Related Articles
-
ಸಾಕ್ಷ್ಯಾಧಾರ ಇಲ್ಲದೆ ಪಾಕಿಸ್ತಾನವನ್ನು ದೂಷಿಸಬೇಡಿ ಎಂದ ಚೀನಾ
-
7 ಸೀಟರ್ ವೈಶಿಷ್ಟ್ಯತೆಗಳೊಂದಿಗೆ ಬಿಡುಗಡೆಯಾಗಲಿದೆ ಕಿಯಾ ಕಾರ್ನಿವಾಲ್
-
ಯಾವುದೇ ಆಪ್ಗಳ ಕ್ಯಾಶೆ ಕ್ಲಿಯರ್ ಮಾಡುತ್ತಿರಬೇಕು ಏಕೆ ಮತ್ತು ಹೇಗೆ?
-
'ಬೆಲ್ ಬಾಟಮ್' ಪಾಸು, 'ಕೆಮಿಸ್ಟ್ರಿ ಆಫ್ ಕರಿಯಪ್ಪ'ನ ಫಾರ್ಮೂಲಾ ವರ್ಕೌಟ್
-
ಭಾರತ ಪಾಕ್ ನಡುವೆ ಯುದ್ದ ನಡೆದರೆ ಉಂಟಾಗುವ ಆರ್ಥಿಕ ದುಷ್ಪರಿಣಾಮಗಳೇನು?
-
ಮುಖಮೈಥುನ ನಡೆಸುವ ಪುರುಷರಿಗೆ 'ಬಾಯಿ-ಗಂಟಲ ಕ್ಯಾನ್ಸರ್' ಬರಬಹುದು!
-
ಅಭಿಮಾನಿಗಳಿಂದ ಕೊಹ್ಲಿ-ಎಬಿಡಿ ಪೋಸ್ಟರ್ಗೆ ಹಾಲಭಿಷೇಕ: ವಿಡಿಯೋ
-
ಐಟಿಐ ಲಿಮಿಟೆಡ್ ನಲ್ಲಿ ಕಾನೂನು ಪದವಿ ಅಭ್ಯರ್ಥಿಗೆ ಉದ್ಯೋಗಾವಕಾಶ
ದೇಹದ ತೂಕ ಕಡಿಮೆ ಆಗುತ್ತಿಲ್ಲವೇ? ಇದಕ್ಕೆ ಮಲಬದ್ಧತೆಯೂ ಕಾರಣವಿರಬಹುದು!!
ದೇಹದಲ್ಲಿ ಜೀರ್ಣಕ್ರಿಯೆ ಒಂದು ಸರಿಯಾಗಿ ಆಗುತ್ತಿದ್ದರೆ ಸಾಕು ನಮ್ಮ ಸಂಪೂರ್ಣ ಆರೋಗ್ಯ ಹತೋಟಿಯಲ್ಲಿರುತ್ತದೆ. ನಿಮಗೆ ಪದೇ ಪದೇ ಅಜೀರ್ಣತೆಯ ತೊಂದರೆ ಆಗುತ್ತದೆಯೆ? 2-3 ದಿನಗಳಿಗೊಮ್ಮೆ ಮಲವಿಸರ್ಜನೆ ಆಗುತ್ತದೆಯೆ? ಬಹುಶಃ ನಿಮಗೆ ಮಲಬದ್ಧತೆಯ ತೊಂದರೆ ಕಾಡುತ್ತಿರಬಹುದು.
ಮಲಬದ್ಧತೆಯಿಂದ ನಮ್ಮ ದೈನಂದಿನ ಚಟುವಟಿಕೆಗಳಿಗೆ ಬಹಳ ಅಡಚಣೆ ಉಂಟಾಗುತ್ತದೆ. ಹೊಟ್ಟೆ ಹಸಿವು ಕಡಿಮೆ ಆಗುತ್ತದೆ, ಊಟ ರುಚಿಸಲಿಕ್ಕಿಲ್ಲ. ಮೇಲಿಂದ ಮೇಲೆ ವಾಸನಾಭರಿತ ವಾಯುವಿಸರ್ಜನೆ ಕೂಡ ಆಗಬಹುದು..ಕಛೇರಿ ಕಾರ್ಯಗಳಲ್ಲಿ ಬಹಳ ಸಲ ಮುಜುಗರ ಕೂಡಾ ಅನುಭವಿಸಬೇಕಾಗಬಹುದು.
