For Quick Alerts
ALLOW NOTIFICATIONS  
For Daily Alerts

ರಂಜಾನ್ ಮಾಸದಲ್ಲಿ ಮನಸ್ಸು ಭಕ್ತಿ-ಭಾವದಿಂದ ಕೂಡಿರಲಿ

By manu
|

ಮುಸ್ಲಿಮರ ಪಾಲಿಗೆ ಅತ್ಯಂತ ಪವಿತ್ರವಾಗಿರುವ ಮಾಸ ಎಂದರೆ ರಂಜಾನ್ ಅಥವಾ ರಮಧಾನ್. ಚಂದ್ರನ ಚಲನೆಯನ್ನು ಆಧರಿಸಿದ ಇಸ್ಲಾಮಿಕ್ ಕ್ಯಾಲೆಂಡರ್ ಪ್ರಕಾರ ಒಂಭತ್ತನೆಯ ತಿಂಗಳಾಗಿರುವ ರಮಧಾನ್. ಹೆಚ್ಚಿನವರು ಅಂದುಕೊಂಡಿದ್ದಂತೆ ಉಪವಾಸದ ತಿಂಗಳಾಗಿದೆ. ವಾಸ್ತವವಾಗಿ ಈ ತಿಂಗಳಲ್ಲಿ ಹಗಲಿನ ಸುಮಾರು ಹದಿನಾಲ್ಕು ಗಂಟೆ ಉಪವಾಸವಿರುವುದು ರಂಜಾನ್ ಮಾಸದ ಆಚರಣೆಯ ಒಂದು ಭಾಗವಷ್ಟೇ ಹೊರತು ಉಪವಾಸವೇ ಆಚರಣೆಯಲ್ಲ.

ಇಲ್ಲಿ ಮನಸ್ಸನ್ನು ಹತೋಟಿಯಲ್ಲಿಟ್ಟುಕೊಂಡು ದೇಹದ ಹಸಿವು, ಕಾಮನೆ, ಕೆಟ್ಟದನ್ನು ಆಚರಿಸುವ ಬಯಕೆಯನ್ನೇ ಮನಸ್ಸಿನಲ್ಲಿ ಮೊಳೆಯದಂತೆ ಮಾಡಿ ಶುದ್ದೀಕರಿಸುವುದೇ ಪ್ರಮುಖ ಉದ್ದೇಶ. ಸೂರ್ಯೋದಯಕ್ಕೂ ಸುಮಾರು ಒಂದೂವರೆ ಗಂಟೆ ಮೊದಲೇ ಊಟ ಮಾಡಿ ಇಂದಿನ ದಿನ ನಾನು ಉಪವಾಸವಿರುತ್ತೇನೆ ಎಂದು ಅಲ್ಲಾಹನಲ್ಲಿ ಮನವಿ ಮಾಡಿಕೊಂಡು ಮುಂದಿನ ಹದಿನಾಲ್ಕು ಗಂಟೆಗಳ ಕಾಲ ಮಾನಸಿಕವಾಗಿ (ಬರೆಯ ಹಸಿವು ಹತ್ತಿಕ್ಕಿಕೊಂಡು ಮಾತ್ರ ಅಲ್ಲ) ಯಾವುದೇ ಪ್ರಲೋಭನೆಗೆ ಒಳಗಾಗದೇ ಸೂರ್ಯಾಸ್ತದವರೆಗೆ ಕುರಾನ್ ಪಠಣ, ಪ್ರಾರ್ಥನೆ, ದಾನ ಮತ್ತಿತರ ಕೆಲಸಗಳನ್ನು ನಮ್ಮ ನಿತ್ಯದ ಕೆಲಸಗಳೊಂದಿಗೆ ಆಚರಿಸುವುದೇ ನಿಜವಾದ ಉಪವಾಸವಾಗಿದೆ. ರಂಜಾನ್ ಸಮಯದಲ್ಲಿ ಮಾಡುವ ಉಪವಾಸದ ಮಹತ್ವ

ಒಂದು ವೇಳೆ ನೆನಪಿಲ್ಲದೇ ಊಟ ಮಾಡಿದರೂ ಆ ಉಪವಾಸ ಸ್ವೀಕೃತವಾಗುತ್ತದೆ. ಆದರೆ ನೆನಪಿದ್ದೂ ಚಿಟಿಕೆ ಉಪ್ಪಿನ ರುಚಿ ನೋಡಿದರೂ ಉಪವಾಸ ಹೋದಂತೆ. ಇಲ್ಲಿ ರುಚಿ ನೋಡುವುದು ಎಂದರೆ ಉಪವಾಸದ ಅವಧಿಯಲ್ಲಿ ಮನಸ್ಸು ಏನನ್ನೋ ಬಯಸುವುದು. ಇದು ವಾಸನೆ, ಸ್ಪರ್ಶ, ಸುಳ್ಳು ಹೇಳುವುದು, ಲಾಭ ಮಾಡಿಕೊಳ್ಳುವುದು, ಇನ್ನೊಬ್ಬರಿಗೆ ನೋವು ನೀಡುವುದು, ಕಳ್ಳತನ ಮಾಡುವ ಬಯಕೆ, ಲೈಂಗಿಕ ಬಯಕೆ ಮೊದಲಾದ ಎಲ್ಲಾ ಮನಸ್ಸಿಗೆ ಸಂಬಂಧಿಸಿದ ಬಯಕೆಗಳೇ ಆಗಿವೆ.

