ದಿನನಿತ್ಯ ಏಳು ಗಂಟೆಗಳ ನಿದ್ದೆ-ರೋಗ ರುಜಿನಗಳು ನಾಪತ್ತೆ!

By: Divya
Subscribe to Boldsky

ರಾತ್ರಿ ಬೇಗ ಮಲಗಿ, ಬೆಳಗ್ಗೆ ಬೇಗ ಏಳಬೇಕು. ಎದ್ದು ವ್ಯಾಯಾಮ, ವಾಕಿಂಗ್ ಹಾಗೂ ಇನ್ನಿತರ ಆರೋಗ್ಯಕರ ಚಟುವಟಿಕೆ ಮಾಡುವುದರಿಂದ ಹೆಚ್ಚು ಆರೋಗ್ಯವಂತರಾಗಿರುತ್ತೇವೆ ಎನ್ನುತ್ತಾರೆ ನಮ್ಮ ಹಿರಿಯರು. ನಮ್ಮ ಆರೋಗ್ಯದ ಸುಧಾರಣೆಗೆ ಇದೊಂದು ಸುಲಭ ಅಭ್ಯಾಸ. ಉತ್ತಮವಾದ ಈ ಅಭ್ಯಾಸ ವೈಜ್ಞಾನಿಕವಾಗಿಯೂ ಸತ್ಯ. ಆದರೆ ಬದಲಾಗುತ್ತಿರುವ ಕಾಲಮಾನ, ಪ್ರಸ್ತುತ ಪೀಳಿಗೆಯವರ ಕೆಲಸದ ಸಮಯಗಳು ಈ ಹವ್ಯಾಸಗಳಿಂದ ದೂರ ಇರುವಂತೆ ಮಾಡುತ್ತದೆ.  ನಿದ್ದೆಯೆಂಬ ಅಮೂಲ್ಯ ವರಕ್ಕಿರುವ ಕರಾಮತ್ತೇನು?

ಪ್ರತಿಷ್ಠಿತ ಸಂಸ್ಥೆಗಳಲ್ಲಿ ರಾತ್ರಿ ಕೆಲಸ ಮಾಡುವವರಿಗೆ ಈ ನಿಯಮ ಹೊಂದಾಣಿಕೆಯಾಗಲು ಸಾಧ್ಯವಿಲ್ಲ. ರಾತ್ರಿ ಕೆಲಸ ಮುಗಿಸಿ ಮನೆಗೆ ಬರುವುದು, ಬಂದು ಒಂದೇ ಸಮನೆ ವ್ಯಾಯಾಮ ಮಾಡಲು ಸಾಧ್ಯವಿಲ್ಲ. ಏಕೆಂದರೆ ದಣಿದ ಮನಸ್ಸು ಸ್ವಲ್ಪ ವಿಶ್ರಾಂತಿಯನ್ನು ಬಯಸುತ್ತಿರುತ್ತದೆ. ಪ್ರತಿಯೊಬ್ಬರು ಬೆಳಗ್ಗೆಯಿಂದ ರಾತ್ರಿಯ ವರೆಗೆ ಕ್ರಮಬದ್ಧವಾದ ಕೆಲಸ, ಊಟ, ತಿಂಡಿ ಹಾಗೂ ನಿದ್ರೆಯನ್ನು ಮಾಡಲೇ ಬೇಕು. ಇಲ್ಲವಾದರೆ ದೇಹ ಅನೇಕ ರೋಗಗಳಿಗೆ ತುತ್ತಾಗುತ್ತದೆ.  ರಾತ್ರಿ ನಿದ್ದೆ ಬರುತ್ತಿಲ್ಲವೇ? ಚಿಂತೆ ಬಿಡಿ, ಈ ಟಿಪ್ಸ್ ಪ್ರಯತ್ನಿಸಿ

