For Quick Alerts
ALLOW NOTIFICATIONS  
For Daily Alerts

  ತ್ವಚೆಯನ್ನು ತಂಪಾಗಿಸುವ 'ಕಲ್ಲಂಗಡಿ ಹಣ್ಣಿನ' ಫೇಸ್​ ಪ್ಯಾಕ್

  By Arshad
  |

  ಬೇಸಿಗೆಯಲ್ಲಿ ತಿನ್ನಲು ಇಷ್ಟಪಡುವ ಹಣ್ಣುಗಳಲ್ಲಿ ಕಲ್ಲಂಗಡಿಗೆ ಪ್ರಥಮ ಸ್ಥಾನ. ಏಕೆಂದರೆ ಇದರಲ್ಲಿರುವ ನೀರು ಗರಿಷ್ಠ ಮಟ್ಟದಲ್ಲಿದ್ದು (ಶೇ 93) ಇತರ ಹಣ್ಣುಗಳಿಗಿಂತಲೂ ಅತಿ ಹೆಚ್ಚಿನ ಪ್ರಮಾಣದಲ್ಲಿ ದೇಹಕ್ಕೆ ನೀರನ್ನು ಒದಗಿಸುತ್ತದೆ. ಇದು ಕೇವಲ ರಸಭರಿತ ಹಣ್ಣು ಮಾತ್ರವಲ್ಲ, ಇದರ ವಿಟಮಿನ್ನುಗಳು ಮತ್ತು ಇತ ಪೋಷಕಾಂಶಗಳಲ್ಲಿರುವ ಔಷಧೀಯ ಗುಣಗಳು, ವಿಶೇಷವಾಗಿ ತ್ವಚೆಗೆ ಉತ್ತಮವಾಗಿರುವ ಗುಣಗಳು ಇರುವುದನ್ನು ಕಂಡರೆ ಬೆರಗಾಗುವುದು ಖಚಿತ.

  ಕಲ್ಲಂಗಡಿ ಎಂದರೆ ತಿನ್ನಲು ಮಾತ್ರವೇ ಇರುವ ಹಣ್ಣು ಎಂದುಕೊಂಡಿದ್ದವರಿಗೆ ಇದೊಂದು ಉತ್ತಮ ಸೌಂದರ್ಯವರ್ಧಕವೂ ಆಗಬಹುದು ಎಂಬ ಕಲ್ಪನೆಯೇ ಇರಲಿಕ್ಕಿಲ್ಲ. ಕಲ್ಲಂಗಡಿಯಲ್ಲಿರುವ ಆಂಟಿ ಆಕ್ಸಿಡೆಂಟುಗಳು ತ್ವಚೆಯ ಸೆಳೆತವನ್ನು ಹೆಚ್ಚಿಸಲು ಸಮರ್ಥವಾಗಿದ್ದು ತನ್ಮೂಲಕ ತ್ವಚೆ ವೃದ್ಧಾಪ್ಯದ ಸೂಚನೆಗಳನ್ನು ಸೂಚಿಸುವ ಸಮಯವನ್ನು ತಡವಾಗಿಸುತ್ತದೆ.  ಬಿಸಿಲಿನ ಝಳಕ್ಕೆ, ತಂಪುಣಿಸುವ ಕಲ್ಲಂಗಡಿ ಹಣ್ಣು

  ಅಲ್ಲದೇ ಇವು ನೈಸರ್ಗಿಕ ಬಿಳಿಚುಕಾರಕವಾಗಿದ್ದು ಕಲೆಗಳನ್ನು ನಿವಾರಿಸುವಲ್ಲಿ ನೆರವಾಗುತ್ತವೆ ಹಾಗೂ ಸತ್ತ ಜೀವಕೋಶಗಳನ್ನು ಸಡಿಲಿಸಿ ದೂರಾಗಿಸಲೂ ನೆರವಾಗುತ್ತವೆ. ಇದರೊಂದಿಗೆ ಚರ್ಮಕ್ಕೆ ಅಗತ್ಯವಾದ ಆರ್ದ್ರತೆಯನ್ನು ನೀಡಿ ತಾರುಣ್ಯವನ್ನು ಪ್ರಕಟಿಸುತ್ತದೆ. ಬನ್ನಿ, ಕಲ್ಲಂಗಡಿಯನ್ನು ಸೌಂದರ್ಯವರ್ಧಕವಾಗಿ ಹೇಗೆ ಬಳಸಬಹುದು ಎಂಬುದನ್ನು ನೋಡೋಣ....   