ಈ ಬಯಕೆಗಳನ್ನು ಮೂಲದಲ್ಲಿಯೇ ಹತ್ತಿಕ್ಕುವುದೇ ರಮಧಾನ್ ತಿಂಗಳ ಪ್ರಮುಖ ಉದ್ದೇಶವಾಗಿದೆ. ಒಂದು ತಿಂಗಳ ಈ ಕಠಿಣ ತರಬೇತಿ ಪಡೆದವರು ವರ್ಷದ ಇನ್ನು ಹನ್ನೊಂದು ತಿಂಗಳೂ ಯಾವ ತಪ್ಪು ಕೆಲಸದ ಬಗ್ಗೆ ಚಿಂತನೆಯನ್ನೂ ಮಾಡುವುದಿಲ್ಲ. ಇದೇ ಅಲ್ಲಾಹನು ತನ್ನ ಮಕ್ಕಳಿಗಾಗಿ ನೀಡಿರುವ ಪಾಠವಾಗಿದೆ. ಕೇವಲ ಹದಿನಾಲ್ಕು ಗಂಟೆ ಹಸಿವಿನಿಂದಿರುವುದೇ ಉಪವಾಸವಲ್ಲ, ರಮಧಾನ್ ತಿಂಗಳಲ್ಲಿ ಕಡ್ಡಾಯವಾಗಿ ಪಾಲಿಸಬೇಕಾದ ಇನ್ನೂ ಹಲವು ಕಟ್ಟುಪಾಡುಗಳ ಬಗ್ಗೆ ಇಲ್ಲಿ ವಿವರಿಸಲಾಗಿದೆ...

ಪರಸ್ತ್ರೀ ಅಥವಾ ಪರಪುರುಷನನ್ನು ದಿಟ್ಟಿಸಿ ನೋಡಬೇಡಿ

ಪರಸ್ತ್ರೀ ಅಥವಾ ಪರಪುರುಷನನ್ನು ದಿಟ್ಟಿಸಿ ನೋಡಬೇಡಿ

ಇಸ್ಲಾಂನಲ್ಲಿ ಪರಸ್ತ್ರೀ ಅಥವಾ ಪರಪುರುಷನನ್ನು ದಿಟ್ಟಿಸಿ ನೋಡುವುದನ್ನು ನಿಷೇಧಿಸಲಾಗಿದೆ. ಇದರ ಹಿಂದಿರುವ ನೈಜ ಅರ್ಥವನ್ನು ತಿಳಿದರೆ ಈ ಕಟ್ಟುಪಾಡು ಏಕೆಂದು ಅರ್ಥವಾಗುತ್ತದೆ. ನಿಸರ್ಗ ಪ್ರತಿ ಜೀವಿಗೂ ತನ್ನ ವಿರುದ್ದ ಲಿಂಗದ ಕುರಿತು ಆಕರ್ಷಣೆಯನ್ನು ಒದಗಿಸಿದೆ. ಆದರೆ ಈ ಆಕರ್ಷಣೆ ನಿಮ್ಮ ಸಂಗಾತಿಗೆ ಮೀಸಲಾಗಿರಬೇಕು ಎಂಬುದೇ ಇಸ್ಲಾಂ ಬೋಧಿಸುವ ತತ್ವ. ಪರಸ್ತ್ರಿ ಅಥವಾ ಪರಪುರುಷನನ್ನು ದಿಟ್ಟಿಸಿ ನೋಡಿದಾಗ ಮನಸ್ಸಿನಲ್ಲಿ ಹಲವು ಪ್ರಲೋಭನೆಗಳು ಹುಟ್ಟುವುದು ಸಹಜ (ಇದು ಹುಟ್ಟಬೇಕು ಎಂದೇ ಸೌಂದರ್ಯ ಸಂಸ್ಥೆಗಳ ಉತ್ಪನ್ನಗಳು ತಯಾರಾಗುತ್ತಿವೆಯೆಲ್ಲಾ!). ಮುಂದಿನ ಸ್ಲೈಡ್ ಕ್ಲಿಕ್ ಮಾಡಿ

