For Quick Alerts
ALLOW NOTIFICATIONS  
For Daily Alerts

ಆರೋಗ್ಯ ಟಿಪ್ಸ್: ಜ್ವರ ಬಂದಾಗ ಮಾಡಬೇಕಾದ ಯೋಗಾಸನಗಳು

By Keshav Sharma
|

ಜ್ವರ ಬಂದರೆ ಅದು ಸಂಪೂರ್ಣ ದೇಹವನ್ನು ನಿಶ್ಯಕ್ತಿಯಿಂದ ಬಳಲುವಂತೆ ಮಾಡುವುದು. ಜ್ವರ ಬಂದಾಗ ಬಾಯಿಯ ರುಚಿ ಕೂಡ ಕಳೆದುಹೋಗುವುದರಿಂದ ಏನೂ ತಿನ್ನಲು ಆಗದು. ಇಂತಹ ಸಮಯದಲ್ಲಿ ದೇಹಕ್ಕೆ ಬೇಕಾಗುವಂತಹ ಅಗತ್ಯ ಪೋಷಕಾಂಶಗಳು ಸಿಗದೆ ಇರುವ ಕಾರಣದಿಂದ ದೇಹವು ನಿಶ್ಯಕ್ತಿಗೆ ಒಳಗಾಗುವುದು. ಲವಲವಿಕೆಯ ಜೀವನ ಶೈಲಿಗೆ- ದಿನನಿತ್ಯ ಮಾಡಿ ಹಾಲಾಸನ

ಜ್ವರ ಬಂದಾಗ ದೇಹವು ಯಾವುದೇ ಕೆಲಸಕಾರ್ಯಗಳನ್ನು ಮಾಡುವಂತಹ ಸ್ಥಿತಿಯಲ್ಲಿ ಇರುವುದಿಲ್ಲ. ಆದರೆ ಆಯುರ್ವೇದ ಪ್ರಕಾರ ಕೆಲವೊಂದು ಲಘು ಯೋಗಾಭ್ಯಾಸಗಳನ್ನು ಮಾಡಿದರೆ ಜ್ವರದಿಂದ ಬೇಗನೆ ಪರಿಹಾರ ಸಿಗುವುದು ಮತ್ತು ಇದು ದೇಹಕ್ಕೆ ಕೂಡ ಒಳ್ಳೆಯದು. ಆದರೆ ಕಠಿಣವಾಗಿರುವ ಕೆಲವೊಂದು ಆಸನಗಳನ್ನು ಈ ಸಮಯದಲ್ಲಿ ಮಾಡಲೇಬಾರದು. ಯಾವ ಯೋಗಾಸನಗಳನ್ನು ಮಾಡಬಹುದು ಎಂದು ಈ ಲೇಖನದ ಮೂಲಕ ನೀವು ತಿಳಿಯಿರಿ.....

ಶೀತಲೀ ಪ್ರಾಣಾಯಾಮ

ಶೀತಲೀ ಪ್ರಾಣಾಯಾಮ

ಪ್ರಾಣಾಯಾಮ ಮಾಡಿದಾಗ ಅಧಿಕ ಸೆಕೆಯಾದಂತೆ ಅನುಭವವಾಗುವುದು. ಆಗ ಶೀತಲೀ ಪ್ರಾಣಾಯಾಮ ಮಾಡಿದರೆ ಬಿಸಿಯಾಗುವ ದೇಹಕ್ಕೆ ತಂಪಾಗುವುದು. ನಾಲಗೆಯನ್ನು ತುಟಿಯಂಚಿನಲ್ಲಿ ಕೊಳವೆಯಂತೆ ಮಾಡಿ ಆ ನಾಲಿಗೆಯ ಕೊಳವೆಯ ಮುಖಾಂತರ ಶ್ವಾಸವನ್ನು ದೀರ್ಘವಾಗಿ ಒಳಕ್ಕೆಳೆದು ಅದೇ ರೀತಿ ದೀರ್ಘವಾಗಿ ಮೂಗಿನ ಮೂಲಕ ಬಿಡಬೇಕು. ಈ ರೀತಿ ಐದಾರು ಬಾರಿ ಮಾಡಬೇಕು. ಕಪಾಲಭಾತಿ ಮಾಡಿದಾಗ ದೇಹದ ಉಷ್ಣತೆ ಹೆಚ್ಚಾದರೆ ಇದು ಅದಕ್ಕೆ ವಿರುದ್ದವಾಗಿ ದೇಹವನ್ನು ತಂಪಾಗಿಸುವುದು. ಒಟ್ಟಿನಲ್ಲಿ ದೇಹದ ಉಷ್ಣತೆಯ ಮಟ್ಟವನ್ನು ಕಾಪಾಡುವಲ್ಲಿ ಬಹಳ ಸಹಾಯಕವಾಗುತ್ತದೆ. ಆರೋಗ್ಯಕ್ಕೆ ನವ ಚೈತನ್ಯ ತುಂಬುವ ಪ್ರಾಣಾಯಾಮ

