For Quick Alerts
ALLOW NOTIFICATIONS  
For Daily Alerts

ಕಲ್ಲಂಗಡಿ ಹಣ್ಣಿನ ಬೀಜದ ಪ್ರಯೋಜನಗಳನ್ನು ಕೇಳಿದರೆ ಅಚ್ಚರಿ ಪಡುವಿರಿ!

ಕೆಲವೊಂದು ಹಣ್ಣುಗಳಲ್ಲಿ ಅವುಗಳ ಬೀಜ ಹಾಗೂ ಸಿಪ್ಪೆಯಲ್ಲಿ ಹೆಚ್ಚಿನ ಪೋಷಕಾಂಶಗಳು ಅಡಗಿರುತ್ತದೆ. ಇಂತಹ ಒಂದು ಹಣ್ಣೆಂದರೆ ಕಲ್ಲಂಗಡಿ ಹಣ್ಣು....

By Hemanth
|

ಹೆಚ್ಚಾಗಿ ನಾವು ಹಣ್ಣುಗಳನ್ನು ತಿಂದು ಅದರ ಬೀಜ ಅಥವಾ ಸಿಪ್ಪೆಗಳನ್ನು ಬಿಸಾಡುತ್ತೇವೆ. ಅದರಲ್ಲಿ ಇರುವಂತಹ ಕೆಲವೊಂದು ಪೋಷಕಾಂಶಗಳ ಬಗ್ಗೆ ತಿಳಿದೇ ಇರುವುದಿಲ್ಲ. ಕೆಲವೊಂದು ಹಣ್ಣುಗಳಲ್ಲಿ ಅವುಗಳ ಬೀಜ ಹಾಗೂ ಸಿಪ್ಪೆಯಲ್ಲಿ ಹೆಚ್ಚಿನ ಪೋಷಕಾಂಶಗಳು ಅಡಗಿರುತ್ತದೆ. ಇಂತಹ ಒಂದು ಹಣ್ಣೆಂದರೆ ಕಲ್ಲಂಗಡಿ ಹಣ್ಣು. ಕಲ್ಲಂಗಡಿ ಹಣ್ಣು ಲೈಂಗಿಕ ಶಕ್ತಿಯನ್ನು ಹೆಚ್ಚಿಸುತ್ತದೆಯಂತೆ!

ಈ ಹಣ್ಣು ಬೇಸಿಗೆಯಲ್ಲಿ ತುಂಬಾ ಉಪಯುಕ್ತ. ಇದರಲ್ಲಿ ಇರುವಂತಹ ಹೆಚ್ಚಿನ ನೀರಿನಾಂಶವು ದೇಹದ ಬಾಯಾರಿಕೆಯನ್ನು ಕಡಿಮೆ ಮಾಡುವುದು ಮಾತ್ರವಲ್ಲದೆ ಹೊಟ್ಟೆಯನ್ನು ತುಂಬಿಸುವುದು. ಆದರೆ ಇದರಲ್ಲಿರುವ ಬೀಜಗಳನ್ನು ನಾವು ಉಗಿಯುತ್ತೇವೆ. ಆದರೆ ಈ ಬೀಜಗಳಲ್ಲಿ ಹಲವಾರು ರೀತಿಯ ಪೋಷಕಾಂಶಗಳು ಇದೆ ಎಂದು ನಮಗೆ ತಿಳಿದಿಲ್ಲ. ತ್ವಚೆಯನ್ನು ತಂಪಾಗಿಸುವ 'ಕಲ್ಲಂಗಡಿ ಹಣ್ಣಿನ' ಫೇಸ್​ ಪ್ಯಾಕ್

