For Quick Alerts
ALLOW NOTIFICATIONS  
For Daily Alerts

ಕಲ್ಲಂಗಡಿ ಹಣ್ಣು ಲೈಂಗಿಕ ಶಕ್ತಿಯನ್ನು ಹೆಚ್ಚಿಸುತ್ತದೆಯಂತೆ!

By ವಿವೇಕ್
|

ಕಲ್ಲಂಗಡಿ ಹಣ್ಣಿನಲ್ಲಿ ಇಪ್ಪತ್ತಕ್ಕೂ ಹೆಚ್ಚಿನ ಆರೋಗ್ಯವರ್ಧಕ ಗುಣಗಳಿವೆ ಎಂದರೆ ನಂಬುತ್ತೀರಾ? ಆಕರ್ಷಕ ಬಣ್ಣದ, ಸವಿರುಚಿಯ ಈ ಹಣ್ಣು ಆರೋಗ್ಯಕ್ಕೆ ತುಂಬಾ ಒಳ್ಳೆಯದು. ಈ ಹಣ್ಣಿನ ಸಿಪ್ಪೆ ಕೂಡ ಬಿಸಾಡಬೇಡಿ. ಏಕೆಂದರೆ ಸಿಪ್ಪೆಯಲ್ಲಿ ಕೂಡ ಅನೇಕ ಪೋಷಕಾಂಶಗಳು ಇರುವುದರಿಂದ ಸಿಪ್ಪೆಯನ್ನು ಬಿಸಾಡಿದರೆ ಪೋಷಕಾಂಶಗಳು ವ್ಯರ್ಥವಾಗುತ್ತದೆ. ಇದರ ಸಿಪ್ಪೆಯಿಂದ ಮಾಡಿದ ಪಲ್ಯ ತಿನ್ನಲೂ ರುಚಿಕರವಾಗಿರುತ್ತದೆ.

ಆದ್ದರಿಂದಲೇ ಪ್ರತಿಯೊಬ್ಬರೂ ತಿನ್ನಲೇಬೇಕಾದ ಹಣ್ಣು ಇದಾಗಿದೆ (ಮಧುಮೇಹಿಗಳನ್ನು ಹೊರತು ಪಡಿಸಿ) .ಇಲ್ಲಿ ನಾವು ಕಲ್ಲಂಗಡಿ ಹಣ್ಣಿನಲ್ಲಿರುವ ಪ್ರಮುಖ 20 ಆರೋಗ್ಯಕರ ಗುಣಗಳ ಮಾಹಿತಿ ನೀಡಿದ್ದೇವೆ ನೋಡಿ:

1. ಪ್ರತ್ಯಾಮ್ಲಗಳು(antioxidants)

1. ಪ್ರತ್ಯಾಮ್ಲಗಳು(antioxidants)

ಕಲ್ಲಂಗಡಿಯಲ್ಲಿ ಪ್ರತ್ಯಾಮ್ಲಗಳು (anatioxidants) ಅಧಿಕವಿರುತ್ತದೆ. ಇದು ದೇಹಕ್ಕೆ ಹಾನಿಯುಂಟು ಮಾಡುವ ಬೇಡದ ರಾಸಾಯನಿಕಗಳನ್ನು ಹೊರಹಾಕಲು ಸಹಾಯ ಮಾಡುತ್ತದೆ.

2. ಹೃದಯ ಹಾಗೂ ಕೊಲೆಸ್ಟ್ರಾಲ್

2. ಹೃದಯ ಹಾಗೂ ಕೊಲೆಸ್ಟ್ರಾಲ್

ಕೊಲೆಸ್ಟ್ರಾಲ್ ಹೆಚ್ಚಾದರೆ ಹೃದಯಾಘಾತ ಉಂಟಾಗುತ್ತದೆ. ಕಲ್ಲಂಗಡಿ ಹಣ್ಣಿನಲ್ಲಿರುವ antioxidants ಕೊಲೆಸ್ಟ್ರಾಲ್ ಅನ್ನು ಕಡಿಮೆ ಮಾಡುತ್ತದೆ.

3. ಅಸ್ತಮಾ

3. ಅಸ್ತಮಾ

ಇದರಲ್ಲಿರುವ antioxidants ಅಸ್ತಮಾ ಕಾಯಿಲೆಯನ್ನು ಕಡಿಮೆ ಮಾಡುತ್ತದೆ. ಇದರಲ್ಲಿ ವಿಟಮಿನ್ ಸಿ, ಫ್ಲೇವೋನೈಡ್ಸ್ ಅಂದರೆ ಲೈಕೋಪೆನೆ, ಬೀಟಾ ಕ್ಯಾರೋಟಿನ್, ಲ್ಯೂಟಿನ್ ಮುಂತಾದ ಅಂಶಗಳಿವೆ.