ಪರಸ್ತ್ರೀಯರ ವ್ಯಾಮೋಹ ಬೇಡಿ

ಪರಸ್ತ್ರೀಯರ ವ್ಯಾಮೋಹ ಬೇಡಿ

ಆದರೆ ರಂಜಾನ್ ತಿಂಗಳಲ್ಲಿ ಈ ಪ್ರಲೋಭನೆಗಳು ಹುಟ್ಟುವುದನ್ನು ತಡೆಯುವುದೇ ಪ್ರಮುಖ ಕಟ್ಟುಪಾಡಾಗಿದೆ. ಆ ಪ್ರಕಾರ ಪರಸ್ತ್ರೀ ಅಥವಾ ಪರಪುರುಷನನ್ನು ನೇರವಾಗಿ ನಿಟ್ಟಿಸಿ ನೋಡುವುದು ತರವಲ್ಲ. ಇಸ್ಲಾಮಿಕ್ ಪಂಡಿತರ ಪ್ರಕಾರ ಅನಿವಾರ್ಯವಾದ ಸಂದರ್ಭದಲ್ಲಿ ಕಣ್ಣುಗಳನ್ನು ಬಿಟ್ಟು ಕೊಂಚ ಬದಿಗೆ ನೋಡಿ ಮಾತನಾಡಬಹುದು. (ಉದಾಹರಣೆಗೆ ವೈದ್ಯರು ಮಹಿಳೆಯಾಗಿದ್ದು ಪುರುಷ ರೋಗಿಯೊಂದಿಗೆ ಸಮಾಲೋಚಿಸುವ ಸಂದರ್ಭ ಬಂದರೆ)

ಜಗಳ ಮತ್ತು ಬೈಗುಳಗಳನ್ನು ಆಡಬೇಡಿ

ಜಗಳ ಮತ್ತು ಬೈಗುಳಗಳನ್ನು ಆಡಬೇಡಿ

ರಮಧಾನ್ ತಿಂಗಳಲ್ಲಿ ತಾಳ್ಮೆಯನ್ನು ವಹಿಸಲು ಅತಿ ಹೆಚ್ಚಿನ ಮಹತ್ವ ನೀಡಲಾಗಿದೆ. ಎಷ್ಟೋ ಜಗಳ ಮತ್ತು ಕದನಗಳ ಮೂಲವನ್ನು ಕೆದಕಿದರೆ ಕೇವಲ ಅಹಂಭಾವವನ್ನು ಕೆಣಕಿದ ಕ್ಷುಲ್ಲುಕ ಕಾರಣಗಳು ಕಂಡುಬರುತ್ತವೆ. ಉದಾಹರಣೆಗೆ ಇಬ್ಬರ ಹೊಡೆದಾಡಿಕೊಂಡು ತೀರ್ಪು ಕೇಳಲು ಬಂದಾಗ ವಿಚಾರಣೆ ನಡೆಸಿದ ಹಿರಿಯರಿಗೆ ಇದಕ್ಕೆ ಮೂಲಕಾರಣ ಕಂಡುಬಂದಿದ್ದು ಇಷ್ಟೇ: ಒಬ್ಬ ನಡೆದುಕೊಂಡು ಹೋಗುತ್ತಿದ್ದಾಗ ಹಿಂದಿನವ ಮುಂದಿನವನ ಚಪ್ಪಲಿಯನ್ನು ಅರಿಯದೇ ತುಳಿದಿದ್ದು ಚಪ್ಪಲಿನ ಬಾರ್ ತುಂಡಾಗಿತ್ತು. ಹಿಂದಿನವ ತಪ್ಪಾಯಿತೆಂದು ಕೇಳಿಕೊಂಡರೂ ಮುಂದಿನವ ಇದನ್ನು ಕ್ಷಮಿಸದೇ ಬೈಗುಳದಿಂದ ಪ್ರಾರಂಭವಾದ ಜಗಳ ಹೊಡೆದಾಟಕ್ಕೆ ಮುಂದುವರೆದಿತ್ತು. ಮುಂದಿನ ಸ್ಲೈಡ್ ಕ್ಲಿಕ್ ಮಾಡಿ

ಜಗಳ ಮತ್ತು ಬೈಗುಳಗಳನ್ನು ಆಡಬೇಡಿ

ಜಗಳ ಮತ್ತು ಬೈಗುಳಗಳನ್ನು ಆಡಬೇಡಿ

ಇಸ್ಲಾಂ ಜಗಳ, ಕದನ ಮೊದಲಾದವು ಪ್ರಾರಂಭವಾಗುವ ಈ ಮೂಲ ಕಾರಣಕ್ಕೇ ತಡೆಯೊಡ್ಡಲು ನಿರ್ದೇಶಿಸುತ್ತದೆ. ವಿಶೇಷವಾಗಿ ರಮಧಾನ್ ತಿಂಗಳಲ್ಲಿ ಜಗಳಕ್ಕೆ ಕಾರಣವಾಗುವ ಯಾವುದೇ ಕಾರಣಗಳಿದ್ದರೂ, ತಪ್ಪು ನಿಮ್ಮದಲ್ಲದೇ ಇದ್ದರೂ ಸರ್ವಥಾ ಸಿಟ್ಟಿಗೇಳದೇ ಕ್ಷಮೆ ಯಾಚಿಸಿ ಬೈಗುಳ ಅಥವಾ ಜಗಳಕ್ಕೆ ಮುಂದುವರೆಯದಂತೆ ತಡೆಯಲು ಕಟ್ಟುಪಾಡು ವಿಧಿಸಲಾಗಿದೆ. ಇಂತಹ ಸಂದರ್ಭದಲ್ಲಿ ' ಕ್ಷಮಿಸಿ, ನಾನು ಉಪವಾಸದಲ್ಲಿದ್ದೇನೆ' ಎಂದು ನಯವಾಗಿ ಹೇಳಿ ಈ ಜಗಳ ಮುಂದುವರೆಯದಂತೆ ತಡೆಯಿರಿ. ಮುಂದಿನವ ಸಿಟ್ಟಾಗಿದ್ದರೂ ನೀವು ತಾಳ್ಮೆ ವಹಿಸಿ ಮೂರು ಬಾರಿ ಉಪವಾಸದಲ್ಲಿದ್ದೇನೆ ಎಂದು ಉಚ್ಛರಿಸಿ.