ಮಲಬದ್ಧತೆಯು ಅದರ ಜೊತೆಗೆ ಬೇರೆ ಅನೇಕ ಸಮಸ್ಯೆಗಳನ್ನು ತಂದೊಡ್ಡುತ್ತದೆ. ಹೊಟ್ಟೆನೋವು, ಹುಳಿತೇಗು, ಹೊಟ್ಟೆಯಲ್ಲಿ ಉರಿ ಇವುಗಳೆಲ್ಲ ಮಲಬದ್ಧತೆಯ ಜೊತೆಗೆ ಬರುವ ಪ್ಯಾಕೇಜ್ ಎಂದೇ ಹೇಳಬಹುದು. ತಪ್ಪಾದ ಆಹಾರ ಶೈಲಿ, ನೀರು ಕಡಿಮೆ ಕುಡಿಯುವುದು ಮತ್ತು ಆಲಸ್ಯಭರಿತ, ವ್ಯಾಯಾಮರಹಿತ ಜೀವನಶೈಲಿ ಮಲಬದ್ಧತೆಗೆ ಪ್ರಮುಖ ಕಾರಣವಾಗಿದೆ. ಮಲವು ದೊಡ್ಡ ಕರುಳಿನಲ್ಲಿ ಶೇಖರಣೆಯಗುತ್ತದೆ.
ಡೊಡ್ಡಕರುಳಿನಲ್ಲಿ ಆಗುವ ಸಂಕೋಚನೆಯಿಂದ ನಿಧಾನವಾಗಿ ಮಲವು ಚಲಿಸಿ ಒಂದೇ ಬಾರಿಗೆ ವಿಸರ್ಜನೆಯಾಗುತ್ತದೆ. ಈ ಪ್ರಕ್ರಿಯೆ ಸರಾಗವಾಗಿ ನಡೆಯಲು ನಾವು ಸಾಕಷ್ಟು ಜಲಪಾನ ಮಾಡುತ್ತಿರಬೇಕು. ಇಲ್ಲದಿದ್ದರೆ, ಮಲವು ಅಲ್ಲಿಯೇ ಶೇಖರಣೆಯಾಗಿ ಗಟ್ಟಿಯಾಗುತ್ತದೆ. ಇದರಿಂದ ಮಲವಿಸರ್ಜನೆ ಸರಾಗವಾಗಿ ಆಗದೆ ಮಲಬದ್ಧತೆ ಕಾಡುತ್ತದೆ.
ಈಗಿನ ಜನಾಂಗಕ್ಕೆ ಎಲ್ಲವೂ ತ್ವರಿತವಾಗಿ ನಡೆಯಬೇಕು. ಹೀಗಾಗಿ ಅವರಿಗೆ ಫಾಸ್ಟ್-ಫೂಡ್ ಕಡೆಗೆ ಒಲವು ಬಹಳ. ಆದರೆ ಅದರಿಂದಾಗುವ ಪರಿಣಾಮಗಳ ಬಗ್ಗೆ ಅವರು ಯೋಚಿಸುವದೇ ಇಲ್ಲ. 21ನೆಯ ಶತಮಾನದ ಯುವಕ ಯುವತಿಯರಿಗೆ ಸೌಂದರ್ಯ ಪ್ರಜ್ನೆಯೂ ಬಹಳ. ಸುಂದರವಾಗಿರಬೇಕು, ಒಳ್ಳೆಯ ಫಿಗರ್ ಇರಬೇಕೆಂದು ಅವರು ಮಾಡದ ಸಾಹಸಗಳಿಗೆ ಲೆಕ್ಕವಿಲ್ಲ. ಆದರೆ ಕೆಲವರಿಗೆ ಎಷ್ಟೇ ಪ್ರಯತ್ನ ಮಾಡಿದರೂ ತೂಕ ಇಳಿಯುವದೇ ಇಲ್ಲ.