ಕಲ್ಲಂಗಡಿ ಬೀಜದಲ್ಲಿ ವಿಟಮಿನ್ ಬಿ, ಥೈಮೈನ್, ನಿಯಾಸಿನ್, ಫೋಲಾಟೆ, ಮೆಗ್ನಿಶಿಯಂ, ಪೊಟಾಶಿಯಂ, ಕಬ್ಬಿಣ, ಸತು, ಪೋಸ್ಪರಸ್ ನಂತಹ ಪೋಷಕಾಂಶಗಳು ಇವೆ. ಕಲ್ಲಂಗಡಿ ಬೀಜದಲ್ಲಿ ಇರುವಂತಹ ಪೋಷಕಾಂಶ ಲಾಭ ಪಡೆಯಬೇಕಾದರೆ ಏನು ಮಾಡಬೇಕು ಎನ್ನುವುದನ್ನು ಬಗ್ಗೆ ಬೋಲ್ಡ್ ಸ್ಕೈ ಈ ಲೇಖನದಲ್ಲಿ ತಿಳಿಸಿಕೊಡಲಿದೆ. ಈ ಲೇಖನವನ್ನು ಓದಿ ಇನ್ನು ಮುಂದೆ ಕಲ್ಲಂಗಡಿ ಹಣ್ಣು ತಿನ್ನುವಾಗ ಬೀಜಗಳನ್ನು ಜೋಪಾನವಾಗಿ ತೆಗೆದಿಡಿ....

ತಯಾರಿಸುವ ವಿಧಾನ

ತಯಾರಿಸುವ ವಿಧಾನ

20-30 ಕಲ್ಲಂಗಡಿ ಬೀಜಗಳನ್ನು ತೆಗೆದುಕೊಂಡು ಅದನ್ನು ರುಬ್ಬಿಕೊಳ್ಳಿ ಮತ್ತು ಎರಡು ಲೀಟರ್ ನೀರಿನಲ್ಲಿ ಹಾಕಿಕೊಂಡು ಕುದಿಸಿ. ಇಷ್ಟು ನೀರನ್ನು ಎರಡು ದಿನದಲ್ಲಿ ಕುಡಿದು ಮುಗಿಸಬೇಕು. ಮೂರನೇ ದಿನ ವಿಶ್ರಾಂತಿ ನೀಡಿ. ಮತ್ತೆ ಇದೇ ರೀತಿ ಕೆಲವು ವಾರಗಳ ಕಾಲ ಮುಂದುವರಿಸಬೇಕು. ಪ್ರತೀ ಮೂರು ದಿನಕ್ಕೊಮ್ಮೆ ವಿರಾಮ ನೀಡುವುದು ಅತ್ಯಗತ್ಯ. ಕಲ್ಲಂಗಡಿ ಹಣ್ಣಿನ ಬೀಜದ ಲಾಭಗಳ ಬಗ್ಗೆ ತಿಳಿಯುವ

ಹೃದಯದ ಆರೋಗ್ಯ

ಹೃದಯದ ಆರೋಗ್ಯ

ಬೀಜಗಳಲ್ಲಿ ಮೆಗ್ನಿಶಿಯಂ ಹೆಚ್ಚಿನ ಪ್ರಮಾಣದಲ್ಲಿದೆ ಮತ್ತು ಇದು ಹೃದಯವನ್ನು ಸುರಕ್ಷಿತವಾಗಿಡುತ್ತದೆ. ಇದು ರಕ್ತದೊತ್ತಡವನ್ನು ನಿಯಂತ್ರಣದಲ್ಲಿ ಇಟ್ಟುಕೊಂಡು ಚಯಾಪಚಯಾ ಕ್ರಿಯೆಯನ್ನು ಸುಗಮವಾಗಿಸುವುದು. ರಕ್ತದೊತ್ತಡ ಮತ್ತು ಹೃದಯದ ಆರೋಗ್ಯಕ್ಕೆ ಇದು ಅತ್ಯುತ್ತಮ ನೈಸರ್ಗಿಕ ಔಷಧಿಯಾಗಿದೆ.

