Just In
Don't Miss
- Finance
ಆಕ್ಸಿಸ್ ಬ್ಯಾಂಕ್ Aura ಕ್ರೆಡಿಟ್ ಕಾರ್ಡ್ ಆರಂಭ; ಏನೇನು ಅನುಕೂಲ?
- Automobiles
ಮಾರುತಿ ಕಾರಿಗೂ ಮುನ್ನ ಭಾರೀ ಜನಪ್ರಿಯವಾಗಿತ್ತು ಭಾರತದ ಮೊದಲ ಸ್ವದೇಶಿ ಕಾರು
- News
ಮಂಜಿನ ದಟ್ಟಣೆಯಿಂದ ಅಪಘಾತ; ಪಶ್ಚಿಮ ಬಂಗಾಳದಲ್ಲಿ 13 ಮಂದಿ ಸಾವು
- Movies
ನಟಿ ಶ್ರೀದೇವಿ ಎರಡನೇ ಪುತ್ರಿ ಖುಷಿ ಬಾಲಿವುಡ್ ಗೆ ಎಂಟ್ರಿ: ಬೋನಿ ಕಪೂರ್ ಹೇಳಿದ್ದೇನು?
- Sports
ಐಎಸ್ಎಲ್: ಕೇರಳ ಬ್ಲಾಸ್ಟರ್ಸ್ ಮತ್ತು ಬೆಂಗಳೂರು ತಂಡಗಳ ಅದೃಷ್ಟ ಪರೀಕ್ಷೆ
- Education
AAI Recruitment 2021: 7 ಸಲಹೆಗಾರ ಹುದ್ದೆಗಳಿಗೆ ಅರ್ಜಿ ಆಹ್ವಾನ
- Technology
ಒನ್ಪ್ಲಸ್ ನಾರ್ಡ್ ಜುಲೈ 15 ರಿಂದ ಅಮೆಜಾನ್ ತಾಣದಲ್ಲಿ ಪ್ರಿ-ಆರ್ಡರ್ಗೆ ಲಭ್ಯವಿದೆ; ಖರೀದಿಸುವಲ್ಲಿ ಮೊದಲಿಗರಾಗಿರಿ!
- Travel
ಭಾರತದಲ್ಲಿ ಜೂನ್ 1 ರಿಂದ ಚಲಿಸಲಿರುವ ರೈಲುಗಳ ಸಂಪೂರ್ಣ ಪಟ್ಟಿ
ರಂಜಾನ್ ಉಪವಾಸಕ್ಕಾಗಿ ತಂಪುಣಿಸುವ ಬಾದಾಮಿ ಹಾಲು
ರಂಜಾನ್ ಮಾಸದಲ್ಲಿ ಹದಿನಾಲ್ಕು ಗಂಟೆಗಳ ಉಪವಾಸದ ಬಳಿಕ ದೇಹಕ್ಕೆ ವಿಶೇಷ ಆಹಾರಗಳ ಅಗತ್ಯವಿದೆ. ಅದರಲ್ಲೂ ಉಪವಾಸ ಹಿಡಿಯುತ್ತಿರುವ ಬಾಣಂತಿಯರಿಗೆ ಮತ್ತು ಮಕ್ಕಳಿಗೆ ಹೆಚ್ಚಿನ ಪೋಷಕಾಂಶಗಳು ಅತ್ಯಗತ್ಯ. ಈ ಅಗತ್ಯವನ್ನು ಕೇಸರಿ, ಹಾಲು, ತುಪ್ಪ ಮತ್ತು ಬಾದಾಮಿ ಪೂರೈಸುತ್ತವೆ.
ಇವೇ ಸಾಮಾಗ್ರಿಗಳನ್ನು ಉಪಯೋಗಿಸಿ ತಯಾರಿಸುವ ಈ ವಿಶೇಷ ಪೇಯ ರುಚಿಕರವೂ ಹೌದು. ಪೌಷ್ಠಿಕಾಂಶಗಳ ಆಗರವಾಗಿರುವ ಬಾದಾಮಿಯಲ್ಲಿ ಕ್ಯಾಲ್ಸಿಯಂ ಮತ್ತು ಪ್ರೋಟೀನುಗಳು ಹೆಚ್ಚಿರುವುದರಿಂದ ಮಕ್ಕಳಿಗೆ ವಿಶೇಷವಾಗಿ ಈ ಪೇಯ ಹೆಚ್ಚಿನ ಆರೈಕೆ ನೀಡಬಲ್ಲುದು.
ಈ ಪೇಯವನ್ನು ವರ್ಷವಿಡೀ ತಯಾರಿಸಬಹುದಾದರೂ ಇದರ ಮಹತ್ವ ರಂಜಾನ್ ತಿಂಗಳ ಇಫ್ತಾರ್ ಸಮಯಕ್ಕೆ ಹೆಚ್ಚು ಸಮರ್ಪಕವಾಗಿದೆ. ಬಿಸಿಯಿರುವಾಗಲೇ ಸೇವಿಸಬೇಕಾದ ಈ ಸ್ವಾದಿಷ್ಟ ಪೇಯವನ್ನು ಸುಹೂರ್ ಮತ್ತು ಇಫ್ತಾರ್ ಸಮಯದಲ್ಲಿ ಬಳಸಬಹುದು. ಜೊತೆಗೇ ಮಳೆಯಿಂದಾಗಿ ಚಳಿಯಲ್ಲಿ ಕುಡಿಯುವ ಪೇಯ ಶರೀರಕ್ಕೆ ಅಗತ್ಯವಾದ ಶಾಖವನ್ನೂ ನೀಡುವುದರಿಂದ ಎಲ್ಲರ ಮನಗೆಲ್ಲುವುದು ಖಂಡಿತ. ಅಷ್ಟೇ ಏಕೆ, ಇನ್ನುಳಿದ ಸಮಯದಲ್ಲಿ ರಾತ್ರಿ ಊಟದ ಬಳಿಕ ನೀಡಿದರೂ ಮನೆಯವರು ಮತ್ತು ಅತಿಥಿಗಳು ಈ ಪೇಯವನ್ನು ಮತ್ತಷ್ಟು ಕೊಂಡಾಡುತ್ತಾರೆ.