ಮೈಮಾಟವನ್ನು ತೋರುವ ಉಡುಗೆಯಿಂದ ದೂರವಿರಿ

ಮೈಮಾಟವನ್ನು ತೋರುವ ಉಡುಗೆಯಿಂದ ದೂರವಿರಿ

ಇಸ್ಲಾಂ ಎಂದಿಗೂ ಮೈಮಾಟವನ್ನು ಪ್ರಚುರಪಡಿಸುವ ಉಡುಗೆಗಳ ಉಪಯೋಗವನ್ನು ನಿಷೇಧಿಸಿದೆ. ಮನೆಯಿಂದ ಹೊರಗಿದ್ದಾಗ ಇತರರು ಈ ಮೈಮಾಟವನ್ನು ತಪ್ಪು ದೃಷ್ಟಿಯಿಂದ ನೋಡಬಹುದಾದ ಸಾಧ್ಯತೆಯನ್ನು ಪರಿಗಣಿಸಿ ಈ ಕಟ್ಟುಪಾಡು ವಿಧಿಸಲಾಗಿದೆ. ಇದು ಇತರರ ಉಪವಾಸವನ್ನೂ ಭಂಗಗೊಳಿಸುವ ಸಾಧ್ಯತೆ ಇರುವುದರಿಂದ ಸಾಧ್ಯವಾದಷ್ಟು ಮೈಮಾಟ ತೋರದ, ಅಪಾರದರ್ಶಕ, ಇಡಿಯ ಮೈಯನ್ನು ಮುಚ್ಚುವ ಉಡುಗೆಗಳನ್ನೇ ತೊಡಿರಿ. ಇರು ಪುರುಷರಿಗೂ, ಮಹಿಳೆಯರಿಗೂ ಸಮಾನವಾಗಿ ಅನ್ವಯಿಸುತ್ತದೆ.

ಅತಿ ಹೆಚ್ಚು ಆಹಾರ ಸೇವಿಸಬೇಡಿ

ಅತಿ ಹೆಚ್ಚು ಆಹಾರ ಸೇವಿಸಬೇಡಿ

ರಮಧಾನ್ ತಿಂಗಳ ಉಪವಾಸವನ್ನು ಸೂರ್ಯಾಸ್ತದ ಸಮಯದಲ್ಲಿ ಬಾಂಗ್ ಕರೆಯ ಪ್ರಥಮ ಪದ ಕಿವಿಗೆ ಬೀಳುತ್ತಲೇ ಒಂದು ಖರ್ಜೂರವನ್ನು ಸೇವಿಸುವ ಮೂಲಕ ಸಂಪನ್ನಗೊಳಿಸಲಾಗುತ್ತದೆ. ಈ ಹೊತ್ತಿನಲ್ಲಿ ಅತಿ ಹೆಚ್ಚು ತಿನ್ನುವುದು ಅಪಾಯಕಾರಿ. ಈ ಹೊತ್ತಿನಲ್ಲೇ ಆಗಲಿ, ಬಳಿಕವೇ ಆಗಲಿ ಅತಿ ಹೆಚ್ಚಾಗಿ ಆಹಾರ ಸೇವಿಸುವುದನ್ನು ಇಸ್ಲಾಂ ನಿಷೇಧಿಸುತ್ತದೆ. ಬದಲಿಗೆ ಸಾಧ್ಯವಾದಷ್ಟು ಇತರ ಉಪವಾಸಿಗರಿಗೆ ಊಟದ ವ್ಯವಸ್ಥೆಯನ್ನು ಕಲ್ಪಿಸಲು ನಿರ್ದೇಶಿಸುತ್ತದೆ. ಇಡಿಯ ದಿನ ಇದ್ದ ಉಪವಾಸದ ಕಾರಣ ಹಸಿವು ಎಂದರೇನು ಎಂಬ ಅನುಭವ ಆಗಿರುತ್ತದೆ.