4. ವಿಟಮಿನ್ ಸಿ

4. ವಿಟಮಿನ್ ಸಿ

ಇದರಲ್ಲಿ ವಿಟಮಿನ್ ಅಂಶ ಅಧಿಕವಿದೆ. ಬೇಸಿಗೆಯಲ್ಲಿ ದಿನಾ ಒಂದು ತುಂಡು ಕಲ್ಲಂಗಡಿ ಹಣ್ಣು ತಿನ್ನುವವರಿಗೆ ಕಾಯಿಲೆಗಳು ಹತ್ತಿರ ಸುಳಿಯುವುದಿಲ್ಲ. ತ್ವಚೆ ರಕ್ಷಣೆಯನ್ನು ಮಾಡುತ್ತದೆ. ಗಾಯವಾಗಿದ್ದರೆ ಬೇಗನೆ ಒಣಗಲು ಸಹಾಯ ಮಾಡುತ್ತದೆ.

5. ನೈಸರ್ಗಿಕವಾದ ವಯಾಗ್ರ

5. ನೈಸರ್ಗಿಕವಾದ ವಯಾಗ್ರ

ಕಲ್ಲಂಗಡಿ ಹಣ್ಣಿನಲ್ಲಿ ಸಿಟ್ರುಲೈನ್ ಅಧಿಕವಿದ್ದು ಇದು ದೇಹದಲ್ಲಿ ನಿಟ್ರಿಕ್ ಆಕ್ಸೈಡ್(nitric oxide) ಉತ್ಪತ್ತಿಗೆ ಸಹಾಯಮಾಡುತ್ತದೆ. ನಿಟ್ರಿಕ್ ಆಕ್ಸೈಡ್ ರಕ್ತ ನಾಳಗಳಿಗೆ ವಿಶ್ರಾಂತಿಯನ್ನು ನೀಡುತ್ತದೆ ಹಾಗೂ ಲೈಂಗಿಕ ಶಕ್ತಿಯನ್ನು ಹೆಚ್ಚಿಸುತ್ತದೆ.

6. ಕಿಡ್ನಿಯ ಆರೋಗ್ಯಕ್ಕೆ

6. ಕಿಡ್ನಿಯ ಆರೋಗ್ಯಕ್ಕೆ

ಇದರಲ್ಲಿ ವಿಟಮಿನ್ ಎ ಇರುವುದರಿಂದ ಕಣ್ಣಿನ ಆರೋಗ್ಯಕ್ಕೆ ತುಂಬಾ ಒಳ್ಳೆಯದು. ಈ ಹಣ್ಣಿನಲ್ಲಿ ಸಿಟ್ರೊಲೈನ್(citrulline) ಇದ್ದು, ಇದು ದೇಹವನ್ನು ಸೇರಿದಾಗ ಅಮೈನೋ ಆಸಿಡ್ ಆಗಿ ಪರಿವರ್ತನೆಯಾಗುತ್ತದೆ. ಅಮೈನೋ ಆಸಿಡ್ ಕಿಡ್ನಿಯಲ್ಲಿ ಕಲ್ಲು ಉಂಟಾಗದಂತೆ ಕಾಪಾಡುತ್ತದೆ.

7. ಶಕ್ತಿ ತುಂಬುತ್ತದೆ

7. ಶಕ್ತಿ ತುಂಬುತ್ತದೆ

ತುಂಬಾ ಸುಸ್ತಾದಾಗ ಕಲ್ಲಂಗಡಿ ಹಣ್ಣು ತಿಂದು ನೋಡಿ, ದೇಹದ ಚೈತನ್ಯ ಹೆಚ್ಚಿ ಸುಸ್ತು ಮಾಯವಾಗುವುದು ಇದರಲ್ಲಿ ವಿಟಮಿನ್ ಬಿ6 ಇರುವುದರಿಂದ ಮೆದುಳಿನ ಆರೋಗ್ಯಕ್ಕೆ ಒಳ್ಳೆಯದು. ಬೇಗನೆ ಉದ್ವೇಗಕ್ಕೆ ಒಳಗಾಗುವುದನ್ನು ತಡೆಯುತ್ತದೆ.