ಪ್ರಮಾಣ: ನಾಲ್ವರಿಗೆ ಒಂದು ಹೊತ್ತಿಗಾಗುವಷ್ಟು
ಸಿದ್ಧತಾ ಸಮಯ: ಐದು ನಿಮಿಷಗಳು
ತಯಾರಿಕಾ ಸಮಯ: ಇಪ್ಪತ್ತು ನಿಮಿಷಗಳು.
ಅಗತ್ಯವಿರುವ ಸಾಮಾಗ್ರಿಗಳು:
*ಹಸುವಿನ ತುಪ್ಪ: 1 ಚಿಕ್ಕ ಚಮಚ
*ಮೈದಾ ಹಿಟ್ಟು- 1 ದೊಡ್ಡಚಮಚ
*ಹಾಲು - 1 ಲೀಟರ್
*ಬಾದಾಮಿ ಪುಡಿ - 4 ದೊಡ್ಡಚಮಚ
*ಕೇಸರಿ - ಕೆಲಸು ಎಸಳುಗಳು
*ಸಕ್ಕರೆ- 1/4 ಕಪ್
*ಒಣಫಲಗಳು-ಚಿಕ್ಕದಾಗಿ ಹೆಚ್ಚಿದ್ದು (ನಿಮ್ಮ ಆಯ್ಕೆಯ ಯಾವುದೂ ಆಗಬಹುದು)-ಮೇಲಿನ ಅಲಂಕಾರಕ್ಕಾಗಿ
*ಗುಲಾಬಿ ಹೂಗಳ ದಳಗಳು - ಸ್ವಲ್ಪ, ಮೇಲಿನ ಅಲಂಕಾರಕ್ಕಾಗಿ (ಅಥವಾ ನಿಮ್ಮ ಆಯ್ಕೆಯ ಬೇರೆ ಯಾವುದಾದರೂ ಸರಿ)
ವಿಧಾನ:
*ದಪ್ಪತಳದ ಪಾತ್ರೆಯಲ್ಲಿ ತುಪ್ಪ ಹಾಕಿ ಮಧ್ಯಮ ಉರಿಯಲ್ಲಿ ಬಿಸಿಮಾಡಿ
*ಮೈದಾ ಹಾಕಿ ಎರಡು ನಿಮಿಷ ತಿರುವುತ್ತಾ ಇರಿ. (ತಿರುವುದನ್ನು ಕೊಂಚ ನಿಲ್ಲಿಸಿದರೂ ಕೆಳಭಾಗ ಸುಟ್ಟು ರುಚಿ ಕೆಡುತ್ತದೆ)
*ಕೊಂಚ ಕಂದು ಬಣ್ಣ ಬರುತ್ತಿದ್ದಂತೆಯೇ ಹಾಲು ಹಾಕಿ ಕುದಿ ಬರಿಸಿ, ನಡುನಡುವೆ ಕೊಂಚ ತಿರುವುತ್ತಿರಿ.
*ಕುದಿ ಬರುತ್ತಿದ್ದಂತೆಯೇ ಉರಿಯನ್ನು ಚಿಕ್ಕದಾಗಿಸಿ ಬಾದಾಮಿ ಪುಡಿ ಮತ್ತು ಕೇಸರಿಯನ್ನು ಹಾಕಿ
*ಚಿಕ್ಕ ಉರಿಯಲ್ಲಿಯೇ ಸುಮಾರು ಹತ್ತರಿಂದ ಹದಿನೈದು ನಿಮಿಷ ಕುದಿಯಲು ಬಿಡಿ.
*ಈಗ ಸಕ್ಕರೆ ಹಾಕಿ ಎರಡು ನಿಮಿಷ ಕುದಿಸಿ, ನಡುನಡುವೆ ತಿರುವುತ್ತಿರಿ
*ಬಳಿಕ ಇಳಿಸಿ ಒಣಫಲಗಳ ಪುಡಿ ಮತ್ತು ಗುಲಾಬಿ ದಳಗಳಿಂದ ಮೇಲ್ಭಾಗವನ್ನು ಅಲಂಕರಿಸಿ.
*ಬಿಸಿಯಿದ್ದಂತೆಯೇ ಲೋಟಗಳಲ್ಲಿ ಹಾಕಿ ಅತಿಥಿಗಳಿಗೆ ಕುಡಿಯಲು ನೀಡಿ ಮೆಚ್ಚುಗೆ ಗಳಿಸಿ.
ಸೂಚನೆ:
ಪೇಯವನ್ನು ಲೋಟಗಳಿಗೆ ಹಾಕಿದ ಬಳಿಕವೂ ಒಣಫಲಗಳನ್ನು ಹಾಕಿ ಅಲಂಕರಿಸಬಹುದು.