ಅತಿ ಹೆಚ್ಚು ಆಹಾರ ಸೇವಿಸಬೇಡಿ

ಅತಿ ಹೆಚ್ಚು ಆಹಾರ ಸೇವಿಸಬೇಡಿ

ಜಗತ್ತಿನಲ್ಲಿ ಹಸಿವಿನಿಂದಿರುವವರು ಪಡುವ ಕಷ್ಟವನ್ನು ಖುದ್ದಾಗಿ ಅನುಭವಿಸಿದ ಬಳಿಕ ಸಮಾಜದಲ್ಲಿ ಅನುಕೂಲಸ್ಥರಲ್ಲದವರ ಪ್ರತಿ ಅನುಕಂಪ ಮತ್ತು ದಯೆ ಹುಟ್ಟುತ್ತದೆ. ಇವರಿಗೆ ಸಾಧ್ಯವಾದಷ್ಟು ಮಟ್ಟಿಗೆ ಸಹಾಯ ಮಾಡಬೇಕು ಎಂಬ ಬಯಕೆಯಾಗುತ್ತದೆ. ಉಪವಾಸದ ಮೂಲಕ ಇಸ್ಲಾಂ ಕಲಿಸುವುದೂ ಇದನ್ನೇ. ಅನುಕೂಲಸ್ಥರು ಅನುಕೂಲವಿಲ್ಲದ ಸಮಾಜದ ಜನರಿಗೆ ತಮ್ಮಲ್ಲಿರುವ ಧನದ ಒಂದು ಭಾಗವನ್ನು ಕಡ್ಡಾಯವಾಗಿ ನೀಡಬೇಕು (ಜಕಾತ್) ಎಂದು ಕಟ್ಟುಪಾಡು ಹೇರುವ ಮೂಲಕ ಸಮಾಜದಲ್ಲಿ ಸಮಾನತೆಯನ್ನು ಮೂಡಿಸುತ್ತದೆ. ಇದುವರೆಗೆ ಅನಾವಶ್ಯಕವಾಗಿ ಅತಿಯಾಗಿ ತಿಂದು ಆಹಾರವನ್ನು ವ್ಯರ್ಥಗೊಳಿಸುತ್ತಿದ್ದವರು ಈಗ ಅಗತ್ಯವಿದ್ದಷ್ಟು ಮಾತ್ರ ಸೇವಿಸಲು ಪಣತೊಡುತ್ತಾರೆ.

ಜೋರಾಗಿ ನಗಬೇಡಿ

ಜೋರಾಗಿ ನಗಬೇಡಿ

ರಮಧಾನ್ ತಿಂಗಳಲ್ಲಿ ಜೋರಾಗಿ ನಗುವುದನ್ನೂ ನಿಷೇಧಿಸಲಾಗಿದೆ. ಏಕೆಂದರೆ ಜೋರಾಗಿ ನಗುವ ಸಂದರ್ಭ ಇನ್ನೊಬ್ಬರನ್ನು ಹೀಯಾಳಿಸಲೂ ಬಳಕೆಯಾಗುವುದರಿಂದ ಜೋರಾದ ನಗುವಿನ ಕಾರಣ ಅನೈಚ್ಛಿಕವಾಗಿ ಇನ್ನೊಬ್ಬರಿಗೆ ನೋವುಂಟುಮಾಡಬಹುದು. ಪ್ರವಾದಿ ಮೊಹಮ್ಮದರು ರಮಧಾನ್ ತಿಂಗಳಲ್ಲಿ ಕೇವಲ ಮಂದಹಾಸ ಮತ್ತು ಮುಗುಳ್ನಗೆ ಬೀರುತ್ತಿದ್ದರೇ ಹೊರತು ಎಂದೂ ಗಹಗಹಿಸಿ ನಗುತ್ತಿರಲಿಲ್ಲ. ನಗುವ ಸಂದರ್ಭ ಬಂದಾಗ ಚಿಕ್ಕ ಧ್ವನಿಯಲ್ಲಿ ಅಥವಾ ಮುಗುಳ್ನಗೆಯ ಮೂಲಕ ಭಾವನೆಗಳನ್ನು ವ್ಯಕ್ತಪಡಿಸುವುದು ಉತ್ತಮ.