8. ಕ್ಯಾನ್ಸರ್ ಕಣಗಳ ವಿರುದ್ಧ ಹೋರಾಡುತ್ತದೆ

8. ಕ್ಯಾನ್ಸರ್ ಕಣಗಳ ವಿರುದ್ಧ ಹೋರಾಡುತ್ತದೆ

ಇತರ ಹಣ್ಣುಗಳಿಗಿಂತ ಕಲ್ಲಂಗಡಿ ಹಣ್ಣಿನಲ್ಲಿ ಲೈಕೋಪೆನೆ ಅಧಿಕವಿದೆ. ಲೈಕೋಪೆನೆ ಕ್ಯಾನ್ಸರ್ ಕಣಗಳ ವಿರುದ್ಧ ಹೋರಾಡುವ ಸಾಮರ್ಥ್ಯವನ್ನು ಹೊಂದಿದೆ.

10. ಕೂದಲು ಹಾಗೂ ತ್ವಚೆಗೆ

10. ಕೂದಲು ಹಾಗೂ ತ್ವಚೆಗೆ

ಇದರಲ್ಲಿ ಫಾಲಿಕ್ ಆಸಿಡ್ ಇರುವುದರಿಂದ ಕೂದಲು ಹಾಗೂ ತ್ವಚೆಯ ಆರೋಗ್ಯಕ್ಕೆ ಒಳ್ಳೆಯದು.

11. ಬಾಯಿಯ ಆರೋಗ್ಯಕ್ಕೆ

11. ಬಾಯಿಯ ಆರೋಗ್ಯಕ್ಕೆ

ಈ ಹಣ್ಣು ತಿಂದರೆ ಹಲ್ಲು ಹಾಗೂ ವಸಡುಗಳನ್ನು ಬಲವಾಗುತ್ತದೆ. ಕೆಲವರಿಗೆ ವಸಡುಗಳಲ್ಲಿ ರಕ್ತ ಬರುತ್ತದೆ. ಈ ಹಣ್ಣ ತಿಂದರೆ ವಸಡುಗಳ ಬಲವಾಗಿ ಹಲ್ಲುಜ್ಜುವಾಗ ರಕ್ತ ಬರುವುದಿಲ್ಲ.

12. ಮೂಳೆಗಳ ಆರೋಗ್ಯಕ್ಕೆ

12. ಮೂಳೆಗಳ ಆರೋಗ್ಯಕ್ಕೆ

ಇದರಲ್ಲಿ ಕಬ್ಬಿಣದಂಶ, ಮ್ಯಾಗ್ನಿಷ್ಯಿಯಂ, ಕ್ಯಾಲ್ಸಿಯಂ, ಸತು, ಪೊಟಾಷ್ಯಿಯಂ, ಐಯೋಡಿನ್ ಇರುವುದರಿಂದ ಮೂಳೆಗಳನ್ನು ಬಲವಾಗಿಸುತ್ತದೆ. ಇದರಿಂದ ಸಂಧಿ ನೋವು ಉಂಟಾಗುವುದಿಲ್ಲ.

13. ತಾರುಣ್ಯದ ಚೆಲುವಿಗೆ

13. ತಾರುಣ್ಯದ ಚೆಲುವಿಗೆ

ಇದು ನೆರಿಗೆ ಬರುವುದನ್ನು ತಡೆಗಟ್ಟಿ ತಾರುಣ್ಯದ ಚೆಲುವನ್ನು ಉಳಿಸಲು ಸಹಾಯ ಮಾಡುತ್ತದೆ.

14. ದೇಹವನ್ನು ಕ್ಲೆನ್ಸ್ ಮಾಡುತ್ತದೆ

14. ದೇಹವನ್ನು ಕ್ಲೆನ್ಸ್ ಮಾಡುತ್ತದೆ

ಇದರಲ್ಲಿ ನೀರಿನಂಶ ಅಧಿಕವಿರುವುದಿಂದ ದೇಹವನ್ನು ಕ್ಲೆನ್ಸ್ ಮಾಡುತ್ತದೆ.

15. ಗರ್ಭಿಣಿ ಮಹಿಳೆಯರಿಗೆ ತುಂಬಾ ಒಳ್ಳೆಯದು

15. ಗರ್ಭಿಣಿ ಮಹಿಳೆಯರಿಗೆ ತುಂಬಾ ಒಳ್ಳೆಯದು

ಇದರಲ್ಲಿ ಫಾಲಿಕ್ ಆಸಿಡ್ ಅಧಿಕವಿರುವುದರಿಂದ ಗರ್ಭಿಣಿಯರಿಗೆ ಸೂಕ್ತವಾದ ಆಹಾರವಾಗಿದೆ. ಅಲ್ಲದೆ ಇದರಲ್ಲಿ ಖನಿಜಾಂಶಗಳು ಇರುವುದರಿಂದ ಪೋಷಕಾಂಶಾದ ಕೊರತೆ ಉಂಟಾಗುವುದಿಲ್ಲ.