ಅನುಲೊಮ್ ವಿಲೊಮ್ ಪ್ರಾಣಾಯಾಮ

ಅನುಲೊಮ್ ವಿಲೊಮ್ ಪ್ರಾಣಾಯಾಮ

ಅನುಲೋಮ್ ವಿಲೊಮ್ ಪ್ರಾಣಾಯಾಮವು ಸಂಪೂರ್ಣ ದೇಹಕ್ಕೆ ಶಕ್ತಿಯನ್ನು ನೀಡುವುದು. ಇದು ದೇಹವನ್ನು ಶುದ್ಧೀಕರಿಸುತ್ತದೆ ಎಂದು ಆರ್ಟ್ ಆಫ್ ಲಿವಿಂಗ್ ನ ಸ್ಥಾಪಕ ಶ್ರೀ ಶ್ರೀ ರವಿ ಶಂಕರ್ ಗುರೂಜಿ ಹೇಳುತ್ತಾರೆ. ಜ್ವರದ ಲಕ್ಷಣವಾಗಿರುವ ಚಳಿಯನ್ನು ಇದು ನಿವಾರಣೆ ಮಾಡುವುದು.

ಆಸನ ಮಾಡುವುದು ಹೇಗೆ?

*ಕಾಲುಗಳನ್ನು ಮಡಚಿಕೊಂಡು ಅರ್ಧಪದ್ಮಾಸನ ಅಥವಾ ಸಂಪೂರ್ಣ ಪದ್ಮಾಸನದಲ್ಲಿ ಕುಳಿತುಕೊಳ್ಳಿ.

*ಒಂದು ಕೈಯ ಅಂಗೈಯು ಆಕಾಶವನ್ನು ನೋಡುತ್ತಿರುವಂತೆ ಅದನ್ನು ತೊಡೆಯ ಮೇಲಿಡಿ. *ಇನ್ನೊಂದು ಕೈಯ ಹೆಬ್ಬೆರಳನ್ನು ಮೂಗಿನ ಹೊಳ್ಳೆಯ ಮೇಲಿಡಿ ಮತ್ತು ತೋರುಬೆರಳನ್ನು ಮಡಚಿಕೊಳ್ಳಿ.

*ಉಂಗುರ ಬೆರಳಿನಿಂದ ಮೂಗಿನ ಮತ್ತೊಂದು ಹೊಳ್ಳೆಯನ್ನು ಮುಚ್ಚಿಕೊಳ್ಳಿ.

*ಈಗ ಒಂದು ಹೊಳ್ಳೆಯನ್ನು ಬೆರಳಿನಿಂದ ಮುಚ್ಚಿಕೊಂಡು ಇನ್ನೊಂದು ಹೊಳ್ಳೆಯಿಂದ ಉಸಿರಾಡಿ.

*ಉಸಿರಾಡಿದ ಹೊಳ್ಳೆಯನ್ನು ಮುಚ್ಚಿಕೊಂಡು ಇನ್ನೊಂದು ಹೊಳ್ಳೆಯಿಂದ ಉಸಿರನ್ನು ಹೊರಗೆ ಬಿಡಿ. ಸುಮಾರು ಹತ್ತು ಸಲ ಹೀಗೆ ಮಾಡುತ್ತಾ ಹೋದರೆ ವ್ಯತ್ಯಾಸ ತಿಳಿದುಬರುವುದು.