ಊಟ ಮಾಡುವ ಬಯಕೆಯನ್ನು ಹತ್ತಿಕ್ಕಿರಿ

ಊಟ ಮಾಡುವ ಬಯಕೆಯನ್ನು ಹತ್ತಿಕ್ಕಿರಿ

ರಮಧಾನ್ ತಿಂಗಳ ಉಪವಾಸದ ಅವಧಿಯಲ್ಲಿ ಊಟ ಮಾಡುವುದಿರಲಿ, ಊಟದ ಬಗ್ಗೆ ಕಲ್ಪಿಸಿಕೊಂಡರೂ ಉಪವಾಸ ಹೋದಂತೆ. ಏಕೆಂದರೆ ರಮಧಾನ್ ನ ಉಪವಾಸದ ಮುಖ್ಯ ಉದ್ದೇಶವೇ ಮನಸ್ಸಿನ ಬಯಕೆಗಳನ್ನು ಹತ್ತಿಕ್ಕುವುದು. ಊಟದ ಅಥವಾ ರುಚಿಯನ್ನು ಕಲ್ಪಿಸಿ ನಾಲಿಗೆಯಲ್ಲಿ ನೀರೂರಿದರೆ ಉಪವಾಸ ಹೋದಂತೆ. ಆದ್ದರಿಂದ ಆಹಾರದ ಬಗ್ಗೆ ಕಲ್ಪನೆ ಬರುತ್ತಲೇ ನಿಮ್ಮ ಮನಸ್ಸನ್ನು ಇತರ ಕಡೆ ಹೊರಳಿಸುವುದು ಉತ್ತಮ. ಈ ಕಾರ್ಯಕ್ಕೆ ದೇವರ ಸ್ತುತಿಯನ್ನು (ಅಸ್ತಘ್ಫಾರ್) ಉತ್ತಮ ಎಂದು ಇಸ್ಲಾಂ ಬೋಧಿಸಿದೆ.

ಮೊಬೈಲ್ ಸಹವಾಸ ಬೇಡ

ಮೊಬೈಲ್ ಸಹವಾಸ ಬೇಡ

ನಿಮ್ಮ ಮೊಬೈಲಿನಲ್ಲಿ ಏನಾದರೂ ಸಂದೇಶ ಬಂದಿದೆಯೇ ಎಂದು ಪದೇ ಪದೇ ಎತ್ತಿ ನೋಡುತ್ತಿರುವಷ್ಟು ಮೊಬೈಲಿಗೆ ದಾಸರಾಗಿದ್ದೀರಾ? ಹಾಗಾದರೆ ಈ ಕಟ್ಟುಪಾಡನ್ನು ನಿಮಗೆ ನೀವೇ ವಿಧಿಸಿಕೊಳ್ಳಿ. ಯಾವಾಗ ಮೊಬೈಲು ಕೈಯಲ್ಲಿತ್ತಿಕೊಳ್ಳುವ ಬಯಕೆಯಾಗುತ್ತದೆಯೋ ಆಗ ದೇವರ ಸ್ತುತಿಯನ್ನು (ಅಥವಾ ನಿಮಗಿಷ್ಟವಾದ ಬೇರೆ ಕಾರ್ಯವನ್ನು) ಮನಸ್ಸಿನಲ್ಲಿ ಪ್ರಾರಂಭಿಸಿ. ಒಂದೇ ದಿನದಲ್ಲಿ ಈ ಚಟ ಹತೋಟಿಗೆ ಬರುವುದು ಕಂಡುಬರುತ್ತದೆ. ರಮಧಾನ್ ಉಪವಾಸ ನಮ್ಮ ಮನಸ್ಸನ್ನು (ಹೊಟ್ಟೆಯನ್ನು ಅಲ್ಲ) ಹೇಗೆ ದೃಢಗೊಳಿಸುತ್ತದೆ ಎಂಬುದಕ್ಕಿ ಇದಕ್ಕಿಂತ ದೊಡ್ಡ ಪುರಾವೆ ಬೇಕಾಗಿಲ್ಲ.

ತೂಕ ಇಳಿಸುವ ಬಯಕೆಯಿಂದ ಉಪವಾಸವಿರಬೇಡಿ!

ತೂಕ ಇಳಿಸುವ ಬಯಕೆಯಿಂದ ಉಪವಾಸವಿರಬೇಡಿ!

ಉಪವಾಸವಿರುವುದರಿಂದ ತೂಕವನ್ನು ಇಳಿಸಿಕೊಳ್ಳಬಹುದು ಎಂದು ಹೆಚ್ಚಿನವರು ತಿಳಿದುಕೊಂಡಿದ್ದಾರೆ. ಆದರೆ ಇದು ಪೂರ್ಣವಾಗಿ ಸತ್ಯವಲ್ಲ. ಉಪವಾಸವಿರುವುದರಿಂದ ನಮ್ಮ ದೇಹದಲ್ಲಿ ಶೇಖರವಾಗಿದ್ದ ಕೊಬ್ಬನ್ನು ಕೊಂಚಮಟ್ಟಿಗೆ ಬಳಸಬಹುದಷ್ಟೇ ಹೊರತು ನಿವಾರಿಸಲು ಸಾಧ್ಯವಿಲ್ಲ. ಏಕೆಂದರೆ ಉಪವಾಸದ ಅವಧಿಯಲ್ಲಿ ಕಳೆದುಕೊಂಡ ಕೊಬ್ಬು ಉಪವಾಸ ಪೂರ್ಣಗೊಳಿಸುವಾಗ ಸೇವಿಸಿದ ಆಹಾರದ ಮೂಲಕ ಮತ್ತೆ ಶೇಖರಗೊಳ್ಳುತ್ತದೆ. ಇದರಿಂದ ಇಳಿದ ತೂಕ ಮತ್ತೆ ಏರುತ್ತದೆ.

