ದೇಹದ ತೂಕ ಇಳಿಸಿಕೊಳ್ಳಬೇಕೇ? ಅಡುಗೆಯಲ್ಲಿ ಹರಳೆಣ್ಣೆ ಬಳಸಿ...

By: Arshad
Subscribe to Boldsky

ಹಿಂದಿನ ದಿನಗಳಲ್ಲಿ ಹಲವಾರು ಕಾರ್ಯಗಳಿಗೆ ಬಳಸಲಾಗುತ್ತಿದ್ದ ಹರಳೆಣ್ಣೆ Ricinus Communis ಎಂಬ ಗಿಡದ ಬೀಜಗಳನ್ನು ಒಣಗಿಸಿ ಹಿಂಡುವ ಮೂಲಕ ಪಡೆಯಲಾಗುತ್ತದೆ. ಹಿಂದೆ ಈ ಎಣ್ಣೆಯನ್ನು ಎತ್ತಿನಗಾಡಿಗಳ ಗಾಲಿಗಳಿಗೆ ಕೀಲೆಣ್ಣೆಯಾಗಿ ಪ್ರಮುಖವಾಗಿ ಬಳಸಲಾಗುತ್ತಿತ್ತು. ಇಂದು ಈ ಬಳಕೆ ಕಡಿಮೆಯಾಗಿದ್ದರೂ ದಿನನಿತ್ಯದ ಕೆಲವಾರು ಉತ್ಪನ್ನಗಳಲ್ಲಿ ಬಳಸಲಾಗುತ್ತಿದೆ.

ಸೋಪು, ಕೆಲವಾರು ಔಷಧಿಗಳು, ಸೌಂದರ್ಯ ಪ್ರಸಾದನಗಳು ಇವುಗಳಲ್ಲಿ ಪ್ರಮುಖವಾಗಿವೆ. ಹರಳೆಣ್ಣೆಯನ್ನು ವಿರೇಚಕವಾಗಿ ಆಯುರ್ವೇದದಲ್ಲಿ ಬಳಸಲಾಗುತ್ತದೆ. ಇಂದು ಹರಳೆಣ್ಣೆಯನ್ನು ತೂಕ ಇಳಿಕೆಗಾಗಿಯೂ ಬಳಸಲಾಗುತ್ತಿದೆ. ತೂಕ ಇಳಿಸಲು ಕಷ್ಟ ಪಡುತ್ತಿರುವ ವ್ಯಕ್ತಿಗಳು ಹರಳೆಣ್ಣೆಯನ್ನು ತಮ್ಮ ಆಹಾರದಲ್ಲಿ ಅಳವಡಿಸಿಕೊಳ್ಳುವ ಮೂಲಕ ತಮ್ಮ ಪ್ರಯತ್ನಗಳಿಗೆ ಹೆಚ್ಚಿನ ಪ್ರಯೋಜನವನ್ನು ಪಡೆಯಬಹುದು.

Castor Oil

ಈ ಎಣ್ಣೆಯಲ್ಲಿ ವಿಟಮಿನ್ ಇ ಉತ್ತಮ ಪ್ರಮಾಣದಲ್ಲಿದೆ. ಇದರೊಂದಿಗೆ ಖನಿಜಗಳು, ಪ್ರೋಟೀನುಗಳು ಸಹಾ ವಿಪುಲವಾಗಿವೆ. ಈ ಹೊಂಬಣ್ಣದ ಅತಿ ಗಾಢವಾದ ಎಣ್ಣೆಯಲ್ಲಿ ಶಿಲೀಂಧ್ರ ನಿವಾರಕ, ಉರಿಯೂತ ನಿವಾರಕ ಹಾಗೂ ಬ್ಯಾಕ್ಟೀರಿಯಾ ನಿವಾರಕ ಗುಣಗಳಿವೆ. ಈ ಗುಣಗಳಿಂದಾಗಿಯೇ ಹರಳೆಣ್ಣೆ ಹಲವಾರು ಔಷಧಿಯಲ್ಲಿ ಸ್ಥಾನ ಪಡೆದಿದೆ.

ಹರಳೆಣ್ಣೆ ಬೋಳು ತಲೆಯಲ್ಲಿ ಕೂದಲು ಮೂಡಿಸುವುದೇ?