  ತಾರುಣ್ಯದ ತ್ವಚೆಗಾಗಿ

  ತಾರುಣ್ಯದ ತ್ವಚೆಗಾಗಿ

  ಒಂದು ಕಪ್ ಕಲ್ಲಂಗಡಿ ಹಣ್ಣಿನ ತಿರುಳನ್ನು ಸಂಗ್ರಹಿಸಿ, ಬೀಜ ನಿವಾರಿಸಿ. ಈ ತಿರುಳನ್ನು ನಯವಾಗಿ ಅರೆದು ದಪ್ಪನೆಯ ಲೇಪನವಾಗಿಸಿ ಈಗತಾನೇ ತೊಳೆದುಕೊಂಡ ಮುಖ ಮತ್ತು ಕುತ್ತಿಗೆಗೆ ಹಚ್ಚಿ. ಈ ಮುಖಲೇಪದಿಂದ ತ್ವಚೆಗೆ ತಣ್ಣನೆಯ ಆರಾಮ ದೊರಕುವುದರ ಜೊತೆಗೇ ಸೂಕ್ಷ್ಮ ರಂಧ್ರಗಳಲ್ಲಿ ಸಿಲುಕಿದ್ದ ಧೂಳು ಮತ್ತು ಇತರ ಪ್ರದೂಷಣಾ ಕಣಗಳನ್ನು ನಿವಾರಿಸಬಹುದು. ಈ ಮೂಲಕ ತ್ವಚೆಯ ಆಳಕ್ಕೆ ಆರ್ದ್ರತೆ ದೊರೆತು ಚರ್ಮದ ಸೆಳೆತ ಹೆಚ್ಚುತ್ತದೆ ಹಾಗೂ ತಾರುಣ್ಯದ ತ್ವಚೆ ನಿಮ್ಮದಾಗುತ್ತದೆ. ಒಂದು ವೇಳೆ ಬಿಸಿಲಿನಲ್ಲಿ ಚರ್ಮ ತೀರಾ ಒಣಗಿದ್ದರೆ ಕೆಲವು ಕಲ್ಲಂಗಡಿ ತುಂಡುಗಳನ್ನು ಫ್ರಿಜ್ಜಿನಲ್ಲಿಟ್ಟು ಘನೀಕರಿಸಿ. ಈ ತುಂಡಿನಿಂದ ಮುಖವನ್ನು ಹೆಚ್ಚಿನ ಒತ್ತಡವಿಲ್ಲದೇ ಉಜ್ಜಿಕೊಳ್ಳುತ್ತಾ ಬಂದರೆ ಸೂಕ್ಷ್ಮರಂಧ್ರಗಳನ್ನು ತಕ್ಷಣಎ ತೆರೆದು ತಾಜಾತನವನ್ನು ಪಡೆಯಬಹುದು.

  ಮೃದು ಮತ್ತು ಕಾಂತಿಯುಕ್ತ ತ್ವಚೆಗಾಗಿ

  ಮೃದು ಮತ್ತು ಕಾಂತಿಯುಕ್ತ ತ್ವಚೆಗಾಗಿ

  ಒಂದು ಕಪ್ ನಲ್ಲಿ ಕೊಂಚ ಬೀಜರಹಿತ ಕಲ್ಲಂಗಡಿ ತಿರುಳನ್ನು ಸಮಪ್ರಮಾಣದ ಮೊಸರಿನೊಂದಿಗೆ ಬೆರೆಸಿ ನಯವಾದ ಲೇಪನ ತಯಾರಿಸಿ. ಈ ಲೇಪನವನ್ನು ಮುಖ, ಕುತ್ತಿಗೆಗೆಗಳಿಕೆ ಕನಿಷ್ಟ ಹತ್ತು ನಿಮಿಷ ಹಚ್ಚಿ ಒಣಗಲು ಬಿಟ್ಟು ಬಳಿಕ ತಣ್ಣೀರಿನಿಂದ ತೊಳೆದುಕೊಳ್ಳಿ. ಈ ಲೇಪನದಿಂದ ಚರ್ಮ ಕಳೆದುಕೊಂಡಿದ್ದ ಆರ್ದತೆಯನ್ನು ಪಡೆಯಲು ಸಾಧ್ಯ. ಮೊಸರಿನಲ್ಲಿರುವ ಲ್ಯಾಕ್ಟಿಕ್ ಆಮ್ಲ ಮತ್ತು ಇತರ ಕಿಣ್ವಗಳು ಚರ್ಮಕ್ಕೆ ಅಂಟಿಕೊಂಡಿದ್ದ ಸತ್ತ ಜೀವಕೋಶಗಳನ್ನು ಸಡಿಲಿಸಿ ನಿವಾರಿಸಲು ನೆರವಾಗುತ್ತದೆ. ವಿಶೇಷವಾಗಿ ಚರ್ಮದ ಸ್ವಚ್ಛತೆಗೆ ಈ ಲೇಪನ ಹೆಚ್ಚು ಪರಿಣಾಮಕಾರಿಯಾಗಿದೆ. ಕಲ್ಲಂಗಡಿ: ಗರ್ಭಿಣಿಯರ ಆರೋಗ್ಯಕ್ಕೆ ಪರ್ಫೆಕ್ಟ್ ಹಣ್ಣು