16. ಮಾನಸಿಕ ಒತ್ತಡವನ್ನು ಕಡಿಮೆಮಾಡುತ್ತದೆ

16. ಮಾನಸಿಕ ಒತ್ತಡವನ್ನು ಕಡಿಮೆಮಾಡುತ್ತದೆ

ಇದನ್ನು ಪ್ರತೀದಿನ ತಿಂದರೆ ಮಾನಸಿಕ ಒತ್ತಡ ಕಡಿಮೆಯಾಗಿ ಖಿನ್ನತೆ ಮಾಯವಾಗುವುದು.

17. ದೇಹವನ್ನು ತಂಪಾಗಿಸುತ್ತದೆ

17. ದೇಹವನ್ನು ತಂಪಾಗಿಸುತ್ತದೆ

ಬೇಸಿಗೆಯಲ್ಲಿ ತಿನ್ನಲೇಬೇಕಾದ ಹಣ್ಣುಗಳಲ್ಲಿ ಕಲ್ಲಂಗಡಿ ಹಣ್ಣು ಕೂಡ ಒಂದು. ಇದು ದೇಹವನ್ನು ತಂಪಾಗಿ ಇಡುತ್ತದೆ. ದೇಹದಲ್ಲಿ ಉಷ್ಣತೆ ಹೆಚ್ಚಾದರೆ ಚಿಕನ್ ಪಾಕ್ಸ್ ಉಂಟಾಗಬಹುದು ಎಚ್ಚರ!

18. ಕಾಲು ಊದುವುದನ್ನು ತಡೆಯುತ್ತದೆ

18. ಕಾಲು ಊದುವುದನ್ನು ತಡೆಯುತ್ತದೆ

ಕಾಲು ಊದುವ ಸಮಸ್ಯೆ ಇರುವವರಿಗೆ ಪ್ರತೀದಿನ ಒಂದು ಕಲ್ಲಂಗಡಿ ಹಣ್ಣನ್ನು ತಿಂದರೆ ಸಾಕು ಈ ಸಮಸ್ಯೆ ಕಡಿಮೆಯಾಗುವುದು.

 19. ರಕ್ತ ಸಂಚಾರಕ್ಕೆ

19. ರಕ್ತ ಸಂಚಾರಕ್ಕೆ

ಕಲ್ಲಂಗಡಿ ರಕ್ತ ಸಂಚಾರ ಸರಿಯಾಗಿ ನಡೆಯುವಂತೆ ಮಾಡಿ ಆರೋಗ್ಯವನ್ನು ಹೆಚ್ಚಿಸುತ್ತದೆ.

20. ದೇಹದ ತೂಕವನ್ನು ಕಮ್ಮಿ ಮಾಡುತ್ತದೆ

20. ದೇಹದ ತೂಕವನ್ನು ಕಮ್ಮಿ ಮಾಡುತ್ತದೆ

ಇದರಲ್ಲಿ ನೀರಿನಂಶ ಅಧಿಕವಿರುವುದರಿಂದ ತೆಳ್ಳಗಾಗಲು ಡಯಟ್ ಮಾಡುವವರು ಒಂದು ಹೊತ್ತು ಕಲ್ಲಂಗಡಿ ಹಣ್ಣು ತಿನ್ನಿ. ಇದರಿಂದ ದೇಹಕ್ಕೆ ಅಗತ್ಯವಾದ ಪೋಷಕಾಂಶ ದೊರೆಯುತ್ತದೆ, ತೂಕವೂ ಕಡಿಮೆಯಾಗುವುದು.

English summary

20 Health Benefits of Watermelon | Tips For Health | ಕಲ್ಲಂಗಡಿ ಹಣ್ಣಿನ 20 ಆರೋಗ್ಯಕರ ಗುಣಗಳು | ಆರೋಗ್ಯಕ್ಕಾಗಿ ಕೆಲ ಸಲಹೆಗಳು

Watermelon is 92 percent water, but that other 8 percent is filled with good nutrition and amazing health benefits; so many benefits that we consider it a power food.
X
Desktop Bottom Promotion