ಕಪಾಲಭಾತಿ

ಕಪಾಲಭಾತಿ

ಹಾಗೆ ಉಸಿರಾಡುವುದು ಮತ್ತು ಒತ್ತಾಯಪೂರ್ವಕವಾಗಿ ಉಸಿರನ್ನು ಹೊರಗೆ ಬಿಡುವುದರಿಂದ ಮೂಗಿನ ನಾಳಗಳು ಸ್ವಚ್ಛವಾಗುವುದು. ಈ ಉಸಿರಾಟದ ತಂತ್ರದಿಂದ ಸುಮಾರು 80ರಷ್ಟು ವಿಷಕಾರಿ ಅಂಶವು ದೇಹದಿಂದ ಹೊರಗೆ ಹೋಗುವುದು.

ಈ ಆಸನ ಮಾಡುವುದು ಹೇಗೆ?

ಸುಖಾಸನದಲ್ಲಿ ಕುಳಿತುಕೊಳ್ಳಿ.

ಮೂಗಿನಿಂದ ಒತ್ತಾಯಪೂರ್ವಕವಾಗಿ ಗಾಳಿಯನ್ನು ಹೊರಗೆ ಹಾಕಿ. ಈ ವೇಳೆ ಹೊಟ್ಟೆ ಒಳಗೆ ಹೋಗಲಿ. ಹೊಟ್ಟೆ ಹೊರಗೆ ಬಂದಾಗ ಉಸಿರಾಡಿ. ತಕ್ಷಣ ಮತ್ತೆ ಉಸಿರನ್ನು ಹೊರಗೆ ಹಾಕಿ.

ಆರಂಭದಲ್ಲಿ 50 ಸಲ ಹೀಗೆ ಮಾಡಿ. ಸ್ವಲ್ಪ ಸಮಯದ ಬಳಿಕ ಈ ಸಂಖ್ಯೆಯನ್ನು ನೀವು ಹೆಚ್ಚಿಸಿಕೊಳ್ಳಬಹುದು. ವಾತ ಪಿತ್ತ ಕಫಗಳಿಗಾಗಿ ಸೂಕ್ತ ಯೋಗಾಸನಗಳು

ಆಸನಗಳು

ಆಸನಗಳು

ನಾಯಿಯಂತೆ ಮುಂದಕ್ಕೆ ಬಾಗುವುದು- ಈ ಆಸನವು ಬಿಳಿ ರಕ್ತ ಕಣಗಳನ್ನು ದೇಹದ ತುಂಬಾ ತಿರುಗುವಂತೆ ಮಾಡುವುದು ಮತ್ತು ಸೈನಸ್ ಅನ್ನು ಒಣಗಿಸುವುದು.

ವಿಧಾನ

*ತಡಾಸನದಲ್ಲಿ ನಿಂತುಕೊಳ್ಳಿ.

*ಕೈಮುಗಿದುಕೊಂಡು ಬಳಿಕ ಇದನ್ನು ನಿಧಾನವಾಗಿ ಮೇಲಕ್ಕೆತ್ತಿ.

*ಉಸಿರನ್ನು ಬಿಡುತ್ತಾ ಮುಂದಕ್ಕೆ ಬಾಗಿ.

*ಉಸಿರಾಡುತ್ತಾ ಬೆನ್ನನ್ನು ಬಾಗಿಸುತ್ತಾ ಅರ್ಧ ದೇಹವನ್ನು ಬಗ್ಗಿಸಿ.

*ಉಸಿರನ್ನು ಬಿಡುತ್ತಾ ಮೊದಲಿನ ಸ್ಥಿತಿಗೆ ಬನ್ನಿ.

ಮತ್ಸ್ಯಾಸನ(ಮೀನಿನ ಭಂಗಿ)

ಮತ್ಸ್ಯಾಸನ(ಮೀನಿನ ಭಂಗಿ)

ಮತ್ಸ್ಯಾಸನ ಅಥವಾ ಮೀನಿನ ಆಸನವು ಎದೆಯನ್ನು ಹುಬ್ಬುವಂತೆ ಮಾಡಿ ಶ್ವಾಸಕೋಶಕ್ಕೆ ಉಸಿರಾಡಲು ಹೆಚ್ಚಿನ ಕ್ಷಮತೆಯನ್ನು ನೀಡುವುದು.

ಮಾಡುವುದು ಹೇಗೆ?

