For Quick Alerts
ALLOW NOTIFICATIONS  
For Daily Alerts

  ಲವಲವಿಕೆಯ ಜೀವನ ಶೈಲಿಗೆ- ದಿನನಿತ್ಯ ಮಾಡಿ ಹಾಲಾಸನ

  By Manu
  |

  ಯೋಗಾಸನಗಳ ಹೆಸರುಗಳನ್ನು ಆ ಆಸನ ಹೋಲುವ ವಸ್ತು, ಪ್ರಾಣಿ ಅಥವಾ ಸಂದರ್ಭಕ್ಕನುಸಾರವಾಗಿಯೇ ಆಯ್ಕೆ ಮಾಡಿಕೊಳ್ಳಲಾಗಿದೆ. ಒಂದು ವಿಸ್ಮಯದ ಸಂಗತಿ ಎಂದರೆ ಯೋಗಾಸನಗಳಲ್ಲಿ ವಿದೇಶದ ಉಷ್ಟ್ರಪಕ್ಷಿಯ ಹೆಸರೂ ಇದೆ! (ಉಷ್ಟ್ರಾಸನ) ಆ ಕಾಲದಲ್ಲಿ ಉಷ್ಟ್ರಪಕ್ಷಿಯನ್ನು ಯಾರು ಕಂಡಿದ್ದರೂ ಗೊತ್ತಿಲ್ಲ. ಇಂದು ಹಾಲಾಸನದ ಬಗ್ಗೆ ತಿಳಿದುಕೊಳ್ಳೋಣ.  ಈ ಟಾಪ್ 10 ಕೊಡುಗೆ ಯೋಗ ಮಾಡುವವರಿಗೆ ಮಾತ್ರ

  ಸಂಸ್ಕೃತದಲ್ಲಿ 'ಹಾಲ' ಎಂದರೆ ನೇಗಿಲು ಎಂಬ ಅರ್ಥವಿದೆ. ಅಂತೆಯೇ ನೇಗಿಲಿನ ಆಕೃತಿಯಲ್ಲಿ ಅನುಸರಿಸುವ ಆಸನವೇ ಹಾಲಾಸನವಾಗುತ್ತದೆ. ಯೋಗಾಸನವನ್ನು ನಿತ್ಯವೂ ಅನುಸರಿಸಿದವರಿಗೆ ಇದರ ಆರೋಗ್ಯಕರ ಪ್ರಯೋಜನಗಳು ಕಂಡುಬರುತ್ತಿದ್ದಂತೆಯೇ ಇದನ್ನು ನಿತ್ಯದ ಒಂದು ಚಟುವಟಿಕೆಯನ್ನಾಗಿಸುವುದು ತಡವಾಗಲಾರದು.

  Halasana Or Plow Pose For A Glowing Skin
    

  ಇದರಿಂದ ಕೇವಲ ದೇಹಕ್ಕೆ ಮಾತ್ರವಲ್ಲ, ಮನಸ್ಸು ಮತ್ತು ಆತ್ಮಕ್ಕೂ ನವಚೈತನ್ಯ ದೊರಕುತ್ತದೆ. ಇದರಿಂದ ಉತ್ತಮಗೊಳ್ಳುವ ಆರೋಗ್ಯದಿಂದ ವೈದ್ಯರಿಗೆ ಮತ್ತು ಔಷಧಿಗಳಿಗೆ ಸುರಿಯಬೇಕಾದ ಹಣವೂ ಉಳಿತಾಯವಾಗುತ್ತದೆ. ಯೋಗಾಸನವನ್ನು ಪ್ರಾರಂಭಿಸಿದಾಗ ಬಗ್ಗಿದರೆ ಕಾಲುಬೆರಳುಗಳನ್ನು ಮುಟ್ಟಲು ಬಹಳವೇ ಕಷ್ಟವಾಗುತ್ತಿತ್ತು. ಆದರೆ ಕಾಲ ಕಳೆದಂತೆ ಇದು ಸುಲಭವಾಗತೊಡಗುತ್ತದೆ. ಇದಕ್ಕೆ ನಮ್ಮ ಬೆನ್ನಿನ ಹುರಿಗಳು ಮತ್ತು ಬೆನ್ನುಮೂಳೆ ಸಡಿಲಗೊಳ್ಳುವುದೇ ಕಾರಣ.  ಕಡಿಮೆ ರಕ್ತದೊತ್ತಡ ಸಮಸ್ಯೆ-ಮಾತ್ರೆ ಬಿಡಿ, ವೃಕ್ಷಾಸನ ಮಾಡಿ