ಇಂದು ತೂಕ ಇಳಿಕೆಯಲ್ಲಿ ನೈಸರ್ಗಿಕ ಸಾಮಾಗ್ರಿಗಳು ಹೆಚ್ಚು ಹೆಚ್ಚಾಗಿ ಬಳಕೆಯಾಗುತ್ತಿದೆ ಹಾಗೂ ಹರಳೆಣ್ಣೆಗೂ ಹೆಚ್ಚಿನ ಬೇಡಿಕೆ ಬಂದಿದೆ. ತೂಕ ಇಳಿಸಲು ಬಳಕೆಯಾಗುವ ಈ ಔಷಧಿಗಳು ದೇಹದಲ್ಲಿರುವ ಕಲ್ಮಶಗಳನ್ನು ನಿವಾರಿಸಿ ಕೊಬ್ಬನ್ನು ಕರಗಿಸುವ ಮೂಲಕ ಹೆಚ್ಚುವರಿ ತೂಕವನ್ನು ಇಳಿಸಲು ನೆರವಾಗುತ್ತದೆ. ಹರಳೆಣ್ಣೆಯ ಸಾಮಾನ್ಯ ವಿವರದ ಪ್ರಕಾರ ದಿನಕ್ಕೆ ಸುಮಾರು ಎರಡು ಔನ್ಸ್ ಗಳಷ್ಟು (59.14ಮಿ. ಲೀ) ಹರಳೆಣ್ಣೆಯನ್ನು ಸೇವಿಸುವ ಮೂಲಕ ತೂಕ ಇಳಿಕೆಯನ್ನು ಪ್ರಚೋದಿಸುತ್ತದೆ.

Castor Oil

ಆದರೆ ಇದಕ್ಕೂ ಹೆಚ್ಚಿನ ಪ್ರಮಾಣದ ಸೇವನೆ ಆರೋಗ್ಯಕ್ಕೆ ಒಳ್ಳೆಯದಲ್ಲ. ಹರಳೆಣ್ಣೆಯ ಪ್ರಮುಖ ಕಾರ್ಯವೆಂದರೆ ದೇಹದ ಕಲ್ಮಶಗಳನ್ನು ನಿವಾರಿಸುವುದು. ವಿಶೇಷವಾಗಿ ಕರುಳುಗಳಿಂದ ಕಲ್ಮಶಗಳನ್ನು ಸುಲಭವಾಗಿ ಹೊರಹಾಕುವ ಮೂಲಕ ಇದು ಉತ್ತಮ ವಿರೇಚಕದಂತೆಯೂ ಕೆಲಸ ಮಾಡುತ್ತದೆ. ಬನ್ನಿ, ಹರಳೆಣ್ಣೆಯನ್ನು ವಿರೇಚಕದ ಸಹಿತ ತೂಕ ಇಳಿಸಲು ಹೇಗೆ ನೆರವಾಗುತ್ತದೆ ಎಂಬುದನ್ನು ನೋಡೋಣ

ಕಲ್ಮಶಗಳ ನಿವಾರಣೆ

ಹರಳೆಣ್ಣೆಯ ಸೇವನೆಯಿಂದ ದೇಹದಲ್ಲಿರುವ ಕಲ್ಮಶಗಳು ನಿವಾರಣೆಯಾಗುತ್ತವೆ. ಈ ಮೂಲಕ ದೇಹ ಸ್ವಚ್ಛಗೊಳ್ಳುತ್ತದೆ ಹಾಗೂ ಈ ಮೂಲಕ ಎದುರಾಬಹುದಾಗಿದ್ದ ತೊಂದರೆಗಳಿಂದ ಮುಕ್ತಿ ದೊರಕುತ್ತದೆ. ಹರಳೆಣ್ಣೆ ಕರುಳುಗಳಿಗೆ ತಲುಪಿದ ಬಳಿಕ ದೇಹದ ಪ್ರಮುಖ ಅಂಗಗಳಿಗೇ ಪ್ರಚೋದನೆ ದೊರಕುತ್ತದೆ ಹಾಗೂ ಕಲ್ಮಶಗಳನ್ನು ನಿವಾರಿಸಲು ನೆರವಾಗುತ್ತದೆ.

