಸೇವಿಸುವುದು ಇನ್ನೊಂದು ದೊಡ್ಡ ತಪ್ಪು. ಇದರಿಂದ ತಕ್ಷಣವೇ ನಿದ್ದೆ ಬರಲು ಪ್ರಾರಂಭವಾಗುತ್ತದೆ. ಆದ್ದರಿಂದ ಇಫ್ತಾರ್ ಸಮಯದಲ್ಲಿ ಸರಳ, ಹೆಚ್ಚಿನ ದ್ರವ ಮತ್ತು ಹಣ್ಣು ಹಂಪಲುಗಳನ್ನು ಸೇವಿಸಿ ಎರಡು ಗಂಟೆಗಳ ಬಳಿಕ ಸಿಹಿವಸ್ತುಗಳನ್ನು ಸೇವಿಸುವುದು ಆರೋಗ್ಯಕರ.

ರಂಜಾನ್ ಮಾಸದಲ್ಲಿ ಮನಸ್ಸು ಭಕ್ತಿ-ಭಾವದಿಂದ ಕೂಡಿರಲಿ

#6

#6

ಸಹರಿ ಸಮಯದಲ್ಲಿ ಸೋಡಿಯಂ ಇರುವ ಆಹಾರಗಳನ್ನು ಸೇವಿಸುವುದರಿಂದ ದಿನದ ಉಪವಾಸದ ಹೊತ್ತಿನಲ್ಲಿ ಭಾರೀ ನೀರಡಿಕೆಯಾಗಬಹುದು. ಆದ್ದರಿಂದ ಪೊಟ್ಯಾಶಿಯಂ ಅಂಶ ಹೆಚ್ಚಿರುವ ಬಾಳೆಹಣ್ಣುಗಳನ್ನು ತಿನ್ನುವ ಮೂಲಕ ಬಾಯಾರಿಕೆಯಾಗುವುದನ್ನು ತಡೆಯಬಹುದು.

ರಂಜಾನ್ ಸ್ಪೆಷಲ್ -7 ಮಟನ್ ರೆಸಿಪಿ

For Quick Alerts
ALLOW NOTIFICATIONS
For Daily Alerts

    English summary

    Common Mistakes Made In Ramzan

    According to the Islamic calender, Ramadan is the fasting month. That is the time when people fast during the day and consume food after sun set. Ramadan offers both spiritual and health benefits. Actually, spending so much of time without eating anything can bring down blood sugar levels in those whose glucose levels are high. The body finishes off the stored glucose during the fast.
    We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Boldsky sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Boldsky website. However, you can change your cookie settings at any time. Learn more