  ಈ ಸಡಿಲತೆ ಹಿಂದೆ ಬಗ್ಗಲಿಕ್ಕೂ ಈಗ ಸುಲಭವಾಗಿಸುತ್ತದೆ. ಹಾಲಾಸನ ಬೆನ್ನುಮೂಳೆಯನ್ನು ಗರಿಷ್ಠ ಮಟ್ಟಕ್ಕೆ ಸೆಳೆಯುವ ಆಸನವಾಗಿದ್ದು ಇದರಲ್ಲಿ ಹಲವು ಉಪಯೋಗಗಳಿವೆ. ಇದರಲ್ಲಿ ಪ್ರಮುಖವಾದುದು ಥೈರಾಯ್ಡ್ ಗ್ರಂಥಿಯ ಸ್ರಾವ ಹೆಚ್ಚಿಸುವುದು. ಮೊದಲು ಇದನ್ನು ಅನುಸರಿಸುವ ಕ್ರಮವನ್ನು ಕಲಿಯೋಣ:

  Halasana Or Plow Pose For A Glowing Skin
   

  ಹಂತ ಹಂತವಾಗಿ ಹಾಲಾಸನ ಅನುಸರಿಸುವ ಕ್ರಮ

  ಹಂತ 1. ಮೊದಲು ಬೆನ್ನಿನ ಮೇಲೆ ನೇರವಾಗಿ ಮಲಗಿ, ಕೈಗಳು ನೇರವಾಗಿದ್ದು ಪಕ್ಕದಲ್ಲಿ ಹಸ್ತ ನೆಲಕ್ಕೆ ತಾಕುವಂತಿರಲಿ.

  ಹಂತ 2. ಉಸಿರನ್ನು ಪೂರ್ಣವಾಗಿ ಒಳಗೆಳೆದುಕೊಳ್ಳುತ್ತಾ ಎರಡೂ ಕಾಲುಗಳು ಒಂದಕ್ಕೊಂದು ತಾಕಿರುವಂತೆ ಮೇಲಕ್ಕೆತ್ತಿ. ಈ ಕ್ರಿಯೆಯಲ್ಲಿ ಕೇವಲ ನಿಮ್ಮ ಹೊಟ್ಟೆಯ ಸ್ನಾಯುಗಳಿಗೆ ಮಾತ್ರ ಕೆಲಸ ನೀಡಬೇಕು.

  ಹಂತ 3. ಒಂದು ವೇಳೆ ಕಷ್ಟ ಎನಿಸಿದರೆ ಮಾತ್ರ ಕೈಗಳ ಸಹಾಯ ಪಡೆಯಿರಿ.

  ಹಂತ 4. ನಿಮ್ಮ ಕಾಲುಗಳು ಪೂರ್ಣವಾಗಿ ಮೇಲಿದ್ದಾಗ ಉಸಿರು ಪೂರ್ಣವಾಗಿ ಎಳೆದುಕೊಂಡಿರಬೇಕು. ಈಗ ಉಸಿರುಗಟ್ಟಿ ಪಾದಗಳನ್ನು ಇನ್ನೂ ಹಿಂದಕ್ಕೆ ಕೊಂಡು ಹೋಗಿ, ಎಂದರೆ ಪಾದಗಳು ನಿಮ್ಮ ತಲೆಯ ಹಿಂಭಾಗದ ನೆಲವನ್ನು ತಾಕಬೇಕು. ಕಾಲುಬೆರಳುಗಳಿಂದ ನೆಲವನ್ನು ಒತ್ತಲು ಯತ್ನಿಸಿ.

  Halasana Or Plow Pose For A Glowing Skin

  ಹಂತ 5. ನಿಮ್ಮ ಕುತ್ತಿಗೆ ಮತ್ತು ಭುಜ ಮಾತ್ರ ನೆಲಕ್ಕೆ ತಾಕುವಂತೆ, ಬೆನ್ನು ನೆಲಕ್ಕೆ ಸಮಾನಾಂತರವಾಗುವಷ್ಟು ಕಾಲುಗಳನ್ನು ಹಿಂದೆ ಕೊಂಡು ಹೋಗಿ. ಅಗತ್ಯವೆನಿಸಿದರೆ ಕೈಗಳಿಂದ ಬೆನ್ನನ್ನು ಕೊಂಚ ದೂಡಬಹುದು.

  ಹಂತ 6. ಉಸಿರು ಕಟ್ಟಿರುವುದನ್ನು ಮುಂದುವರೆಸಿ ಈ ಭಂಗಿಯಲ್ಲಿ ಕನಿಷ್ಟ ಒಂದು ನಿಮಿಷವಾದರೂ ಇರಲು ಯತ್ನಿಸಿ. ಬಳಿಕ ಬಂದಂತೆಯೇ ನಿಧಾನವಾಗಿ ಕಾಲುಗಳನ್ನು ಹಿಂದೆ ತರುತ್ತಾ ಉಸಿರನ್ನೂ ಬಿಡುತ್ತಾ ಬನ್ನಿ. ಅಂದರೆ ಪಾದಗಳು ಮತ್ತೆ ಮೊದಲಿನ ಸ್ಥಳದಲ್ಲಿ ನೆಲಕ್ಕೆ ತಾಕುವಾಗ ಪೂರ್ತಿಯಾಗಿ ಖಾಲಿಯಾಗಬೇಕು.    ಆರೋಗ್ಯಕರ ಜೀವನಶೈಲಿಗೆ ಬೇಕು ನಿತ್ಯ ಯೋಗ