ಕೊಬ್ಬನ್ನು ಕರಗಿಸುತ್ತದೆ

ಹರಳೆಣ್ಣೆಯನ್ನು ಸೇವಿಸುವ ಹೊರತಾಗಿ ಹರಳೆಣ್ಣೆಯನ್ನು ಚರ್ಮದ ಮೇಲೆ ನೇರವಾಗಿ ಹಚ್ಚಿಕೊಳ್ಳಬಹುದು. ಇದರಿಂದಲೂ ತೂಕ ಇಳಿಕೆಗೆ ನೆರವಾಗುತ್ತದೆ. ಚರ್ಮಕ್ಕೆ ಹಚ್ಚಿದಾಗ ಈ ಎಣ್ಣೆ ನಿಧಾನವಾಗಿ ಚರ್ಮದಾಳಕ್ಕೆ ಇಳಿದು ಕೊಬ್ಬನ್ನು ಕರಗಿಸಲು ಪ್ರಚೋದನೆ ನೀಡುತ್ತದೆ.

ಸೂಕ್ಷ್ಮಜೀವಿ ನಿವಾರಕ

ತೂಕ ಇಳಿಸಲು ಹರಳೆಣ್ಣೆಯನ್ನು ಸೇವಿಸುವ ಮೂಲಕ ಇದರ ಸೂಕ್ಷ್ಮಜೀವಿನಿವಾರಕ ಗುಣ ದೇಹವನ್ನು ಆವರಿಸುವ ಶಿಲೀಂಧ್ರಗಳ ಸೋಂಕಿನಿಂದ ರಕ್ಷಿಸುತ್ತದೆ. ಇದರ ಬ್ಯಾಕ್ತೀರಿಯಾ ನಿವಾರಕ ಗುಣ ದೇಹದ ನೋವನ್ನು ಕಡಿಮೆಮಾಡುತ್ತದೆ ಹಾಗೂ ಚರ್ಮದ ತುರಿಕೆಯನ್ನೂ ನಿವಾರಿಸುತ್ತದೆ.

Castor Oil

ಕಟ್ಟಿಕೊಂಡಿದ್ದ ನಾಳಗಳನ್ನು ತೆರೆಯುತ್ತದೆ

ಒಂದು ವೇಳೆ ದುಗ್ಧಗ್ರಂಥಿಗಳ ನಾಳಗಳು ಕಟ್ಟಿಕೊಂಡಿದ್ದು ಚರ್ಮದ ಮೇಲೆ ಚಿಕ್ಕ ಗಂಟುಗಳಂತೆ ಮೂಡಿದ್ದರೆ ಈ ಭಾಗದ ಮೇಲೆ ಹರಳೆಣ್ಣೆಯನ್ನು ಹಚ್ಚಿಕೊಳ್ಳುವ ಮೂಲಕ ಇದನ್ನು ಕಡಿಮೆ ಮಾಡುತ್ತದೆ. ದುಗ್ಧಗ್ರಂಥಿಗಳ ನಾಳಗಳು ಕಟ್ಟಿಕೊಂಡಿದ್ದರೆ ದೇಹದಲ್ಲಿ ನೀರು ಸಹಾ ಹೆಚ್ಚು ತುಂಬಿಕೊಂಡು ತೂಕ ಏರಿಸಲು ಕಾರಣವಾಗುತ್ತದೆ. ಈ ನಾಳಗಳು ತೆರೆದುಕೊಳ್ಳುವ ಮೂಲಕ ದೇಹದ ತೂಕ ಇಳಿಯಲು ನೆರವಾಗುತ್ತದೆ. ಅಲ್ಲದೇ ಹರಳೆಣ್ಣೆ ಚರ್ಮಕ್ಕೆ ಅಗತ್ಯವಾದ ಆರ್ದ್ರತೆ ಹಾಗೂ ಬೆಚ್ಚಗಿನ ಅನುಭವವನ್ನು ನೀಡುತ್ತದೆ.