ನೆಲದ ಮೇಲೆ ಮಲಗಿಕೊಂಡು ಕಾಲನ್ನು ಮಡಚಿಕೊಳ್ಳಿ.

ಈಗ ಕಾಲುಗಳನ್ನು ನೇರವಾಗಿಸಿ ಕೈಗಳನ್ನು ಬದಿಯಲ್ಲಿ ಇರಿಸಿ. ಈಗ ಸೊಂಟವನ್ನು ಮೇಲಕ್ಕೆತ್ತಿ ಒಂದರ ಬಳಿಕ ಒಂದು ಕೈಗಳನ್ನು ಅದರ ಅಡಿಯಲ್ಲಿಡಿ.

ಮೊಣಕ್ಕೈಯನ್ನು ಮಡಚಿಕೊಂಡು ದೇಹದ ಮೇಲಿನ ಭಾಗವನ್ನು ಮೇಲಕ್ಕೆತ್ತಲು ಪ್ರಯತ್ನಿಸಿ. ಎದೆಯನ್ನು ಮಾತ್ರ ಮೇಲಕ್ಕೆತ್ತಿ. ತಲೆ ಹಿಮ್ಮುಖವಾಗಿರಲಿ. ಈ ಆಸನವನ್ನು ಐದು ಎಣಿಕೆ ಮಾಡುವ ತನಕ ಮಾಡಿ. ಉಸಿರನ್ನು ಎಳೆದುಕೊಳ್ಳುತ್ತಾ ನೆಲಕ್ಕೆ ಒರಗಿ. ಕುತ್ತಿಗೆ, ಭುಜಗಳಲ್ಲಿ ನೋವೇ? ಮತ್ಸ್ಯಾಸನ ಅನುಸರಿಸಿ ಸಾಕು

ಕುಳಿತುಕೊಂಡು ಬೆನ್ನಹುರಿ ತಿರುಗಿಸುವುದು

ಕುಳಿತುಕೊಂಡು ಬೆನ್ನಹುರಿ ತಿರುಗಿಸುವುದು

ತಿರುಗಿಸುವುದರಿಂದ ದೇಹದಲ್ಲಿನ ವಿಷಕಾರಿ ಅಂಶಗಳು ಹೊರಹೋಗಿ ಎಲ್ಲಾ ಅಂಗಾಂಗಗಳ ಕೆಲಸವು ಸುಗಮವಾಗಿ ಪ್ರತಿರೋಧಕ ಶಕ್ತಿಯು ಹೆಚ್ಚುವುದು.

ಮಾಡುವುದು ಹೇಗೆ?

ನೆಲದ ಮೇಲೆ ಕುಳಿತುಕೊಂಡು ಕಾಲುಗಳನ್ನು ಮುಂದಕ್ಕೆ ಚಾಚಿಕೊಳ್ಳಿ. ಬಲದ ಕಾಲನ್ನು ಬಗ್ಗಿಸಿ ಪಾದನವನ್ನು ಎಡ ಮೊಣಕಾಲಿನಿಂದ ಹೊರಗಡೆ ಇಡಿ.

ಎಡದ ಕಾಲನ್ನು ಬಲದ ಕಾಲಿನತ್ತ ಎಳೆದುಕೊಳ್ಳಿ. ಬಲದ ಕೈಯನ್ನು ನೆಲದ ಮೇಲೆ ಇಟ್ಟುಬಿಡಿ.

ನೀವು ಉಸಿರಾಡಿದಾಗ ಬೆನ್ನಹುರಿಯು ದೊಡ್ಡದಾಗುವುದು ಮತ್ತು ಉಸಿರುಬಿಟ್ಟಾಗ ವಿಶ್ರಮಿಸುವುದು. 5-10 ಸಲ ಉಸಿರಾಡಿ ಮತ್ತು ದೇಹದ ಭಾಗವನ್ನು ಬದಲಾಯಿಸಿಕೊಂಡು ಪುನರಾವರ್ತಿಸಿ.

English summary

Can You Do Yoga During Fever? Who Said No?

When you have fever it is common to feel low, weak and extremely tired with total depletion of energy. We may feel lethargic all through the day. Here is where Yoga can help substantially. In fact, according to Ayurveda, if you have contracted fever, then light Yogic practices are a must on such days.
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Boldsky sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Boldsky website. However, you can change your cookie settings at any time. Learn more