ಅಕಾಲಿಕ ವಯಸ್ಸಾಗುವುದನ್ನು ತಡೆಯುವುದು

ಅಕಾಲಿಕ ವಯಸ್ಸಾಗುವುದನ್ನು ತಡೆಯುವುದು

ಕಲ್ಲಂಗಡಿ ಬೀಜಗಳಲ್ಲಿ ಆ್ಯಂಟಿಆಕ್ಸಿಡೆಂಟ್ ಅಂಶವು ಹೆಚ್ಚಾಗಿರುವ ಕಾರಣದಿಂದ ಇದು ಅಕಾಲಿಕವಾಗಿ ವಯಸ್ಸಾಗುವುದನ್ನು ತಡೆಯುವುದು. ಇದು ಚರ್ಮವನ್ನು ಆರೋಗ್ಯವಾಗಿಟ್ಟುಕೊಂಡು ನೀವು ಯುವಕರಂತೆ ಕಾಣುವ ಹಾಗೆ ಮಾಡುವುದು.

ಮಧುಮೇಹ ನಿಯಂತ್ರಣಕ್ಕೆ

ಮಧುಮೇಹ ನಿಯಂತ್ರಣಕ್ಕೆ

ಬೇಯಿಸಿದ ಕಲ್ಲಂಗಡಿ ಬೀಜಗಳನ್ನು ಒಂದು ಹಿಡಿ ಪ್ರತೀ ದಿನ ತಿಂದರೆ ಅದರಿಂದ ಮಧುಮೇಹವು ನಿಯಂತ್ರಣದಲ್ಲಿ ಇರುವುದು. ನಿಯಮಿತವಾಗಿ ಇದರ ಸೇವನೆ ಮಾಡಿದರೆ ಮಧುಮೇಹ ನಿಯಂತ್ರಿಸಲು ಇದು ತುಂಬಾ ಪರಿಣಾಮಕಾರಿ ಔಷಧಿಯೆಂದು ಪರಿಗಣಿಸಲಾಗಿದೆ.

ಅನಾರೋಗ್ಯದಿಂದ ಮುಕ್ತರಾಗಲು

ಅನಾರೋಗ್ಯದಿಂದ ಮುಕ್ತರಾಗಲು

ಯಾವುದೇ ರೀತಿಯ ಅನಾರೋಗ್ಯವು ನಿಮ್ಮನ್ನು ಕಾಡಿದರೆ ಅದರಿಂದ ಸಂಪೂರ್ಣವಾಗಿ ಚೇತರಿಕೆ ಪಡೆಯಲು ಕಲ್ಲಂಗಡಿ ಬೀಜಗಳನ್ನು ಸೇವನೆ ಮಾಡಿ. ಒಂದೆರಡು ದಿನಗಳಲ್ಲಿ ಇದರ ಪರಿಣಾಮ ಕಂಡುಬರುವುದು. ನೆನಪಿನ ಶಕ್ತಿ ಕಡಿಮೆ ಇರುವವರು ಕಲ್ಲಂಗಡಿ ಬೀಜಗಳ ಸೇವನೆಯಿಂದ ಲಾಭ ಪಡೆಯಬಹುದು.

ಫಲವತ್ತತೆ ಹೆಚ್ಚಿಸುವುದು

ಫಲವತ್ತತೆ ಹೆಚ್ಚಿಸುವುದು

ಕಲ್ಲಂಗಡಿ ಬೀಜದಲ್ಲಿ ಲೈಕೊಪೆನ್ ಆ್ಯಂಟಿಆಕ್ಸಿಡೆಂಟ್ ಸಮೃದ್ಧವಾಗಿದ್ದು, ಇದು ಪುರುಷರಲ್ಲಿ ಫಲವತ್ತತೆ ಮಟ್ಟವನ್ನು ಹೆಚ್ಚಿಸುವುದು. ಒಣಗಿಸಿದ ಕಲ್ಲಂಗಡಿ ಬೀಜಗಳನ್ನು ಆಹಾರಕ್ರಮದಲ್ಲಿ ಸೇರಿಸಿಕೊಂಡು ತಿನ್ನಬೇಕು.