ಇತ್ತೀಚೆಗೆ "ಸ್ಲೀಪ್ ಹೆಲ್ತ್ ಬೈ ನ್ಯಾಷನಲ್ ಸ್ಲೀಪ್' ಪ್ರತಿಷ್ಠಾನವೊಂದು ನಡೆಸಿದ ಸಂಶೋಧನೆಯ ಪ್ರಕಾರ 18 ರಿಂದ 64 ವರ್ಷದೊಳಗಿರುವವರು ಪ್ರತಿದಿನ ಕಡಿಮೆಯೆಂದರೂ 7 ತಾಸುಗಳ ನಿದ್ರೆ ಮಾಡಬೇಕು ಎನ್ನುವ ಸತ್ಯವನ್ನು ತೆರೆದಿಟ್ಟಿದೆ. ನಿದ್ರಾಹೀನತೆಯಿಂದ ತಲೆನೋವು, ಏಕಾಗ್ರತೆಯ ಸಮಸ್ಯೆ ಉಂಟಾಗುತ್ತದೆ. ಇದರಿಂದ ನಾವು ಮಾಡುವ ಕೆಲಸದಲ್ಲಿ ಕಿರಿಕಿರಿ ಉಂಟಾಗುವುದು. ತಿಳಿಯದ ಅನೇಕ ಆರೋಗ್ಯ ಸಮಸ್ಯೆಗಳು ಕಾಣಿಸಿಕೊಳ್ಳುವ ಸಾಧ್ಯತೆಗಳು ಹೆಚ್ಚಿರುತ್ತವೆ ಎಂಬುದನ್ನು ತಿಳಿಸಿದೆ.

ಹೀಗಾಗಿ ರಾತ್ರಿಕೆಲಸ ಅಥವಾ ಇನ್ನಿತರ ಯಾವುದೇ ತೊಂದರೆಯಿಂದ ಬೇಗ ಮಲಗಲು ಸಾಧ್ಯವಾಗದವರು ತಟವಾಗಿಯೇ ಬೆಳಗ್ಗೆ ಏಳಬಹುದು. ತಡವಾಗಿ ಏಳುವುದು ಆರೋಗ್ಯಕ್ಕೆ ಒಳ್ಳೆಯದೇ... ಅರೇ! ಎಂದು ಆಶ್ಚರ್ಯ ಪಡುತ್ತಿದ್ದೀರಾ? ನಿಜ, ನೀವು ಬೆಳಿಗ್ಗೆ ತಡವಾಗಿಯೇ ಏಳುವುದರಿಂದ ಉಂಟಾಗುವ ಪ್ರಯೋಜನಗಳ ಪಟ್ಟಿ ಇಲ್ಲಿದೆ ನೋಡಿ...   

ದಣಿವನ್ನು ತಡೆಯುವುದು

ದಣಿವನ್ನು ತಡೆಯುವುದು

ದಿನವಿಡೀ ಕೆಲಸದ ಒತ್ತಡದಲ್ಲಿಯೇ ಮುಳುಗಿರುವವರಿಗೆ ಕಡಿಮೆಯೆಂದರೂ 8 ಗಂಟೆಗಳ ನಿದ್ರೆ ಬೇಕಾಗುತ್ತದೆ. ಆಫೀಸ್‍ಗಳಲ್ಲಿ ಕ್ಲೈಂಟ್‍ಗಳ ಕೆಲಸ ಅಥವಾ ರಾತ್ರಿ ಕೆಲಸಗಳಿಂದಾಗಿ ತಡವಾಗಿ ಮಲಗಿ ಬೆಳಗ್ಗೆಯೂ ನಿಧಾನವಾಗಿ ಎದ್ದರೆ ಮನಸ್ಸೂ ಉಲ್ಲಾಸಕರ ಭಾವದಲ್ಲಿಯೇ ಇರುತ್ತದೆ. ಜೊತೆಗೆ ದಿನದ ಕೆಲಸಗಳ ಆರಂಭ ಉತ್ಸಾಹದಲ್ಲಿ ಇರುತ್ತದೆ.