  ಹಂತ 7. ಈ ವಿಧಾನವನ್ನು ನಿಮ್ಮ ಸಾಮರ್ಥಕ್ಕೆ ಅನುಸಾರವಾಗಿ ಹೆಚ್ಚಿಸುತ್ತಾ ಹೋಗಿ. ಉತ್ತಮವಾದ ಪರಿಣಾಮಕ್ಕಾಗಿ ಒಂದು ದಿನದಲ್ಲಿ ಹತ್ತು ಬಾರಿ ಅನುಸರಿಸಬೇಕು. ಇದು ಒಂದೇ ದಿನದಲ್ಲಿ ಸಾಧ್ಯವಿಲ್ಲ. ಕ್ರಮೇಣ ಅಭ್ಯಾಸವಾಗುತ್ತದೆ.

  ಎಚ್ಚರಿಕೆ

  ಈ ಆಸನವನ್ನು ಬೆಳಿಗ್ಗೆ ಖಾಲಿ ಹೊಟ್ಟೆಯಲ್ಲಿ ಮಾತ್ರ ಅನುಸರಿಸಬೇಕೇ ಹೊರತು ಹೊಟ್ಟೆ ತುಂಬಿದ ಹೊತ್ತಿನಲ್ಲಿ ಅಥವಾ ಜೀರ್ಣಕ್ರಿಯೆಯ ಹೊತ್ತಿನಲ್ಲಿ ನಡೆಸಬಾರದು. ಬೆನ್ನುಹುರಿಯ ತೊಂದರೆ ಇರುವವರಿಗೆ, ಗರ್ಭಿಣಿಯರಿಗೆ ಈ ಆಸನ ಸೂಕ್ತವಲ್ಲ. ಈ ಆಸನವನ್ನು ಮೊತ್ತ ಮೊದಲಿಗೆ ಅನುಸರಿಸುವಿರಾದರೆ ಯೋಗಶಿಕ್ಷಕರ ಸಮ್ಮುಖದಲ್ಲಿಯೇ ನಡೆಸುವುದು ಅಗತ್ಯ. ಏಕೆಂದರೆ ಭಂಗಿ ತಪ್ಪಾಗಿ ದೇಹವೇನಾದರೂ ಅಡ್ಡಬಿದ್ದರೆ ಬೆನ್ನುಹುರಿ ಘಾಸಿಗೊಳ್ಳುವ ಅಪಾಯವಿದೆ.

  Halasana Or Plow Pose For A Glowing Skin
    

  ಈ ಆಸನದ ಪ್ರಯೋಜನಗಳು

  * ಹೊಟ್ಟೆ, ಕಾಲು ಮತ್ತು ಬೆನ್ನಿನ ಸ್ನಾಯುಗಳನ್ನು ಹುರಿಗಟ್ಟಿಸುತ್ತದೆ.

  * ಕುತ್ತಿಗೆ, ಭುಜ, ಕೆಳಬೆನ್ನು, ಮೀನಖಂಡಗಳ ಸ್ನಾಯುಗಳಿಗೆ ಹೆಚ್ಚಿನ ಬಲ ನೀಡುತ್ತದೆ.

  * ನರವ್ಯವಸ್ಥೆಯನ್ನು ಶಾಂತಗೊಳಿಸಿ ಉದ್ವೇಗ, ಆತಂಕ ಮೊದಲಾದ ನರಸಂಬಂಧಿ ತೊಂದರೆಗಳನ್ನು ನಿವಾರಿಸುತ್ತದೆ.

  * ರೋಗ ನಿರೋಧಕ ವ್ಯವಸ್ಥೆಯನ್ನು ಉತ್ತಮಗೊಳಿಸುತ್ತದೆ.

  * ಥೈರಾಯ್ಡ್ ಗ್ರಂಥಿಯ ಸ್ರಾವವನ್ನು ಹೆಚ್ಚಿಸಿ ಇದರಿಂದ ಹಲವು ಬಗೆಯಲ್ಲಿ ಆರೋಗ್ಯ ವೃದ್ಧಿಸುತ್ತದೆ.

  * ರಜೋನಿವೃತ್ತಿಯ ಹಂತದಲ್ಲಿರುವ ಮಹಿಳೆಯರಿಗೆ ಈ ಆಸಸ ಅತಿ ಸೂಕ್ತವಾಗಿದ್ದು ಈ ಸಮಯದಲ್ಲಿ ದೇಹದ ಬದಲಾವಣೆಗೆ ಸ್ಪಂದಿಸಲು ಸಜ್ಜಾಗಿರಲು ನೆರವಾಗುತ್ತದೆ.

  English summary

  How to do Halasana and What are its Benefits?

  Halasana or plow pose is the best pose to get glowing skin. ... It's just at your kick and you have to give it a go. ... Have a look at the step-by-step points to perform this asana and the benefits you can reap from this asana.
  We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Boldsky sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Boldsky website. However, you can change your cookie settings at any time. Learn more