ಅದು ಕೇವಲ ಒಣಪ್ರತಿಷ್ಠೆ ಮಾತ್ರ

ಅದು ಕೇವಲ ಒಣಪ್ರತಿಷ್ಠೆ ಮಾತ್ರ

ಹೆಚ್ಚಿನವರಲ್ಲಿ ಇದು ಇಳಿದ ಪ್ರಮಾಣಕ್ಕಿಂತಲೂ ಹೆಚ್ಚು ಏರುತ್ತದೆ. ಈ ಪರಿಯ ಉಪವಾಸ ಸರ್ವಥಾ ಸಲ್ಲದು. ರಮಧಾನ್ ನ ಉಪವಾಸವೆಂದರೆ ಅಲ್ಲಾಹನು ನಿರ್ದೇಶಿಸಿರುವ ರೀತಿಯಲ್ಲಿಯೇ ಕೈಗೊಂಡು ಮನಸ್ಸನ್ನು ಶುದ್ಧಗೊಳಿಸುವುದು ಮತ್ತು ಪ್ರಾರ್ಥನೆ, ದಾನ, ಪಠಣ, ಪ್ರವಚನ ಮೊದಲಾದವುಗಳ ಮೂಲಕ ಅಲ್ಲಾಹನ ಅನುಗ್ರಹಕ್ಕೆ ಪಾತ್ರನಾಗುವ ಉದ್ದೇಶವಿಟ್ಟುಕೊಂಡು ಕೈಗೊಂಡ ಉಪವಾಸ ಮಾತ್ರ ಕೃಪೆಗೆ ಪಾತ್ರವಾಗುತ್ತದೆ. ತೂಕ ಇಳಿಸುವ ನಿಟ್ಟಿನಲ್ಲಿ ಬಲವಂತವಾಗಿ ಕೈಗೊಂಡ ಉಪವಾಸ ಕೇವಲ ಒಣಪ್ರತಿಷ್ಠೆ ಮಾತ್ರ.

ಸುಳ್ಳು ಹೇಳಬೇಡಿ, ಪರನಿಂದನೆ ಮಾಡಬೇಡಿ

ಸುಳ್ಳು ಹೇಳಬೇಡಿ, ಪರನಿಂದನೆ ಮಾಡಬೇಡಿ

ರಮಧಾನ್ನ ಉಪವಾಸದ ಅವಧಿಯಲ್ಲಿ ಸುಳ್ಳು ಹೇಳುವುದು, ಚಾಡಿ ಚುಚ್ಚುವುದು, ಪರನಿಂದನೆ, ಇತರರ ಬಗ್ಗೆ ಅವರ ಹಿಂದಿನಿಂದ ಮಾತನಾಡುವುದು, ತಪ್ಪು ವಿಷಯದ ಬಗ್ಗೆ ಚರ್ಚಿಸುವುದು, ಕಳ್ಳತನ (ಕಳ್ಳತನದ ಬಗ್ಗೆ ಯೋಚಿಸುವುದು), ಮೋಸ ಮಾಡುವುದು (ಮೋಸ ಮಾಡುವ ಬಗ್ಗೆ ಯೋಚಿಸುವುದು) ಮೊದಲಾದ ಕೆಟ್ಟಕಾರ್ಯಗಳಿಂದ ದೂರವಿರುವಂತೆ ಪ್ರವಾದಿ ಮೊಹಮ್ಮದ್ (ಸ) ರವರು ಸ್ಪಷ್ಟವಾಗಿ ತಿಳಿಸಿದ್ದಾರೆ (ಅನುವಾದ:ಬುಖಾರಿ). ಈ ಪರಿಯನ್ನು ಅನುಸರಿಸಿದವರಿಗೆ ಅಲ್ಲಾಹನು ಅನ್ನ ಮತ್ತು ನೀರಿನಿಂದ ದೂರವಿಡುತ್ತಾನೆ ಎಂದೂ ಪ್ರವಾದಿಗಳು ತಿಳಿಸಿದ್ದಾರೆ.

ಲೈಂಗಿಕ ಸಂಪರ್ಕದಿಂದ (ಅಥವಾ ಅದರ ಯೋಚನೆಯಿಂದಲೇ) ದೂರವಿರಿ

ಲೈಂಗಿಕ ಸಂಪರ್ಕದಿಂದ (ಅಥವಾ ಅದರ ಯೋಚನೆಯಿಂದಲೇ) ದೂರವಿರಿ

ಉಪವಾಸದ ಅವಧಿಯಲ್ಲಿ ಯಾವುದೇ ಲೈಂಗಿಕ ಬಯಕೆ, ಲೈಂಗಿಕ ಚಟುವಟಿಕೆ ಅಥವಾ ದೈಹಿಕ ಸಂಪರ್ಕವನ್ನು ಕಡ್ಡಾಯವಾಗಿ ನಿಷೇಧಿಸಲಾಗಿದೆ. ಹಗಲಿನ ಹೊತ್ತಿನಲ್ಲಿ ಸಂಗಾತಿಯ ಸ್ಪರ್ಶ ಅಥವಾ ಸಮಾಗಮಕ್ಕೂ ಅವಕಾಶವಿಲ್ಲ. ಮೂಲತಃ ಲೈಂಗಿಕ ಕಾಮನೆಗಳನ್ನು ಉಪವಾಸದ ಅವಧಿಯಲ್ಲಿ ಮನದಲ್ಲಿ ಮೂಡದಂತೆ ನೋಡಿಕೊಳ್ಳುವುದೇ ಉಪವಾಸದ ನಿಜವಾದ ಉದ್ದೇಶವಾಗಿದೆ.