ಊಟ ಮತ್ತು ಮಲಗುವ ಸಮಯ

ಊಟ ಮತ್ತು ಮಲಗುವ ಸಮಯ

ರಾತ್ರಿಯ ಊಟ ಹಾಗೂ ಮಲಗುವ ಸಮಯವು ಆರೋಗ್ಯದ ಮೇಲೆ ಪರಿಣಾಮ ಬೀರುತ್ತವೆ. ಒಂದು ಅಂದಾಜಿನ ಪ್ರಕಾರ ರಾತ್ರಿ 7 ಗಂಟೆಗೆ ಊಟ ಮಾಡಿದರೆ ರಾತ್ರಿ 9 ಗಂಟೆಗೆ ಅಥವಾ 10 ಗಂಟೆಗೆ ಮಲಗ ಬೇಕು. ಊಟದ ನಂತರ ಕಡಿಮೆಯೆಂದರೂ ಒಂದು ತಾಸು ಬಿಟ್ಟು ಮಲಗ ಬೇಕು. ಇಲ್ಲವಾದರೆ ಅಜೀರ್ಣದ ಸಮಸ್ಯೆ ಹಾಗೂ ದಹದಲ್ಲಿ ಅಧಿಕ ಕೊಬ್ಬು ಉತ್ಪಾನೆಯಾಗಿ ಆರೋಗ್ಯ ಸಮಸ್ಯೆಯಾಗುತ್ತದೆ.

ಕಣ್ಣಿಗೆ ವಿಶ್ರಾಂತಿ

ಕಣ್ಣಿಗೆ ವಿಶ್ರಾಂತಿ

ಇಂದು ಅನೇಕ ಉದ್ಯೋಗಗಳು ಕಂಪ್ಯೂಟರ್ ಮುಂದೆ ಕುಳಿತೆಯೇ ಕೆಲಸ ಮಾಡುವಂತದ್ದಾಗಿದೆ. ಹಾಗಾಗಿ ಆಫೀಸ್‍ಗಳಲ್ಲಿ ದಿನವಿಡೀ ಕಂಪ್ಯೂಟರ್ ಮುಂದೆ ಕುಳಿತು ಕೆಲಸ ಮಾಡುವುದರಿಂದ ಕಣ್ಣುಗಳು ಹಾಗೂ ಮಿದುಳು ಹೆಚ್ಚು ಆಯಾಸಗೊಂಡಿರುತ್ತವೆ. ಇವುಗಳ ವಿಶ್ರಾಂತಿಗೆ ದಿವ್ಯ ಔಷಧಿಯೆಂದರೆ 7-8 ಗಂಟೆಗಳ ನಿದ್ರೆ.

ವಿದ್ಯಾರ್ಥಿಗಳಿಗೂ ಅನುಕೂಲ

ವಿದ್ಯಾರ್ಥಿಗಳಿಗೂ ಅನುಕೂಲ

ತಡ ರಾತ್ರಿಯವರೆಗೆ ಓದುವ ವಿದ್ಯಾರ್ಥಿಗಳು ಬೆಳಗ್ಗೆ ನಿಧಾನವಾಗಿಯೇ ಎದ್ದುಕೊಂಡರೆ ಮನಸ್ಸಿಗೆ ವಿಶ್ರಾಂತಿ ದೊರೆಯುತ್ತದೆ. ಜೊತೆಗೆ ಪುನಃ ಅಭ್ಯಾಸ ಮಾಡಲು ಹೆಚ್ಚು ಉತ್ಸಾಹ ದೊರೆಯುತ್ತದೆ. ಸೂಕ್ತ ರೀತಿಯ ನಿದ್ರೆ ಹಾಗೂ ಓದುವ ಅಭ್ಯಾಸದಿಂದ ನೆನಪಿನ ಶಕ್ತಿ ಹೆಚ್ಚಾಗುತ್ತದೆ.