ಇದಕ್ಕೆ ಹಲವಾರು ಕಾರಣಗಳಿರಬಹುದು, ಆದರೆ ಮಲಬದ್ಧತೆಯೂ ಒಂದು ಕಾರಣವಾಗಿರಬಹುದು ಎಂದು ಯಾವತ್ತಾದರೂ ಯೋಚಿಸಿದ್ದೀರಾ? ಸ್ಥೂಲಕಾಯ ಅಥವ ಬೊಜ್ಜುತನ 21ನೆಯ ಶತಮಾನದ ಅತಿ ದೊಡ್ಡ ಸಮಸ್ಯೆಯಾಗಿದೆ. ಸ್ಥೂಲ ವ್ಯಕ್ತಿ ಸೌಂದರ್ಯದ ಜೊತೆಗೆ ಅನೇಕ ಆರೋಗ್ಯದ ಸಮಸ್ಯೆಗಳನ್ನು ಕೂಡ ಎದುರಿಸಬೇಕಾಗುತ್ತದೆ.
ಬೆಳಿಗ್ಗೆ ಮಲಬದ್ಧತೆ ಸಮಸ್ಯೆ ಕಾಣಿಸಿಕೊಂಡರೆ-'ಆಹಾರ ಪಥ್ಯೆ' ಹೀಗಿರಲಿ
ದೇಹದಲ್ಲಿ ಅತಿಯಾದ ಕೊಬ್ಬಿನ ಶೇಖರಣೆಯಿಂದ 'ಬಾಡಿ ಮಾಸ್ ಇಂಡೆಕ್ಸ್'(ಬಿ ಎಮ್ ಐ) ಕೂಡ ಜಾಸ್ತಿಯಾಗುತ್ತದೆ. ಇದರಿಂದ ಮಧುಮೇಹ, ರಕ್ತದೊತ್ತಡ, ಕೊಲೆಸ್ಟ್ರಾಲ್ ನಂತಹ ರೋಗಗಳು ಮನೆಮಾಡಿ ಹೃದಯಕ್ಕೆ ತೊಂದರೆ ಮಾಡುತ್ತವೆ. ಇದಕ್ಕೆಲ್ಲ ಮೂಲ ಕಾರಣ ಬೊಜ್ಜು.
ಈಗಾಗಲೇ ಹೇಳಿದ ಹಾಗೆ ಕೆಲವು ಅಧ್ಯಯನಗಳ ಪ್ರಕಾರ ಬೊಜ್ಜಿಗೆ ಮುಖ್ಯ ಕಾರಣ ಮಲಬದ್ಧತೆ ಕೂಡ ಆಗಿರಬಹುದು. ಮಲಬದ್ಧತೆಯಿಂದ ಬಳಲುವ ವ್ಯಕ್ತಿಗೆ ಸರಿಯಾಗಿ ಹಸಿವೆ ನೀರಡಿಕೆಯಾಗದರಿಂದ, ಆರೋಗ್ಯಕರ ಊಟದ ಪದ್ಧತಿಯನ್ನು ನಿಭಾಯಿಸವದು ಕಷ್ಟವಾಗಬಹುದು. ಇದರಿಂದ ಸರಿಯಾಗಿ ಮಲವಿಸರ್ಜನೆಯಾಗದೆ, ಕರುಳಿನಲ್ಲಿ ಮಲವು ಶೇಖರಣೆಯಾಗಿ, ವಾಯು ಮತ್ತು ದ್ರವ ತುಂಬಿಕೊಳ್ಳುತ್ತದೆ.
ಇದರಿಂದ ತೂಕ ಹೆಚ್ಚುತ್ತ ಹೋಗುತ್ತದೆ. ಈ ಎಲ್ಲ ಸಮಸ್ಯೆಗಳನ್ನು ಒಳ್ಳೆಯ ಜೀವನ ಶೈಲಿ ಅಳವಡಿಸಿಕೊಂಡು ಬಗೆಹರಿಸಿಕೊಳ್ಳಬಹುದು. ಸಾಧ್ಯವಾಗದಿದ್ದರೆ ಒಳ್ಳೆಯ ವೈದ್ಯರನ್ನು ಭೇಟಿ ಮಾಡಿ ತೊಂದರೆ ಉಲ್ಬಣಗೊಳ್ಳದಿರುವ ಹಾಗೆ ನೋಡಿಕೊಳ್ಳಬೇಕು, ಇಲ್ಲವಾದರೆ ಜೀವಕ್ಕೇ ಅಪಾಯವಾಗುವ ಸಾಧ್ಯತೆಗಳಿವೆ.
ತೂಕ ಇಳಿಕೆಯಲ್ಲಿ ಹಸಿರು ಚಿನ್ನ ವೀಳ್ಯದೆಲೆಯ ಕರಾಮತ್ತೇನು?