ಮೆಗ್ನಿಶಿಯಂನ ಮೂಲ

ಮೆಗ್ನಿಶಿಯಂನ ಮೂಲ

ಮೆಗ್ನಿಶಿಯಂ ದೇಹದ ಕಾರ್ಯಚಟುವಟಿಕೆಯನ್ನು ಸರಿಯಾದ ರೀತಿಯಲ್ಲಿ ನಿಯಂತ್ರಣದಲ್ಲಿ ಇಡಲು ನೆರವಾಗುವುದು. ದೇಹದಲ್ಲಿ ರಕ್ತದೊತ್ತಡ ಮಟ್ಟದ ನಿಯಂತ್ರಣ ಹಾಗೂ ಚಯಾಪಚಯಾ ಕ್ರಿಯೆಗೆ ನೆರವಾಗುವುದು.

ಆರೋಗ್ಯಕರ ಕೊಬ್ಬು

ಆರೋಗ್ಯಕರ ಕೊಬ್ಬು

ಕಲ್ಲಂಗಡಿ ಬೀಜಗಳಲ್ಲಿ ಶೇ.80ರಷ್ಟು ಅಪರ್ಯಾಪ್ತ ಕೊಬ್ಬು ಇದ್ದು, ಇದು ದೇಹಕ್ಕೆ ತುಂಬಾ ಒಳ್ಳೆಯದು. ಒಮೆಗಾ-3 ಕೊಬ್ಬಿನಾಮ್ಲವು ದೇಹದ ಅನಾರೋಗ್ಯಕರ ಸಮಸ್ಯೆಗಳನ್ನು ದೂರವಿಡುವುದು.ಬಿರು ಬೇಸಿಗೆಗೆ ತಂಪಾದ ಮಸಾಲಾ ಕಲ್ಲಂಗಡಿ ಜ್ಯೂಸ್!

 ಮಧುಮೇಹದ ಮೇಲೆ ಹೋರಾಡುತ್ತದೆ

ಮಧುಮೇಹದ ಮೇಲೆ ಹೋರಾಡುತ್ತದೆ

ಮಧುಮೇಹವು ಈಗ ಸಾಮಾನ್ಯವಾಗಿ ಕಂಡು ಬರುವ ಆರೋಗ್ಯದ ಸಮಸ್ಯೆಯಾಗಿ ಬಿಟ್ಟಿದೆ. ಇದನ್ನು ಸರಿಯಾಗಿ ನಿಭಾಯಿಸಲಿಲ್ಲವಾದಲ್ಲಿ, ಇದು ಗಂಭೀರ ಪ್ರಮಾಣಕ್ಕೆ ತಿರುಗುತ್ತದೆ. ಒಂದು ವೇಳೆ ನೀವು ಮಧುಮೇಹದಿಂದ ಬಳಲುತ್ತಿದ್ದಲ್ಲಿ, 40-45 ನಿಮಿಷಗಳ ಕಾಲ ಕಲ್ಲಂಗಡಿ ಬೀಜಗಳನ್ನು ನೀರಿನಲ್ಲಿ ಕುದಿಸಿ. ನಂತರ ಅದನ್ನು ಟೀ ರೀತಿ ಪ್ರತಿದಿನ ಸೇವಿಸಿ. ಇದು ಮಧುಮೇಹಕ್ಕೆ ಕಾರಣವಾದ ಲೋಪ ದೋಷಗಳನ್ನು ಸರಿಪಡಿಸುತ್ತದೆ.