ಮಧ್ಯಾಹ್ನದ ನಿದ್ರೆಗಿಂತ ಒಳ್ಳೆಯದ್ದು

ಮಧ್ಯಾಹ್ನದ ನಿದ್ರೆಗಿಂತ ಒಳ್ಳೆಯದ್ದು

ಮುಂಜಾನೆ ತಡವಾಗಿ ಏಳುವುದು ಮಧ್ಯಾಹ್ನದ ನಿದ್ರೆಗಿಂತ ಒಳ್ಳೆಯದು. ಮಧ್ಯಾಹ್ನದ ನಿದ್ರೆಯಿಂದ ಒಂದು ರೀತಿಯ ಜಡ ಹಾಗೂ ಆಲಸ್ಯದ ಭಾವನೆ ಉಂಟಾಗುತ್ತದೆ. ಇದು ನಮ್ಮ ಕ್ರೀಯಾಶೀಲತೆಯನ್ನು ಕುಂಟಿತಗೊಳಿಸುತ್ತದೆ.

ಮಕ್ಕಳಿಗೆ ಒಳ್ಳೆಯದು

ಮಕ್ಕಳಿಗೆ ಒಳ್ಳೆಯದು

ಹತ್ತು ವರ್ಷದ ಒಳಗಿನ ಮಕ್ಕಳು ಕನಿಷ್ಠವೆಂದರೂ ಪ್ರತಿ ದಿನ 10 ಗಂಟೆಗಳ ಕಾಲ ನಿದ್ರೆ ಮಾಡಬೇಕು. ಇದರಿಂದ ಮಕ್ಕಳಲ್ಲಿ ನೆನಪಿನ ಶಕ್ತಿ ಹೆಚ್ಚಾಗುತ್ತದೆ. ಜೊತೆಗೆ ಕ್ರಿಯಾಶೀಲತೆಯನ್ನು ಹೆಚ್ಚಿಸುತ್ತದೆ. ಕುತೂಹಲ ಹಾಗೂ ವಿವಿಧ ವಿಚಾರಗಳ ಬಗ್ಗೆ ಆಸಕ್ತಿ ಹೆಚ್ಚಲು ಅನುಕೂಲವಾಗುವುದು.

ಏಕಾಗ್ರತೆ ಹೆಚ್ಚುವುದು

ಏಕಾಗ್ರತೆ ಹೆಚ್ಚುವುದು

ಯಾರು ತಡವಾಗಿ ಎದ್ದು ಬೇಕಾದಷ್ಟು ನಿದ್ರೆ ಮಾಡುತ್ತಾರೋ ಅಂತಹವರು ವಿಶ್ರಾಂತವಾದ ಮನಸ್ಸಿನಿಂದ ಇರುತ್ತಾರೆ. ಜೊತೆಗೆ ಏಕಾಗ್ರತೆಯ ಚಿತ್ತ ಹೆಚ್ಚುತ್ತದೆ.

ರೋಗಗಳ ತಡೆಯಲು ಸಹಾಯಕ

ರೋಗಗಳ ತಡೆಯಲು ಸಹಾಯಕ

ಸುಖ ನಿದ್ರೆಯನ್ನು ಹೊಂದುವುದರಿಂದ ಅನೇಕ ಆರೋಗ್ಯ ಸಮಸ್ಯೆಗಳಿಂದ ಪಾರಾಗಬಹುದು. ಪ್ರತಿದಿನ 7-8 ತಾಸುಗಳ ನಿದ್ರೆ ಒತ್ತಡದ ಸಮಸ್ಯೆ, ತಲೆನೋವು ಹಾಗೂ ಕಿನ್ನತೆಯ ಭಾವದಿಂದ ದೂರ ಇರಬಹುದು. ಅಲ್ಲದೆ ದೇಹದಲ್ಲಿ ರೋಗ ನಿರೋಧಕ ಶಕ್ತಿ ಹೆಚ್ಚುತ್ತದೆ.

English summary

Benefits of Waking Up Late

For people who work in shifts, waking up early in the morning is near impossible. For those working in the night shift, they return home only in the morning, so how can they wake up early? So, waking up late is the only way out for this group of people and also for those who are into late night partying and clubbing. If you are looking at the benefits of waking up late then check here.
Subscribe Newsletter