ಆರೋಗ್ಯಕರ ತ್ವಚೆ

ಹರಳೆಣ್ಣೆಯ ಬಳಕೆಯಿಂದ ತೂಕ ಇಳಿಸಲು ನೆರವಾಗುವ ಜೊತೆಗೇ ತ್ವಚೆಯ ಆರೋಗ್ಯವೂ ಉತ್ತಮಗೊಳ್ಳುತ್ತದೆ. ಇದು ಗಾಢವಾದ ದ್ರವವಾಗಿದ್ದರೂ ಇದರ ಆಣ್ವಿಕ ತೂಕ (molecular weight) ಕಡಿಮೆ ಇರುವ ಕಾರಣ ಇದು ಚರ್ಮದಾಳಕ್ಕೆ ಇಳಿಯುವ ಕ್ಷಮತೆ ಹೊಂದಿದೆ. ಇದು ಚರ್ಮದ ಆಳದಿಂದ ಹಾಗೂ ಕೂದಲ ಬುಡದಿಂದ ಆರೈಕೆ ನೀಡುವ ಮೂಲಕ ಚರ್ಮದ ಸೆಳೆತ ಹೆಚ್ಚಿಸಲು ಹಾಗೂ ಕೂದಲು ಸೊಂಪಾಗಿ ಬೆಳೆಯಲು ನೆರವಾಗುವ ಮೂಲಕ ತ್ವಚೆ ಮೃದು ಹಾಗೂ ಆರೋಗ್ಯಕರವಾಗಿರಲು ನೆರವಾಗುತ್ತದೆ.

Castor Oil

ಮೂಳೆ ಸಂಧುಗಳ ಕ್ಷಮತೆ ಹೆಚ್ಚಿಸುತ್ತದೆ

ತೂಕ ಇಳಿಕೆಯ ಹೊರತಾಗಿ ಹರಳೆಣ್ಣೆಯ ಬಳಕೆಯಿಂದ ಸಂಧಿವಾತ ಹಾಗೂ ಮೂಳೆಗಳ ನೋವು ಸಹಾ ಕಡಿಮೆಯಾಗುತ್ತದೆ. ಇದರಲ್ಲಿ ಹೆಚ್ಚಿನ ಪ್ರಮಾಣದ ನೋವನ್ನು ಗುಣಪಡಿಸುವ ಪೋಷಕಾಂಶಗಳಿದ್ದು ವಿಶೇಷವಾಗಿ ಸಂಧಿವಾತಕ್ಕೆ ಉತ್ತಮ ಪರಿಹಾರ ದೊರಕಿಸುತ್ತದೆ. ನಿಮ್ಮ ನಿತ್ಯದ ಆಹಾರದಲ್ಲಿ ಕೊಂಚ ಹರಳೆಣ್ಣೆಯನ್ನು ಬೆರೆಸಿ ಸೇವಿಸುವ ಮೂಲಕ ತೂಕದಲ್ಲಿ ಇಳಿಕೆಯಾಗುವುದು ಮಾತ್ರವಲ್ಲ ಆರೋಗ್ಯ ಸಹಾ ಉತ್ತಮಗೊಳ್ಳುತ್ತದೆ. ಆದರೆ ಹರಳೆಣ್ಣೆಯನ್ನು ನೈಸರ್ಗಿಕ ರೂಪದಲ್ಲಿದ್ದಾಗ ಮಾತ್ರವೇ ಸೇವಿಸಬೇಕು. ತಲೆಗೆ ಹಚ್ಚುವ ಹರಳೆಣ್ಣೆಯಲ್ಲಿ ಸುಗಂಧ ಸೇರಿಸಿರಲಾಗುತ್ತದೆ. ಈ ಎಣ್ಣೆ ಸೇವಿಸಲು ಉತ್ತಮವಲ್ಲ. ಅಲ್ಲದೇ ಹರಳೆಣ್ಣೆಯನ್ನು ಹಾಗೇ ಸೇವಿಸಿದರೆ ಇದರ ವಿರೇಚಕ ಗುಣ ಜೀರ್ಣಕ್ರಿಯೆಯನ್ನು ಕೊಂಚ ಹೆಚ್ಚೇ ಬಾಧಿಸಬಹುದು. ಆದ್ದರಿಂದ ನಿಮ್ಮ ನೆಚ್ಚಿನ ಜ್ಯೂಸ್ ನೊಂದಿಗೆ ಬೆರೆಸಿ ಕುಡಿಯುವುದು ಉತ್ತಮ.

English summary

Castor Oil: Weight Loss & Other Health Benefits

Castor oil is an extract obtained from the seeds of the plant known as Ricinus Communis. Offering a number of health benefits, the oil is used in a multitude of everyday products available in the market. You can find this oil extract in products like soaps, medicines and cosmetics to name a few. However, one of the astounding benefits of castor oil is weight loss. People who have trouble losing weight can try introducing castor oil in their diet.Here are some health benefits of including castor oil in your diet for weight loss.
Subscribe Newsletter