ವಯಸ್ಕ ಪೋಲಿ ಮಾತುಗಳನ್ನು ಆಡದಿರಿ

ವಯಸ್ಕ ಪೋಲಿ ಮಾತುಗಳನ್ನು ಆಡದಿರಿ

ನಮ್ಮ ಮನವೊಂದು ಮರ್ಕಟವಿದ್ದಂತೆ. ಸುಲಭವಾದ ಪದಗಳಿಗೆ ಒಪ್ಪದ ಮನ ಕೊಂಚ ಬೈಗುಳ ಅಥವಾ ಪೋಲಿಭಾಷೆಯಲ್ಲಿ ಆಡಿದ ಮಾತನ್ನು ಕೂಡಲೇ ಗ್ರಹಿಸುತ್ತದೆ. ಇದೇ ಕಾರಣಕ್ಕೆ ಕೆಲಸ ಮಾಡಿಸಿಕೊಳ್ಳುವವರು ತಮ್ಮ ಭಾಷೆಯಲ್ಲಿ ಧಾರಾಳವಾಗಿ ಬೈಗುಳಗಳನ್ನು ಉಪಯೋಗಿಸಿಕೊಳ್ಳುತ್ತಾರೆ. ಇತರರ ಗಮನವನ್ನು ಸೆಳೆಯಲು ನಡುನಡುವೆ ಪೋಲಿಪದಗಳನ್ನು ಬಳಸಿ ಕೊಂಚ ಲೈಂಗಿಕಾರ್ಥ ಬರುವಂತೆ ಮಾಡಿದರೆ ಎದುರಿನವರು ವಿಷಯವನ್ನು ಕೂಡಲೇ ಗ್ರಹಿಸುತ್ತಾರೆ. ಆದರೆ ಈ ಪರಿಯನ್ನು ಉಪವಾಸದ ಅವಧಿಯಲ್ಲಿ ಬಳಸಲು ಸರ್ವಥಾ ನಿಷೇಧ ಹೇರಲಾಗಿದೆ.... ಮುಂದಿನ ಸ್ಲೈಡ್ ಕ್ಲಿಕ್ ಮಾಡಿ

ವಯಸ್ಕ ಪೋಲಿ ಮಾತುಗಳನ್ನು ಆಡದಿರಿ

ವಯಸ್ಕ ಪೋಲಿ ಮಾತುಗಳನ್ನು ಆಡದಿರಿ

ಬೈಗುಳ, ಪೋಲಿ ಅರ್ಥದ ಪದಗಳನ್ನು ಬಳಸುವುದು, ಸಿಟ್ಟಿನಿಂದ ಮಾತನಾಡುವುದು, ದರ್ಪದ ಪದಗಳು ಅಥವಾ ಒಂದು ರೀತಿಯ ಯಜಮಾನಿಕೆಯನ್ನು ಹೇರುವ ಯಾವುದೇ ಪದವನ್ನು ಬಳಸುವುದನ್ನು ನಿಷೇಧಿಸಲಾಗಿದೆ. ನಮ್ಮ ಮಾತುಗಳು ಸಾಧ್ಯವಾದಷ್ಟು ಸೌಮ್ಯವಾಗಿದ್ದು ಎದುರಿನವರು ಗೌರವರೂಪದಲ್ಲಿ ಪಡೆಯುವಂತಿರಬೇಕು. ಈ ಎಲ್ಲಾ ಕಟ್ಟುಪಾಡುಗಳು ರಂಜಾನ್ ಮಾಸಕ್ಕೆ ಸೀಮಿತವಾಗಿಲ್ಲ. ಈ ತಿಂಗಳಲ್ಲಿ ಲಭ್ಯವಾದ ತರಬೇತಿಯನ್ನು ವರ್ಷದ ಎಲ್ಲಾ ತಿಂಗಳುಗಳಿಗೆ ಅನ್ವಯಿಸಿ ಉತ್ತಮ ಜೀವನ ನಡೆಸುವಂತಾಗಬೇಕೆಂಬುದೇ ರಮಧಾನ್ ಮಾಸದ ತತ್ವವಾಗಿದೆ.

English summary

Things Not To Be Done During Ramadan

Ramadan is not just about "not eating anything" but has many more meanings that will benefit you both physically and spiritually. Ramadan is not just about staying away from food. Fasting is only one of the many aspects of Ramadan. Here are few important things that you have to avoid during Ramadan.
X
Desktop Bottom Promotion