  ಚರ್ಮದ ನೆರಿಗೆ ನಿವಾರಿಸಲು

  ಚರ್ಮದ ನೆರಿಗೆ ನಿವಾರಿಸಲು

  ಕಲ್ಲಂಗಡಿಯಲ್ಲಿರುವ ಆಂಟಿ ಆಕ್ಸಿಡೆಂಡುಗಳು ನೆರಿಗೆಗೆ ಕಾರಣವಾಗುವ ಫ್ರೀ ರ್‍ಯಾಡಿಕಲ್ ಎಂಬ ಕಣಗಳ ವಿರುದ್ದ ಹೋರಾಡಿ ಚರ್ಮದಲ್ಲಿ ವೃದ್ದಾಪ್ಯದ ಚಿಹ್ನೆಗಳನ್ನು ದೂರಾಗಿಸಲು ನೆರವಾಗುತ್ತದೆ. ಇದಕ್ಕಾಗಿ ಸಮಪ್ರಮಾಣದಲ್ಲಿ ಕಲ್ಲಂಗಡಿ ಹಣ್ಣಿನ ರಸ ಮತ್ತು ಬೆಣ್ಣೆಹಣ್ಣಿನ (avocado) ತಿರುಳನ್ನು ಬೆರೆಸಿ ನಯವಾದ ಲೇಪನ ತಯಾರಿಸಿ. ಈ ಲೇಪನವನ್ನು ಮುಖಕ್ಕೆ ತೆಳುವಾಗಿ ಹಚ್ಚಿ ಸುಮಾರು ಇಪ್ಪತ್ತು ನಿಮಿಷ ಹಾಗೇ ಬಿಡಿ. ಬಳಿಕ ಉಗುರುಬೆಚ್ಚನೆಯ ನೀರಿನಿಂದ ತೊಳೆದುಕೊಳ್ಳಿ. ಈ ವಿಧಾನ ನೆರಿಗೆಗಳನ್ನು ನಿವಾರಿಸಲು ಅತ್ಯಂತ ಪ್ರಬಲ ವಿಧಾನವಾಗಿದ್ದು ಬೇಸಿಗೆಯಲ್ಲಿ ಅನುಸರಿಸಬಹುದಾದ ಆಯ್ಕೆಯಾಗಿದೆ. ಬಿರು ಬೇಸಿಗೆಗೆ ತಂಪಾದ ಮಸಾಲಾ ಕಲ್ಲಂಗಡಿ ಜ್ಯೂಸ್!

  ಸತ್ತ ಜೀವಕೋಶಗಳನ್ನು ನಿವಾರಿಸಲು

  ಸತ್ತ ಜೀವಕೋಶಗಳನ್ನು ನಿವಾರಿಸಲು

  ಬೀಜರಹಿತ ಕಲ್ಲಂಗಡಿ ಹಣ್ಣಿನ ತಿರುಳನ್ನು ತುರಿದು ಒಂದು ಚಿಟಿಕೆಯಷ್ಟು ಕಡ್ಲೆಹಿಟ್ಟು ಬೆರೆಸಿ. ಈ ತಿರುಳನ್ನು ದಪ್ಪನಾಗಿ ಅರೆದು ಮುಖದ ಮೇಲೆ ದಪ್ಪನಾಗಿಯೇ ಹಚ್ಚಿ ಸುಮಾರು ಹದಿನೈದು ನಿಮಿಷದ ಬಳಿಕ ನಯವಾಗಿ ಉಜ್ಜಿಕೊಂಡು ತೊಳೆದುಕೊಳ್ಳಿ. ಇದರಿಂದ ಸತ್ತ ಜೀವಕೋಶಗಳು ಸುಲಭವಾಗಿ ನಿವಾರಣೆಯಾಗಿ ಚರ್ಮದ ಕಾಂತಿ ಹೆಚ್ಚುತ್ತದೆ.ಕಲ್ಲಂಗಡಿ ಹಣ್ಣು ಲೈಂಗಿಕ ಶಕ್ತಿಯನ್ನು ಹೆಚ್ಚಿಸುತ್ತದೆಯಂತೆ!

   

  English summary

  Uses of Watermelon For Summer Skin Care

  When we see juicy watermelons on a hot summer day, we definitely get tempted towards it. You would be amazed to know that watermelons are not just a juicy summer treat; it also has amazing qualities that can do wonders to our skin. If you are a big fan of watermelons, it is really great for your skin. Known as a super cool fruit in summers, watermelon has 93 percent water content and loads of vitamins in it.
  We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Boldsky sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Boldsky website. However, you can change your cookie settings at any time. Learn more