ನಿಮ್ಮ ಜ್ಞಾಪಕ ಶಕ್ತಿಯನ್ನು ಚುರುಕುಗೊಳಿಸುತ್ತದೆ

ನಿಮ್ಮ ಜ್ಞಾಪಕ ಶಕ್ತಿಯನ್ನು ಚುರುಕುಗೊಳಿಸುತ್ತದೆ

ಕಲ್ಲಂಗಡಿ ಬೀಜಗಳು ನಿಮ್ಮ ಜ್ಞಾಪಕ ಶಕ್ತಿಯನ್ನು ಹೆಚ್ಚಿಸುತ್ತದೆ. ಇದು ಇತರೆ ಆರೋಗ್ಯ ಸಮಸ್ಯೆಗಳಿಂದ ದೇಹವು ಬೇಗ ಚೇತರಿಸಿಕೊಳ್ಳಲು ಸಹಾಯ ಮಾಡುತ್ತದೆ. ಈ ಕಲ್ಲಂಗಡಿ ಬೀಜಗಳನ್ನು ಸೂಚಿಸಿದ ರೀತಿಯಲ್ಲಿ ಸೇವಿಸಿದರೆ ಯಾರ ಜ್ಞಾಪಕಶಕ್ತಿ ಬೇಕಾದರು ಚುರುಕಾಗುತ್ತದೆ. ಪ್ರೋಟೀನ್ ಕೊರತೆಯು ಜ್ಞಾಪಕ ಶಕ್ತಿಯ ಮೇಲೆ ವ್ಯತಿರಿಕ್ತ ಪರಿಣಾಮ ಬೀರುತ್ತದೆ. ಆದರೆ ಕಲ್ಲಂಗಡಿ ಬೀಜಗಳು ಈ ಕೊರತೆಯನ್ನು ನೀಗಿಸುತ್ತವೆ.

ಅಮೈನೊ ಆಮ್ಲಗಳ ಸ್ವಾಭಾವಿಕ ಮೂಲ

ಅಮೈನೊ ಆಮ್ಲಗಳ ಸ್ವಾಭಾವಿಕ ಮೂಲ

ಮಾನವ ದೇಹಕ್ಕೆ ಅಮೈನೊ ಆಮ್ಲಗಳು ಅತ್ಯಗತ್ಯವಾಗಿ ಬೇಕಾಗುತ್ತವೆ. ನಿಮ್ಮ ದೇಹವು ಈ ಆಮ್ಲಗಳನ್ನು ಗ್ಲುಟಮಿಕ್ ಮತ್ತು ಟ್ರೈಪ್ಟೊಫಾನ್ ಆಮ್ಲಗಳ ರೂಪದಲ್ಲಿ ಪಡೆಯುತ್ತದೆ. ಇದಕ್ಕಾಗಿ ಹಲವಾರು ಔಷಧಿಗಳು ದೊರೆಯುತ್ತವೆ. ಆದರೆ ವೈದ್ಯರು ಅವುಗಳ ಬದಲಿಗೆ ಸ್ವಾಭಾವಿಕ ಮೂಲಗಳಿಂದ ಈ ಆಮ್ಲಗಳನ್ನು ಪಡೆಯಿರಿ ಎಂದು ಸಲಹೆ ನೀಡುತ್ತಾರೆ. ಕಲ್ಲಂಗಡಿ ಬೀಜಗಳಲ್ಲಿ ಈ ಆಮ್ಲಗಳು ಸ್ವಾಭಾವಿಕವಾಗಿ ಅಡಗಿರುತ್ತವೆ. ಅದನ್ನು ಸೇವಿಸುವ ಮೂಲಕ ನೀವು ನಿಮ್ಮ ಜೀರ್ಣಾಂಗ ವ್ಯೂಹ, ಲೈಂಗಿಕ ಆರೋಗ್ಯ ಮತ್ತು ಹೃದಯಕ್ಕೆ ಸಂಬಂಧಿಸಿದ ವ್ಯವಸ್ಥೆಯನ್ನು ಸರಿಪಡಿಸಿಕೊಳ್ಳಬಹುದು.

English summary

boil watermelon seeds consume and see the health benefits

Watermelon is a well known summer fruit and it is also known to be a rejuvenating one. We generally tend to throw out the tiny seeds present in watermelon, don't we?We do this without actually realising its abundant health benefits. Watermelon seeds contain an array of nutritional ingredients that include fatty acids, essential proteins and a lot of minerals.
X
Desktop Bottom Promotion